ಹಾವೇರಿ: ಡಿಪೋ ಮ್ಯಾನೇಜರ್ ಕಿರುಕುಳ ಆರೋಪದ ಹಿನ್ನೆಯಲ್ಲಿ ಡ್ರೈವರ್ ಕಂ ಕಂಡಕ್ಟರ್ ಆಗಿದ್ದ ಮನೋಜಕುಮಾರ್ (44) ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ ಮಾಡಿದ್ದಾರೆ. ಘಟನೆ ಜಿಲ್ಲೆಯ ಬ್ಯಾಡಗಿ ವಾಯುವ್ಯ ಸಾರಿಗೆ ಸಂಸ್ಥೆಯ ಡಿಪೋದಲ್ಲಿ ನಡೆದಿದೆ.
ಅಸ್ವಸ್ಥಗೊಂಡ ಮನೋಜಕುಮಾರ್ಗೆ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗುತ್ತಿದೆ. ಡಿಪೋಗೆ ಬಂದಿದ್ದರೂ ಕರ್ತವ್ಯಕ್ಕೆ ತೆರಳದೆ ಕಾಲಹರಣ ಮಾಡುತ್ತಿದ್ದೀರಿ ಎಂದು ಕಾರಣ ನೀಡಿ ಮನೋಜಕುಮಾರ್ನನ್ನು ಡಿಪೋ ಮ್ಯಾನೇಜರ್ ಐದು ದಿನಗಳ ಹಿಂದೆ ಅಮಾನತು ಮಾಡಿದ್ದರು.
ಈ ಹಿನ್ನೆಯಲ್ಲಿ, ಇವತ್ತು ಮ್ಯಾನೇಜರ್ ಬಳಿ ಹೋಗಿ ಹೀಗ್ಯಾಕೆ ಮಾಡಿದ್ದೀರಿ? ನನ್ನ ಹೆಂಡತಿ ಮಕ್ಕಳ ಗತಿ ಏನು? ಎಂದು ಪ್ರಶ್ನಿಸಲು ಕಂಡಕ್ಟರ್ ಮನೋಜಕುಮಾರ್ ಹೋಗಿದ್ದಾಗಲೇ ಮನೋಜಕುಮಾರ್ ವಿಷ ಸೇವಿಸಿದ್ದಾರೆ. ಡಿಪೋ ಮ್ಯಾನೇಜರ್ ಕಿರುಕುಳದ ವಿರುದ್ಧ ಸಾರಿಗೆ ಇಲಾಖೆ ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬ್ಯಾಡಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಮನೋಜಕುಮಾರ್ರನ್ನು ಹೆಚ್ಚಿನ ಚಿಕಿತ್ಸೆಗೆ ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.
ಇದನ್ನೂ ಓದಿ: ಅಕ್ಕನ ಮನೆಗೆ ಕರೆದುಕೊಂಡು ಹೋಗದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ತಂಗಿ
ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಪ್ರೇಮ ಕಲಹ: ಮಾವ ಬಿಜೆಪಿ ಸಂಸದ -ಅತ್ತೆ ಶಾಸಕಿ! ಸೊಸೆಯಿಂದ ಆತ್ಮಹತ್ಯೆಗೆ ಯತ್ನ
Published On - 2:24 pm, Tue, 16 March 21