PM Modi In Karnataka: ಶ್ರೀ ಸಿದ್ದೇಶ್ವರ ಸ್ವಾಮಿಗಳ ಪ್ರತಿ ಅರ್ಥಗರ್ಭಿತ ಮಾತಿಗೆ ಪ್ರಧಾನಿ ನರೇಂದ್ರ ಮೋದಿ ತಲೆದೂಗಿ ಕೃತಜ್ಞತೆ ಸಲ್ಲಿಸಿದರು!

PM Modi In Karnataka: ಶ್ರೀ ಸಿದ್ದೇಶ್ವರ ಸ್ವಾಮಿಗಳ ಪ್ರತಿ ಅರ್ಥಗರ್ಭಿತ ಮಾತಿಗೆ ಪ್ರಧಾನಿ ನರೇಂದ್ರ ಮೋದಿ ತಲೆದೂಗಿ ಕೃತಜ್ಞತೆ ಸಲ್ಲಿಸಿದರು!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on:Jun 21, 2022 | 2:48 PM

ವಿಶ್ವದಲ್ಲೇ ಅತ್ಯಂತ ಜನಪ್ರಿಯ ನಾಯಕರಾಗಿರುವ, ದಣಿವರಿಯದ ಪ್ರಧಾನಿ ಮೋದಿಯವರು ತಮ್ಮ ತಾಯಿಯ ಹಾಗೆ ನೂರಕ್ಕಿಂತ ಹೆಚ್ಚು ವರ್ಷಗಳ ಕಾಲ ಬದುಕಲಿ ಎಂದು ಶ್ರೀಗಳು ಹಾರೈಸಿದರು.

ಸುತ್ತೂರು ಶಾಖಾಮಠದಲ್ಲಿ ಸೋಮವಾರ ಸಾಯಂಕಾಲ ಕೆ ಎಸ್ ಎಸ್ ಸಂಸ್ಕೃತ ಪಾಠಶಾಲೆ, ಹಾಸ್ಟೆಲ್ ಕಟ್ಟಡ ಮತ್ತು ಯೋಗದ ಮೇಲೆ ಆಧಾರಿತ ಮೂರು ಪುಸ್ತಕಗಳನ್ನು ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವಿಜಯಪುರ ಜ್ಞಾನಯೋಗಾಶ್ರಮದ ಆಧ್ಯಾತ್ಮ ಗುರು ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳು (Sri Siddeshwara Swamiji) ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ (PM Narendra Modi) ಬಗ್ಗೆ ಅತ್ಯಂತ ಅರ್ಥಗರ್ಭಿತವಾಗಿ ಮಾತಾಡಿದರು. ಅವರು ಕನ್ನಡದಲ್ಲಿ ಹೇಳಿದ್ದನ್ನು ಪ್ರಧಾನಿಗಳ ಪಕ್ಕದಲ್ಲಿ ಕೂತಿದ್ದ ಸುತ್ತೂರು ಸುಕ್ಷೇತ್ರದ ಜಗದ್ಗುರು ಶ್ರೀ ದೇಶಿಕೇಂದ್ರ ಮಹಾಸ್ವಾಮೀಜಿ (Sri Deshikendra Mahaswamiji) ಅವರು ಪ್ರಾಯಶಃ ಇಂಗ್ಲಿಷ್ ಅಥವಾ ಹಿಂದಿಯಲ್ಲಿ ತರ್ಜುಮೆ ಮಾಡಿ ಹೇಳಿದಾಗ ಪ್ರಧಾನಿಗಳ ಮುಖದಲ್ಲಿ ದೊಡ್ಡ ಮಂದಹಾಸ ಮತ್ತು ಪ್ರತಿಬಾರಿ ಅವರು ಎರಡೂ ಕೈ ಜೋಡಿಸಿ ಕೃತಜ್ಞತೆಗಳನ್ನು ಸಲ್ಲಿಸಿದರು.

ಸ್ವಾಮೀಜಿಗಳ ಮಾತನ್ನು ಬಹಳ ಕುತೂಹಲದಿಂದ ಪ್ರಧಾನಿಗಳು ಕೇಳಿಸಿಕೊಂಡರು. ವಿಶ್ವದಲ್ಲೇ ಅತ್ಯಂತ ಜನಪ್ರಿಯ ನಾಯಕರಾಗಿರುವ, ದಣಿವರಿಯದ ಪ್ರಧಾನಿ ಮೋದಿಯವರು ತಮ್ಮ ತಾಯಿಯ ಹಾಗೆ ನೂರಕ್ಕಿಂತ ಹೆಚ್ಚು ವರ್ಷಗಳ ಕಾಲ ಬದುಕಲಿ ಎಂದು ಶ್ರೀಗಳು ಹಾರೈಸಿದರು.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published on: Jun 21, 2022 02:47 PM