10 ದಿನಗಳ ಅಂತರದಲ್ಲೇ 31 ಬಲಿ, ಯಾದಗಿರಿಯ ಹತ್ತಿಕುಣಿ ಗ್ರಾಮದ ಜನರಲ್ಲಿ ಆತಂಕ

|

Updated on: May 17, 2021 | 7:14 AM

ಕಿಲ್ಲರ್ ಕೊರೊನಾ ಕಂಟ್ರೋಲ್ಗೆ ಸಿಗುತ್ತಿಲ್ಲ.. ಯಾರನ್ನೂ ಕೇರ್ ಮಾಡ್ತಿಲ್ಲ.. ಇಡೀ ಕರುನಾಡನ್ನೇ ಅಕ್ಷರಶಃ ನಲುಗುವಂತೆ ಮಾಡಿದೆ. ಸಿಕ್ಕ ಸಿಕ್ಕವರ ಮೇಲೆ ಸವಾರಿ ಮಾಡಿ, ಜಾಲ ವಿಸ್ತರಿಸಿಕೊಳ್ತಿದೆ. ಅಷ್ಟೇ ಯಾಕೆ, ರಾಜ್ಯದ ಗಡಿ ಜಿಲ್ಲೆಯನ್ನೂ ಕೊರೊನಾ ಕಾಡುತ್ತಿದ್ದು, ಜನ ಭಯದಿಂದ್ಲೇ ದಿನ ದೂಡುತ್ತಿದ್ದಾರೆ.

10 ದಿನಗಳ ಅಂತರದಲ್ಲೇ 31 ಬಲಿ, ಯಾದಗಿರಿಯ ಹತ್ತಿಕುಣಿ ಗ್ರಾಮದ ಜನರಲ್ಲಿ ಆತಂಕ
ಸಾಂದರ್ಭಿಕ ಚಿತ್ರ
Follow us on

ಯಾದಗಿರಿ: ಕೊರೊನಾವನ್ನ ಹೀಗೆ ಜನ ಕೇರ್ಲೆಸ್ ಮಾಡಿದಕ್ಕೋ.. ಮಾಸ್ಕ್ ಹಾಕದೆ ಅಡ್ಡಾಡಿದ್ದಕ್ಕೋ ಅಥವಾ ಅಧಿಕಾರಿಗಳು ನಿದ್ದೆಗೆ ಜಾರಿದ್ದಕ್ಕೋ ಗೊತ್ತಿಲ್ಲ. ಇಡೀ ಊರಿನ ಜನ ಬೆದರಿ ಹೋಗಿದ್ದಾರೆ. ಮಾರಿಯ ಹೊಡೆತದಿಂದ ನಲುಗಿ ಹೋಗಿದ್ದಾರೆ. ಸಾವಿನ ಸಂಖ್ಯೆ ಕಂಡು ಭಯಗೊಂಡಿದ್ದಾರೆ.

ಕಳೆದ 10 ದಿನಗಳ ಅಂತರದಲ್ಲೇ 31 ಮಂದಿ ಬಲಿ
ಯಾದಗಿರಿ ತಾಲೂಕಿನ ಹತ್ತಿಕುಣಿ ಗ್ರಾಮ.. ಈ ಊರಿನಲ್ಲಿ ಕೇವಲ 10 ಕ್ಕೂ ಹೆಚ್ಚು ಜನರಿಗೆ ಕೊರೊನಾ ಅಟ್ಯಾಕ್ ಆಗಿದೆಯಂತೆ. ಆದ್ರೆ, ವಾಸ್ತವವಾಗಿ ಹತ್ತಿಕುಣಿ ಗ್ರಾಮದಲ್ಲಿ ನೂರಕ್ಕೂ ಅಧಿಕ ಮಂದಿಗೆ ಕೊರೊನಾ ಸೋಂಕು ತಗುಲಿದೆ ಎನ್ನಲಾಗುತ್ತಿದೆ. ಯಾಕೆಂದ್ರೆ ಗ್ರಾಮದಲ್ಲಿ ಕಳೆದ ಒಂದು ತಿಂಗಳಲ್ಲಿ ಸಾವಿರಕ್ಕೂ ಅಧಿಕ ಮಂದಿ ವಲಸೆ ಕಾರ್ಮಿಕರು ವಾಪಸ್ ಆಗಿದ್ದಾರೆ. ಇದರಿಂದ ಗ್ರಾಮದಲ್ಲಿ ದೊಡ್ಡ ಪ್ರಮಾಣದಲ್ಲಿ ಸೋಂಕು ಹರಡಿದೆಯಂತೆ. ಇದೇ ಕಾರಣಕ್ಕೆ ಕಳೆದ 10 ದಿನಗಳ ಅಂತರದಲ್ಲಿ ಗ್ರಾಮದಲ್ಲಿ ಕೊರೊನಾ ಲಕ್ಷಣಗಳಿಂದಲ್ಲೇ 31 ಮಂದಿ ಸತ್ತಿದ್ದಾರೆ. ಆದ್ರೆ ಇದರಲ್ಲಿ ಬಹುತೇಕರು ಕೊವಿಡ್ ಟೆಸ್ಟ್ಗೆ ಒಳಪಟ್ಟಿಲ್ಲ. ಇನ್ನು ಸತ್ತವರೆಲ್ಲರು ಯಾವುದೇ ರೋಗಗಳಿಂದ ಬಳಲುತ್ತಿರಲಿಲ್ಲ. ಆದ್ರೆ ಕೊವಿಡ್ ಲಕ್ಷಣಗಳು ಕಂಡು ಬಂದ ಎರಡೇ ದಿನದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.

ಇನ್ನು, ಕೊರೊನಾ ಎರಡನೇ ಅಲೆ ಆರಂಭದ ನಂತರವೇ ಗ್ರಾಮದಲ್ಲಿ ಹಿಂದೆಂದು ನೋಡದ ರೀತಿಯಲ್ಲಿ ಜನ ಜೀವ ಕಳೆದುಕೊಳ್ಳುತ್ತಿದ್ದಾರೆ. ಇದಕ್ಕೆ ಪ್ರಮುಖ ಕಾರಣವೇ ಗ್ರಾಮಸ್ಥರ ನಿರ್ಲಕ್ಷ್ಯವಾಗಿದೆ. ಯಾಕಂದ್ರೆ ಕೊರೊನಾ ಎರಡನೇ ಅಲೆ ವೇಗವಾಗಿ ಹರಡುತ್ತಿದ್ರೂ ಗ್ರಾಮಸ್ಥರು ಟೆಸ್ಟ್ ಮಾಡಿಸಿಕೊಳ್ತಿಲ್ಲ. ಮಾಸ್ಕ್ ಬಳಸುತ್ತಿಲ್ಲ. ದೈಹಿಕ ಅಂತರವನ್ನೂ ಕಾಪಾಡಿಕೊಳ್ತಿಲ್ಲ. ಇದೆ ಕಾರಣದಿಂದ ಗ್ರಾಮದಲ್ಲಿ ವ್ಯಾಪಕವಾಗಿ ಕೊರೊನಾ ಹರಡುತ್ತಿದೆ.

ಹೀಗಿದ್ರೂ ಗ್ರಾಮಸ್ಥರು ಮೈ ಮರೆತು ಓಡಾಡುತ್ತಿದ್ದಾರೆ. ಬೆಳಗ್ಗೆ 10 ಗಂಟೆ ನಂತರವೂ ಗ್ರಾಮದಲ್ಲಿ ಅಂಗಡಿಗಳು ಓಪನ್ ಆಗಿರುತ್ತವೆ. ಇಷ್ಟೆಲ್ಲಾ ನಿರ್ಲಕ್ಷ್ಯ ಆಗುತ್ತಿದ್ರೂ ಆರೋಗ್ಯ ಇಲಾಖೆ ಅಧಿಕಾರಿಗಳು ಸಹ ಗ್ರಾಮಕ್ಕೆ ಎಂಟ್ರಿ ಕೊಟ್ಟು ಮನೆ ಮನೆಗೆ ಹೋಗಿ ಟೆಸ್ಟಿಂಗ್ ಮಾಡ್ತಿಲ್ಲ. ಅಧಿಕಾರಿಗಳು ಕೂಡಾ ನಿದ್ದಿಗೆ ಜಾರಿದ್ದಾರೆ.

ಸದ್ಯ, ಕಿಲ್ಲರ್ ಕೊರೊನಾ ರುದ್ರ ನರ್ತನ ಮಾಡ್ತಿದ್ರೂ ಹತ್ತಿಕುಣಿ ಗ್ರಾಮಸ್ಥರು ಕೇರ್ ಮಾಡ್ತಿಲ್ಲ. ಅಧಿಕಾರಿಗಳು ಕೂಡ ತಲೆಕೆಡಿಸಿಕೊಳ್ಳದೆ, ಕೊರೊನಾ ಕಟ್ಟಿ ಹಾಕುವ ಕೆಲಸ ಮಾಡದೆ, ಬೇಜವಾಬ್ದಾರಿ ಮೆರೀತಿದ್ದಾರೆ. ಇದ್ರಿಂದ ದೊಡ್ಡ ಮಟ್ಟದಲ್ಲಿ ದುರಂತ ಸಂಭವಿಸಿದ್ರೂ ಅಚ್ಚರಿಪಡುವಂತಿಲ್ಲ.

ಇದನ್ನೂ ಓದಿ: ಕೊವಿಡ್ ಭಯ; ಕೊರೊನಾ ಸೋಂಕಿತ ಶಿಕ್ಷಕ ಕಾವೇರಿ ನದಿಗೆ ಹಾರಿ ಆತ್ಮಹತ್ಯೆ