Partnered: ರೂ. 10 ಸಾವಿರದೊಳಗೆ ಸ್ಯಾಮ್ಸಂಗ್ ಗ್ಯಾಲಕ್ಸಿ ಎಫ್​12 ಟ್ರೂ 48MP ಕ್ವಾಡ್ ಕ್ಯಾಮೆರಾ ಸ್ಮಾರ್ಟ್ ಫೋನ್

Samsung Galaxy F12: ಸ್ಯಾಮ್ಸಂಗ್ ಗ್ಯಾಲಕ್ಸಿ F12 ಸ್ಮಾರ್ಟ್​ಫೋನ್ ಏಪ್ರಿಲ್ 12, 2021ರ ಮಧ್ಯಾಹ್ನ 12ಕ್ಕೆ ಬಿಡುಗಡೆ ಆಗಲಿದೆ. 10,000 ರೂಪಾಯಿಯೊಳಗೆ ನೀವು ಖರೀದಿಸಬಹುದಾದ ಅದ್ಭುತವಾದ ಫೋನ್ ಇದಾಗಲಿದೆ. ಇದರಲ್ಲಿ ಏನೆಲ್ಲ ವೈಶಿಷ್ಟ್ಯಗಳಿವೆ ಗೊತ್ತೆ?

Partnered: ರೂ. 10 ಸಾವಿರದೊಳಗೆ ಸ್ಯಾಮ್ಸಂಗ್ ಗ್ಯಾಲಕ್ಸಿ ಎಫ್​12 ಟ್ರೂ 48MP ಕ್ವಾಡ್ ಕ್ಯಾಮೆರಾ ಸ್ಮಾರ್ಟ್ ಫೋನ್
Samsung Galaxy F12
Srinivas Mata

| Edited By: Team Veegam

Apr 17, 2021 | 12:02 AM


ಅಂತೂ ಸ್ಯಾಮ್ಸಂಗ್ ಗ್ಯಾಲಕ್ಸಿ ಎಫ್​12 ಸ್ಮಾರ್ಟ್​ಫೋನ್ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ. ನಮ್ಮ ಕೈ ತಲುಪುವ ತನಕ ಇದಕ್ಕಾಗಿ ಕಾಯುವುದಕ್ಕೆ ಸಾಧ್ಯವಿಲ್ಲ ಬಿಡಿ! ಹಾಗನಿಸದಿದ್ದರೆ ಹೇಳಿ. ಅದ್ಭುತವಾಗಿ ಕಾಣುವ, ಜತೆಗೆ ಸೊಗಸಾಗಿ ಕಾರ್ಯ ನಿರ್ವಹಿಸುವ ಅಪರೂಪದ ಕಾಂಬಿನೇಷನ್​ನ ಸ್ಮಾರ್ಟ್ ಮೊಬೈಲ್ ಫೋನ್ ಇದು. ಬೇರೆ ಯಾವುದೇ ಫೋನ್​ನಲ್ಲಿ ಟೆಕ್ನಾಲಜಿ ಹಾಗೂ ಲುಕ್ ಅನ್ನು ಈ ರೀತಿಯಲ್ಲಿ ನೋಡಲಿಕ್ಕಾಗಲ್ಲ. ಈ ಫೋನ್​ನಿಂದ ಮಾಡಲಿಕ್ಕಾಗದ್ದು ಏನಿದೆ? ಅದು ಇಮೇಜಿಂಗ್ ಅಥವಾ ಡಿಸ್​ಪ್ಲೇ ಯಾವುದಾದರೂ ಹೇಳಿ, ಎಲ್ಲದರಲ್ಲೂ ಇದು ಬೆಸ್ಟ್. ಜತೆಗೆ ಜೇಬಿಗೂ ಭಾರವಲ್ಲ. ಐಸಿಐಸಿಐ ಬ್ಯಾಂಕ್ ಕಾರ್ಡ್​ನಿಂದ ಪಾವತಿಸುತ್ತೀರಾ ಅಂತಾದರೆ ತಕ್ಷಣವೇ 1,000 ರೂಪಾಯಿ ಕ್ಯಾಶ್​ಬ್ಯಾಕ್* ಸಿಗುತ್ತದೆ, ರೂ. 9,999ಕ್ಕೆ ಫೋನ್ ಖರೀದಿ ಮಾಡಬಹುದು.

ಕೆಲವು ಫೋನ್​ಗಳು ನೋಡಲಿಕ್ಕೆ ಬಹಳ ಚಂದವಾಗಿರುತ್ತದೆ, ಅಷ್ಟೇ. ಆದರೆ ಈ ಹೊಸ ಸ್ಮಾರ್ಟ್​​ಫೋನ್ ಖಂಡಿತಾ ಹಾಗಲ್ಲ. ಏಕೆಂದರೆ, ನೀವು ಏನು ನೋಡುತ್ತೀರೋ ಅದೇ ಪಡೆಯುತ್ತೀರಾ! ಆವಿಷ್ಕಾರ ಅಥವಾ ಹೊಸತನ ಅಂದರೆ, ಸ್ಯಾಮ್ಸಂಗ್ ಯಾವಾಗಲೂ ಮುಂಚೂಣಿಯಲ್ಲಿ ಇರುತ್ತದೆ. ಈ ಸಲ ಕೂಡ ಅದರಲ್ಲಿ ಯಾವ ವ್ಯತ್ಯಾಸವೂ ಇಲ್ಲ. ಈ ಫೀಚರ್​ಗಳನ್ನು ಹೇಳುತ್ತಾ ಹೋದರೆ ನಿಮಗೆ ಈ ಫೋನ್​ನ ಯಾವಾಗ ನೋಡ್ತೀನಿ, ಖರೀದಿ ಮಾಡ್ತೀನಿ ಅಂತನಿಸದಿದ್ದರೆ ಹೇಳಿ.

ಹೌದು, ನಾವಿಲ್ಲಿ ಮುಖ್ಯವಾಗಿ ಮಾತನಾಡುತ್ತಿರೋದು ಟ್ರೂ 48MP ಕ್ವಾಡ್ ಕ್ಯಾಮೆರಾ ಮತ್ತು 90 Hz ಬೆಣ್ಣೆಯಷ್ಟು ನುಣುಪಾದ ಡಿಸ್​ಪ್ಲೇ ಬಗ್ಗೆ. ನೀವು ಬೆಳಗಿನ ಸುಂದರ ಆಕಾಶದ ಫೋಟೋವನ್ನೇ ತೆಗೆಯಿರಿ, ರಾತ್ರಿ ಗೆಳೆಯರೊಂದಿಗಿನ ಡ್ಯಾನ್ಸ್ ಪಾರ್ಟಿಯ ಫೋಟೋವೇ ಆಗಿರಲಿ, ಗೆಳೆಯರ ಜತೆಗಿನ ಆಟ, ವಾರಾಂತ್ಯದ ಮೋಜು- ಹೀಗೆ ನೀವು ಏನನ್ನು ಪ್ರೀತಿಸಿ ಮಾಡಲು ಬಯಸುತ್ತೀರೋ ಆ ಎಲ್ಲಕ್ಕೂ ಸ್ಯಾಮ್ಸಂಗ್ ಗ್ಯಾಲಕ್ಸಿ F12 ನಿಮಗೆ ಜತೆಯಾಗುತ್ತದೆ. ನೀವು #FullOnFab ಜೀವಿಸುವುದನ್ನು ತಡೆಯುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ.

ಆಕರ್ಷಣೆಯ ಕೇಂದ್ರವಾಗಲಿದ್ದೀರಿ

ಈ ಫೋನ್ ಜತೆಗೆ ನೀವೆಲ್ಲೇ ಹೋದರೂ ಇದರಲ್ಲಿನ ಟ್ರೂ 48MP ಕ್ವಾಡ್ ಕ್ಯಾಮೆರಾದ ಮೂಲಕ ಆಕರ್ಷಣೆಯ ಕೇಂದ್ರ ಬಿಂದು ಆಗ್ತೀರಿ. ಈ ಕ್ಯಾಮೆರಾದಲ್ಲಿ ತೆಗೆದ ಫೋಟೋದಲ್ಲಿ ಕಾಣಸಿಗುವ ಅತ್ಯಂತ ಸಣ್ಣ- ಸಣ್ಣ ಮಾಹಿತಿ, ಬಣ್ಣ ಇವೆಲ್ಲವೂ ವಾಹ್, ಅದ್ಭುತವಾಗಿರುತ್ತವೆ. ನಮ್ಮ ಮಾತನ್ನು ನಂಬಿ, ಫೋನ್ ನೋಡಿ ನಿಮ್ಮ ಸ್ನೇಹಿತರೇ ಹೊಟ್ಟೆಕಿಚ್ಚು ಪಡುತ್ತಾರೆ. ಈ ಮಾತನ್ನು ನಂಬಕ್ಕೆ ಆಗುತ್ತಿಲ್ಲ ಅಲ್ಲವಾ? ಈ ಫೋನ್ ತಗೊಂಡು ಒಂದು ಸುತ್ತು ಹಾಕಿ ಬನ್ನಿ, ಸ್ನೇಹಿತರು ಹೇಗೆ ಪ್ರತಿಕ್ರಿಯಿಸುತ್ತಾರೆ ನೋಡಿ. ಎಷ್ಟೆಂದರೂ ನೀವು #FullOnFab ಜೀವಿಸುವರು, ಈ ಅದ್ಭುತ ಕ್ಯಾಮೆರಾಗೊಂದು ಥ್ಯಾಂಕ್ಸ್ ಹೇಳಿ.

ಕಂಟೆಂಟ್ ಕ್ರಿಯೇಟರ್ ಆಗಿ ಬದಲಾಗೋದು ಅಷ್ಟು ಸಲೀಸಲ್ಲ. ಆದರೆ ಸ್ಯಾಮ್ಸಂಗ್ ಗ್ಯಾಲಕ್ಸಿ F12 ಮೂಲಕ ಎಲ್ಲರೂ ಆ ಮಾದರಿಗೆ ಬದಲಾಗಬಹುದು! ನೀವು ಸದಾ ತೆರಳುವ ಆ ಫ್ಯಾನ್ಸಿ ರೆಸ್ಟುರಾಂಟ್​ಗೆ ಮುಂದಿನ ಸಲ ಹೋದಾಗ ಅಲ್ಲಿ ಆರ್ಡರ್ ಮಾಡಿದ ಎಲ್ಲ ಆಹಾರ ಖಾದ್ಯಗಳ ಕೆಲವು ಫೋಟೋಗಳನ್ನು ತೆಗೆದುಕೊಳ್ಳಿ. ಆ ಚಿತ್ರದ ಗುಣಮಟ್ಟ ನೋಡಿ, ಖಂಡಿತಾ ಅಚ್ಚರಿಗೆ ಒಳಗಾಗ್ತೀರಿ. ಅಷ್ಟು ಶಾರ್ಪ್, ಪ್ರಕಾಶಮಾನ ಮತ್ತು ಸುಸ್ಪಷ್ಟವಾದ ಚಿತ್ರ ಅದಾಗಿರುತ್ತದೆ. ಇಷ್ಟೇ ಅಲ್ಲ- ನಿಮ್ಮ ಒಳಗಿರುವ ಆ ಕ್ರಿಯೇಟಿವ್ ಜೀನಿಯಸ್​​ನ ಹೊರತನ್ನಿ ಮತ್ತು ಆ ಫೋಟೋಗ್ರಫರ್​ಗೂ ಅವಕಾಶ ನೀಡಿ.

ಯಾಕೆಂದರೆ, ಸ್ಯಾಮ್ಸಂಗ್ ಗ್ಯಾಲಕ್ಸಿ F12ಅದಕ್ಕೆ ಸಾಕಷ್ಟು ಕಾರಣಗಳನ್ನು ನೀಡುತ್ತದೆ. ಅಲ್ಟ್ರಾ ವೈಡ್ ಲೆನ್ಸ್​​ನೊಂದಿಗೆ 5 MP ಕ್ಯಾಮೆರಾ, ಪೋರ್ಟ್​ರೇಟ್​ಗಾಗಿ 2 MP ಕ್ಯಾಮೆರಾ ಮತ್ತು ಮೈಕ್ರೋ ಶಾಟ್​ಗಾಗಿ 2 MP ಕ್ಯಾಮೆರಾ ಇರುವುದರಿಂದ ಯಾವುದೂ ತಪ್ಪಿಹೋಗುವ ಸಾಧ್ಯತೆಯೇ ಇಲ್ಲ. ಹಾಗಿದ್ದರೆ ಸೆಲ್ಫಿ ಸರಿಯಾಗಿ ಬರಲ್ಲವಾ ಅನ್ನೋದು ನಿಮ್ಮ ಪ್ರಶ್ನೆಯಾ? ಆ ಬಗ್ಗೆ ಚಿಂತೆಯೇ ಮಾಡಬೇಡಿ. ಈ ಸ್ಮಾರ್ಟ್ ಫೋನ್​ನಲ್ಲಿ 8MP ಫ್ರಂಟ್ ಕ್ಯಾಮೆರಾ ಇದ್ದು, ಸದಾ ಸೆಲ್ಫಿ ರೆಡಿ ಆಗಿರುತ್ತದೆ. ನಿಮ್ಮ ಇಷ್ಟವಾದ ಆ್ಯಂಗಲ್ ಆರಿಸಿಕೊಳ್ಳಿ. ಬೇಕಾದ ರೀತಿಯಲ್ಲಿ ಫೋಟೋಗಳನ್ನು ಕ್ಲಿಕ್ ಮಾಡಿಕೊಳ್ಳಿ. ಇದರೊಳಗೆ ನಿಮ್ಮ ಗೆಳೆಯ- ಗೆಳತಿಯರನ್ನು ಎಳೆದುಕೊಳ್ಳುವುದು ಮರೆಯಬೇಡಿ. ಏಕೆಂದರೆ, ಈ ಸೆಲ್ಫಿಗಳು ಶುದ್ಧ #squadgoals!

ವೇಗ ಮತ್ತು ನುಣುಪಾದ ಸ್ಕ್ರಾಲಿಂಗ್ ಜತೆಗೆ #FullOnFab ಡಿಸ್​ಪ್ಲೇ

ಬೆಣ್ಣೆಯಷ್ಟು ನುಣುಪಾದ ಡಿಸ್​ಪ್ಲೇ ಬಗ್ಗೆ ಹೇಳಿದೆನಲ್ಲಾ? 6.5 ಇಂಚಿನ ಎಚ್​ಡಿ+ ಇನ್​ಫಿನಿಟಿ ವಿ ಡಿಸ್​ಪ್ಲೇ, ಮತ್ತು 90 Hz ರಿಫ್ರೆಷ್ ದರ, ಯಾವುದೇ ಅಡೆತಡೆ ಇಲ್ಲದಂತೆ ನಿಮ್ಮ ಇಷ್ಟದ ಕಂಟೆಂಟ್ ನೋಡಬಹುದು, ಆಟ ಎಂಜಾಯ್ ಮಾಡಬಹುದು. ಮೊದಲೇ ಹೇಳಿದ ಹಾಗೆ ಈ ಫೋನ್​ನ ಬಗ್ಗೆ ಹೇಳಿದಂತೆಲ್ಲ ನಂಬುವುದಕ್ಕೆ ಅಸಾಧ್ಯ ಎನಿಸುತ್ತದೆ.

ವಾರಾಂತ್ಯವೇ ಇರಲಿ ಅಥವಾ ವಾರದ ದಿನಗಳೇ ಇರಲಿ, ಸ್ನೇಹಿತರಿಗೆ ಕರೆ ಮಾಡಿ, ಆದರೆ ಸಕತ್ ಮಜಾ ನೀಡುವ ಗೇಮಿಂಗ್ ಸೆಷನ್​ಗಾಗಿ ಜಗಳ ಮಾಡಿಕೊಳ್ತೀರಿ. ಆಟ ಆಡುವುದನ್ನು ನಿಲ್ಲಿಸುವುದಕ್ಕೆ ಆಗುತ್ತಲೇ ಇಲ್ಲ ಎಂದು ಈ ಫೋನ್​ನ ಬಯ್ದುಕೊಳ್ಳಬೇಡಿ. ಯಾವುದೇ ಅಡೆತಡೆ ಇಲ್ಲದೆ ಗೇಮಿಂಗ್ ಅನುಭವ ಪಡೆಯುವುದು ಹಲವರ ಕನಸಾಗಿರುತ್ತದೆ. ಅಂತೂ ಕೊನೆಗೆ ಅದರ ರುಚಿ ನಿಮಗೆ ಸಿಗಲಿದೆ! ಇನ್ನು ಇದರ ಅತ್ಯುತ್ತಮ ಗುಣದ ಬಗ್ಗೆ ಹೇಳಬೇಕು ಅಂದರೆ, ಪಬ್​ಜಿ ಅಥವಾ ಮಾರ್ಟಲ್ ಕಂಬ್ಯಾಟ್​ನಂಥ ಹೆವಿ ಗೇಮ್​ಗಳನ್ನು ಆಡುವುದರ ಹೊರತಾಗಿಯೂ ಫೋನ್ ತಣ್ಣಗೆ ಇರುತ್ತದೆ. ಈ ಮಾತನ್ನು ಕೇಳಿ ಖುಷಿಯಿಂದ ಕುಣಿದಾಡ್ತಾ ಇದ್ದೀರಾ? ನಮಗೆ ಆದಂತೆಯೇ!

ನಿಮ್ಮ ಫೇವರಿಟ್ ಶೋಗಳನ್ನು ನೋಡುವುದಕ್ಕೆ ಇಷ್ಟವೇ ಅಥವಾ ಸೋಷಿಯಲ್ ಮೀಡಿಯಾದಲ್ಲಿ ಗಂಟೆಗಟ್ಟಲೆ ಕಳೆಯುತ್ತೀರಾ (ನಾವೆಲ್ಲರೂ ಹಾಗಲ್ಲ ಅಲ್ಲವಾ?) ಹಾಗಿದ್ದರೆ ನಿಮಗೆ ಸ್ಯಾಮ್ಸಂಗ್ ಗ್ಯಾಲಕ್ಸಿ F12 ಸರಿಯಾದ ಜೋಡಿ. ಸ್ಕ್ರಾಲ್ ಮಾಡುವುದು ಬಲು ನುಣುಪು ಮತ್ತು ಸಲೀಸು; ಅದಕ್ಕೆ ಕಷ್ಟ ಪಡಬೇಕು ಅಂತೇನೂ ಇಲ್ಲ. ಸಂತೃಪ್ತಿಯಾಗಿದೆ ಅನ್ನಿಸಿತಾ? ಹೌದು, #FullOnFab ಜೀವನ ಹೀಗೇ ಇರುತ್ತದೆ.

ಈ ಫೋನ್ ಪೂರ್ಣ ಪ್ರಮಾಣದ ಫ್ಯಾಬ್ ವೈಶಿಷ್ಟ್ಯದ ಭರವಸೆಯನ್ನೇ ನೀಡುತ್ತದೆ. ಹಾಗಿದ್ದ ಮೇಲೆ ಬ್ಯಾಟರಿ ಹಿಂದುಳಿಯುವುದಕ್ಕೆ ಹೇಗೆ ಸಾಧ್ಯ? ಮನಸ್ಸಿನಲ್ಲಿ ಆ ಬಗ್ಗೆ ಅಳುಕೇ ಬೇಡ. ಸ್ಯಾಮ್ಸಂಗ್ F12 ಮೊಬೈಲ್ ಫೋನ್ 6000 mAh ಬ್ಯಾಟರಿಯೊಂದಿಗೆ ಬರುತ್ತದೆ. ಒಂದು ದಿನ ಮತ್ತು ಅದಕ್ಕಿಂತ ಹೆಚ್ಚಿನ ಅವಧಿಗೆ ಬರುವುದಕ್ಕೆ ಇದು ಸಾಕು!

ಈ ಫೋನ್ ಕ್ಷಮತೆ ಜತೆಗೆ ಸಕತ್ ಆದ ಪವರ್ ಕೂಡ ಇದೆ. ಈ ಫೋನ್ ಎಲ್ಲ ನಿರೀಕ್ಷೆಗಳನ್ನೂ ಮೀರಿದೆ. ಅದು ಪರ್ಫಾರ್ಮೆನ್ಸ್ ವಿಚಾರದಲ್ಲೂ ಅನ್ವಯಿಸುತ್ತದೆ. ಸ್ಯಾಮ್ಸಂಗ್ ಗ್ಯಾಲಕ್ಸಿ F12 ಮೊಬೈಲ್ ಫೋನ್ ವಿದ್ಯುತ್ ಕ್ಷಮತೆಯ 8nm ಎಕ್ಸಿನೋಸ್ 850 ಪ್ರೊಸೆಸರ್ ಜತೆ ಬರುತ್ತದೆ. ಇದರಿಂದಾಗಿ ಬ್ಯಾಟರಿ ದೀರ್ಘಾವಧಿಗೆ ಬರುತ್ತದೆ. ಆ ಕಾರಣಕ್ಕೆ ಒಂದೇ ಸಲಕ್ಕೆ ಹಲವು ಕೆಲಸಗಳನ್ನು ಬಹಳ ಸುಲಭಕ್ಕೆ ಮಾಡಬಹುದು. ಸ್ವರ್ಗದಲ್ಲೇ ನಿಶ್ವಯವಾದ ಜೋಡಿ ರೀತಿಯಲ್ಲಿ ಇದು ಚಂದ ಚಂದ.

ಸ್ಯಾಮ್ಸಂಗ್ ಗ್ಯಾಲಕ್ಸಿ F12 ಎರಡು ವೇರಿಯಂಟ್​ನಲ್ಲಿ ಬರುತ್ತದೆ. 4GB RAM+ 64 GB ಆಂತರಿಕ ಸಂಗ್ರಹ ಸಾಮರ್ಥ್ಯ ಮತ್ತು 4GB RAM+ 128 GB ಆಂತರಿಕ ಸಂಗ್ರಹ ಸಾಮರ್ಥ್ಯ (512 GB ತನಕ ವಿಸ್ತರಣೆ ಆಗುತ್ತದೆ). LPDDR4X RAM ವೇಗವಾದ ಮಲ್ಟಿ ಟಾಸ್ಕಿಂಗ್​ಗೆ ಕೂಡ ಸಪೋರ್ಟ್ ಮಾಡುತ್ತದೆ. ಇದರ ಜತೆಗೆ ಎರಡು ಸಿಮ್ ಕಾರ್ಡ್ ಸ್ಲಾಟ್​ಗಳಿವೆ. ವೈಶಿಷ್ಟ್ಯಗಳು ಹೀಗೆ ಮುಂದುವರಿಯುತ್ತಲೇ ಹೋಗುತ್ತವೆ.

ಇನ್ನೂ ಏನೇನಿದೆ ಅನ್ನೋದಾದರೆ, ಆಂಡ್ರಾಯಿಡ್ 11 ಹಾಗೂ ಪೂರ್ಣ ಪ್ರಮಾಣದ ಒಂದು UI 3.1 ಅನುಭವ, ಸ್ಯಾಮ್ಸಂಗ್ ಗ್ಯಾಲಕ್ಸಿ 12ರಲ್ಲಿ ವಿಸ್ತೃತವಾದ ಭದ್ರತಾ ವ್ಯವಸ್ಥೆ ಇದೆ. ಇದರಲ್ಲಿರುವ ಫಿಂಗರ್​ಪ್ರಿಂಟ್ ಮತ್ತು ಫಾಸ್ಟ್ ಫೇಸ್ ಅನ್​ಲಾಕ್​ಗೆ ಥ್ಯಾಂಕ್ಸ್ ಹೇಳಲೇಬೇಕು. ಡಾಲ್ಬಿ ಅಟ್ಮೋಸ್ ಇರುವುದರಿಂದ ಸುಸ್ಪಷ್ಟವಾದ ಆಡಿಯೋ ಇದೆ. ಇನ್ನು ಈ ಫೋನ್ ಸಮುದ್ರ ಹಸಿರು, ಆಕಾಶ ನೀಲಿ ಮತ್ತು ಸೆಲೆಸ್ಟಿಯಲ್ ಕಪ್ಪು ಬಣ್ಣದಲ್ಲಿ ದೊರೆಯಲಿದ್ದು, ನಿಮಗೆ ಬೇಕಾದ ಬಣ್ಣದ್ದು ಆರಿಸಿಕೊಳ್ಳಬಹುದು.

ಖರೀದಿಗೆ ಈಗಲೇ ಪ್ಲ್ಯಾನ್ ಮಾಡಿ
ಇಷ್ಟೆಲ್ಲ ಅಂಶಗಳು ಈ ಫೋನ್ ಪರವಾಗಿ ಇರುವಾಗ ಇದಕ್ಕಿಂತ ಉತ್ತಮ ಫೋನ್ ಯೋಚಿಸಲು ಆಗುತ್ತಿಲ್ಲ. ಅದೂ ಅಲ್ಲದೆ ಆರಂಭಿಕ ಬೆಲೆಯಾಗಿ 1000 ರೂಪಾಯಿ ತಕ್ಷಣದ ಕ್ಯಾಶ್​ಬ್ಯಾಕ್* ಸೇರಿ 9999 ರೂಪಾಯಿಗೆ ದೊರೆಯುತ್ತಿದೆ. ಅದು ಐಸಿಐಸಿಐ ಬ್ಯಾಂಕ್ ಕಾರ್ಡ್ ಜತೆಗೆ ಪಾವತಿ ಮಾಡುವಾಗ ದೊರೆಯುತ್ತದೆ. ಈ ಫೋನ್ ಖರೀದಿಸಬೇಕು ಅಂದರೆ ಅದು ಫ್ಲಿಪ್​ಕಾರ್ಟ್ ಮತ್ತು samsung.comನಲ್ಲಿ ಮಾತ್ರ. ಫ್ಲಿಪ್​ಕಾರ್ಟ್ ಬಳಕೆದಾರರಿಗೆ ಸುಲಭ ಇಎಂಐ ಪಾವತಿ ಆಯ್ಕೆಗೆ ಅವಕಾಶ ಸಹ ಇದೆ. ಇದರ ಜತೆಗೆ ಫೋನ್ ಮಾರಾಟ ಆರಂಭವಾದಾಗ ಇನ್ನಷ್ಟು ಆಫರ್​ಗಳು ಸಿಗುತ್ತದೆ. ಅಂದಹಾಗೆ ಫೋನ್ ಮಾರಾಟ ಆರಂಭವಾಗುವುದು ಏಪ್ರಿಲ್ 12, 2021ರ ಮಧ್ಯಾಹ್ನ 12ಕ್ಕೆ. ಈ ದಿನವನ್ನು ನೆನಪಿಟ್ಟುಕೊಳ್ಳಿ.

ಇದನ್ನೂ ಓದಿ: Samsung Galaxy M12 Launch, Price, Specification: ಸ್ಯಾಮ್ಸಂಗ್ ಗ್ಯಾಲಕ್ಸಿ ಎಂ12 ಭಾರತದಲ್ಲಿ 9,999 ರೂ.ಗೆ ಮಾರಾಟ

(Samsung Galaxy F12 to be launch in India on April 12, 2021. Here are the price, colour, storage, and other details.)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada