Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿರಾಟ್ ಕೊಹ್ಲಿಗೆ ಅನುಷ್ಕಾ ಶರ್ಮಾ ನಟಿಸಿರುವ ಯಾವ ಸಿನಿಮಾ ಫೆವರೆಟ್ ಗೊತ್ತಾ?

'ಎ ದಿಲ್ ಹೈ ಮುಷ್ಕಿಲ್' ಹೃದಯಕ್ಕೆ ಹತ್ತಿರವಾಗಿದೆ. ಈ ಚಿತ್ರದಲ್ಲಿ ಅನುಷ್ಕಾ ಪಾತ್ರವನ್ನು ತುಂಬಾ ಪ್ರೀತಿಸುತ್ತೇನೆ ಎಂದು ಹೇಳಿದರು.

ವಿರಾಟ್ ಕೊಹ್ಲಿಗೆ ಅನುಷ್ಕಾ ಶರ್ಮಾ ನಟಿಸಿರುವ ಯಾವ ಸಿನಿಮಾ ಫೆವರೆಟ್ ಗೊತ್ತಾ?
ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ
Follow us
ಪೃಥ್ವಿಶಂಕರ
|

Updated on: May 20, 2021 | 6:15 PM

ಅನುಷ್ಕಾ ಶರ್ಮಾ ಬಾಲಿವುಡ್ ಸೂಪರ್ ಸ್ಟಾರ್. ಅವರು ಸಾಕಷ್ಟು ಹಿಟ್ ಚಿತ್ರಗಳ ಸುದೀರ್ಘ ಪಟ್ಟಿಯನ್ನು ಹೊಂದಿದ್ದಾರೆ. ಅವರಿಗೆ ಅಭಿಮಾನಿಗಳು ಸಹ ಹೆಚ್ಚಿನ ಸಂಖ್ಯೆಯಲ್ಲಿರಲು ಇದು ಕಾರಣವಾಗಿದೆ. ಪ್ರತಿಯೊಬ್ಬರೂ ಅವರ ವಿಭಿನ್ನ ಚಲನಚಿತ್ರಗಳನ್ನು ಇಷ್ಟಪಡುತ್ತಾರೆ. ಆದರೆ, ಅನುಷ್ಕಾ ಅವರ ಚಿತ್ರಗಳ ಬಗ್ಗೆ ಅವರ ಪತಿ ಮತ್ತು ಭಾರತೀಯ ಕ್ರಿಕೆಟ್ ನಾಯಕ ವಿರಾಟ್ ಕೊಹ್ಲಿ ಅವರ ಇಷ್ಟಗಳು ಏನೆಂದು ನೀವು ಎಂದಾದರೂ ಯೋಚಿಸಿದ್ದೀರಾ? ಅನುಷ್ಕಾ ಅವರ ಯಾವ ಚಿತ್ರ ವಿರಾಟ್‌ಗೆ ಹೆಚ್ಚು ಇಷ್ಟವಾಗುತ್ತದೆ? ಇದೆಲ್ಲದಕ್ಕೂ ಟೀಮ್ ಇಂಡಿಯಾದ ಸೂಪರ್ಸ್ಟಾರ್ ಈಗ ಸ್ವತಃ ಉತ್ತರಿಸಿದ್ದಾರೆ.

ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಇಬ್ಬರು ಅತ್ಯಂತ ಜನಪ್ರಿಯ ಜೋಡಿಗಳು. ಒಬ್ಬರು ಕ್ರಿಕೆಟ್‌ನ ಕೊಹಿನೂರ್ ಮತ್ತು ಇನ್ನೊಬ್ಬರು ಹಿಂದಿ ಚಲನಚಿತ್ರೋದ್ಯಮದ ನೂರ್. ಈ ಇಬ್ಬರಿಗೆ ಸಾಕಷ್ಟು ಅಭಿಮಾನಿಗಳ ಬಳಗವೆ ಇದೆ. ಹಾಗೆಯೇ ಸೋಷಿಯಲ್ ಮೀಡಿಯಾದಲ್ಲಿ ಅವರ ಅಭಿಮಾನಿಗಳ ದಂಡೆ ಇವರ ಬೆನ್ನಿಗೆ ನಿಂತಿದೆ.

ವಿರಾಟ್ ಇಷ್ಟಪಡುವ ಸಿನಿಮಾ ಯಾವುದು? ಟೀಮ್ ಇಂಡಿಯಾದ ನಾಯಕ ಇತ್ತೀಚೆಗೆ ಅನುಷ್ಕಾ ಅವರ ಹೆಚ್ಚಿನ ಚಿತ್ರಗಳನ್ನು ಇಷ್ಟಪಡುತ್ತಾರೆ ಎಂದು ಬಹಿರಂಗಪಡಿಸಿದರು. ಆದರೆ, ‘ಎ ದಿಲ್ ಹೈ ಮುಷ್ಕಿಲ್’ ಹೃದಯಕ್ಕೆ ಹತ್ತಿರವಾಗಿದೆ. ಈ ಚಿತ್ರದಲ್ಲಿ ಅನುಷ್ಕಾ ಪಾತ್ರವನ್ನು ತುಂಬಾ ಪ್ರೀತಿಸುತ್ತೇನೆ ಎಂದು ಹೇಳಿದರು. ತಾನು ಆಗಾಗ್ಗೆ ಯೂಟ್ಯೂಬ್ ತೆರೆಯುತ್ತೇನೆ ಮತ್ತು ಆ ಚಿತ್ರದ ದೃಶ್ಯವನ್ನು ನೋಡುತ್ತೇನೆ ಎಂದು ಕೊಹ್ಲಿ ಹೇಳಿದ್ದಾರೆ, ಇದರಲ್ಲಿ ಅನುಷ್ಕಾ ಕ್ಯಾನ್ಸರ್ ವಿರುದ್ಧ ಹೋರಾಡುವುದನ್ನು ನೋಡಲು ರಣಬೀರ್ ಕಪೂರ್ ಹಿಂತಿರುಗುತ್ತಾರೆ. ಆ ದೃಶ್ಯವು ತನ್ನ ಹೃದಯಕ್ಕೆ ಬಹಳ ಹತ್ತಿರದಲ್ಲಿದೆ ಎಂದು ಹೇಳಿದರು.

ವಿರಾಟ್ ಪ್ರಸ್ತುತ ಇಂಗ್ಲೆಂಡ್ ಪ್ರವಾಸಕ್ಕಾಗಿ ಪ್ರತ್ಯೇಕವಾಗಿದ್ದಾರೆ ಕ್ರಿಕೆಟ್ ಜಗತ್ತಿನಲ್ಲಿ ಭಾರತದ ನಾಯಕ ವಿರಾಟ್ ಕೊಹ್ಲಿ ಪ್ರಸ್ತುತ ಇಂಗ್ಲೆಂಡ್ ಪ್ರವಾಸಕ್ಕೆ ಸಿದ್ಧತೆ ನಡೆಸಿದ್ದಾರೆ. ಜೂನ್ 2 ರಂದು ಅವರು ತಮ್ಮ ತಂಡದೊಂದಿಗೆ ಇಂಗ್ಲೆಂಡ್‌ಗೆ ತೆರಳಲಿದ್ದಾರೆ. ಅಲ್ಲಿಗೆ ತಲುಪಿದ ನಂತರವೂ, ಭಾರತೀಯ ಆಟಗಾರರು 10 ದಿನಗಳವರೆಗೆ ಕ್ಯಾರೆಂಟೈನ್ ಆಗಬೇಕಾಗುತ್ತದೆ. ಅದರ ನಂತರ, ಡಬ್ಲ್ಯುಟಿಸಿ ಫೈನಲ್‌ಗೆ ತಯಾರಿ ಪ್ರಾರಂಭಿಸುತ್ತದೆ. ಭಾರತವು ಜೂನ್ 18 ರಿಂದ ನ್ಯೂಜಿಲೆಂಡ್‌ನೊಂದಿಗೆ ಡಬ್ಲ್ಯೂಟಿಸಿ ಫೈನಲ್ ಪಂದ್ಯವನ್ನು ಆಡಬೇಕಾಗಿದೆ. ಇದರ ನಂತರ, ಇಂಗ್ಲೆಂಡ್‌ನೊಂದಿಗೆ 5 ಟೆಸ್ಟ್‌ಗಳ ಸರಣಿ ನಡೆಯಲಿದೆ.