ಬೆಂಗಳೂರು: ತಮ್ಮ ಬೇಡಿಕೆಯನ್ನು ಈಡೇರಿಸುವಂತೆ ಕಳೆದ ಮೂರು ದಿನಗಳಿಂದ ಸಾರಿಗೆ ನೌಕರರು ಮುಷ್ಕರ ಕೈಗೊಂಡಿದ್ದಾರೆ. ಮುಷ್ಕರದಿಂದ ಸಾರ್ವಜನಿಕರು ಬಸ್ಗಳಿಲ್ಲದೇ ಪರದಾಡುವ ಪರಿಸ್ಥಿತಿ ಎದುರಾಗಿದೆ. ಈ ನಿಟ್ಟಿನಲ್ಲಿ ಮುಷ್ಕರವನ್ನು ಬೆಂಬಲಿಸುತ್ತಿರುವವರಿಗೆ ಸರ್ಕಾರ ನೋಟಿಸ್ ಹೊರಡಿಸಿದೆ. ಮನೆ ಖಾಲಿ ಮಾಡಿ ಎಂದು ಸರ್ಕಾರ ನೋಟಿಸ್ ಹೊರಡಿಸಿದೆ. ನೋಟಿಸ್ ಕಂಡ ಸಾರಿಗೆ ಸಿಬ್ಬಂದಿ ಆಕ್ರೋಶ ಹೊರಹಾಕಿದ್ದಾರೆ. ನೀವು ನಮಗೆ ಹೆಚ್ಚು ಸಂಬಳ ನೀಡಿದರೆ ಮನೆ ಖಾಲಿ ಮಾಡಬಹುದು. ಮೂರು ದಿನಕ್ಕೆ ಅಥವಾ ಒಂದು ತಿಂಗಳ ಕಾಲಕ್ಕೆ ಯಾರು ಮನೆಯನ್ನು ಬಾಡಿಗೆಗೆ ನೀಡುತ್ತಾರೆ ಎಂದು ನೌಕರರು ಪ್ರಶ್ನೆ ಮಾಡಿದ್ದಾರೆ.
ನಾವು ಊರಿಂದ ಊರಿಗೆ ಟೂರ್ಗೆ ಬಂದಿದ್ದಾ? ಇಡೀ ಕುಟುಂಬವನ್ನು ಕಟ್ಟಿಕೊಂಡು ಎಲ್ಲಿಗೆ ಹೋಗಲಿ? ಕುಟುಂಬದಲ್ಲಿ ಹಿರಿಯರು, ಮಕ್ಕಳು ಹಾಗೂ ಮಹಿಳೆಯರೆಲ್ಲ ಇದ್ದಾರೆ. ನಮ್ಮ ಹತ್ತಿರ ಸೂಟ್ ಕೇಸ್ ಅಥವಾ ಚಾಪೆ ಇದ್ದರೆ ಹೋಗುತ್ತೇವೆ. ನೀವು ಮಾಡಿರುವ ಕೆಲಸ ಒಪ್ಪಿಕೊಳ್ಳುವ ಕೆಲಸವೇ ಎಂದು ನೌಕರರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಸಾರಿಗೆ ಮುಷ್ಕರಕ್ಕೆ ಕಾಂಗ್ರೆಸ್ ಬೆಂಬಲ: ನೌಕರರ ಪರ ದನಿಯೆತ್ತಿದ ಡಿ.ಕೆ.ಶಿವಕುಮಾರ್, ರಾಮಲಿಂಗಾರೆಡ್ಡಿ
ಕರ್ನಾಟಕದಲ್ಲಿ ನಡೆಯುತ್ತಿರುವ ಸಾರಿಗೆ ನಿಗಮಗಳ ಸಿಬ್ಬಂದಿ ಮುಷ್ಕರಕ್ಕೆ ಕಾಂಗ್ರೆಸ್ ನಾಯಕರು ಬೆಂಬಲ ಸೂಚಿಸಿದ್ದಾರೆ. ನಗರದಲ್ಲಿ ಗುರುವಾರ (ಏಪ್ರಿಲ್ 8) ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ನಾಯಕರಾದ ರಾಮಲಿಂಗಾರೆಡ್ಡಿ ಮತ್ತು ಎಚ್.ಎಂ.ರೇವಣ್ಣ ‘ನೌಕರರ ಬೇಡಿಕೆಗಳಿಗೆ ನಮ್ಮ ಸಹಮತವಿದೆ’ ಎಂದು ಹೇಳಿದ್ದಾರೆ. ಈ ಮೂಲಕ ಸಾರಿಗೆ ನಿಗಮಗಳ ಸಿಬ್ಬಂದಿ ಮುಷ್ಕರದಲ್ಲಿ ಬಿಜೆಪಿ-ಕಾಂಗ್ರೆಸ್ ನಡುವಿನ ಕೆಸರೆರಚಾಟ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯೂ ಕಾಣಿಸಿದೆ.
ಈ ಕುರಿತಂತೆ ಮಾತನಾಡಿದ ಡಿ.ಕೆ.ಶಿವಕುಮಾರ್, ‘6ನೇ ವೇತನ ಆಯೋಗ ಜಾರಿಗಾಗಿ ಸಾರಿಗೆ ನಿಗಮಗಳ ಸಿಬ್ಬಂದಿ ಮುಷ್ಕರ ನಡೆಸುತ್ತಿದ್ದಾರೆ. ಮುಷ್ಕರಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. ಸಿಬ್ಬಂದಿಯ ಎಲ್ಲಾ ಬೇಡಿಕೆ ಈಡೇರಿಸಲು ಆಗದಿರಬಹುದು. ಆದರೆ ಮುಷ್ಕರ ನಿರತ ಸಿಬ್ಬಂದಿಯನ್ನು ಕರೆದು ಚರ್ಚೆ ನಡೆಸಬೇಕು. ಅವರನ್ನು ನೌಕರರು ಅನ್ನಬೇಡಿ, ಅವರೂ ವ್ಯವಸ್ಥೆಯ ಭಾಗ,’ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಸಾರಿಗೆ ನೌಕರರ ಮುಷ್ಕರ 3ನೇ ದಿನಕ್ಕೆ: ಎಸ್ಮಾ ಕಾಯ್ದೆ ಅಂದ್ರೇನು, ಅದನ್ನು ಜಾರಿಗೊಳಿಸಿದ್ರೆ ನೌಕರರಿಗೆ ಆಗುವ ಸಮಸ್ಯೆ ಏನು.. ವಿಶ್ಲೇಷಣೆ
ಸರಕಾರ ಮುಷ್ಕರ ನಿರತರನ್ನ ಬಹಳ ಅಸಡ್ಡೆಯಿಂದ ನೋಡುತ್ತಿದೆ: ಮಾಜಿ ಸಚಿವ ಬಂಡೆಪ್ಪ ಕಾಶೆಂಪುರ