ಸಿಲಿಕಾನ್ ಸಿಟಿಯಲ್ಲೇ ವಾಸವಿದ್ರಂತೆ ಟೆರರಿಸ್ಟ್​​ಗಳು!

ಬೆಂಗಳೂರಿನಲ್ಲಿ ಹಲವು ತಿಂಗಳುಗಳ ಕಾಲ ಉಗ್ರರು ವಾಸವಿದ್ರು ಎಂಬ ಸ್ಫೋಟಕ ಮಾಹಿತಿ ಇದೀಗ ಬೆಳಕಿಗೆ ಬಂದಿದೆ. ಸೋಲದೇವನಹಳ್ಳಿಯ ಬಾಡಿಗೆ ಮನೆಯಲ್ಲಿ 5ಕ್ಕೂ ಹೆಚ್ಚು ಉಗ್ರರು ವಾಸವಿದ್ರು ಎಂಬ ಭಯಾನಕ ಸತ್ಯವನ್ನ ವಿಚಾರಣೆ ವೇಳೆ ನಜೀರ್ ಹೊರಹಾಕಿದ್ದಾನೆ. ಅಗರ್ತಲದಲ್ಲಿ ಆ.26ರಂದು ನಜೀರ್ ಶೇಖ್ ನನ್ನು ಎನ್ ಐಎ ತಂಡ ಬಂಧಿಸಿತ್ತು. ಬಂಧಿತ ನಜೀರ್ ಬಾಂಗ್ಲಾದೇಶದ ನಿಷೇಧಿತ ಉಗ್ರ ಸಂಘಟನೆ ಜಮಾತ್ ಉಲ್ ಮುಜಾಹಿದ್ದೀನ್ ಸದಸ್ಯನಾಗಿದ್ದ.  ಜೂನ್ 26ರಂದು ಅನುಮಾನಾಸ್ಪದ ಮೇರೆಗೆ ದೊಡ್ಡಬಳ್ಳಾಪುರದ ಮಸೀದಿಯಲ್ಲಿ ಹಬೀಬುರ್ ನನ್ನು ಎನ್ ಐಎ […]

ಸಿಲಿಕಾನ್ ಸಿಟಿಯಲ್ಲೇ ವಾಸವಿದ್ರಂತೆ ಟೆರರಿಸ್ಟ್​​ಗಳು!
ಸಾಧು ಶ್ರೀನಾಥ್​

Updated on: Sep 10, 2019 | 1:49 PM

ಬೆಂಗಳೂರಿನಲ್ಲಿ ಹಲವು ತಿಂಗಳುಗಳ ಕಾಲ ಉಗ್ರರು ವಾಸವಿದ್ರು ಎಂಬ ಸ್ಫೋಟಕ ಮಾಹಿತಿ ಇದೀಗ ಬೆಳಕಿಗೆ ಬಂದಿದೆ. ಸೋಲದೇವನಹಳ್ಳಿಯ ಬಾಡಿಗೆ ಮನೆಯಲ್ಲಿ 5ಕ್ಕೂ ಹೆಚ್ಚು ಉಗ್ರರು ವಾಸವಿದ್ರು ಎಂಬ ಭಯಾನಕ ಸತ್ಯವನ್ನ ವಿಚಾರಣೆ ವೇಳೆ ನಜೀರ್ ಹೊರಹಾಕಿದ್ದಾನೆ.

ಅಗರ್ತಲದಲ್ಲಿ ಆ.26ರಂದು ನಜೀರ್ ಶೇಖ್ ನನ್ನು ಎನ್ ಐಎ ತಂಡ ಬಂಧಿಸಿತ್ತು. ಬಂಧಿತ ನಜೀರ್ ಬಾಂಗ್ಲಾದೇಶದ ನಿಷೇಧಿತ ಉಗ್ರ ಸಂಘಟನೆ ಜಮಾತ್ ಉಲ್ ಮುಜಾಹಿದ್ದೀನ್ ಸದಸ್ಯನಾಗಿದ್ದ.  ಜೂನ್ 26ರಂದು ಅನುಮಾನಾಸ್ಪದ ಮೇರೆಗೆ ದೊಡ್ಡಬಳ್ಳಾಪುರದ ಮಸೀದಿಯಲ್ಲಿ ಹಬೀಬುರ್ ನನ್ನು ಎನ್ ಐಎ ಬಂಧಿಸಿತ್ತು. ಹಬೀಬುರ್ ಬಂಧನ ಬಳಿಕ ಉಗ್ರರು ರಾಜ್ಯ ತೊರೆದು ಬೇರೆ ಕಡೆ ತೆರಳಿದ್ದಾರೆ ಎಂದು ಸ್ಫೋಟಕ ಮಾಹಿತಿಯನ್ನು ನಜೀರ್ ಬಾಯ್ಬಿಟ್ಟಿದ್ದಾನೆ.

Published On - 4:54 pm, Fri, 6 September 19

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us