ಬೆಂಗಳೂರು: ರೋಗಿಗಳ ನರಳಾಟ.. ಸೋಂಕಿತರ ಪರದಾಟ.. ಕುಟುಂಬಸ್ಥರ ಗೋಳು ಇನ್ನೂ ಕಣ್ಮುಂದೆ ಹಾಗೆ ಇದೆ.. 2ನೇ ಅಲೆ ಸ್ವಲ್ಪ ಕಂಟ್ರೋಲ್ಗೆ ಬಂದಿದ್ರೂ ಕಹಿ ನೆನಪುಗಳು ದೂರವಾಗಿಲ್ಲ. ರಾಜ್ಯ ಅನ್ಲಾಕ್ ಆದ್ರೂ ಬದುಕು ಸರಿಯಾಗಿಲ್ಲ. ಹೀಗಿರುವಾಗ್ಲೇ 3ನೇ ಅಲೆಯ ದಾಳಿ ಭಯ ಶುರುವಾಗಿದೆ. ಸರ್ಕಾರವೂ 3ನೇ ಅಲೆ ತಡೆಯೋಕೆ ಸಿದ್ಧತೆ ಮಾಡಿಕೊಳ್ತಿದೆ. ಈ ಮಧ್ಯೆ ತಾಂತ್ರಿಕ ಸಲಹಾ ಸಮಿತಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.
3ನೇ ಅಲೆ ದಾಳಿ ಭೀತಿ.. ತಾಂತ್ರಿಕ ಸಲಹಾ ಸಮಿತಿ ಅಲರ್ಟ್
ಎರಡನೇ ಅಲೆಯಲ್ಲಿ ಸರ್ಕಾರ ಮಾಡಿದ ಎಡವಟ್ಟುಗಳಿಂದಾಗಿ ಅದೆಷ್ಟೋ ಜನ ಸಾವಿನ ಮನೆ ಸೇರಿದ್ದಾರೆ. ಹಾದಿ, ಬೀದಿಯಲ್ಲಿ ಹೆಣಗಾಟ ನಡೆದಿದೆ. ಹೀಗಾಗಿ ಆ ಎಡವಟ್ಟುಗಳನ್ನ ಸರಿದೂಗಿಸಿಕೊಳ್ಳಲು ಸರ್ಕಾರ ಮುಂದಾಗಿತ್ತು. ಸೆಪ್ಟೆಂಬರ್ ಅಥವಾ ಅಕ್ಟೋಬರ್ ವೇಳೆಗೆ 3ನೇ ಅಲೆಯ ಆತಂಕ ಇದ್ದು, ಆಕ್ಸಿಜನ್ ಪೂರ್ಣ ಪ್ರಮಾಣದಲ್ಲಿ ಸಿಗುವಂತೆ ಮಾಡಲು ಪ್ಲ್ಯಾನ್ ಮಾಡಿತ್ತು. ಅಲ್ದೆ, ಆಕ್ಸಿಜನ್ ವ್ಯವಸ್ಥೆ ಸರಿದೂಗಿಸಲೆಂದೇ ಡಾ.ರಾಘವೇಂದ್ರ ರಾವ್ ನೇತೃತ್ವದಲ್ಲಿ ತಾಂತ್ರಿಕ ಸಲಹಾ ಸಮಿತಿಯೊಂದನ್ನು ರಚನೆ ಮಾಡ್ಲಾಗಿತ್ತು. ಈಗ ಕೊವಿಡ್ ಟಾಸ್ಕ್ ಫೋರ್ಸ್ ಅಧ್ಯಕ್ಷರಿಗೆ ತಾಂತ್ರಿಕ ಸಮಿತಿ ವರದಿ ಸಲ್ಲಿಕೆ ಮಾಡಿದೆ. ಆಕ್ಸಿಜನ್ ತಂತ್ರ ರೂಪಿಸಿ ಸರ್ಕಾರವನ್ನು ಎಚ್ಚರಿಸಿದೆ.
ತಾಂತ್ರಿಕ ಸಲಹಾ ಸಮಿತಿಯ ಸಲಹೆಗಳೇನು?
– ಈಗ ಇರುವ ತಾಲೂಕು ಜಿಲ್ಲಾ ಮಟ್ಟದ ಆಸ್ಪತ್ರೆಗಳ ಗುಣಮಟ್ಟ ಹೆಚ್ಚಿಸ್ಬೇಕು
– ತಾಲೂಕು ಆಸ್ಪತ್ರೆ, ಜಿಲ್ಲಾಸ್ಪತ್ರೆಗಳಲ್ಲೂ ಕೂಡ ಆಕ್ಸಿಜನ್ ಸಂಗ್ರಹ ಮಾಡ್ಬೇಕು
-ಮುಖ್ಯವಾಗಿ ಪ್ರತಿ ಜಿಲ್ಲಾಸ್ಪತ್ರೆಯಲ್ಲೂ ಏನಿಲ್ಲ ಅಂದ್ರೂ 20 ಮೆಟ್ರಿಕ್ ಟನ್ನಷ್ಟು ಆಕ್ಸಿಜನ್ ಸಂಗ್ರಹ ಸಾಮರ್ಥ್ಯ ಇರಬೇಕು.
– ರಾಜ್ಯದಲ್ಲಿ ಐಸಿಯೂ ಸೇರಿ ಒಟ್ಟು 58,258 ಆಕ್ಸಿಜನ್ ಬೆಡ್ಗಳು ಲಭ್ಯವಿದೆ
– ಆಕ್ಸಿಜನ್ ಬೆಡ್ಗಳ ಸಂಖ್ಯೆಯನ್ನು 84,032 ಕ್ಕೆ ಏರಿಕೆ ಮಾಡಲು ಸಲಹೆ
– ರಾಜ್ಯದ 19 ಜಿಲ್ಲೆಗಳಲ್ಲಿ ಇಂದಿಗೂ ಕೂಡ ಆಕ್ಸಿಜನ್ ಸಂಗ್ರಹಕ್ಕೆ ವ್ಯವಸ್ಥೆಗಳಿಲ್ಲ
– ಗ್ಲೋಬಲ್ ಟೆಂಡರ್ ಮೂಲಕ ಲಿಕ್ವಿಡ್ ಆಕ್ಸಿಜನ್ ಸಂಗ್ರಹ, ಟ್ಯಾಂಕರ್ಗಳ ವ್ಯವಸ್ಥೆ
– ಪ್ರತಿ ತಾಲೂಕು ಮಟ್ಟದಲ್ಲೂ 25 ಆಕ್ಸಿಜನ್ ಬೆಡ್ಗಳನ್ನ ನಿರ್ಮಾಣ ಮಾಡಬೇಕು
ಹೀಗಾಗಿ ಆಗಸ್ಟ್ ವೇಳೆಗೆ ಈ ಎಲ್ಲ ರೀತಿಯಲ್ಲೂ ಆಕ್ಸಿಜನ್ ಜನರೇಟರ್ ಹಾಗೂ ಆಕ್ಸಿಜನ್ ಸಂಗ್ರಹ ಟ್ಯಾಂಕರ್ ನಿರ್ಮಾಣ ಪೂರ್ಣ ಆಗಬೇಕಿದೆ. ಇಲ್ಲವಾದಲ್ಲಿ ಮೂರನೇ ಅಲೆಯಲ್ಲೂ ಹೆಣಗಾಟ ತಪ್ಪಿದಲ್ಲ.
ಇದನ್ನೂ ಓದಿ: ಕೊರೊನಾ 3ನೇ ಅಲೆ; ಸ್ಥೂಲಕಾಯ, ಟೈಪ್ 1 ಡಯಾಬಿಟಿಸ್ ಇರುವ ಮಕ್ಕಳ ಬಗ್ಗೆ ಇರಲಿ ಹೆಚ್ಚಿನ ಎಚ್ಚರ