AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ರಿಕೆಟಿಗ ಭುವನೇಶ್ವರ್ ಕುಮಾರ್​ ತಂದೆ ನಿಧನ; ಭುವಿ ಇಂಗ್ಲೆಂಡ್ ಪ್ರವಾಸದಿಂದ ಹಿಂದೆ ಸರಿಯಲು ತಂದೆ ಅನಾರೋಗ್ಯವೇ ಕಾರಣವಾಗಿತ್ತಾ?

ಭುವನೇಶ್ವರ್ ತಂದೆ ಕಿರಣ್ ಪಾಲ್ ಸಿಂಗ್ ಅವರು ದೀರ್ಘಕಾಲದವರೆಗೆ ಕ್ಯಾನ್ಸರ್ ನಿಂದ ಬಳಲುತ್ತಿದ್ದರು ಮತ್ತು ಇತ್ತೀಚೆಗೆ ದೆಹಲಿಯ ಏಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಕ್ರಿಕೆಟಿಗ ಭುವನೇಶ್ವರ್ ಕುಮಾರ್​ ತಂದೆ ನಿಧನ; ಭುವಿ ಇಂಗ್ಲೆಂಡ್ ಪ್ರವಾಸದಿಂದ ಹಿಂದೆ ಸರಿಯಲು ತಂದೆ ಅನಾರೋಗ್ಯವೇ ಕಾರಣವಾಗಿತ್ತಾ?
ಭುವನೇಶ್ವರ್ ಕುಮಾರ್
ಪೃಥ್ವಿಶಂಕರ
|

Updated on: May 20, 2021 | 7:58 PM

Share

ಭಾರತೀಯ ಕ್ರಿಕೆಟ್‌ಗೆ ಮತ್ತೊಂದು ವಿಷಾದಕರ ಸುದ್ದಿ ಬಂದಿದೆ. ಟೀಮ್ ಇಂಡಿಯಾದ ಸ್ಟಾರ್ ಫಾಸ್ಟ್ ಬೌಲರ್ ಭುವನೇಶ್ವರ್ ಕುಮಾರ್ ಅವರ ತಂದೆ ನಿಧನರಾಗಿದ್ದಾರೆ. ಭುವನೇಶ್ವರ್ ತಂದೆ ಕಿರಣ್ ಪಾಲ್ ಸಿಂಗ್ ಅವರು ದೀರ್ಘಕಾಲದವರೆಗೆ ಕ್ಯಾನ್ಸರ್ ನಿಂದ ಬಳಲುತ್ತಿದ್ದರು ಮತ್ತು ಇತ್ತೀಚೆಗೆ ದೆಹಲಿಯ ಏಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅಲ್ಲಿಂದ ಅವರನ್ನು ಮತ್ತೆ ಮೀರತ್‌ಗೆ ಕರೆತರಲಾಯಿತು, ಅಲ್ಲಿ ಅವರು ಮೇ 20 ರ ಗುರುವಾರ ತಮ್ಮ ಮನೆಯಲ್ಲಿ ಕೊನೆಯುಸಿರೆಳೆದರು. ಇತ್ತೀಚೆಗೆ, ಮಾಜಿ ವೇಗದ ಬೌಲರ್ ಆರ್.ಪಿ.ಸಿಂಗ್ ಅವರ ತಂದೆ ಸಹ ನಿಧನರಾದರು, ಮಹಿಳಾ ತಂಡದ ಸದಸ್ಯರಾದ ವೇದ ಕೃಷ್ಣಮೂರ್ತಿ ಮತ್ತು ಪ್ರಿಯಾ ಪುನಿಯಾ ಕೂಡ ತಮ್ಮ ಕುಟುಂಬವನ್ನು ಕಳೆದುಕೊಂಡರು.

ಭುವನೇಶ್ವರ ತಂದೆ ಕಿರಣ್ ಪಾಲ್ ಸಿಂಗ್ ಅವರಿಗೆ 63 ವರ್ಷ ವಯಸ್ಸಾಗಿತ್ತು. ಅವರು ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದರು. ಉತ್ತರ ಪ್ರದೇಶದಲ್ಲಿ ಪೊಲೀಸ್​ ಆಗಿ ಕಾರ್ಯನಿರ್ವಹಿಸುತ್ತಿದ್ದ ಅವರು ವಿಆರ್ಎಸ್ ತೆಗೆದುಕೊಂಡು ಬಳಿಕ ಕುಟುಂಬದೊಂದಿಗೆ ಮೀರತ್​ನಲ್ಲಿ ವಾಸಿಸುತ್ತಿದ್ದರು . ಮಾಹಿತಿಯ ಪ್ರಕಾರ, ಮಗ ಭುವನೇಶ್ವರ ಕುಮಾರ್, ಮಗಳು ರೇಖಾ ಮತ್ತು ಪತ್ನಿ ಇಂದ್ರೇಶ್ ದೇವಿ ಅವರನ್ನು ಅಗಲಿದ್ದಾರೆ.

ಅಂತ್ಯಕ್ರಿಯೆ ಬುಲಂದ್‌ಶಹರ್‌ನಲ್ಲಿ ನಡೆಯಲಿದೆ ದೀರ್ಘಕಾಲದವರೆಗೆ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಕಿರಣ್ ಪಾಲ್ ಅವರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರಿಗೆ ಕೀಮೋ ಥೆರಪಿಯನ್ನು ಸಹ ಸ್ವಲ್ಪ ಸಮಯದ ಹಿಂದೆ ಮಾಡಲಾಯಿತು, ಆದರೆ ಅದರ ನಂತರವೂ ಯಾವುದೇ ಸುಧಾರಣೆಯಾಗಿಲ್ಲ. ಬಳಿಕ ವೈದ್ಯರು ನೀಡಿದ ಸಲಹೆಯ ನಂತರವೇ ಅವರನ್ನು ಮೀರತ್‌ನ ಗಂಗನಗರ ಪ್ರದೇಶದ ತಮ್ಮ ಮನೆಗೆ ಕರೆತರಲಾಯಿತು. ಭುವನೇಶ್ವರ ತಂದೆ ಮೂಲತಃ ಬುಲಂದ್‌ಶಹರ್ ಮೂಲದವರು, ಅಲ್ಲಿಂದ ಅವರು ಬಂದು ಮೀರತ್‌ನಲ್ಲಿ ನೆಲೆಸಿದ್ದರು. ಈಗ ಅವರ ಅಂತಿಮ ವಿಧಿಗಳನ್ನು ಬುಲಂದ್‌ಶಹರ್ ಬಳಿಯ ಪೂರ್ವಜರ ಹಳ್ಳಿಯಲ್ಲಿ ನೆರವೇರಿಸಲಾಗುವುದು.

ಭುವಿ ಟೆಸ್ಟ್​ನಿಂದ ಹಿಂದೆ ಸರಿಯಲು ತಂದೆ ಅನಾರೋಗ್ಯವೇ ಕಾರಣವಾಗಿತ್ತಾ? ಕೆಲವು ದಿನಗಳ ಹಿಂದೆ ಇಂಗ್ಲೆಂಡ್ ಹಾಗೂ ಟೆಸ್ಟ್ ಚಾಂಪಿಯನ್​ಶಿಪ್​ ಪಂದ್ಯಾವಳಿಗೆ ಟೀಂ ಇಂಡಿಯಾವನ್ನು ಪ್ರಕಟಿಸಲಾಯ್ತು. ಆದರೆ ಭರವಸೆಯ ಆಟಗಾರ ಭುವನೇಶ್ವರ್ ಕುಮಾರ್ ಟೀಂ ಇಂಡಿಯಾಕ್ಕೆ ಆಯ್ಕೆಯಾಗಿರಲಿಲ್ಲ. ಇದರಿಂದ ಸಾಕಷ್ಟು ಊಹಪೋಹಗಳು ಎದ್ದಿದ್ದವು. ಕೆಲವರು ಭುವಿ ಟೆಸ್ಟ್​ ಕ್ರಿಕೆಟ್ ಆಡಲು ಬಯಸುತ್ತಿಲ್ಲ ಎಂದು ಹೇಳಿದ್ದರು. ಈ ರೀತಿಯ ವಿಚಾರಗಳಿಂದ ಬೇಸರಗೊಂಡಿದ ಭುವಿ ಇದಕ್ಕೆ ಸ್ಷಷ್ಟನೇ ನೀಡಿದ್ದರು. ಆದರೆ ಈಗ ತಂದೆಯ ಅನಾರೋಗ್ಯದ ಮಾಹಿತಿ ಮುಂಚೆಯೇ ತಿಳಿದಿದ್ದ ಭುವಿ ತಾವೇ ಇಂಗ್ಲೆಂಡ್ ಪ್ರವಾಸದಿಂದ ಹಿಂದೆ ಸರಿದರ ಎಂಬ ಅನುಮಾನ ವ್ಯಕ್ತವಾಗುತ್ತಿದೆ.

ಆಪ್ತರನ್ನು ಕಳೆದುಕೊಂಡ ಕ್ರಿಕೆಟಿಗರು ಕಳೆದ ಕೆಲವು ವಾರಗಳಲ್ಲಿ, ಭಾರತೀಯ ಕ್ರಿಕೆಟ್‌ನ ಆಟಗಾರರ ಕುಟುಂಬ ದುಃಖಕ್ಕೆ ಒಳಗಾಗಬೇಕಾಯಿತು. ಮಹಿಳಾ ತಂಡದ ಸ್ಟಾರ್ ಆಟಗಾರ್ತಿ ವೇದ ಕೃಷ್ಣಮೂರ್ತಿ ಕೆಲವೇ ದಿನಗಳಲ್ಲಿ ಕೊರೊನಾ ವೈರಸ್‌ನಿಂದ ತಾಯಿ ಮತ್ತು ಅಕ್ಕನನ್ನು ಕಳೆದುಕೊಂಡರು. ಅದೇ ಸಮಯದಲ್ಲಿ, ಟೀಮ್ ಇಂಡಿಯಾದ ವೇಗದ ಬೌಲರ್ ರುದ್ರ ಪ್ರತಾಪ್ ಸಿಂಗ್ ಅವರ ತಂದೆ ಕೂಡ ಕೊರೊನಾ ವೈರಸ್ ಕಾರಣದಿಂದ ಜಗತ್ತನ್ನು ತೊರೆದರು. ಇದೀಗ, ಭಾರತೀಯ ಮಹಿಳಾ ತಂಡದ ಯುವ ಆಟಗಾರ್ತಿ ಪ್ರಿಯಾ ಪುನಿಯಾ ಅವರ ತಾಯಿ ಕೂಡ ಕೊರೊನಾವೈರಸ್‌ಗೆ ಬಲಿಯಾದರು ಮತ್ತು ಆಕೆ ಕೂಡ ನಿಧನರಾದರು.

ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ