ಉತ್ತರ ಕನ್ನಡ ಜಿಲ್ಲೆಯ ನಾಲ್ಕು ತಾಲೂಕುಗಳು ನಾಳೆಯಿಂದ ಸೀಲ್​ಡೌನ್​; ಪ್ರತಿಯೊಬ್ಬರೂ ಸಹಕರಿಸಬೇಕು ಎಂದ ಸಚಿವ ಶಿವರಾಮ ಹೆಬ್ಬಾರ್​

ನಾಲ್ಕು ತಾಲೂಕುಗಳ ಜನರು ನಾಳೆ ಬೆಳಗ್ಗೆ 10ಗಂಟೆಯೊಳಗೆ ನಾಲ್ಕೈದು ದಿನಗಳಿಗಾಗುವಷ್ಟು ಅಗತ್ಯ ವಸ್ತುಗಳನ್ನು ಖರೀದಿ ಮಾಡಿಕೊಳ್ಳಬೇಕು. ಮೇ 24ರವರೆಗೂ ಸೀಲ್​ಡೌನ್ ಮುಂದುವರಿಯಲಿದ್ದು, ಅದರ ನಂತರ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಶಿವರಾಮ ಹೆಬ್ಬಾರ್​ ತಿಳಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ನಾಲ್ಕು ತಾಲೂಕುಗಳು ನಾಳೆಯಿಂದ ಸೀಲ್​ಡೌನ್​; ಪ್ರತಿಯೊಬ್ಬರೂ ಸಹಕರಿಸಬೇಕು ಎಂದ ಸಚಿವ ಶಿವರಾಮ ಹೆಬ್ಬಾರ್​
ಶಿವರಾಮ ಹೆಬ್ಬಾರ್​

Updated on: May 20, 2021 | 8:29 PM

ಉತ್ತರಕನ್ನಡ ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವಿಟಿ ರೇಟ್ ಹೆಚ್ಚಾಗಿದ್ದು, ದಿನೇದಿನೆ ಸೋಂಕಿತರ ಸಂಖ್ಯೆ ಏರುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ನಾಳೆ ಬೆಳಗ್ಗೆ 10 ಗಂಟೆಯಿಂದ ಸೀಲ್​​ಡೌನ್​ ಜಾರಿ ಮಾಡಲಾಗುವುದು ಎಂದು ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್​ ತಿಳಿಸಿದ್ದಾರೆ.
ಉತ್ತರಕನ್ನಡದ ಸಿದ್ದಾಪುರ, ಶಿರಸಿ, ಯಲ್ಲಾಪುರ ಮತ್ತು ಮುಂಡಗೋಡು ಪಟ್ಟಣಗಳು ನಾಳೆಯಿಂದ ಮೇ 24ರ ಸಂಜೆಯವರೆಗೆ ಸೀಲ್​ಡೌನ್ ಆಗಲಿವೆ. ಇನ್ನು ಉಳಿದ ಎಲ್ಲ ತಾಲೂಕುಗಳು ಶನಿವಾರ ಮತ್ತು ಭಾನುವಾರ ಮಾತ್ರ ಸೀಲ್​ಡೌನ್​ ಆಗಲಿವೆ ಎಂದು ಹೆಬ್ಬಾರರು ಹೇಳಿದ್ದಾರೆ.

ನಾಲ್ಕು ತಾಲೂಕುಗಳ ಜನರು ನಾಳೆ ಬೆಳಗ್ಗೆ 10ಗಂಟೆಯೊಳಗೆ ನಾಲ್ಕೈದು ದಿನಗಳಿಗಾಗುವಷ್ಟು ಅಗತ್ಯ ವಸ್ತುಗಳನ್ನು ಖರೀದಿ ಮಾಡಿಕೊಳ್ಳಬೇಕು. ಮೇ 24ರವರೆಗೂ ಸೀಲ್​ಡೌನ್ ಮುಂದುವರಿಯಲಿದ್ದು, ಅದರ ನಂತರ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಇನ್ನು ತರಕಾರಿ, ಹಣ್ಣುಹಂಪಲು, ಹೂವು, ಹಾಲನ್ನು ಪ್ರತಿದಿನ ಬೆಳಗ್ಗೆ 10 ಗಂಟೆಯೊಳಗೆ ತಳ್ಳುವ ಗಾಡಿ ಮೂಲಕ ಪೂರೈಸಲು ಅವಕಾಶ ಮಾಡಿಕೊಡಲಾಗುತ್ತದೆ. ದಿನಸಿ ಸಾಮಗ್ರಿಗಳನ್ನು ಅಗತ್ಯವಿರುವಷ್ಟನ್ನು ನಾಳೆಯೇ ಖರೀದಿಸಬೇಕು. ಕೊರೊನಾ ನಿಯಂತ್ರಣಕ್ಕೆ ಪ್ರತಿಯೊಬ್ಬರೂ ಸಹಕರಿಸಬೇಕು ಎಂದು ಶಿವರಾಮ ಹೆಬ್ಬಾರ್​ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಕೊವಿಡ್​ನಿಂದ ಗುಣಮುಖರಾದ ಎರಡೇ ದಿನಕ್ಕೆ ಗಾಯಕ ಅರ್ಜಿತ್​ ಸಿಂಗ್​ ತಾಯಿ ನಿಧನ

ಕ್ರಿಕೆಟಿಗ ಭುವನೇಶ್ವರ್ ಕುಮಾರ್​ ತಂದೆ ನಿಧನ; ಭುವಿ ಇಂಗ್ಲೆಂಡ್ ಪ್ರವಾಸದಿಂದ ಹಿಂದೆ ಸರಿಯಲು ತಂದೆ ಅನಾರೋಗ್ಯವೇ ಕಾರಣವಾಗಿತ್ತಾ?

Published On - 8:25 pm, Thu, 20 May 21