ಸುಳ್ಳು ಹೇಳಿದ ಮೊದಲ ಪ್ರಧಾನಿ ಮೋದಿ; ಸುಳ್ಳು ಹೇಳುವುದಕ್ಕೆ ನರೇಂದ್ರ ಮೋದಿಗೆ ನೊಬೆಲ್ ಸಿಗಬೇಕು: ಸಿದ್ದರಾಮಯ್ಯ
ನಾನು ಕಳಸಾ ಬಂಡೂರಿ ನಿಯೋಗ ತೆಗೆದುಕೊಂಡು ಹೋದಾಗ ಮೋದಿ ದೇಖೇಂಗೆ ಅಂದ್ರು. ಕೊರೊನಾ ತಡೆಗಟ್ಟಿ ಅಂದ್ರೆ ಮೋದಿ ಜಾಗಟೆ ಬಾರಿಸಿ, ದೀಪ ಹಚ್ಚಿ, ಚಪ್ಪಾಳೆ ಹೊಡಿರಿ ಎಂದ್ರು ಎಂದು ಅವರು ಆರೋಪಿಸಿದ್ದಾರೆ.
ಬೆಳಗಾವಿ: ಭಾರತದ ಇತಿಹಾಸದಲ್ಲಿ ಸುಳ್ಳು ಹೇಳಿದ ಮೊದಲ ಪ್ರಧಾನಿ ನರೇಂದ್ರ ಮೋದಿ. ಸುಳ್ಳು ಹೇಳುವುದಕ್ಕೆ ಮೋದಿಗೆ ನೊಬೆಲ್ ಪ್ರಶಸ್ತಿ ಸಿಗಬೇಕು. 15 ಲಕ್ಷ ರೂ. ಹೋಗಲಿ 15 ಪೈಸೆಯನ್ನೂ ಜಮಾ ಮಾಡಲಿಲ್ಲ. ಪುಣ್ಯಾತ್ಮ ಬೆಲೆ ಏರಿಕೆಯ ಬಗ್ಗೆ ಮಾತೇ ಆಡಲ್ಲ. ಪ್ರಧಾನಿ ನರೇಂದ್ರ ಮೋದಿ ಹಿಟ್ಲರ್ ನೀತಿ ಅನುಸರಿಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ಮೋದಿ ವಿರುದ್ಧ ಗುಡುಗಿದ್ದಾರೆ.
ನಾನು ಕಳಸಾ ಬಂಡೂರಿ ನಿಯೋಗ ತೆಗೆದುಕೊಂಡು ಹೋದಾಗ ಮೋದಿ ದೇಖೇಂಗೆ ಅಂದ್ರು. ಕೊರೊನಾ ತಡೆಗಟ್ಟಿ ಅಂದ್ರೆ ಮೋದಿ ಜಾಗಟೆ ಬಾರಿಸಿ, ದೀಪ ಹಚ್ಚಿ, ಚಪ್ಪಾಳೆ ಹೊಡಿರಿ ಎಂದ್ರು ಎಂದು ಅವರು ಆರೋಪಿಸಿದ್ದಾರೆ.
ಯಡಿಯೂರಪ್ಪ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ಬಿ.ಎಸ್. ಯಡಿಯೂರಪ್ಪಗೆ ಯಾವತ್ತೂ ಹಿಂಬಾಗಿಲಿಂದಲೇ ಬಂದು ಅಭ್ಯಾಸ. ಮುಂಬಾಗಿಲಿನಿಂದ ಹೋಗಿ ಯಡಿಯೂರಪ್ಪಗೆ ಗೊತ್ತೇ ಇಲ್ಲ. ಆಪರೇಷನ್ ಕಮಲದ ಜನಕ ಮಿಸ್ಟರ್ ಯಡಿಯೂರಪ್ಪ. ಬಿಎಸ್ವೈ ಈ ಹಿಂದೆ ಚೆಕ್ ಮೂಲಕ ಲಂಚ ತಗೋತಿದ್ದರು. ಈಗ ಅವರ ಮಗ ಆರ್ಟಿಜಿಎಸ್ ಮೂಲಕ ಲಂಚ ತಗೋತಿದ್ದಾರೆ ಎಂದು ಬೆಳಗಾವಿ ಜಿಲ್ಲೆಯ ಸವದತ್ತಿಯಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಇದನ್ನ ನಾನು ಅಸೆಂಬ್ಲಿಯಲ್ಲೇ ಹೇಳಿದ್ದೇನೆ. ಯಡಿಯೂರಪ್ಪ ಬಂದ ಮೇಲೆ ಸರ್ಕಾರದ ಖಜಾನೆ ಖಾಲಿಯಾಗಿದೆ. ಲೂಟಿ ಹೊಡೆದ ಮೇಲೆ ಖಜಾನೆ ಎಲ್ಲಿಂದ ತುಂಬುತ್ತದೆ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಮಾನಮರ್ಯಾದೆ ಇದ್ದರೆ ಕುರ್ಚಿಯಿಂದ ಕೆಳಗಿಳಿಯಬೇಕು ಸಿಎಂ ಯಡಿಯೂರಪ್ಪ ರೈತರ ಶಾಲು ಹೊಕ್ಕೊಂಡುಬಿಡ್ತಾರೆ. ಆದರೆ ರೈತರ ಸಾಲಮನ್ನಾ ಮಾಡಿ ಅಂದ್ರೆ ಕಾರಣ ಹೇಳುತ್ತಾರೆ. ನೋಟ್ ಪ್ರಿಂಟ್ ಮಾಡುವ ಯಂತ್ರ ಇಲ್ಲವೆಂದು ಹೇಳುತ್ತಾರೆ. ಕೆ.ಎಸ್. ಈಶ್ವರಪ್ಪ ಮನೆಯಲ್ಲಿ ನೋಟು ಎಣಿಕೆ ಯಂತ್ರ ಸಿಕ್ಕಿತ್ತು. ಮೋದಿ, ಬಿಎಸ್ವೈ ರೈತರ ಸಾಲಮನ್ನಾ ಮಾಡಲ್ಲ. ಮಾನಗೆಟ್ಟವರು ಇಂದಿರಾ ಕ್ಯಾಂಟೀನ್ ಮುಚ್ಚಿಸುತ್ತಿದ್ದಾರೆ. ಇವರು ಮಾನಮರ್ಯಾದೆ ಇದ್ದರೆ ಕುರ್ಚಿಯಿಂದ ಕೆಳಗಿಳಿಯಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
2023ರಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರುತ್ತದೆ. ನಾವು 10 ಕೆಜಿ ಅಕ್ಕಿಯನ್ನು ಕೊಡುತ್ತೇವೆ. ಬಿ.ಎಸ್.ಯಡಿಯೂರಪ್ಪ ಸರ್ಕಾರ ಹೇಡಿ ಸರ್ಕಾರ. ಮೋದಿ ಮುಂದೆ ಮಾತನಾಡೋಕೆ ಗಢಗಢ ನಡುಗುತ್ತಾರೆ. ಸಂಸತ್ನಲ್ಲಿ ದಿ.ಸುರೇಶ್ ಅಂಗಡಿ ಯಾವತ್ತಾದರೂ ಬಾಯಿ ಬಿಟ್ಟಿದ್ದರಾ? ಇನ್ನು ಅವರ ಪತ್ನಿ ಸಂಸತ್ಗೆ ಹೋಗಿ ಏನು ಮಾಡುತ್ತಾರೆ? ಎಂದು ಸಭೆಯಲ್ಲಿ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.
ಆ ಬಳಿಕ, ಕಾಂಗ್ರೆಸ್ ಪ್ರಚಾರ ಸಭೆಯಿಂದ ತೆರಳುವ ವೇಳೆ ಸಿದ್ದರಾಮಯ್ಯ ಕಾರ್ಗೆ ಅಭಿಮಾನಿಗಳು ಮುತ್ತಿಗೆ ಹಾಕಿದ ಘಟನೆ ನಡೆದಿದೆ. ವೇದಿಕೆಯಿಂದ ಇಳಿಯುತ್ತಿದ್ದಂತೆ ಸುತ್ತುವರಿದ ಅಭಿಮಾನಿಗಳು, ಕಾರಿನತ್ತ ತೆರಳಲೂ ಆಗದಂತೆ ಸಿದ್ದರಾಮಯ್ಯಗೆ ಮುತ್ತಿಗೆ ಹಾಕಿದ್ದಾರೆ. ಈ ವೇಳೆ, ಅಭಿಮಾನಿಗಳನ್ನು ಚದುರಿಸಲು ಪೊಲೀಸರಿಂದ ಲಾಠಿಪ್ರಹಾರ ನಡೆಸಲಾಗಿದೆ. ಸಿದ್ದರಾಮಯ್ಯ ಅಭಿಮಾನಿಗಳ ಮೇಲೆ ಲಘು ಲಾಠಿಚಾರ್ಜ್ ಮಾಡಲಾಗಿದೆ. ನಂತರ ವಿಪಕ್ಷ ನಾಯಕ ಸಿದ್ದರಾಮಯ್ಯ ಕಾರಿನತ್ತ ತೆರಳಿದ್ದಾರೆ.
ಇದನ್ನೂ ಓದಿ: ಪ್ರಧಾನಿ ಮೋದಿ ಕಿವಿಯಲ್ಲಿ ಈ ಮುಸ್ಲಿಂ ವ್ಯಕ್ತಿ ಹೇಳಿದ್ದೇನು? ಕುತೂಹಲ ಸೃಷ್ಟಿಸಿದ ಫೋಟೋ.. ಓವೈಸಿ ಊಹೆಯೂ ಸುಳ್ಳಾಯ್ತ !
ಇದನ್ನೂ ಓದಿ: ಸಿಎಂಗಳಿಗೆ ಪಿಎಂ ಕೊಟ್ಟ 5 ಟಿಪ್ಸ್: ಕೊರೊನಾ ಸೋಂಕು ತಡೆಗೆ ರಾಜ್ಯಗಳಿಗೆ ನರೇಂದ್ರ ಮೋದಿ ಕೊಟ್ಟ ಮುಖ್ಯ ಸಲಹೆಗಳಿವು
Published On - 5:31 pm, Fri, 9 April 21