ಕೊಪ್ಪಳ: ಆತ ಚಪಲ ಚನ್ನಿಗ ತಹಶೀಲ್ದಾರ್. ಕಚೇರಿಯಲ್ಲೆ ಕೆಳ ಅಧಿಕಾರಿಗೆ ಕಿಸ್ ಕೊಟ್ಟು ತಗಲಾಕೊಂಡಿದ್ದ. ತಹಶೀಲ್ದಾರ್ ಕರ್ಮಕಾಂಡದ ಕುರಿತು ಟಿವಿ9 ವರದಿ ಬಿತ್ತರಿಸಿತ್ತು. ವರದಿಯಿಂದ ಎಚ್ಚೆತ್ತ ಸರ್ಕಾರ ತಹಶೀಲ್ದಾರ್ರನ್ನ ಅಮಾನತ್ತು ಮಾಡಿದೆ. ಹಾಗಾದ್ರೆ ಯಾರೂ ಕಿಸ್ಸಿಂಗ್ ತಹಶೀಲ್ದಾರ್ ಅಂತೀರಾ ಈ ಸ್ಟೋರಿ ಓದಿ.
ಉದ್ಯೋಗಿಗೆ ಕಿಸ್ ಕೊಟ್ಟಿದ್ದ ಕಿಸ್ಸಿಂಗ್ ಸ್ಟಾರ್ ಗುರುಬಸವರಾಜ್..
ಈತ ಯಾವನೋ ಆಗಿದ್ರೆ ಈತನ ಬಗ್ಗೆ ಹೇಳ್ತಾ ಇರ್ಲಿಲ್ಲ. ಈತ ಸರ್ಕಾರಿ ಕೆಲಸದಲ್ಲಿದ್ದು, ಜನ ಸೇವೆ ಮಾಡೋ ತಹಶೀಲ್ದಾರ್. ಹೆಸರು ಗುರುಬಸವರಾಜ್. ಕೊಪ್ಪಳ ಜಿಲ್ಲೆಯ ಕುಷ್ಟಗಿ ತಹಶೀಲ್ದಾರ್ ಆಗಿ ಕೆಲಸ ಮಾಡೋ ವೇಳೆ ತನ್ನ ಕಚೇರಿಯಲ್ಲಿ ಮಹಿಳೆಗೆ ಮುತ್ತು ಕೊಟ್ಟಿದ್ದ. ತನ್ನ ಕೈ ಕೆಳಗಡೆ ಕೆಲಸ ಮಾಡೋ ಉದ್ಯೋಗಿಗೆ ಕಿಸ್ ಕೊಟ್ಟಿದ್ದ ಕಿಸ್ಸಿಂಗ್ ಸ್ಟಾರ್ ಗುರುಬಸವರಾಜ್ ವಿಡಿಯೋ ಒಂದು ವರ್ಷದ ಬಳಿಕ ವೈರಲ್ ಆಗಿತ್ತು.
ಈ ಕುರಿತು ಟಿವಿ9 ಕಿಸ್ಸಿಂಗ್ ರಾಜಾ ಅನ್ನೋ ಶೀರ್ಷಿಕೆಯಡಿ ವರದಿ ಬಿತ್ತರಿಸಿತ್ತು. ಟಿವಿ9 ವರದಿ ಆಧರಿಸಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಗುರುಬಸವರಾಜ್ ಅಮಾನತ್ತು ಮಾಡಿ ಆದೇಶ ಹೊರಡಿಸಿದ್ದಾರೆ. ಮಹಿಳೆ ಮೈಮೇಲೆ ಎರಗಿ ಕಾಮುಕನಂತೆ ವರ್ತನೆ ಮಾಡಿದ್ದ ಗುರುಬಸವರಾಜ್ ಸಸ್ಪೆಂಡ್ ಆಗಿದ್ದಾನೆ.
ಹೋದಲ್ಲೆಲ್ಲ ಇಂತಹ ಖಯಾಲಿಯೇ ಇವನ ಕಾಯಕ..
ಈ ಗುರುಬಸವರಾಜ್ ಕುಷ್ಟಗಿ ತಹಶೀಲ್ದಾರ್ ಆಗಿದ್ದಾಗ ಅಂದ್ರೆ ಎರಡು ವರ್ಷದ ಹಿಂದೆ ಮಹಿಳೆಗೆ ಮುತ್ತು ಕೊಟ್ಟಿದ್ದ. ಅಲ್ಲಿಂದ ಗುರುಬಸವರಾಜ್ ಕೊಪ್ಪಳ ನಗರಾಭಿವೃದ್ದಿ ಕೋಶ ಇಲಾಖೆಗೆ ವರ್ಗಾವಣೆಯಾಗಿದ್ದ. ಕೊಪ್ಪಳಕ್ಕೆ ಬಂದ ಮೇಲೆ ಗುರುಬಸವನ ಲೀಲೆ ಹೊರ ಬಂದಿತ್ತು. ಅಸಲಿಗೆ ಗುರುಬಸವರಾಜ್ ಸಾಮಾನ್ಯದವನೇನಲ್ಲ, ಹೋದಲ್ಲೆಲ್ಲ ಇಂತಹ ಖಯಾಲಿಯೇ ಇವನ ಕಾಯಕ. ಅನುಕಂಪದ ಆಧಾರದ ಮೇಲೆ ನೌಕರಿ ಪಡೆದ ಹೆಣ್ಮಕ್ಕಳೆ ಇವನ ಟಾರ್ಗೆಟ್.
ಆದ್ರೆ ತನ್ನ ಲೀಲೆ ಯಾವುದೂ ಹೊರ ಬರದಂತೆ ನೋಡಿಕೊಳ್ಳುತ್ತಿದ್ದ. ಆದ್ರೆ ಯಾವಾಗ ಮಹಿಳೆಗೆ ಮುತ್ತಿಡೋ ವಿಡಿಯೋ ವೈರಲ್ ಆಯ್ತೋ, ವಿಡಿಯೋದಲ್ಲಿದ್ದ ಮಹಿಳೆ ಕುಷ್ಟಗಿ ಠಾಣೆಯಲ್ಲಿ ಕೇಸ್ ದಾಖಲಿಸಿದ್ರು. ಅಗಸ್ಟ್ನಲ್ಲಿ ಗುರುಬಸವನ ಕರ್ಮಕಾಂಡ ಬಯಲಾಗಿತ್ತು. ಇದಾದ ಮೂರು ತಿಂಗಳ ಬಳಿಕ ಅಮಾನತ್ತು ಮಾಡಲಾಗಿದೆ. ಇಷ್ಟು ದಿನ ಆಸ್ಪತ್ರೆಯ ನೆಪ ಹೇಳಿ ಜಿಲ್ಲಾಧಿಕಾರಿಗಳ ವಿಚಾರಣೆಗೂ ಗುರುಬಸವರಾಜ್ ಹಾಜರಾಗಿರಲಿಲ್ಲ. ಅಲ್ದೆ ಅಮಾನತ್ತು ಮಾಡದಂತೆ ರಾಜಕೀಯ ಒತ್ತಡವೂ ಹಾಕಿದ್ದ ಎನ್ನಲಾಗಿದೆ.
ಒಟ್ನಲ್ಲಿ ಗುರುಬಸವ ಮಾಡಿದ ತಪ್ಪಿಗೆ ತಕ್ಕ ಪ್ರಾಯಶ್ಚಿತವಾಗಿದೆ. ಟಿವಿ9 ವರದಿ ಹಿನ್ನೆಲೆ ಮೂರು ತಿಂಗಳ ಬಳಿಕವಾದ್ರೂ ಸಾರ್ಥಕವಾಗಿದೆ. ಕಾಮುಕನಂತೆ ವರ್ತಿಸಿದ್ದ ಗುರುಬಸವರಾಜ್ ಅಮಾನತ್ತಾಗಿದ್ದು, ಹೆಣ್ಣುಮಕ್ಕಳಿಗೆ, ಜಿಲ್ಲೆಯ ಜನರಿಗೆ ನೆಮ್ಮದಿ ತಂದಿದೆ.
ಇದನ್ನೂ ಓದಿ: ಕಚೇರಿಯಲ್ಲೇ ಸಹೋದ್ಯೋಗಿಗೆ ಕಿಸ್ ಕೊಟ್ಟ ತಹಶೀಲ್ದಾರ್, ಎಲ್ಲಿ?
Published On - 10:33 am, Sat, 28 November 20