ಹಾಸನ: ನಮ್ಮ ರಾಜ್ಯ ಸರ್ಕಾರದ ಪೊಲೀಸ್ ನೇಮಕಾತಿಯಲ್ಲೂ ಅಗ್ನಿವೀರರಿಗೆ ಹೆಚ್ಚಿನ ಮೀಸಲಾತಿ ಕೊಡುವ ಬಗ್ಗೆ ಯೋಚಿಸಲಾಗಿದೆ ಎಂದು ಗೃಹಸಚಿವ ಆರಗ ಜ್ಞಾನೆಂದ್ರ (Araga Jnanendra) ಅವರು ಹೇಳಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಶೇ.10 ಮತ್ತು ಅಗ್ನಿಶಾಮಕದಲ್ಲಿ ಶೇ.50 ರಷ್ಟು ಮೀಸಲಾತಿ ಬಗ್ಗೆ ಯೋಚಿಸಲಾಗಿದೆ ಎಂದು ಹೇಳದ್ದಾರೆ. ಪ್ರತಿವರ್ಷ 45 ಸಾವಿರ ದೇಶ ಪ್ರೀತಿಸುವ ಜನರು ಸೇನೆಗೆ ಸೇರುತ್ತಿದ್ದಾರೆ. ಇದು ಬಹಳ ಒಳ್ಳೆಯದು. ಬೇರೆ ಬೇರೆ ದೇಶದಲ್ಲಿ ಹುಟ್ಟಿದ ಗಂಡು ಹೆಣ್ಣು ಎಲ್ಲರೂ ಸೇನೆಗೆ ಸೇವೆ ಮಾಡಬೇಕು ಎಂಬ ನಿಯಮ ಇದೆ. ನಮ್ಮಲ್ಲಿ ಅಂತ ವ್ಯವಸ್ಥೆ ಇರಲಿಲ್ಲ, ಈಗ ಬಂದಿದೆ. ನಮ್ಮ ಕಾಲದಲ್ಲಿ ಆಗಲಿಲ್ಲವಲ್ಲಾ ಎಂದು ಹತಾಶೆಯಿಂದ ಯೋಜನೆಯನ್ನು ಕಾಂಗ್ರೆಸ್ ಟೀಕೆ ಮಾಡುತ್ತಿದೆ ಎಂದು ಹೇಳಿದರು.
ಇದನ್ನೂ ಓದಿ: ಕರ್ನಾಟಕಕ್ಕೆ ಸಾವಿರಾರು ಕೋಟಿ ನೀಡಿದ ಕೇಂದ್ರ: ಸಿದ್ದು ಹೇಳಿಕೆಗೆ ಸಿಎಂ ಬೊಮ್ಮಾಯಿ ತಿರುಗೇಟು
ಅಗ್ನಿಪಥ್ (Agnipath) ಹೋರಾಟದ ಬಗ್ಗೆ ಹಾಸನದಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿ ನೇತೃತ್ವದ ಸರ್ಕಾರ ಜಾರಿ ಮಾಡಿದ ಯಾವುದೇ ಯೋಜನೆಯನ್ನು ವಿರೋಧಿಸುವ ಚಟ ಕಾಂಗ್ರೆಸ್ ನಾಯಕರಿಗೆ ಕಾಂಗ್ರೆಸ್ ನಾಯಕರಿಗೆ ಇದೆ. ಅಗ್ನಿಪಥ್ ಹೋರಾಟದ ಹಿಂದೆಯಲ್ಲ ಮುಂದಿರೋದೇ ಕಾಂಗ್ರೆಸ್ ಎಂದು ಗೃಹ ಸಚಿವ ಆರಗ ಜ್ಞಾನೆಂದ್ರ ವಾಗ್ದಾಳಿ ನಡೆಸಿದ್ದಾರೆ. ಅಗ್ನಿಪಥ್ ಬಹಳ ಒಳ್ಳೆಯ ಯೋಜನೆಯಾಗಿದೆ. ನಮ್ಮ ಸೇನೆಯಲ್ಲಿ ಸರಾಸರಿ ವಯಸ್ಸು 32 ಇದೆ, ಅದನ್ನ 25ಕ್ಜೆ ಇಳಿಸಬೇಕು. ನಮ್ಮ ಸೇನೆಗೆ ಯಂಗ್ ಬ್ಲಡ್ ಬಂದರೆ ಬಹಳ ಒಳ್ಳೆಯದು ಎಂದು ಹೇಳಿದ್ದಾರೆ.
ನಮ್ಮ ಮಿಲಿಟರಿಯಲ್ಲಿ ಪೆನ್ಷನ್ಗೆ ಹೆಚ್ಚು ಹಣ ಖರ್ಚಾಗುತ್ತಿದೆ. ಸೇನೆಯ ಒಟ್ಟು ಬಜೆಟ್ ಐದು ಲಕ್ಷ ಕೋಟಿಯಲ್ಲಿ ಒಂದುಕಾಲು ಕೋಟಿ ಹಣವನ್ನು ಕೇವಲ ಪೆನ್ಷನ್ಗಾಗಿ ಖರ್ಚು ಮಾಡಲಾಗುತ್ತಿದೆ. ಇದರಿಂದಾಗಿ ಅಭಿವೃದ್ಧಿಗೆ ಹಾಗೂ ಶಸ್ತ್ರಾಸ್ತ್ರ ಖರೀದಿಗೆ ಹಣ ಸಾಕಾಗುತ್ತಿಲ್ಲ. ಈ ಪೆನ್ಷನ್ ಹಣ ಉಳಿತಾಯ ಮಾಡುವ ನಿಟ್ಟಿನಲ್ಲಿ ಹೊಸ ಪ್ರಸಜೆಕ್ಟ್ ಮಾಡಲಾಗಿದೆ ಎಂದರು.
ಇದನ್ನೂ ಓದಿ: Yashwant Sinha ರಾಷ್ಟ್ರಪತಿ ಚುನಾವಣೆ: ಯಶವಂತ್ ಸಿನ್ಹಾ ವಿರೋಧ ಪಕ್ಷಗಳ ಅಭ್ಯರ್ಥಿ
ಗಾಂಧಿ ಕುಟುಂಬಕ್ಕೆ ಪ್ರತ್ಯೇಕ ಕಾನೂನು ಇಲ್ಲ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಇಡಿ ತನಿಖೆ ವಿಚಾರ ಸಂಬಂಧ ಪ್ರತಿಕ್ರಿಯೆ ನೀಡಿದ ಸಿಎಂ ಬೊಮ್ಮಾಯಿ, ಯಾರು ತಪ್ಪು ಮಾಡಿದ್ದಾರೆ ಮತ್ತು ಕಾನೂನು ಬಾಹಿರವಾಗಿ ಹಣ ವರ್ಗಾವಣೆ ಮಾಡಿದ್ದರೋ ಅಂಥವರನ್ನು ಜಾರಿ ನಿರ್ದೇಶನಾಲಯವು ತನಿಖೆಗೆ ಕರೆಯುತ್ತದೆ. ಕರಿಯಬಾರದು ಅಂತಾ ಹೇಳಲು ಆಗುತ್ತಾ. ಈ ದೇಶದಲ್ಲಿ ಗಾಂಧಿ ಕುಟುಂಬಕ್ಕೆ ಒಂದು ಕಾನೂನು, ಜನಸಾಮಾನ್ಯರಿಗೆ ಒಂದು ಕಾನೂನಾ? ದೇಶದಲ್ಲಿ ಎಲ್ಲರಿಗೂ ಒಂದೇ ಕಾನೂನು ಇದೆ ಎಂದರು. ಅಲ್ಲದೆ ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿರುವ ಕಾಂಗ್ರೆಸ್ ನಾಯಕರಿಗೆ ನಾಚಿಗೆ ಆಗಬೇಕು. ಕಾನೂನು ಕಾಯ್ದೆಯನ್ನ ಇವರು ಗೌರವಿಸದೇ ಇನ್ನ್ಯಾರು ಗೌರವಿಸುತ್ತಾರೆ. ತಪ್ಪು ಮಾಡದಿದ್ದರೆ ಇಡಿ ತನಿಖೆಯಿಂದ ಹೊರಗೆ ಬರುತ್ತಾರೆ. ಇಲ್ಲದಿದ್ದರೆ ಶಿಕ್ಷೆಅನುಭವಿಸುತ್ತಾರೆ ಎಂದರು.
ಇದನ್ನೂ ಓದಿ: ವಿಧಾನಸಭೆ ಚುನಾವಣೆ ಬೆನ್ನಿಗೆ ಪ್ರಧಾನಿ ಮೋದಿ ಕರ್ನಾಟಕ ಭೇಟಿಯಿಂದ ರಾಜ್ಯ ಬಿಜೆಪಿಗೆ ದೊಡ್ಡ ಲಾಭ ಆಗುತ್ತದಾ? ಟಿವಿ9 ಚರ್ಚೆ
ಪಿಎಸ್‌ಐ ನೇಮಕಾತಿ ಹಗರಣ, ಮಾಹಿತಿ ನೀಡಿದ ಎಚ್ಡಿಕೆ
ಪಿಎಸ್‌ಐ ನೇಮಕಾತಿ ಯಲ್ಲಿ ಹಗರಣ ವಿಚಾರ ಸಂಬಂಧ ಮಾತನಾಡಿದ ಮುಖ್ಯಮಂತ್ರಿ, ನೇಮಕಾತಿಯಲ್ಲಿ ನಡೆದ ಹಗರಣದ ಬಗ್ಗೆ ಸಂಪೂರ್ಣ ತನಿಖೆಗೆ ಆದೇಶಿಸಲಾಗಿದೆ. ಪೊಲೀಸ್ ಅಧಿಕಾರಿಗಳಿಂದ ಹಿಡಿದು ಯಾರ್ಯಾರು ಪ್ರಕರಣದಲ್ಲಿ ಭಾಗಿಯಾಗಿದ್ದಾರೋ ಅವರನ್ನೆಲ್ಲಾ ಜೈಲಿಗೆ ಕಳುಹಿಸುತ್ತೇವೆ. ನಿನ್ನೆ ಕೂಡ ಒಬ್ಬನನ್ನು ಜೈಲಿಗೆ ಕಳಿಸಲಾಗಿದೆ ಎಂದರು.
ಹಗರಣದ ಮುಖ್ಯ ಕಿಂಗ್ಪಿನ್ನನ್ನು ಮುಟ್ಟಿದರೆ ಸರ್ಕಾರ ಬೀಳುತ್ತದೆ ಎಂಬ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಸರ್ಕಾರ ಹೋದರೆ ಹೋಗಲಿ ಮಾಹಿತಿಕೊಡಿ ಎಂದು ಅವರ ಬಳಿ ಹೇಳಿದ್ದೇನೆ. ಅವರು ಇಲ್ಲಿಯವರೆಗೂ ಯಾವುದೇ ಮಾಹಿತಿ ಕೊಟ್ಟಿಲ್ಲ. ಅವರು ಹೀಗೆ ಹೇಳುತ್ತಾ ಇರುತ್ತಾರೆ. ನಾವು ಯಾರನ್ನೂ ರಕ್ಷಣೆ ಮಾಡುವುದಿಲ್ಲ. ಕಷ್ಟ ಪಟ್ಟು ಪಿಎಸ್‌ಐ ಆಗಬೇಕೆಂದು ಓದಿದವರಿಗೆ, ಫಿಟ್ ಆಗಲು ವರ್ಷಾನುಗಟ್ಟಲೆ ದೇಹ ಸವೆಸಿರುವ ಮಕ್ಕಳಿಗೆ ಇದರಿಂದ ದುಃಖ ಆಗಿದೆ. ದುಡ್ಡಿದ್ದರೆ ಸೆಲೆಕ್ಟ್ ಆಗುತ್ತೇವೆ ಇಷ್ಟೆಲ್ಲಾ ಕಷ್ಟ ಪಡುವುದು ಬೇಡ ಅಂದುಕೊಂಡಿದ್ದಾರೆ. ಈ ರೀತಿ ವ್ಯವಸ್ಥೆ ಗೆ ನಮ್ಮ ಸರ್ಕಾರ ಅವಕಾಶ ಕೊಡುವುದಿಲ್ಲ. ತನಿಖೆ ಸಂಪೂರ್ಣಗೊಂಡ ನಂತರ ಮರು ಪರೀಕ್ಷೆ ಮಾಡಲಾಗುವುದು ಎಂದರು.
ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:03 pm, Tue, 21 June 22