ಅಕ್ಕನ ಮನೆಗೆ ಕರೆದುಕೊಂಡು ಹೋಗದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ತಂಗಿ

ಹೊಸದಾಗಿ ಬಾಡಿಗೆ ಮನೆ ಪಡೆದಿದ್ದ ಮೊದಲ ಮಗಳ ಮನೆಗೆ ಬಣ್ಣ ಹೊಡೆಯಲು ತೆರಳುತ್ತಿದ್ದ ಅಪ್ಪ ಮಹಮದ್ ಗೌಸ್ ಜೊತೆ ತಾನೂ ಬರುವುದಾಗಿ ಹೇಳಿದ್ದ ಎರಡನೇ ಮಗಳು ಶಹನಾಜ್​ಗೆ ಮನೆಯಲ್ಲಿಯೇ ಇರುವಂತೆ ಮಹಮದ್ ಗೌಸ್ ಸಲಹೆ ನೀಡಿ ತೆರಳಿದ್ದಾರೆ. ಆದರೆ ಮನೆಗೆ ಸಂಜೆ ಹಿಂದಿರುಗಿ ಬರುವಷ್ಟರಲ್ಲಿ ಮಗಳು ನೇಣಿಗೆ ಶರಣಾಗಿದ್ದಾಳೆ.

ಅಕ್ಕನ ಮನೆಗೆ ಕರೆದುಕೊಂಡು ಹೋಗದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ತಂಗಿ
ಅತ್ತೆ ಸೊಸೆ ಕಿತ್ತಾಟ: ಸೊಸೆಗೆ ಚಾಕುವಿನಿಂದ ಚುಚ್ಚಿದ್ದ ಅತ್ತೆ, ಸೊಸೆ ಸತ್ತಳೆಂದು ಅಂಜಿ ನೇಣಿಗೆ ಶರಣು
Follow us
preethi shettigar
|

Updated on:Mar 15, 2021 | 5:17 PM

ಮೈಸೂರು: ಅಕ್ಕನ ಮನೆಗೆ ಕರೆದುಕೊಂಡು ಹೋಗದ ಹಿನ್ನೆಲೆಯಲ್ಲಿ ಮನನೊಂದು ತಂಗಿ ನೇಣಿಗೆ ಶರಣಾದ ಘಟನೆ ಮೈಸೂರಿನ ಗೌಸಿಯಾನಗರದಲ್ಲಿ ನಡೆದಿದೆ. ತಂದೆ ತನ್ನನ್ನು ಅಕ್ಕನ ಮನೆಗೆ ಬಿಟ್ಟು ಹೋದರು ಎಂಬುವುದನ್ನೇ ಕಾರಣವಾಗಿಸಿಕೊಂಡ ಶಹನಾಜ್(17) ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸದ್ಯ ಈ ಸಂಬಂಧ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಹೊಸದಾಗಿ ಬಾಡಿಗೆ ಮನೆ ಪಡೆದಿದ್ದ ಮೊದಲ ಮಗಳ ಮನೆಗೆ ಬಣ್ಣ ಹೊಡೆಯಲು ತೆರಳುತ್ತಿದ್ದ ಅಪ್ಪ ಮಹಮದ್ ಗೌಸ್ ಜೊತೆ ತಾನೂ ಬರುವುದಾಗಿ ಹೇಳಿದ್ದ ಎರಡನೇ ಮಗಳು ಶಹನಾಜ್​ಗೆ ಮನೆಯಲ್ಲಿಯೇ ಇರುವಂತೆ ಮಹಮದ್ ಗೌಸ್ ಸಲಹೆ ನೀಡಿ ತೆರಳಿದ್ದಾರೆ. ಆದರೆ ಮನೆಗೆ ಸಂಜೆ ಹಿಂದಿರುಗಿ ಬರುವಷ್ಟರಲ್ಲಿ ಮಗಳು ನೇಣಿಗೆ ಶರಣಾಗಿದ್ದಾಳೆ.

ಮೈಸೂರಿನಲ್ಲಿ ರೈತ ಅತ್ಮಹತ್ಯೆ: ಸಾಲಬಾಧೆ ಹಿನ್ನೆಲೆ ರೈತ ನೇಣಿಗೆ ಶರಣಾದ ಘಟನೆ ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಹರವೆ ಗ್ರಾಮದಲ್ಲಿ ನಡೆದಿದೆ. ಹರವೆ ಗ್ರಾಮದ ಈಶ್ವರ(65) ನೇಣಿಗೆ ಶರಣಾಗಿದ್ದಾರೆ. ಸುಮಾರು ಒಂದೂವರೆ ಎಕರೆ ಜಮೀನಿನಲ್ಲಿ ಶುಂಠಿ ಬೆಳೆದಿದ್ದ ಈಶ್ವರ ಅವರು ಇದಕ್ಕಾಗಿ ವಿವಿಧ ಬ್ಯಾಂಕುಗಳಲ್ಲಿ ಸುಮಾರು ₹3.80 ಲಕ್ಷ ಸಾಲ ಮಾಡಿದ್ದರು. ಆದರೆ ಬೆಳೆ ಕೈ ಕೊಟ್ಟ ಹಿನ್ನೆಲೆಯಲ್ಲಿ ಮನನೊಂದ ಈಶ್ವರ ತಮ್ಮ ಜಮೀನಿನ ಬ್ಯಾರಲ್ ಹೌಸ್‌ನಲ್ಲಿ ನೇಣಿಗೆ ಶರಣಾಗಿದ್ದಾರೆ. ಸದ್ಯ ಈ ಸಂಬಂಧ ಹುಣಸೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಚಿತ್ರದುರ್ಗದಲ್ಲಿ ಮಹಿಳೆ ಸಾವು: ನಾದಿನಿಯರು, ಮೈದುನ ಹಾಗೂ ಮೈದುನನ ಪತ್ನಿಯರು ಸೇರಿ ಮಹಿಳೆ ಮೇಲೆ ಹಲ್ಲೆ ಮಾಡಿದ್ದು, ಸದ್ಯ ಹಲ್ಲೆಗೊಳಗಾದ ಮಹಿಳೆ ಸಾವಿಗೀಡಾದ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಪಿ.ಓಬೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಕಳೆದ ಶನಿವಾರ ಮಂಜುಳಮ್ಮ(31) ಮೇಲೆ ಹಲ್ಲೆ ನಡೆದಿದ್ದು, ಹಲ್ಲೆಗೊಳಗಾಗಿದ್ದ ಮಂಜುಳಮ್ಮ ಜಿಲ್ಲಾಸ್ಪತ್ರೆಗೆ ದಾಖಲಾಗಿದರು. ಆದರೆ ದುರಾದೃಷ್ಟವಶಾತ್ ಇಂದು ಮಂಜುಳಮ್ಮ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಈ ಸಂಬಂಧ ಹತ್ಯೆಗೆ ಯತ್ನಿಸಿದ ವಿಡಿಯೋ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದ್ದು, ನಾದಿನಿ ನೀಲಮ್ಮ, ಸುಮಕ್ಕ, ಮೈದುನ ಚಿದಾನಂದ ಹಾಗೂ ಚಿದಾನಂದನ ಪತ್ನಿ ವಿಶಾಲಮ್ಮ ವಿರುದ್ಧ ಕೊಲೆ ಆರೋಪ ಮಾಡಲಾಗಿದೆ. ಸದ್ಯ ಈ ಪ್ರಕರಣ ಪರಶುರಾಂಪುರ ಠಾಣೆಯಲ್ಲಿ ದಾಖಲಾಗಿದೆ.

ಇದನ್ನೂ ಓದಿ: ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿ ಪಿನಾಯಿಲ್ ಕುಡಿದು ಆತ್ಮಹತ್ಯೆ: ಚಿಕಿತ್ಸೆ ಫಲಿಸದೆ ಸಾವು

ರಮೇಶ್ ಜಾರಕಿಹೊಳಿಯವರಿಂದಲೇ ಸಿಡಿ ರಿಲೀಸ್ ಆಗಿದೆ; ಇದರಿಂದ ನನ್ನ ಪೋಷಕರು ಆತ್ಮಹತ್ಯೆಗೆ ಯತ್ನಿಸಿದ್ದಾರೆ -ಸಂತ್ರಸ್ತೆಯಿಂದ ವಿಡಿಯೋ ಹೇಳಿಕೆ ಬಿಡುಗಡೆ

Published On - 5:14 pm, Mon, 15 March 21

ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ