ಐಪಿಎಲ್ 2021: ಸೀಸನ್ನ ಮೊದಲ ಪಂದ್ಯದಲ್ಲಿ 5 ಬಾರಿ ಪ್ರಶಸ್ತಿ ಗೆದ್ದಿರುವ ಎಮ್ಐ ಮತ್ತು ಒಮ್ಮೆಯೂ ಗೆದ್ದಿರದ ಆರ್ಸಿಬಿ ನಡುವೆ ಹಣಾಹಣಿ
ಕ್ರಿಕೆಟ್ ಪಂದ್ಯ ಯಾವುದೇ ಆಗಿರಲಿ, ಅದಕ್ಕೆ ಸಂಬಂಧಿಸಿದ ಅಂಕಿ-ಅಂಶಗಳು ಕ್ರಿಕೆಟ್ ಪ್ರೇಮಿಗಳ ಕುತೂಹಲ ಮತ್ತು ರೋಮಾಂಚನವನ್ನು ಹುಟ್ಟಿಸುತ್ತವೆ. ಇನ್ನು ಐಪಿಎಲ್ ಅಂದರೆ ಕೇಳಬೇಕಾ? ಸೀಸನ್ ಜಾರಿಯಲ್ಲಿರುವಾಗ ಪ್ರತಿದಿನ ಹೊಸ ದಾಖಲೆಗಳು ಸೃಷ್ಟಿಯಾಗುತ್ತವೆ.
ಕ್ರೀಡಾಲೋಕದ ಅತ್ಯಂತ ಪ್ರಮುಖ ಮತ್ತು ಜನಪ್ರಿಯ ಈವೆಂಟ್ಗಳಲ್ಲಿ ಒಂದಾಗಿರುವ ಇಂಡಿಯನ್ ಪ್ರಿಮೀಯರ್ ಲೀಗ್ನ14 ನೇ ಸೀಸನ್ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಈ ಸೀಸನ್ ಮೊದಲ ಪಂದ್ಯ ಶುಕ್ರವಾರ ಚೆನೈನ ಎಮ್ಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿದೆ. ನಿಮಗೆ ಗೊತ್ತಿದೆ, ಭಾರತದಲ್ಲಿ ಕೊವಿಡ್-19 ಪಾಸಿಟಿವ್ ಪ್ರಕರಣಗಳು ತಾರಕಕ್ಕೇರುತ್ತಿರುವ ಹಿನ್ನೆಲೆಯಲ್ಲಿ 13ನೇ ಸಿಸನ್ನಂತೆ ಈ ಸೀಸನ್ ಪಂದ್ಯಗಳು ಸಹ ಖಾಲಿ ಮೈದಾನದಲ್ಲಿ ನಡೆಯಲಿವೆ. ಸೀಸನ್ನಿನ ಮೊದಲ ಪಂದ್ಯ 5 ಬಾರಿ ಚಾಂಪಿಯನ್ಶಿಪ್ ಗೆದ್ದಿರುವ ರೋಹಿತ್ ಶರ್ಮ ನೇತೃತ್ವದ ಮುಂಬೈ ಇಂಡಿಯನ್ಸ್ ಮತ್ತು ಇನ್ನೂ ಒಮ್ಮೆಯೂ ಪ್ರಶಸ್ತಿ ಗೆಲ್ಲದ ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವೆ ನಡೆಯಲಿದೆ.
ಕ್ರಿಕೆಟ್ ಪಂದ್ಯ ಯಾವುದೇ ಆಗಿರಲಿ, ಅದಕ್ಕೆ ಸಂಬಂಧಿಸಿದ ಅಂಕಿ-ಅಂಶಗಳು ಕ್ರಿಕೆಟ್ ಪ್ರೇಮಿಗಳ ಕುತೂಹಲ ಮತ್ತು ರೋಮಾಂಚನವನ್ನು ಹುಟ್ಟಿಸುತ್ತವೆ. ಇನ್ನು ಐಪಿಎಲ್ ಅಂದರೆ ಕೇಳಬೇಕಾ? ಸೀಸನ್ ಜಾರಿಯಲ್ಲಿರುವಾಗ ಪ್ರತಿದಿನ ಹೊಸ ದಾಖಲೆಗಳು ಸೃಷ್ಟಿಯಾಗುತ್ತವೆ.
ಓಕೆ, ನಾವಿಲ್ಲಿ ಎಲ್ಲ ಐಪಿಎಲ್ ದಾಖಲೆಗಳನ್ನು ಚರ್ಚಿಸುವುದು ಬೇಡ, ಕೇವಲ ಆರ್ಸಬಿ ಮತ್ತು ಎಮ್ಐ ಪಂದ್ಯದ ಮೇಲೆ ಮಾತ್ರ ಫೋಕಸ್ ಮಾಡೋಣ. ಈ ತಂಡಗಳ ಪರ ಅತಿಹೆಚ್ಚು ವಿಕೆಟ್ ಪಡೆದಿರುವ, ಕ್ಯಾಚ್ ಹಿಡಿದಿರುವವರು ಯಾರೆಂದು ನಿಮಗೆ ಗೊತ್ತಿದೆಯಾ? ಸರಿ, ಆ ಸಂಗತಿಗಳನ್ನೇ ನಾವು ನೋಡೋಣ.
ಮೊದಲು ನಮ್ಮ ಬೆಂಗಳೂರು ತಂಡದಿಂದಲೇ ವಿಷಯ ಆರಂಭಿಸುವ. ಕೊಹ್ಲಿ ಪಡೆಗೆ ಇದುವರೆಗೆ ಅತಿ ಹೆಚ್ಚು ವಿಕೆಟ್ ಪಡೆದಿರುವವರು ಯುಜ್ವೇಂದ್ರ ಚಹಲ್. ವಿಕೆಟ್ಗಳ ಶತಕ ಪೂರೈಸಿರುವ ಏಕೈಕ್ ಬೌಲರ್ ಚಹಲ್. ಅವರು 82 ಇನ್ನಿಂಗ್ಗಳಲ್ಲಿ ಬೌಲ್ ಮಾಡಿ ಬರೋಬ್ಬರಿ 100 ವಿಕೆಟ್ಗಳನ್ನು ಪಡೆದಿದ್ದಾರೆ. ಅವರ ನಂತರದ ಸ್ಥಾನದಲ್ಲಿರುವವರು ಮೊನ್ನೆಯಷ್ಟೇ ಎಲ್ಲ ಬಗೆಯ ಕ್ರಿಕೆಟ್ಗೆ ವಿದಾಯ ಹೇಳಿದ ಕರ್ನಾಟಕದ ಮಾಜಿ ಕ್ಯಾಪ್ಟನ್ ಆರ್ ವಿನಯ್ ಕುಮಾರ್. ಇವರು 63 ಇನ್ನಿಂಗ್ಸ್ಗಳಿಂದ 72 ವಿಕೆಟ್ ಪಡೆದಿದ್ದಾರೆ, 3, 4, ಮತ್ತು 5 ನೇ ಸ್ಥಾನಗಳಲ್ಲಿ ಕ್ರಮವಾಗಿ ಜಹೀರ್ ಖಾನ್ (49 ವಿಕೆಟ್, 43 ಇನ್ನಿಂಗ್ಸ್), ಶ್ರೀನಾಥ್ ಅರವಿಂದ್ ( 45 ವಿಕೆಟ್, 38 ಇನ್ನಿಂಗ್) ಮತ್ತು ಭಾರತದ ಲೆಜಂಡರಿ ಬೌಲರ್ ಅನಿಲ್ ಕುಂಭ್ಳೆ (45 ವಿಕೆಟ್, 42 ಇನ್ನಿಂಗ್ಸ್) ಇದ್ದಾರೆ.
ಲಸಿತ್ ಮಲಿಂಗ ಮುಂಬೈ ಇಂಡಿಯನ್ಸ್ ಪರ ಅತಿಹೆಚ್ಚು ವಿಕೆಟ್ ಪಡೆದಿದ್ದಾರೆ. ಅವರ ಟ್ಯಾಲಿ 122 ಇನ್ನಿಂಗ್ಸ್ಗಳಿಂದ 170 ವಿಕೆಟ್, ಎರಡನೇ ಸ್ಥಾನದಲ್ಲಿ 122 ಇನ್ನಿಂಗ್ಸ್ಗಳಿಂದ 172 ವಿಕೆಟ್ ಪಡೆದಿರುವ ಹರ್ಭಜನ್ ಸಿಂಗ್ ಇದ್ದಾರೆ. ಹಾಗೆಯೇ 3, 4 ಮತ್ತು 5 ನೇ ಸ್ಥಾನದಲ್ಲಿ ಕ್ರಮವಾಗಿ, ಜಸ್ಪ್ರೀತ್ ಬುಮ್ರಾ (82, 77), ಮಿಚೆಲ್ ಮ್ಯಾಕ್ಲಿನಘನ್ (76, 56) ಮತ್ತು ಕೈರನ್ ಪೊಲ್ಲಾರ್ಡ್ (56, 81) ಇದ್ದಾರೆ.
ಬ್ಯಾಟ್ಸ್ಮನ್ಗಳು ಸಿಕ್ಸ್ ಬಾರಿಸುವುದು ನಿಸ್ಸಂದೇಹವಾಗಿ ಮೈದಾನದಲ್ಲಿ ಕುಳಿತು ಆಟ ನೋಡುವ ಪ್ರೇಕ್ಷಕರಿಗೆ ಮತ್ತು ಮನೆಗಳಲ್ಲಿ ಟಿವಿ ಸೆಟ್ಗಳ ಮುಂದೆ ಕೂತು ಪಂದ್ಯ ನೋಡುವವರಿಗೆ ರೋಮಾಂಚನ ಹುಟ್ಟಿಸುವ ಅಂಶ, ಹಾಗಾದರೆ, ಆರ್ಸಿಬಿ ಯಾವ ಬ್ಯಾಟ್ಟ್ಮನ್ ಪ್ರೇಕ್ಷರಲ್ಲಿ ಅತಿಹೆಚ್ಚು ಬಾರಿ ಅಂಥ ರೋಮಾಂಚನ ಹುಟ್ಟಿಸಿದ್ದಾರೆ? ನಿಮ್ಮ ಊಹೆ ಶತಪ್ರತಿದಷ್ಟು ಸರಿ.
360 ಡಿಗ್ರಿ ಕ್ರಿಕೆಟರ್ ಎಂದು ಕರೆಸಿಕೊಳ್ಳುವ ಎಬಿಡಿ ವಿಲಿಯರ್ಸ್ 163 ಪಂದ್ಯಗಳಲ್ಲಿ 235 ಬಾರಿ ಚೆಂಡನ್ನು ಬೌಂಡರಿ ಗೆರೆ ಮೇಲಿಂದ ಬಾರಿಸಿದ್ದಾರೆ. ಎರಡನೇ ಸ್ಥಾನದಲ್ಲಿರುವವರು ನಾಯಕ ಕಿಂಗ್ ಕೊಹ್ಲಿ, ಅವರ ಬ್ಯಾಟ್ನಿಂದ ಇದುವರೆಗೆ 201 (192 ಇನ್ನಿಂಗ್ಸ್) ಸಿಕ್ಸರ್ಗಳು ಸಿಡಿದಿವೆ.
One final dress rehearsal before tomorrow's main event!
You know where to catch all the action, 12th Man Army! Don't miss it!https://t.co/cxnynMsZay#PlayBold #WeAreChallengers #IPL2021 pic.twitter.com/03ardAq2oj
— Royal Challengers Bangalore (@RCBTweets) April 8, 2021
ಮುಂಬೈ ಇಂಡಿಯನ್ಸ್ ಪರ ನಾಯಕ ರೋಹಿತ್ ಶರ್ಮ 195 ಇನ್ನಿಂಗ್ಸ್ಗಳಲ್ಲಿ 213 ಸಿಕ್ಸರ್ಗಳನ್ನು ಬಾರಿಸಿದ್ದಾರೆ. ಎರಡನೇ ಸ್ಥಾನದಲ್ಲಿರುವ ಕೈರನ್ ಪೊಲ್ಲಾರ್ಡ್ 147 ಇನ್ನಿಂಗ್ಸ್ಗಳಲ್ಲಿ 198 ಸಿಕ್ಸರ್ ಬಾರಿಸಿದ್ದಾರೆ.
ಒಟ್ಟಾರೆಯಾಗಿ ನೋಡಿದ್ದೇಯಾದರೆ, ಮುಂಬೈ ತಂಡ 1,378 ಸಿಕ್ಸ್ಗಳನ್ನು ಪ್ರತಿ ಇನ್ನಿಂಗ್ಸ್ಗೆ 6.12 ಸರಾಸರಿಯಲ್ಲಿ ಮತ್ತು ಆರ್ಸಿಬಿ 1,295 ಸಿಕ್ಸ್ಗಳನ್ನು 6.14 ಸರಾಸರಿಯಲ್ಲಿ ದಾಖಲಿಸಿವೆ.
ಓಕೆ, ಕ್ಯಾಚ್ಗಳ ವಿಷಯವನ್ನೂ ಒಮ್ಮೆ ನೋಡಿ ಬಿಡುವ, ಅರ್ಸಿಬಿ ಪರ ಕೊಹ್ಲಿ 76 ಕ್ಯಾಚ್ ಹಿಡಿದಿದ್ದರೆ, ಡಿ ವಿಲಿಯರ್ಸ್ 83 ಹಿಡಿದಿದ್ದಾರೆ. ಮುಂಬೈ ಪರ ಪೊಲ್ಲಾರ್ಡ್ 90 ಮತ್ತು ರೋಹಿತ್ 89 ಕ್ಯಾಚ್ ಹಿಡಿದಿದ್ದಾರೆ.
ನಾಳೆ ಆಡುವ ಸಂಭಾವ್ಯ ತಂಡಗಳು ಹೀಗಿರಬಹುದು
ರಾಯಲ್ ಚಾಲೆಂಜರ್ಸ್ ಬೆಂಗಳೂರು: ವಿರಾಟ್ ಕೊಹ್ಲಿ, ಜೋಷ್ ಫಿಲಿಪ್, ಎ ಬಿ ಡಿ ವಿಲಿಯರ್ಸ್, ಗ್ಲೆನ್ ಮ್ಯಾಕ್ಸ್ವೆಲ್, ಪವನ್ ದೇಶಪಾಂಡೆ, ಮೊಹಮ್ಮದ್ ಅಜರುದ್ದೀನ್, ಸಚಿನ್ ಬೇಬಿ, ಯುಜ್ವೇಂದ್ರ ಚಹಲ್, ವಾಷಿಂಗ್ಟನ್ ಸುಂದರ್, ಕೈಲ್ ಜೇಮಿಸನ್ ಮತ್ತು ಮೊಹಮ್ಮದ್ ಸಿರಾಜ್
ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮ, ಇಶಾನ್ ಕಿಷನ್, ಸೂರ್ಯಕುಮಾರ್ ಯಾದವ್, ಸೌರಭ್ ತಿವಾರಿ, ಕ್ರಿಸ್ ಲಿನ್, ಹಾರ್ದಿಕ್ ಪಾಂಡ್ಯ, ಕೃಣಾಲ್ ಪಾಂಡ್ಯ, ಟ್ರೆಂಟ್ ಬೌಲ್ಟ್, ರಾಹುಲ್ ಚಹರ್, ನೇಥನ್ ಕೌಲ್ಟರ್ ನೈಲ್ ಮತ್ತು ಆಡಂ ಮಿಲ್ನೆ
(Rohit’s 5 time champions MI to lock horns with yet to win Virat Kohli’s RCB in season’s opene)
Published On - 6:48 am, Fri, 9 April 21