ಪ್ರಧಾನಿ ಮೋದಿ ಕಿವಿಯಲ್ಲಿ ಈ ಮುಸ್ಲಿಂ ವ್ಯಕ್ತಿ ಹೇಳಿದ್ದೇನು? ಕುತೂಹಲ ಸೃಷ್ಟಿಸಿದ ಫೋಟೋ.. ಓವೈಸಿ ಊಹೆಯೂ ಸುಳ್ಳಾಯ್ತ !

ಹೀಗೆ ಫೋಟೋಗಳು ತುಂಬ ವೈರಲ್ ಆದ ಬೆನ್ನಲ್ಲೇ, ರಾಷ್ಟ್ರೀಯ ಮಾಧ್ಯಮವೊಂದು ಪಶ್ಚಿಮ ಬಂಗಾಳದ ಜುಲ್ಫಿಕರ್​ ಅಲಿ ಅವರನ್ನು ಸಂಪರ್ಕಿಸಿತ್ತು. ಈ ವೇಳೆ ಅವರು ತಾವು ಮೋದಿಯವರ ಕಿವಿಯಲ್ಲಿ ಮಾತಾಡಿದ್ದೇನು ಎಂಬುದನ್ನು ತಿಳಿಸಿದ್ದಾರೆ.

  • TV9 Web Team
  • Published On - 14:02 PM, 9 Apr 2021
ಪ್ರಧಾನಿ ಮೋದಿ ಕಿವಿಯಲ್ಲಿ ಈ ಮುಸ್ಲಿಂ ವ್ಯಕ್ತಿ ಹೇಳಿದ್ದೇನು? ಕುತೂಹಲ ಸೃಷ್ಟಿಸಿದ ಫೋಟೋ.. ಓವೈಸಿ ಊಹೆಯೂ ಸುಳ್ಳಾಯ್ತ !
ಮುಸ್ಲಿಂ ವ್ಯಕ್ತಿ ನರೇಂದ್ರ ಮೋದಿಯವರ ಕಿವಿಯಲ್ಲಿ ಮಾತನಾಡುತ್ತಿರುವುದು

ಕೋಲ್ಕತ್ತ: ಪಶ್ಚಿಮ ಬಂಗಾಳದ ಜುಲ್ಫಿಕರ್​ ಅಲಿ ಎಂಬ ಮುಸ್ಲಿಂ ವ್ಯಕ್ತಿ ರಾತ್ರೋರಾತ್ರಿ ಇಂಟರ್​ನೆಟ್​​ನಲ್ಲಿ ಫೇಮಸ್ ಆಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಕಿವಿಯಲ್ಲಿ ಜುಲ್ಫಿಕರ್​ ಏನನ್ನೋ ಹೇಳುತ್ತಿರುವ ಫೋಟೋ ತುಂಬ ವೈರಲ್​ ಆಗಿದ್ದು, ಇವರೇನು ಹೇಳಿರಬಹುದು ಎಂಬ ಕುತೂಹಲವನ್ನೂ ಹುಟ್ಟಿಹಾಕಿದೆ. ತಮ್ಮ ಕಿವಿಯ ಬಳಿ ಬಂದು ಮಾತನಾಡುತ್ತಿರುವ ಜುಲ್ಫಿಕರ್​ರ ಎರಡೂ ಭುಜವನ್ನು ಪ್ರಧಾನಿ ನರೇಂದ್ರ ಮೋದಿಯವರು ಹಿಡಿದುಕೊಂಡಿರುವ ಫೋಟೋವನ್ನು ಹಲವರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಇನ್ನು ಈ ಫೋಟೋದ ಬಗ್ಗೆ AIMIM ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಕೂಡ ವ್ಯಂಗ್ಯವಾಡಿದ್ದರು. ಮೋದಿಯವರ ಕಿವಿಯಲ್ಲಿ ಮಾತನಾಡಿದ ಮುಸ್ಲಿಂ ವ್ಯಕ್ತಿ ಯಾರೆಂದು ನನಗೆ ಗೊತ್ತಿಲ್ಲ. ಆದರೆ ಮಾಧ್ಯಮದವರು ನನ್ನ ಬಳಿ ಬಂದು, ಅವರು ಏನು ಮಾತನಾಡಿರಬಹುದು ಎಂದು ನಿಮಗೆ ಅನ್ನಿಸುತ್ತದೆ ಎಂದು ಪ್ರಶ್ನಿಸಿದರು. ಬಹುಶಃ ಆತ, ‘ಮೋದಿ ಜೀ, ನಾನು ಬಾಂಗ್ಲಾದೇಶಿಯಲ್ಲ, ನಾವು ಎನ್​ಆರ್​ಸಿ/ಎನ್​ಆರ್​ಪಿಗಾಗಿ ದಾಖಲೆಗಳನ್ನು ತೋರಿಸುವುದಿಲ್ಲ, ನಾವು ತ್ರಿವಳಿ ತಲಾಖ್​​ನ್ನು ಬೆಂಬಲಿಸುವುದಿಲ್ಲ. ನೀವು ನಮ್ಮಂತೆ ಯಾವಾಗ ಟೋಪಿ ಧರಿಸುತ್ತೀರಿ?’ ಎಂದು ಕೇಳಿರಬಹುದು ಎಂದು ಹಾಸ್ಯ ಮಾಡಿದ್ದರು. ಅಷ್ಟೇ ಅಲ್ಲ, ಇದೆಲ್ಲ ಬಿಜೆಪಿಯ ಗಿಮಿಕ್ ಎಂದೂ ಹೇಳಿದ್ದರು.

ಹೀಗೆ ಫೋಟೋಗಳು ತುಂಬ ವೈರಲ್ ಆದ ಬೆನ್ನಲ್ಲೇ, ರಾಷ್ಟ್ರೀಯ ಮಾಧ್ಯಮವೊಂದು ಪಶ್ಚಿಮ ಬಂಗಾಳದ ಜುಲ್ಫಿಕರ್​ ಅಲಿ ಅವರನ್ನು ಸಂಪರ್ಕಿಸಿತ್ತು. ಈ ವೇಳೆ ಅವರು ತಾವು ಮೋದಿಯವರ ಕಿವಿಯಲ್ಲಿ ಮಾತಾಡಿದ್ದೇನು ಎಂಬುದನ್ನು ತಿಳಿಸಿದ್ದಾರೆ. ನನಗೀಗ 40ವರ್ಷ. ಇಷ್ಟು ವರ್ಷಗಳಲ್ಲಿ ಮೋದಿಯವರ ಬಳಿ ಮಾತನಾಡಿದ ಈ 40 ಸೆಕೆಂಡ್​​ಗಳನ್ನು ಎಂದಿಗೂ ಮರೆಯುವುದಿಲ್ಲ. ಪ್ರಧಾನಿಯವರು ನನ್ನ ಬಳಿ ಹೆಸರು ಕೇಳಿದರು. ನಾನು ಜುಲ್ಫಿಕರ್​ ಅಲಿ ಎಂದು ಹೇಳಿದೆ. ನೀವು ಏನಾಗಬೇಕು ಎಂದು ಬಯಸುತ್ತೀರಿ ಎಂದು ಪ್ರಶ್ನಿಸಿದರು. ಅದಕ್ಕೆ ನಾನು, ನನಗೆ ಎಂಎಲ್​​ಎ, ಎಂಪಿ ಆಗಲು ಇಷ್ಟವಿಲ್ಲ. ದೇಶಕ್ಕಾಗಿ ಕೆಲಸ ಮಾಡಬೇಕು ಎಂಬುದು ನನ್ನ ಇಚ್ಛೆ ಎಂದು ಹೇಳಿದೆ. ಅಷ್ಟೇ ಅಲ್ಲ, ನಿಮ್ಮೊಂದಿಗೆ ಒಂದು ಫೋಟೋ ತೆಗೆದುಕೊಳ್ಳುವ ಆಸೆ ಎಂದೂ ಅವರಲ್ಲಿ ಮನವಿ ಮಾಡಿಕೊಂಡೆ ಎಂದು ಜುಲ್ಫಿಕರ್ ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಬಳಿ ಮಾತನಾಡು ಎಂದು ನನಗೆ ಯಾರೂ ಹೇಳಿರಲಿಲ್ಲ. ಅವರೊಂದಿಗೆ ಫೋಟೋ ತೆಗೆಸಿಕೊಳ್ಳಲು ಆಸೆಯಾಗಿ ನಾನೇ ಮಾತನಾಡಿಸಿದೆ ಎಂದೂ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ:

ಲಸಿಕೆ ಪಡೆಯಲು ಹಿಂದೇಟು ಹಾಕಿದ ಜನ; ಮುಸ್ಲಿಂ ಧರ್ಮಗುರುಗಳಿಗೆ ಮನವೊಲಿಸಿ ಲಸಿಕೆ ನೀಡಿದ ಜಿಲ್ಲಾಡಳಿತ

Jasprit Bumrah IPL 2021 MI Team Player: ಮದುವೆ ಬಳಿಕ ಅಖಾಡಕ್ಕಿಳಿಯಲು ಸಜ್ಜಾದ ಯಾರ್ಕರ್​ ಕಿಂಗ್ ಬುಮ್ರಾ