AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊವಿಡ್ ಭಯ; ಕೊರೊನಾ ಸೋಂಕಿತ ಶಿಕ್ಷಕ ಕಾವೇರಿ ನದಿಗೆ ಹಾರಿ ಆತ್ಮಹತ್ಯೆ

ತೀವ್ರ ಆಘಾತದಿಂದ ಬಿಕ್ಕಿಬಿಕ್ಕಿ ಅತ್ತಿದ್ದ ಶಿಕ್ಷಕ ಲೋಕೇಶ್​ಗೆ, ಹೋಮ್​ಕ್ವಾರಂಟೈನ್ ಆಗಿರಿ ಔಷಧ ಕೊಡುತ್ತೇವೆ ಅಂದಿದ್ದರೂ ಸಮಾಧಾನಗೊಂಡಿರಲಿಲ್ಲ. ಜಿಲ್ಲಾಸ್ಪತ್ರೆಯಿಂದ ಕರೆಮಾಡಿ ಶಿಕ್ಷಕ ಲೋಕೇಶ್​ಗೆ ಹೇಳಿದ್ದರು.

ಕೊವಿಡ್ ಭಯ; ಕೊರೊನಾ ಸೋಂಕಿತ ಶಿಕ್ಷಕ ಕಾವೇರಿ ನದಿಗೆ ಹಾರಿ ಆತ್ಮಹತ್ಯೆ
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on:Aug 23, 2021 | 12:27 PM

Share

ಮೈಸೂರು: ಕೊರೊನಾ ಸೋಂಕಿತ ಶಿಕ್ಷಕ ಕಾವೇರಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಕೆ.ಆರ್. ನಗರದ ಕೋಗಿಲೂರು ಸಮೀಪ ನಡೆದಿದೆ. ಶಿಕ್ಷಕ ಲೋಕೇಶ್(35) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. 2 ದಿನಗಳಿಂದ ಶಿಕ್ಷಕ ಲೋಕೇಶ್​ಗೆ ತಲೆ ನೋವು ಉಂಟಾಗಿತ್ತು. ಕೆ.ಆರ್. ನಗರ ಆಸ್ಪತ್ರೆಯಲ್ಲಿ ಕೊವಿಡ್ ಟೆಸ್ಟ್ ಮಾಡಿಸಿದ್ದರು. ಕೊವಿಡ್​ ಪಾಸಿಟಿವ್ ಬರುತ್ತಿದ್ದಂತೆ ಮಾನಸಿಕವಾಗಿ ಆಘಾತಕ್ಕೆ ಒಳಗಾಗಿದ್ದರು.

ತೀವ್ರ ಆಘಾತದಿಂದ ಬಿಕ್ಕಿಬಿಕ್ಕಿ ಅತ್ತಿದ್ದ ಶಿಕ್ಷಕ ಲೋಕೇಶ್​ಗೆ, ಹೋಮ್​ಕ್ವಾರಂಟೈನ್ ಆಗಿರಿ ಔಷಧ ಕೊಡುತ್ತೇವೆ ಅಂದಿದ್ದರೂ ಸಮಾಧಾನಗೊಂಡಿರಲಿಲ್ಲ. ಜಿಲ್ಲಾಸ್ಪತ್ರೆಯಿಂದ ಕರೆಮಾಡಿ ಶಿಕ್ಷಕ ಲೋಕೇಶ್​ಗೆ ಹೇಳಿದ್ದರು. ಸಮಾಧಾನಗೊಳ್ಳದ ಶಿಕ್ಷಕ ಲೋಕೇಶ್ ಪತ್ನಿ ಮನೆಗೆ ತೆರಳಿದ್ದರು. ಮನೆ ಮುಂದೆ ಬೈಕ್ ನಿಲ್ಲಿಸಿ, ಮೊಬೈಲ್​ ಬಿಟ್ಟು ತೆರಳಿದ್ದ ಶಿಕ್ಷಕ ನಾಪತ್ತೆಯಾಗಿಬಿಟ್ಟಿದ್ದರು. ಇಂದು ಕಾವೇರಿ ನದಿಯಲ್ಲಿ ಶಿಕ್ಷಕ ಕೆ.ಎಸ್. ಲೋಕೇಶ್​ ಶವ ಪತ್ತೆಯಾಗಿದೆ. ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ಕೇರಳಾಪುರ ಗ್ರಾಮದಲ್ಲಿ ಶವ ಪತ್ತೆಯಾಗಿದೆ. ಶಿಕ್ಷಕ ಲೋಕೇಶ್​ಗೆ ಕಳೆದ ವರ್ಷವಷ್ಟೇ ವಿವಾಹವಾಗಿತ್ತು ಎಂದು ತಿಳಿದುಬಂದಿದೆ.

ಕರ್ನಾಟಕ ಕೊರೊನಾ ವರದಿ ಕರ್ನಾಟಕ ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 31,531 ಜನರಿಗೆ ಕೊವಿಡ್ ಸೋಂಕು ಪತ್ತೆಯಾಗಿದೆ. 403 ಜನರು ನಿಧನರಾಗಿದ್ದಾರೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಇದೇ ಅವಧಿಯಲ್ಲಿ 8,344 ಜನರಿಗೆ ಸೋಂಕು ಪತ್ತೆಯಾಗಿದ್ದು ಗಮನಾರ್ಹ ಪ್ರಮಾಣದಲ್ಲಿ ಇಳಿಕೆಯಾಗಿದೆ. ಆದರೆ ಬೆಂಗಳೂರು ಒಂದರಲ್ಲೇ 143 ಜನರು ಕೊವಿಡ್​ನಿಂದ  ನಿಧನರಾಗಿದ್ದಾರೆ. ಇಂದು ಮೃತಪಟ್ಟವರನ್ನೂ ಸೇರಿಸಿ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 22,03,462ಕ್ಕೆ ಏರಿಕೆಯಾಗಿದ್ದು, ಸೋಂಕಿತರ ಪೈಕಿ 15,81,457 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಕೊವಿಡ್​ನಿಂದ ಮೃತಪಟ್ಟವರ ಸಂಖ್ಯೆ 21,837 ಕ್ಕೆ ಏರಿಕೆಯಾಗಿದೆ.

ಅತ್ಯಂತ ಪ್ರಮುಖವಾಗಿ ಉಲ್ಲೇಖಿಸಲೇಬೇಕಾದ ಸಂಗತಿಯೆಂದರೆ ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 36,475 ಜನರು ಕೊವಿಡ್ ಮುಕ್ತರಾಗಿ ಆಸ್ಪತ್ರೆಗಳಿಂದ ಮನೆಗೆ ಹಿಂತಿರುಗಿದ್ದಾರೆ.

ಯಾವ ಜಿಲ್ಲೆಯಲ್ಲಿ ಎಷ್ಟು? ಬಾಗಲಕೋಟೆ 431, ಬಳ್ಳಾರಿ 1,729, ಬೆಳಗಾವಿ 1,762, ಬೆಂಗಳೂರು ಗ್ರಾಮಾಂತರ 1,082, ಬೆಂಗಳೂರು ನಗರ 8,344, ಬೀದರ್ 129, ಚಾಮರಾಜನಗರ 440, ಚಿಕ್ಕಬಳ್ಳಾಪುರ 55, ಚಿಕ್ಕಮಗಳೂರು 963, ಚಿತ್ರದುರ್ಗ 640, ದಕ್ಷಿಣ ಕನ್ನಡ 957, ದಾವಣಗೆರೆ 1155, ಧಾರವಾಡ 937, ಗದಗ 453, ಹಾಸನ 1,182, ಹಾವೇರಿ 184, ಕಲಬುರಗಿ 645, ಕೊಡಗು 191, ಕೋಲಾರ 569, ಕೊಪ್ಪಳ 617, ಮಂಡ್ಯ 709, ಮೈಸೂರು 1,811, ರಾಯಚೂರು 464, ರಾಮನಗರ 403, ಶಿವಮೊಗ್ಗ 643, ತುಮಕೂರು 2,138, ಉಡುಪಿ 745, ಉತ್ತರ ಕನ್ನಡ 1,087, ವಿಜಯಪುರ 330, ಯಾದಗಿರಿ ಜಿಲ್ಲೆಯಲ್ಲಿ 233 ಕೊರೊನಾ ಪ್ರಕರಣ ಪತ್ತೆಯಾಗಿದೆ.

ಇದನ್ನೂ ಓದಿ: ತಂದೆ ಕೊರೊನಾಗೆ ಬಲಿ, ತಾಯಿಗೆ ಮತ್ತೊಂದು ಕಡೆ ಚಿಕಿತ್ಸೆ; ಆಸ್ಪತ್ರೆ ಸಿಬ್ಬಂದಿಗಳಿಂದ ಹುಟ್ಟುಹಬ್ಬ ಆಚರಿಸಿಕೊಂಡ ಬಾಲಕ

ರಾಜ್ಯದ ಹಲವು ಜಿಲ್ಲೆಗಳಲ್ಲಿ ಕೊರೊನಾ ಸ್ಫೋಟ; ಜಿಲ್ಲಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ

Published On - 9:18 pm, Sun, 16 May 21