AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Nokia new phones launch: ಎಚ್​ಎಂಡಿ ಗ್ಲೋಬಲ್​ನಿಂದ 10,000 ರೂ. ಒಳಗಿನ ನೋಕಿಯಾ C20 ಸ್ಮಾರ್ಟ್​ಫೋನ್ ಬಿಡುಗಡೆ!

ಎಚ್​ಎಂಡಿ ಗ್ಲೋಬಲ್​ನಿಂದ ನೋಕಿಯಾ ಸಿ20 ಹೊಸ ಸ್ಮಾರ್ಟ್​​ಫೋನ್ ಗುರುವಾರ ಭಾರತದಲ್ಲಿ ಬಿಡುಗಡೆ ಆಗುತ್ತಿದೆ. ಈ ಫೋನ್​ನ ವೈಶಿಷ್ಟ್ಯ, ಬಣ್ಣ, ಬೆಲೆ ಮತ್ತಿತರ ವಿವರಗಳು ಇಲ್ಲಿವೆ.

Nokia new phones launch: ಎಚ್​ಎಂಡಿ ಗ್ಲೋಬಲ್​ನಿಂದ 10,000 ರೂ. ಒಳಗಿನ ನೋಕಿಯಾ C20 ಸ್ಮಾರ್ಟ್​ಫೋನ್ ಬಿಡುಗಡೆ!
ಪ್ರಾತಿನಿಧಿಕ ಚಿತ್ರ
Srinivas Mata
|

Updated on:Apr 08, 2021 | 4:20 PM

Share

ಎಚ್​ಎಂಡಿ ಗ್ಲೋಬಲ್​​ನ ಹೊಸ ಸ್ಮಾರ್ಟ್​​ಫೋನ್ ಗುರುವಾರದಂದು ಭಾರತದಲ್ಲಿ ಮಾರಾಟ ಆರಂಭಿಸಲಿದೆ. ಮಾಧ್ಯಮಗಳ ವರದಿ ಪ್ರಕಾರ, ಅದು ಹೊಸ ನೋಕಿಯಾ ಸಿ20 ಎನ್ನಲಾಗುತ್ತಿದೆ. ಈ ಸ್ಮಾರ್ಟ್​​ಫೋನ್ ಬಗ್ಗೆ ಕಂಪೆನಿಯು ಹೆಚ್ಚಿನ ಮಾಹಿತಿಯನ್ನು ಬಹಿರಂಗ ಮಾಡಿಲ್ಲ. ನೋಕಿಯಾ C20 ಹಲವು ಸರ್ಟಿಫಿಕೇಷನ್ ವೆಬ್​ಸೈಟ್​​ಗಳಲ್ಲಿ ಕಂಡುಬಂದಿದೆ. ಈ ಆರಂಭಿಕ ಹಂತದ ಸ್ಮಾರ್ಟ್​​ಫೋನ್ ನೋಕಿಯಾ 1.X ಸರಣಿಗೆ ಪರ್ಯಾಯ ಆಗಲಿದೆ. ಸಂಗ್ರಹ ಸಾಮರ್ಥ್ಯದ ಆಧಾರದ ಮೇಲೆ ನಾಲ್ಕು ವೇರಿಯಂಟ್ ಹೊಂದಿರುವ ಸಾಧ್ಯತೆ ಇದೆ. ಇದಕ್ಕೆ ಬ್ಲ್ಯೂಟೂಥ್ SIG ಪ್ರಮಾಣಪತ್ರ ಸಿಕ್ಕಿದ್ದು, ಇದರರ್ಥ ಏನೆಂದರೆ ಈ ಫೋನ್ ಯುನಿಸಾಕ್ ಪ್ರೊಸೆಸರ್ ಜತೆಗೆ ಬರಲಿದೆ.

ನೋಕಿಯಾ ಸಿ20 ವೈಶಿಷ್ಟ್ಯಗಳು ಎಚ್​ಎಂಡಿ ಗ್ಲೋಬಲ್​ನಿಂದ ಫೋನ್ ಬಗ್ಗೆ ಹೆಚ್ಚಿನ ಮಾಹಿತಿ ಬಹಿರಂಗ ಮಾಡಿಲ್ಲ. ಆದರೆ ಸೋರಿಕೆಯಾಗಿರುವ ಮಾಹಿತಿ ಪ್ರಕಾರ, ಫೋನ್ 5.99 ಇಂಚಿನ ಎಲ್​ಸಿಡಿ ಐಪಿಎಸ್ ಡಿಸ್​ಪ್ಲೇ ಜತೆಗೆ ಪಿಕ್ಸೆಲ್ ಡೆನ್ಸಿಟಿ 269 ಪಿಪಿಐ ಹೊಂದಿರಲಿದೆ. ಇನ್ನು ಎರಡು ಸಿಮ್ (ನ್ಯಾನೋ) ಇರುವ ಸ್ಮಾರ್ಟ್​​ಫೋನ್ ಇದಾಗಿರಲಿದ್ದು, 4G ಸಪೋರ್ಟ್ ಮಾಡಲಿದೆ. ಆಂಡ್ರಾಯಿಡ್ 10ರಲ್ಲಿ ಕಾರ್ಯ ನಿರ್ವಹಿಸುವ ಈ ಫೋನ್​ನಲ್ಲಿ ಯುನಿಸಾಕ್ SC9863A ಪ್ರೊಸೆಸರ್ ಇರಲಿದೆ. ಇನ್ನು 1 GB RAM ಮತ್ತು ಆಂತರಿಕ ಸಂಗ್ರಹ ಸಾಮರ್ಥ್ಯ 16 GBಯನ್ನು ಹೊಂದಿದ್ದು, 128 GB ತನಕ ಹೆಚ್ಚಿಸಿಕೊಳ್ಳಬಹುದು.

ಕ್ಯಾಮೆರಾ ಬಗ್ಗೆ ಹೇಳುವುದಾದರೆ, ಈ ಸ್ಮಾರ್ಟ್​ಫೋನ್​ನಲ್ಲಿ 8ಎಂಪಿ ಪ್ರಾಥಮಿಕ ಕ್ಯಾಮೆರಾ ಇರಲಿದ್ದು, ಜತೆಗೆ ಎಲ್​ಇಡಿ ಫ್ಲ್ಯಾಷ್ ಮತ್ತು ಮುಂಭಾಗದಲ್ಲಿ 5ಎಂಪಿಯ ಸೆಲ್ಫಿ ಕ್ಯಾಮೆರಾ ಇರಲಿದೆ. ಈ ಫೋನ್​ನಲ್ಲಿ 3040 mAh ಬ್ಯಾಟರಿ ಇರಲಿದೆ. ಇದರ ಜತೆಗೆ ಮೈಕ್ರೋ- ಯುಎಸ್​ಬಿ ಪೋರ್ಟ್ ಹೊಂದಿರಲಿದೆ. ಎರಡು ಬಣ್ಣಗಳಲ್ಲಿ, ಕಪ್ಪು ಮತ್ತು ಚಿನ್ನದ ಬಣ್ಣದಲ್ಲಿ ಈ ಫೋನ್ ಬರಲಿದೆ. ಕನೆಕ್ಟಿವಿಟಿ ವಿಚಾರಕ್ಕೆ ಬಂದರೆ, ಯುಎಸ್​ಬಿ ಚಾರ್ಜಿಂಗ್, ಮೈಕ್ರೋ ಯುಎಸ್​ಬಿ 2.0, ಬ್ಲ್ಯೂಟೂಥ್ 4.2, ವೈಫೈ 802.11 ಇರಲಿದೆ. ಇವೆಲ್ಲದರ ಜತೆಗೆ 3.5 ಎಂಎಂ ಆಡಿಯೋ ಜಾಕ್ ಇರಲಿದೆ.

ಬೆಲೆ ಎಷ್ಟಿರಬಹುದು? ನೋಕಿಯಾ ಸಿ20 ಆರಂಭಿಕ ಹಂತದ ಫೋನ್ ಆಗಿದ್ದು, ಬೆಲೆ ರೂ. 8000ಕ್ಕಿಂತ ಕಡಿಮೆ ಇರುವ ನಿರೀಕ್ಷೆ ಇದೆ. ನೋಕಿಯಾ ಸಿ20 ಹೊರತುಪಡಿಸಿ ಎಚ್​ಎಂಡಿ ಗ್ಲೋಬಲ್​ನಿಂದ ಇನ್ನಷ್ಟು ಫೋನ್​ಗಳನ್ನು ಘೊಷಣೆ ಮಾಡುವ ಸಾಧ್ಯತೆ ಇದೆ. ಹೊಸ ಸ್ಮಾರ್ಟ್​ಫೋನ್​ಗಳು ಎಕ್ಸ್- ಸರಣಿ ಮತ್ತು ಜಿ- ಸರಣಿಯದ್ದಾಗಿರಲಿದೆ. ಮುಂಬರುವ ಕಾರ್ಯಕ್ರಮದಲ್ಲಿ ನೋಕಿಯಾದಿಂದ ಜಿ10, ಜಿ20, ಎಕ್ಸ್​20 ಮತ್ತು ಎಕ್ಸ್​10 ಬಿಡುಗಡೆ ಆಗುವ ಸಾಧ್ಯತೆ ಇದೆ. ನೋಕಿಯಾ ಜಿ10ಗೆ ಮೀಡಿಯಾಟೆಕ್ ಹೀಲಿಯೋ ಪಿ22 ಪ್ರೊಸೆಸರ್ ಹೊಂದಿರುವ ಸಾಧ್ಯತೆ ಇದೆ.

ಈ ಎರಡು ಸ್ಮಾರ್ಟ್​ಫೋನ್​ಗಳು 3ಜಿಬಿ/4ಜಿಬಿ ಮತ್ತು 32ಜಿಬಿ/64ಜಿಬಿ RAM ಸಂಗ್ರಹದೊಂದಿಗೆ ಬರುವ ಸಾಧ್ಯತೆ ಇದೆ. ಈ ಫೋನ್​ಗಳಲ್ಲಿ ಆಂಡ್ರಾಯಿಡ್ 11 ಇರುವ ನಿರೀಕ್ಷೆ ಇದ್ದು, ಗೂಗಲ್ ಅಸಿಸ್ಟೆಂಟ್​ಗೆ ಬಟನ್ ಇರುವ ಮಾಹಿತಿ ಇದೆ.

ಇದನ್ನೂ ಓದಿ: Partnered: ರೂ. 10 ಸಾವಿರದೊಳಗೆ ಸ್ಯಾಮ್ಸಂಗ್ ಗ್ಯಾಲಕ್ಸಿ ಎಫ್​12 ಟ್ರೂ 48MP ಕ್ವಾಡ್ ಕ್ಯಾಮೆರಾ ಸ್ಮಾರ್ಟ್ ಫೋನ್

(HMD global will launch Nokia C20 entry-level smartphone in India on Thursday.)

Published On - 4:18 pm, Thu, 8 April 21

‘ಸಾರಥಿ’ ಸಿನಿಮಾದ ಬಜೆಟ್ ಎಷ್ಟು? ಬಿಡುಗಡೆ ಸಮಯದ ಸವಾಲು ಹೇಗಿತ್ತು?
‘ಸಾರಥಿ’ ಸಿನಿಮಾದ ಬಜೆಟ್ ಎಷ್ಟು? ಬಿಡುಗಡೆ ಸಮಯದ ಸವಾಲು ಹೇಗಿತ್ತು?
ಧರ್ಮಸ್ಥಳ ಪರವಾಗಿ ಬಿಜೆಪಿಯಿಂದ ‘ಧರ್ಮಯುದ್ಧ’ ಘೋಷಣೆ
ಧರ್ಮಸ್ಥಳ ಪರವಾಗಿ ಬಿಜೆಪಿಯಿಂದ ‘ಧರ್ಮಯುದ್ಧ’ ಘೋಷಣೆ
ಯುವತಿಯ ಹತ್ಯೆಗೆ ತ್ರಿಕೋನ ಪ್ರಣಯ ಪ್ರಸಂಗ ಕಾರಣವಾಗಿರುವ ಶಂಕೆ
ಯುವತಿಯ ಹತ್ಯೆಗೆ ತ್ರಿಕೋನ ಪ್ರಣಯ ಪ್ರಸಂಗ ಕಾರಣವಾಗಿರುವ ಶಂಕೆ
ಶರಣಗೌಡ ಕಂದ್ಕೂರ್ ನೆರವಿಗೆ ಧಾವಿಸಿದ ಜೆಡಿಎಸ್ ಮತ್ತು ಬಿಜೆಪಿ ಶಾಸಕರು
ಶರಣಗೌಡ ಕಂದ್ಕೂರ್ ನೆರವಿಗೆ ಧಾವಿಸಿದ ಜೆಡಿಎಸ್ ಮತ್ತು ಬಿಜೆಪಿ ಶಾಸಕರು
ಉಪ ರಾಷ್ಟ್ರಪತಿ ಅಭ್ಯರ್ಥಿ ಬಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ
ಉಪ ರಾಷ್ಟ್ರಪತಿ ಅಭ್ಯರ್ಥಿ ಬಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ
ವಿಷ್ಣುವರ್ಧನ್ ಸ್ಮಾರಕ ವಿಚಾರದಲ್ಲಿ ತಾವು ಮಾಡಿದ ಶಪಥ ರಿವೀಲ್ ಮಾಡಿದ ವೀರಕಪು
ವಿಷ್ಣುವರ್ಧನ್ ಸ್ಮಾರಕ ವಿಚಾರದಲ್ಲಿ ತಾವು ಮಾಡಿದ ಶಪಥ ರಿವೀಲ್ ಮಾಡಿದ ವೀರಕಪು
ಧುಮ್ಮಿಕ್ಕಿ ಹರಿಯುತ್ತಿದೆ ಗೋಕಾಕ್ ಫಾಲ್ಸ್, ವಿಡಿಯೋ ನೋಡಿ
ಧುಮ್ಮಿಕ್ಕಿ ಹರಿಯುತ್ತಿದೆ ಗೋಕಾಕ್ ಫಾಲ್ಸ್, ವಿಡಿಯೋ ನೋಡಿ
ತಿಮರೋಡಿಯನ್ನು ಬಂಧಿಸುವ ಮುನ್ನ ಪೊಲೀಸ್ ಮತ್ತು ವಕೀಲರ ನಡುವೆ ವಾಗ್ವಾದ
ತಿಮರೋಡಿಯನ್ನು ಬಂಧಿಸುವ ಮುನ್ನ ಪೊಲೀಸ್ ಮತ್ತು ವಕೀಲರ ನಡುವೆ ವಾಗ್ವಾದ
ಮಹೇಶ್ ತಿಮರೋಡಿ ಮನೇಲಿ 4 ದಿನ ಇದ್ದೆ, ಊಟ ಮಾತ್ರ ಹಾಕಿದ್ದು: ಸುಜಾತ ಭಟ್
ಮಹೇಶ್ ತಿಮರೋಡಿ ಮನೇಲಿ 4 ದಿನ ಇದ್ದೆ, ಊಟ ಮಾತ್ರ ಹಾಕಿದ್ದು: ಸುಜಾತ ಭಟ್
ವೈಷ್ಣೋದೇವಿ ಯಾತ್ರಿಕರ ಕರೆದೊಯ್ಯುತ್ತಿದ್ದ ಬಸ್ ಅಪಘಾತ, ಓರ್ವ ಸಾವು
ವೈಷ್ಣೋದೇವಿ ಯಾತ್ರಿಕರ ಕರೆದೊಯ್ಯುತ್ತಿದ್ದ ಬಸ್ ಅಪಘಾತ, ಓರ್ವ ಸಾವು