ಕೊವಿಡ್ ಲಸಿಕೆಯ 2ನೇ ಡೋಸ್ ಪಡೆದ ಪ್ರಧಾನಿ ನರೇಂದ್ರ ಮೋದಿ

ಇಂದು ಬೆಳ್ಳಂ ಬೆಳಗ್ಗೆ ದೆಹಲಿಯ ಏಮ್ಸ್‌ ಆಸ್ಪತ್ರೆಯಲ್ಲಿ ಕೊರೊನಾ ಲಸಿಕೆಯ 2ನೇ ಡೋಸ್ ಅನ್ನು ಪ್ರಧಾನಿ ಮೋದಿ ಪಡೆದಿದ್ದಾರೆ. ಹಾಗೂ ದೇಶದ ಜನರಿಗೂ ಲಸಿಕೆ ಪಡೆಯುವಂತೆ ತಿಳಿಸಿದ್ದಾರೆ.

  • TV9 Web Team
  • Published On - 7:52 AM, 8 Apr 2021
ಕೊವಿಡ್ ಲಸಿಕೆಯ 2ನೇ ಡೋಸ್ ಪಡೆದ ಪ್ರಧಾನಿ ನರೇಂದ್ರ ಮೋದಿ
ದೆಹಲಿಯ ಏಮ್ಸ್​ನಲ್ಲಿ ಕೊವಿಡ್ ಲಸಿಕೆಯ 2ನೇ ಡೋಸ್ ಪಡೆದ ಪ್ರಧಾನಿ ನರೇಂದ್ರ ಮೋದಿ

ದೆಹಲಿ: ಪ್ರಧಾನಿ ನರೇಂದ್ರ ಮೋದಿ ಕೊವಿಡ್ ಲಸಿಕೆಯ 2ನೇ ಡೋಸ್ ಪಡೆದಿದ್ದಾರೆ. ಜನ ಸಾಮಾನ್ಯರಿಗೆ ಹಾಗೂ ರೋಗಿಗಳಿಗೆ ಯಾವುದೇ ತೊಂದರೆ ಆಗಬಾರದೆಂಬ ಉದ್ದೇಶದಿಂದ ಇಂದು ಬೆಳ್ಳಂ ಬೆಳಗ್ಗೆ ದೆಹಲಿಯ ಏಮ್ಸ್‌ ಆಸ್ಪತ್ರೆಯಲ್ಲಿ ಕೊರೊನಾ ಲಸಿಕೆಯ 2ನೇ ಡೋಸ್ ಅನ್ನು ಪ್ರಧಾನಿ ಮೋದಿ ಪಡೆದಿದ್ದಾರೆ.

ಈ ಬಗ್ಗೆ ಪ್ರಧಾನಿ ಮೋದಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, “ಇಂದು ಏಮ್ಸ್ ನಲ್ಲಿ ನಾನು ನನ್ನ ಕೊವಿಡ್ ಲಸಿಕೆಯ 2ನೇ ಡೋಸ್ ಪಡೆದಿದ್ದೇನೆ. ವೈರಸ್ ಅನ್ನು ಸೋಲಿಸಲು ಲಸಿಕೆ ನಮ್ಮಲ್ಲಿರುವ ಕೆಲವು ವಿಧಾನಗಳಲ್ಲಿ ಒಂದಾಗಿದೆ. ನೀವು ಲಸಿಕೆ ಪಡೆಯಲು ಅರ್ಹರಾಗಿದ್ದರೆ, ಶೀಘ್ರದಲ್ಲೇ ಲಸಿಕೆ ಪಡೆಯಿರಿ” ಎಂದು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: Pariksha Pe Charcha 2021: ಎಕ್ಸಾಂ ವಾರಿಯರ್ ಪುಸ್ತಕ ಓದಿ ನನಗೆ ಪತ್ರ ಬರೆಯಿರಿ: ಪ್ರಧಾನಿ ನರೇಂದ್ರ ಮೋದಿ

(PM Narendra Modi Received 2nd Dose of Corona Vaccine in Delhi AIIMS)