ವಿಧಾನಸಭೆ ಚುನಾವಣೆ ಬೆನ್ನಿಗೆ ಪ್ರಧಾನಿ ಮೋದಿ ಕರ್ನಾಟಕ ಭೇಟಿಯಿಂದ ರಾಜ್ಯ ಬಿಜೆಪಿಗೆ ದೊಡ್ಡ ಲಾಭ ಆಗುತ್ತದಾ? ಟಿವಿ9 ಚರ್ಚೆ
ಪ್ರಧಾನಿ ಮೋದಿ ಭೇಟಿಯಿಂದ ಕರ್ನಾಟಕಕ್ಕೆ ಎಷ್ಟು ಪ್ರಯೋಜನವಾಗಲಿದೆ. ಅದರಲ್ಲೂ ಅಸೆಂಬ್ಲಿ ಚುನಾವಣೆ ಹೊಸ್ತಿಲಲ್ಲಿ ಇವರು ಬಂದುಹೋಗಿರುವುದು ಪರಿಣಾಮಕಾರಿಯಾಗುತ್ತದಾ, ಬಿಜೆಪಿಗೆ ಬಲ ಬಂದಿದೆಯೇ? ಎಂಬುದನ್ನೂ ಲೆಕ್ಕ ಹಾಕಬೇಕಿದೆ. ಈ ಕುರಿತಾದ ಚರ್ಚೆ ಇಂದಿನ ಟಿವಿ9 ಡಿಜಿಟಲ್ ಲೈವ್ನಲ್ಲಿ
ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅವರು 2 ದಿನಗಳ ಕಾಲ ಬಿರುಗಾಳಿಯಂತೆ ಕರ್ನಾಟಕ ಪ್ರವಾಸ ಮಾಡಿ ಹೋಗಿದ್ದಾರೆ. ಹತ್ತಾರು ಕಾಮಗಾರಿಗಳಿಗೆ ಶಂಕುಸ್ಥಾಪನೆ, ನಾಲ್ಕಾರು ಯೋಜನೆಗಳ ಉದ್ಘಾಟನೆ, ಶಿಲಾನ್ಯಾಸ ಇತ್ಯಾದಿ ಮಹತ್ವದ ಕೆಲಸಗಳನ್ನು ನಡೆಸಿಕೊಟಗ್ಟು ಹೋಗಿದ್ದಾರೆ. ಅದರಲ್ಲೂ ತಕ್ಷಣಕ್ಕೆ ಹೇಳುವುದಾದರೆ ಬೆಂಗಳೂರು ನಗರ ಮತ್ತು ಗ್ರಾಮೀಣ ಭಾಗದ ಜನತೆಗೆ ಪ್ರಯೋಜನವಾಗುವಂತಹ ರೈಲ್ವೆಯಂತಹ ಮಹತ್ತರ ಯೋಜನೆಗೆ ಅಂಕಿತ ಹಾಕಿದ್ದಾರೆ. ಇದು ತಕ್ಷಣದ ಮಟ್ಟಿಗೆ ಬಿಬಿಎಂಪಿ ಚುನಾವಣೆ (BBMP) ದೃಷ್ಟಿಯಿಂದ ಬಿಜೆಪಿ ಪಕ್ಷಕ್ಕೆ ಉತ್ತಮ ಅಡಿಗಲ್ಲು ಹಾಕಿದಂತಾಗಿದೆ. ಮುಖ್ಯವಾಗಿ ರಾಜಧಾನಿಯ ಮಂದಿಯನ್ನು ಕಾಡುತ್ತಿರುವ ಜನದಟ್ಟಣೆಯ ಟ್ರಾಫಿಕ್ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಬೆಂಗಳೂರಿನ ಹೊರ ಭಾಗಕ್ಕೆ ರೈಲ್ವೆ ಸಂಪರ್ಕಮ ಕಲ್ಪಿಸಲು ನಿಶ್ಚಯಿಸಿದ್ದಾರೆ. ಇದು ಸದ್ಯಕ್ಕೆ ಜನತೆಗೆ ಲಭ್ಯವಾಗದೇ ಹೋದರೂ ಜನರ ಮನಸ್ಸಿನಲ್ಲಿ ಗುಡ್ ವಿಲ್ ದೂರದೃಷ್ಟಿಕೋನ ಬಿತ್ತುವುದರಲ್ಲಿ ಅನುಮಾನವಿಲ್ಲ. ನಾಲ್ಕಾರು ದಶಕಗಳಿಂದ ಹಿಂ ದಿನ ಸರ್ಕಾರಗಳು ಕೈಗೆತ್ತಿಕೊಳ್ಳದ ಜನಸ್ನೇಹಿ ಯೋಜನೆಯನ್ನು ಬಿಜೆಪಿ ಸರ್ಕಾರ ಮಾಡುತ್ತಿರುವುದಕ್ಕೆ ಜನರಲ್ಲಿ ಒಳ್ಳೆಯ ಭಾವ ಮೂಡಿಸಲೂ ಸಾಕು. ಹಾಗಾಗಿ ಬಿಬಿಎಂಪಿ ಚುನಾವಣೆಗೆ ಬಿಜೆಪಿ ವತಿಯಿಂದ ಉತ್ತಮ ಸ್ಪ್ರಿಂಗ್ ಬೋರ್ಡ್ ಆಗಲಿದೆ.
ಇನ್ನು ಪ್ರಧಾನಿ ನರೇಂದ್ರ ಮೋದಿ ಭೇಟಿಯಿಂದ ಕರ್ನಾಟಕ ರಾಜ್ಯಕ್ಕೆ ಎಷ್ಟು ಪ್ರಯೋಜನವಾಗಲಿದೆ. ಅದರಲ್ಲೂ ಅಸೆಂಬ್ಲಿ ಚುನಾವಣೆ ಹೊಸ್ತಿಲಲ್ಲಿ (Karnataka Assembly Elections 2023) ಇವರು ಬಂದುಹೋಗಿರುವುದು ಪರಿಣಾಮಕಾರಿಯಾಗುತ್ತದಾ, ಬಿಜೆಪಿಗೆ ಬಲ ಬಂದಿದೆಯೇ? ಎಂಬುದನ್ನೂ ಲೆಕ್ಕ ಹಾಕಬೇಕಿದೆ. ಈ ಕುರಿತಾದ ಚರ್ಚೆಯನ್ನು ಆ್ಯಂಕರ್ ಚಂದ್ರಮೋಹನ್ ಇಂದಿನ ಟಿವಿ9 ಡಿಜಿಟಲ್ ಲೈವ್ನಲ್ಲಿ ನಡೆಸಿಕೊಡಲಿದ್ದಾರೆ. ಮಧ್ಯಾಹ್ನ 3.30 ಕ್ಕೆ ನಡೆಯುವ ಈ ಕಾರ್ಯಕ್ರಮಕ್ಕೆ ನಿಮಗೆ ಸ್ವಾಗತ. TV 9 Kannada Digital Live