ತೌಕ್ತೆ ಚಂಡಮಾರುತ: ಮಗುಚಿದ ದೋಣಿಯಲ್ಲಿದ್ದ ಏಳು ಮಂದಿ ನಾಪತ್ತೆ; ನಾಳೆ ಬೆಳಗ್ಗೆವರೆಗೂ ಉಡುಪಿಯಲ್ಲಿ ರೆಡ್​ ಅಲರ್ಟ್​

|

Updated on: May 15, 2021 | 8:12 PM

Cyclone Tauktae In Karnataka: ಚಂಡಮಾರುತದ ಎಚ್ಚರಿಕೆ ನೀಡಿದ್ದರೂ ಅದನ್ನು ಲೆಕ್ಕಿಸದೆ ಸಮುದ್ರಕ್ಕೆ ಇಳಿದ ದೋಣಿ ಮುಳುಗಡೆಯಾಗಿದೆ. ಈ ಅಲಾಯನ್ಸ್ ಎಂಬ ಹೆಸರಿನ ವಿಗ್ಗ್ ಬೋಟ್​​​ ಎಂಆರ್​ಪಿಎಲ್​ ಕಚ್ಚಾತೈಲ ಹಡಗಿನ ಪೈಪ್​ಲೈನ್​ ನಿರ್ವಹಣೆ ಮಾಡುತ್ತಿದ್ದ ದೋಣಿಯಾಗಿತ್ತು.

ತೌಕ್ತೆ ಚಂಡಮಾರುತ: ಮಗುಚಿದ ದೋಣಿಯಲ್ಲಿದ್ದ ಏಳು ಮಂದಿ ನಾಪತ್ತೆ; ನಾಳೆ ಬೆಳಗ್ಗೆವರೆಗೂ ಉಡುಪಿಯಲ್ಲಿ ರೆಡ್​ ಅಲರ್ಟ್​
ಉಡುಪಿಯಲ್ಲಿ ಅತಿಯಾದ ಗಾಳಿ-ಮಳೆ
Follow us on

ಉಡುಪಿ: ಈ ವರ್ಷದ ಮೊದಲ ಚಂಡಮಾರುತ ತೌಕ್ತೆಯ ಪ್ರಭಾವ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕಾಣುತ್ತಿದೆ. ಮಲೆನಾಡು, ಕರಾವಳಿ ಜಿಲ್ಲೆಗಳಲ್ಲಿ ಬೆಳಗ್ಗೆಯಿಂದಲೇ ಮೋಡಕವಿವ ವಾತಾವರಣ ಇದ್ದು, ಮಧ್ಯಾಹ್ನದಿಂದಲೇ ಮಳೆ ಶುರುವಾಗಿದೆ.

ಉಡುಪಿಯಲ್ಲಿ ನಾಳೆ ಬೆಳಗ್ಗೆವರೆಗೆ ರೆಡ್​ ಅಲರ್ಟ್​ ಇದ್ದು, ಮುಂದಿನ ಎರಡು ದಿನಗಳು ಅಂದರೆ ಮೇ 17ರವರೆಗೆ ಆರೆಂಜ್​ ಅಲರ್ಟ್ ಜಾರಿಯಲ್ಲಿರಲಿದೆ. ಇನ್ನೆರಡು ದಿನವೂ 65-115 ಮಿಮೀ ಮಳೆಯಾಗುವ ಸಾಧ್ಯತೆ ಇದ್ದು, ಮೀನುಗಾರಿಕೆಗೆ ತೆರಳದಂತೆ ಉಡುಪಿ ಜಿಲ್ಲಾಡಳಿತ ಖಡಕ್​ ಸೂಚನೆ ನೀಡಿದೆ. ಸಮುದ್ರ, ನದಿ ತೀರಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.

ಮಗುಚಿದ ದೋಣಿ..
ಚಂಡಮಾರುತದ ಎಚ್ಚರಿಕೆ ನೀಡಿದ್ದರೂ ಅದನ್ನು ಲೆಕ್ಕಿಸದೆ ಸಮುದ್ರಕ್ಕೆ ಇಳಿದ ದೋಣಿ ಮುಳುಗಡೆಯಾಗಿದೆ. ಈ ಅಲಾಯನ್ಸ್ ಎಂಬ ಹೆಸರಿನ ವಿಗ್ಗ್ ಬೋಟ್​​​ ಎಂಆರ್​ಪಿಎಲ್​ ಕಚ್ಚಾತೈಲ ಹಡಗಿನ ಪೈಪ್​ಲೈನ್​ ನಿರ್ವಹಣೆ ಮಾಡುತ್ತಿದ್ದ ದೋಣಿಯಾಗಿತ್ತು. ಒಟ್ಟು 9 ಜನರು ಸಮುದ್ರಕ್ಕೆ ಇಳಿದಿದ್ದರು. ಇದೀಗ 7ಮಂದಿ ನಾಪತ್ತೆಯಾಗಿದ್ದಾರೆ. ಅವರಲ್ಲಿ ಇಬ್ಬರು ಮೊಮಿರುಲ್ ಮುಲ್ಲಾ( 34), ಕರೀಮುಲ್ಲಾ ಶೇಕ್ (24) ಎಂಬುವರು ಟ್ಯೂಬ್​ನಲ್ಲಿ ಈಜಿಕೊಂಡು ಬಂದು ಜೀವ ಉಳಿಸಿಕೊಂಡಿದ್ದಾರೆ. ಇಬ್ಬರೂ ಉಡುಪಿಯ ಮಟ್ಟುಕೊಪ್ಲ ಎಂಬಲ್ಲಿ ದಡ ಸೇರಿದ್ದಾರೆ. ಇನ್ನುಳಿದ ಏಳು ಮಂದಿಗಾಗಿ ಸಮುದ್ರದಲ್ಲಿ ಕೋಸ್ಟಲ್​ ಗಾರ್ಡ್​ ಹುಡುಕಾಟ ನಡೆಸಿದೆ.

ಇಂದು ಮೊದಲ ಬಲಿ
ಹಾಗೇ ಚಂಡಮಾರುತ ತಂದ ಮಳೆಯ ಅಬ್ಬರದ ಮಧ್ಯೆ ರೈತನೊಬ್ಬ ಇಂದು ಮೃತಪಟ್ಟಿದ್ದಾನೆ. ವಿದ್ಯುತ್​ ತಂತಿ ಸ್ಪರ್ಶಿಸಿದ ಕಾಪು ತಾಲೂಕಿನ ರೈತ ರಮೇಶ್ ಮೃತಪಟ್ಟಿದ್ದಾರೆ.

ಇದನ್ನೂ ಓದಿ: ತೌಕ್ತೆ ಚಂಡಮಾರುತದ ಪ್ರಭಾವ ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳಿಗೂ ವ್ಯಾಪಿಸುವ ಸಾಧ್ಯತೆ: ಗೃಹ ಸಚಿವ ಬಸವರಾಜ್ ಬೊಮ್ಮಾಯಿ

Cyclone Tauktae: ತೌಕ್ತೆ ಚಂಡಮಾರುತ ಪರಿಣಾಮ, ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆ

Tauktae cyclone Effect Red alert in Udupi till Tomorrow Morning

Published On - 8:06 pm, Sat, 15 May 21