Jasprit Bumrah IPL 2021 MI Team Player: ಮದುವೆ ಬಳಿಕ ಅಖಾಡಕ್ಕಿಳಿಯಲು ಸಜ್ಜಾದ ಯಾರ್ಕರ್ ಕಿಂಗ್ ಬುಮ್ರಾ
Jasprit Bumrah Profile: ಕಳೆದ ಆವೃತ್ತಿಯಲ್ಲಿಯೂ ಬುಮ್ರಾ 15 ಪಂದ್ಯಗಳಲ್ಲಿ 27 ವಿಕೆಟ್ ಪಡೆದರು. ಅವರು ಈವರೆಗೆ ಲೀಗ್‌ನಲ್ಲಿ 92 ಪಂದ್ಯಗಳನ್ನು ಆಡಿದ್ದಾರೆ.
ಐಪಿಎಲ್ನಿಂದ ಸಾಕಷ್ಟು ಯುವ ಆಟಗಾರರು ಟೀಂ ಇಂಡಿಯಾದ ಭಾಗವಾಗಿದ್ದಾರೆ. ಅಂತಹ ಆಟಗಾರರಲ್ಲಿ ಜಸ್ಪ್ರೀತ್ ಬುಮ್ರಾ ಕೂಡ ಒಬ್ಬರು. ಬುಮ್ರಾ ಅವರ ಐಪಿಎಲ್ ಜರ್ನಿ 2013 ರಲ್ಲಿ ಮುಂಬೈ ಇಂಡಿಯನ್ಸ್‌ನೊಂದಿಗೆ ಪ್ರಾರಂಭವಾಯಿತು. ಇಲ್ಲಿಂದ ಅವರು ಭಾರತೀಯ ತಂಡವನ್ನು ತಲುಪಿದರು ಮತ್ತು ಎಲ್ಲಾ ಮೂರು ಸ್ವರೂಪಗಳಲ್ಲಿ ಭಾರತದ ನಂಬರ್ ಒನ್ ಬೌಲರ್ ಆದರು ಜೊತೆಗೆ ವಿಶ್ವದಾದ್ಯಂತದ ಬ್ಯಾಟ್ಸ್‌ಮನ್‌ಗಳ ಎದುರು ಮಾರಕ ಬೌಲರ್ ಆದರು. ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಬುಮ್ರಾ ತಂಡದ ಭಾಗವಾಗಿರಲಿಲ್ಲ ಮದುವೆಯ ನಿಮ್ಮಿತ್ತ ತಂಡಕ್ಕೆ ಮರಳುತ್ತಿರುವ ಬುಮ್ರಾ ಬಹಳ ಸಮಯದ ನಂತರ ಕ್ರಿಕೆಟ್ಗೆ ಮರಳಲಿದ್ದಾರೆ.
ಮುಂಬೈ ಇಂಡಿಯನ್ಸ್ ಪರ ಬುಮ್ರಾ ಅವರ ನಂಬರ್ ಒನ್ ಬೌಲರ್ ಆಗಿದ್ದಾರೆ. ಲಸಿತ್ ಮಾಲಿಂಗ ನಂತರ, ಅವರು ತಂಡದಲ್ಲಿ ಪ್ರಮುಖ ಸ್ಥಾನವನ್ನು ಪಡೆದಿದ್ದಾರೆ. ತಂಡಕ್ಕೆ ನಾಲ್ಕು ಬಾರಿ ಪ್ರಶಸ್ತಿ ಗೆಲ್ಲುವಲ್ಲಿ ಬುಮ್ರಾ ಪ್ರಮುಖ ಪಾತ್ರವಹಿಸಿದ್ದಾರೆ. ಭಾರತ ತಂಡದಂತೆಯೇ, ಅವರು ಮುಂಬೈ ಇಂಡಿಯನ್ಸ್ ತಂಡದ ನಂಬರ್ ಒನ್ ಬೌಲರ್ ಆಗಿದ್ದಾರೆ. ಡೆತ್ ಓವರ್ಗಳಲ್ಲಿ ತಂಡಕ್ಕೆ ನೆರವಾಗುವ ಬುಮ್ರಾ ಎದುರಾಳಿ ಆಟಗಾರರು ವೇಗವಾಗಿ ರನ್ಗಳಿಸುವುದಕ್ಕೆ ಬ್ರೇಕ್ ಹಾಕುವುದರಲ್ಲಿ ನಿಸ್ಸಿಮರು.
2013 ರಲ್ಲಿ ಕೇವಲ ಎರಡು ಪಂದ್ಯ ಆಡಿದ ಬುಮ್ರಾ ಬುಮ್ರಾ ಅವರ ಪ್ರತಿಭೆಯನ್ನು ಗುರುತಿಸಿದ ಕೀರ್ತಿ ಜಾನ್ ರೈಟ್‌ಗೆ ಸಲ್ಲುತ್ತದೆ. ಜಾನ್ ರೈಟ್ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಬುಮ್ರಾ ಅವರನ್ನು ಗುರುತಿಸಿದರು ಮತ್ತು ತಂಡದಲ್ಲಿ ಡ್ರಾಫ್ಟ್ ಆಗಿ ಸೇರಿಸಿಕೊಂಡರು. ಈ ಅವಧಿಯಲ್ಲಿ ಶ್ರೀಲಂಕಾದ ಬೌಲರ್ ಲಸಿತ್ ಮಾಲಿಂಗ ಅವರೊಂದಿಗೆ ಬುಮ್ರಾ ತಮ್ಮ ಬೌಲಿಂಗ್‌ನಲ್ಲಿ ಕೆಲಸ ಮಾಡಿದರು. ಮೊದಲ ಬಾರಿಗೆ ಮುಂಬೈ ಇಂಡಿಯನ್ಸ್ ಪರ 2013 ರಲ್ಲಿ ಆಡಿದ ಬುಮ್ರಾ ಆ ಆವೃತ್ತಿಯಲ್ಲಿ ಕೇವಲ ಎರಡು ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಮೂರು ವಿಕೆಟ್ ಸಹ ಪಡೆದರು. ಇದರ ನಂತರ, ಮುಂದಿನ ಆವೃತ್ತಿಯಲ್ಲಿ, ತಂಡವು ಅವರಿಗೆ ಅವಕಾಶ ನೀಡಿತು ಆದರೆ 11 ಪಂದ್ಯಗಳಲ್ಲಿ ಅವರು ಕೇವಲ ಐದು ವಿಕೆಟ್‌ಗಳನ್ನು ಪಡೆದರು. ಆದರೆ ಬುಮ್ರಾ ವೃತ್ತಿಜೀವನದ ಹೊಸ ಹಾರಾಟ 2016 ರಲ್ಲಿ ಪ್ರಾರಂಭವಾಯಿತು. ಆ ವರ್ಷ ಅವರು 14 ಪಂದ್ಯಗಳಲ್ಲಿ 15 ವಿಕೆಟ್ ಪಡೆದರು. ಜೊತೆಗೆ ಅದೇ ವರ್ಷ ಟೀಮ್ ಇಂಡಿಯಾದಲ್ಲೂ ಪಾದಾರ್ಪಣೆ ಮಾಡಿದರು.
ಈಗ ಮುಂಬೈ ಇಂಡಿಯನ್ಸ್ನ ನಂಬರ್ ಒನ್ ಬೌಲರ್ ಅಂದಿನಿಂದ, ಅವರು ನಿರಂತರವಾಗಿ ಪರ್ಪಲ್ ಕ್ಯಾಪ್ ಓಟದಲ್ಲಿ ಒಬ್ಬರಾಗಿದ್ದಾರೆ. ಕಳೆದ ಆವೃತ್ತಿಯಲ್ಲಿಯೂ ಬುಮ್ರಾ 15 ಪಂದ್ಯಗಳಲ್ಲಿ 27 ವಿಕೆಟ್ ಪಡೆದರು. ಅವರು ಈವರೆಗೆ ಲೀಗ್‌ನಲ್ಲಿ 92 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ 109 ವಿಕೆಟ್ ಸಹ ಪಡೆದಿದ್ದಾರೆ. ಮುಂಬೈ ಇಂಡಿಯನ್ಸ್‌ನಿಂದ ಉಳಿಸಿಕೊಂಡಿರುವ ಮೂವರು ಆಟಗಾರರಲ್ಲಿ ಬುಮ್ರಾ ಕೂಡ ಒಬ್ಬರು. ಬುಮ್ರಾ ತಮ್ಮ ಮದುವೆಗಾಗಿ ಬಿಸಿಸಿಐನಿಂದ ರಜೆ ಕೋರಿದರು. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ನಂತರ ಅವರು ತಂಡದಿಂದ ಹೊರಗುಳಿದಿದ್ದರು. ಸಂಜನಾ ಗಣೇಶನ್ ಅವರನ್ನು ಮದುವೆಯಾದ ನಂತರ, ಅವರು ಈಗ ಕ್ರಿಕೆಟ್ಗೆ ಮರಳಲು ಸಂಪೂರ್ಣವಾಗಿ ಸಿದ್ಧರಾಗಿದ್ದಾರೆ.
ಐಪಿಎಲ್ನಲ್ಲಿ ಬುಮ್ರಾ ಬೌಲಿಂಗ್
ವರ್ಷ | ಪಂದ್ಯ | ಎಸೆತಗಳು | ನೀಡಿರುವ ರನ್ | ಬೆಸ್ಟ್ ಬೌಲಿಂಗ್ | ವಿಕೆಟ್ | ಸರಾಸರಿ | 4 ವಿಕೆಟ್ |
2020 | 15 | 360 | 404 | 4/14 | 27 | 14.96 | 2 |
2019 | 16 | 370 | 409 | 3/20 | 19 | 21.52 | 0 |
2018 | 14 | 324 | 372 | 3/15 | 17 | 21.88 | 0 |
2017 | 16 | 356 | 439 | 2/22 | 20 | 21.95 | 0 |
2016 | 14 | 312 | 406 | 1/7 | 15 | 27.06 | 0 |
2015 | 4 | 90 | 184 | 1/13 | 3 | 61.33 | 0 |
2014 | 11 | 238 | 301 | 2/17 | 5 | 60.20 | 0 |
2013 | 2 | 42 | 70 | 0/34 | 3 | 23.33 | 0 |
ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಬುಮ್ರಾ ಬೌಲಿಂಗ್
ಆವೃತ್ತಿ | ಪಂದ್ಯ | ಎಸೆತ | ನೀಡಿರುವ ರನ್ | ವಿಕೆಟ್ | ಬೆಸ್ಟ್ ಬೌಲಿಂಗ್ | ಸರಾಸರಿ | 5 ವಿಕೆಟ್ |
ಟೆಸ್ಟ್ | 19 | 4075 | 1835 | 83 | 6/27 | 22.11 | 5 |
ಏಕದಿನ | 67 | 3523 | 2736 | 108 | 5/27 | 25.33 | 1 |
T20 | 49 | 1075 | 1195 | 59 | 3/11 | 20.25 | 0 |
Published On - 1:00 pm, Fri, 9 April 21