ಕಾಂಗ್ರೆಸ್‌ನವರಿಂದಲೇ ಕಾಂಗ್ರೆಸ್ ಪಕ್ಷ ಸೋಲುತ್ತಿದೆ: ಎಸ್ಎಸ್ ಮಲ್ಲಿಕಾರ್ಜುನ
ಕಾಂಗ್ರೆಸ್‌ನವರಿಂದಲೇ ಕಾಂಗ್ರೆಸ್ ಪಕ್ಷ ಸೋಲುತ್ತಿದೆ. ಬೇರೆಯವರಿಂದ ಕಾಂಗ್ರೆಸ್ ಸೋಲುತ್ತಿಲ್ಲ ಎಂದು ಸಚಿವ ಎಸ್ಎಸ್ ಮಲ್ಲಿಕಾರ್ಜುನ್ ಹೇಳಿದ್ದಾರೆ. ಅಲ್ಲದೆ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ನಾವು ಕೆಲಸ ಮಾಡಬೇಕಿದೆ ಎಂದು ಹೇಳಿದ್ದಾರೆ.
ಹಾವೇರಿ, 21: ಕಾಂಗ್ರೆಸ್‌ನವರಿಂದಲೇ ಕಾಂಗ್ರೆಸ್ ಪಕ್ಷ ಸೋಲುತ್ತಿದೆ. ಬೇರೆಯವರಿಂದ ಕಾಂಗ್ರೆಸ್ ಸೋಲುತ್ತಿಲ್ಲ ಎಂದು ಸಚಿವ ಎಸ್ಎಸ್ ಮಲ್ಲಿಕಾರ್ಜುನ್ (S.S.Mallikarjun) ಹೇಳಿದ್ದಾರೆ. ಹಾವೇರಿಯಲ್ಲಿ ಮಾತನಾಡಿದ ಅವರು, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ನಾವು ಕೆಲಸ ಮಾಡಬೇಕಿದೆ ಎಂದರು.
ಕೆಲವು ಕಾಮಗಾರಿಗಳ ಕೆಲಸ ವ್ಯತ್ಯಯವಾಗಿರಬಹುದು. ಗ್ಯಾರಂಟಿ ಯೋಜನೆ ಸೇರಿ ಮೂಲಸೌಕರ್ಯ, ಶಿಕ್ಷಣ, ಆರೋಗ್ಯಕ್ಕೆ ಒತ್ತು ನೀಡಲಾಗಿದೆ. ಲೋಕಸಭಾ ಚುನಾವಣೆಯಲ್ಲಿ ಒಮ್ಮತದ ಅಭ್ಯರ್ಥಿ ಆಯ್ಕೆ ಮಾಡೋಣ. ಈ ಸಲ ಹಾವೇರಿ ಲೋಕಸಭಾ ಕ್ಷೇತ್ರ ಗೆಲ್ಲೋಣ ಎಂದರು.
ಗ್ಯಾರಂಟಿ ಅನುಷ್ಠಾನ ಆಗದಂತೆ ಬಿಜೆಪಿ ಷಡ್ಯಂತರ
ಗ್ಯಾರಂಟಿ ಅನುಷ್ಠಾನ ಆಗದಂತೆ ಮಾಡಲು ಬಿಜೆಪಿ ಷಡ್ಯಂತ್ರ ಮಾಡಿತ್ತು ಎಂದು ಸಚಿವ ಹೆಚ್.ಕೆ.ಪಾಟೀಲ್ ಹೇಳಿದರು. ಹಾವೇರಿಯಲ್ಲಿ ಮಾತನಾಡಿದ ಅವರು, ಅನ್ನಭಾಗ್ಯ ಯೋಜನೆ ಅನುಷ್ಠಾನಕ್ಕಾಗಿ ಹೆಚ್ಚುವರಿ ಅಕ್ಕಿ ಕೇಳಿದ್ದೆವು. ಹಣ ಕೊಡುತ್ತೇವೆ ಎಂದರೂ ಕೇಂದ್ರ ಸರ್ಕಾರ ಹಣ ಪೂರೈಸಲಿಲ್ಲ. ಕರ್ನಾಟಕಕ್ಕೆ ಅಕ್ಕಿ ನೀಡದೆ ಖಾಸಗಿ ವ್ಯಕ್ತಿಗಳಿಗೆ ಮಾರಾಟ ಮಾಡಿದರು. ಆದರೂ ನಾವು ಘೋಷಿಸಿದಂತೆ ಗ್ಯಾರಂಟಿ ಯೋಜನೆ ಜಾರಿಗೆ ತಂದೆವು ಎಂದರು.
ಇದನ್ನೂ ಓದಿ: ನನ್ನ ತಂದೆ ಲಿಂಗಾಯತ ಅಧಿಕಾರಿಗಳ ಬಗ್ಗೆ ಮಾತಾಡಿದ್ದು ಮುಗಿದ ಅಧ್ಯಾಯ: ಎಸ್ ಎಸ್ ಮಲ್ಲಿಕಾರ್ಜುನ, ಸಚಿವ
ರಾಜ್ಯದಲ್ಲಿ ಬರಗಾಲದಿಂದ 34 ಸಾವಿರ ಕೋಟಿ ಮೌಲ್ಯದ ಬೆಳೆ ಹಾನಿಯಾಗಿದೆ. ಕೇಂದ್ರದ ನಿಯಮಾವಳಿ ಪ್ರಕಾರ 5,000 ಕೋಟಿ ಪರಿಹಾರಕ್ಕೆ ಮನವಿ ಮಾಡಿದ್ದೆವು. ಆದರೆ ಕೇಂದ್ರ ಸರ್ಕಾರ ಈವರೆಗೆ 1 ರೂಪಾಯಿ ಪರಿಹಾರ ಬಿಡುಗಡೆ ಮಾಡಿಲ್ಲ. ಬಿಜೆಪಿಯವರು ಕರ್ನಾಟಕವನ್ನು ಮಲತಾಯಿ ಮಕ್ಕಳಂತೆ ನೋಡುತ್ತಿದೆ. ಹೀಗಾಗಿ 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಬೇಕಿದೆ ಎಂದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ