ಹಾಸನದಲ್ಲಿ ಮೀನು ಹಿಡಿಯಲು ಕೆರೆಗೆ ನುಗ್ಗಿದ ಸಾವಿರಾರು ಜನ; ವಿಡಿಯೋ ವೈರಲ್

| Updated By: sandhya thejappa

Updated on: Jun 23, 2021 | 2:14 PM

ಪಕ್ಕದ ಜಿಲ್ಲೆಯ ಮೈಸೂರಿನ ಹುಣಸೂರು ಹಾಗು ಕೆ.ಆರ್.ನಗರ ತಾಲೂಕಿನಿಂದಲೂ ಕೂಡ ಅಪಾರ ಸಂಖ್ಯೆಯಲ್ಲಿ ಜನರು ಬಂದಿದ್ದಾರೆ. ಬಂದವರೇ ಮೀನು ಹಿಡಿಯಲು ಕೆರೆಗೆ ಇಳಿದಿದ್ದಾರೆ. ಜನರು ಸಾವಿರಾರು ಸಂಖ್ಯೆಯಲ್ಲಿ ಮೀನು ಹಿಡಿಯುರುವ ವಿಡಿಯೋ ವೈರಲ್ ಆಗಿದೆ.

ಹಾಸನದಲ್ಲಿ ಮೀನು ಹಿಡಿಯಲು ಕೆರೆಗೆ ನುಗ್ಗಿದ ಸಾವಿರಾರು ಜನ; ವಿಡಿಯೋ ವೈರಲ್
ಮೀನು ಹಿಡಿಯಲು ಕೆರೆಗೆ ನುಗ್ಗಿದ ಜನ
Follow us on

ಹಾಸನ: ಜಿಲ್ಲೆಯಲ್ಲಿ ಕೊರೊನಾ ಆರ್ಭಟ ಜೋರಾಗಿದೆ. ಇಡೀ ರಾಜ್ಯದಲ್ಲಿ ಹೆಚ್ಚು ಪಾಸಿಟಿವಿಟಿ ದರ ಹಾಸನದಲ್ಲಿದೆ. ಇನ್ನೂ ಕೂಡ ಜಿಲ್ಲೆಯಲ್ಲಿ ಕಠಿಣ ನಿಯಮ ಜಾರಿಯಲ್ಲಿದೆ. ಆದರೆ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಸೋಮನಹಳ್ಳಿಯಲ್ಲಿ ಜನರು ಕೊರೊನಾ ಭಯವಿಲ್ಲದೆ ಬೇಜವಾಬ್ದಾರಿಯಾಗಿ ವರ್ತಿಸಿದ್ದಾರೆ. ಸಾವಿರಾರು ಜನರು ಮೀನು ಹಿಡಿಯಲು ಕೆರೆಗೆ ನುಗ್ಗಿದ್ದಾರೆ. ಕೈಯಲ್ಲಿ ಮೀನು ಹಿಡಿಯುವ ಕೂಳಿ ಹಿಡಿದು ಏಕಾ ಏಕಿ ಕೆರೆಗಿಳಿದಿರುವ ಸಾವಿರಾರು ಜನರು ಮಾಸ್ಕ್ ಇಲ್ಲದೆ, ಸಾಮಾಜಿಕ ಅಂತರವನ್ನೂ ಮರೆತು ಓಡಾಡಿದ್ದಾರೆ. ಪಕ್ಕದ ಜಿಲ್ಲೆಯ ಮೈಸೂರಿನ ಹುಣಸೂರು ಹಾಗು ಕೆ.ಆರ್.ನಗರ ತಾಲೂಕಿನಿಂದಲೂ ಕೂಡ ಅಪಾರ ಸಂಖ್ಯೆಯಲ್ಲಿ ಜನರು ಬಂದಿದ್ದಾರೆ. ಬಂದವರೇ ಮೀನು ಹಿಡಿಯಲು ಕೆರೆಗೆ ಇಳಿದಿದ್ದಾರೆ. ಜನರು ಸಾವಿರಾರು ಸಂಖ್ಯೆಯಲ್ಲಿ ಮೀನು ಹಿಡಿಯುರುವ ವಿಡಿಯೋ ವೈರಲ್ ಆಗಿದೆ.

ಗ್ರಾಮದ ರಾಮಣ್ಣ ಎಂಬುವರು ಮೀನುಗಾರಿಕೆ ಇಲಾಖೆಯಿಂದ ಕೆರೆಯನ್ನ 1.3 ಲಕ್ಷಕ್ಕೆ ಭೋಗ್ಯಕ್ಕೆ ಪಡೆದಿದ್ದರು. ನಂತರ ಅದನ್ನ ಮಂಜಪ್ಪ ಎಂಬುವವರಿಗೆ ಉಪಗುತ್ತಿಗೆ ನೀಡಿದ್ದರು. ಜೂನ್ 21 ಕ್ಕೆ ಲಾಕ್​ಡೌನ್​ ಮುಗಿಯುತ್ತೆ ಅಂತ ಮೊದಲೇ ಬಾವಿಸಿ ಜೂನ್ 22 ಕ್ಕೆ ಮೀನು ಹಿಡಿಯುವ ದಿನ ನಿಗದಿ ಮಾಡಿ ಸುತ್ತಮುತ್ತಲ ಹಳ್ಳಿಗಳಲ್ಲಿ ಪ್ರಚಾರ ಮಾಡಲಾಗಿತ್ತು. ಹಾಗಾಗಿಯೇ ಜನರು ನಿನ್ನೆ ದೊಡ್ಡ ಸಂಖ್ಯೆಯಲ್ಲಿ ಬಂದಿದ್ದಾರೆ. ಇಬ್ಬರಿಗೆ 200 ರೂ. ನಿಗದಿ ಮಾಡಿ ಮೀನು ಹಿಡಿಯಲು ಅವಕಾಶ ನೀಡಲಾಗಿತ್ತು.

ಮಾಹಿತಿ ಪಡೆದ ಸ್ಥಳೀಯ ಹಳ್ಳಿ ಮೈಸೂರು ಪೊಲೀಸರು ಸ್ಥಳಕ್ಕೆ ಬಂದು ಮೀನು ಹಿಡಿಯುವುದನ್ನು ತಡೆದಿದ್ದು, ಇದಕ್ಕೆ ಅವಕಾಶ ನೀಡಿದ ರಾಮಣ್ಣ ಹಾಗು ಮಂಜಪ್ಪ ವಿರುದ್ಧ ಕೇಸ್ ದಾಖಲಿಸಿದ್ದಾರೆ. ಮದುವೆಗೆ ನಿಷೇಧ ಹೇರುತ್ತಾರೆ ಜನರು ಓಡಾಡೋಕೆ ಬಿಡಲ್ಲ. ಇದಕ್ಕೆಲ್ಲಾ ಹೇಗೆ ಬಿಡುತ್ತಾರೆ ಅಂತ ಸ್ಥಳೀಯರು ಅಸಮಧಾನ ಹೊರ ಹಾಕಿದ್ದಾರೆ.

ಮೀನು ಹಿಡಿಯಲು ಮುಗಿಬಿದ್ದ ಜನ

ಇದನ್ನೂ ಓದಿ

ದೇವಿ ಕಣ್ಬಿಟ್ಟ ದೃಶ್ಯ ನೋಡಲು ಮುಗಿಬಿದ್ದ ಬೆಳಗಾವಿಯ ಜನ; ಮೂರ್ತಿಯ ಮುಂದೆ ನಿಂತು ಭಕ್ತಿಪೂರ್ವಕ ನಮನ

ಕೊರೊನಾವೈರಸ್ ಡೆಲ್ಟಾ ಪ್ಲಸ್ ರೂಪಾಂತರಿ ಪ್ರಕರಣಗಳ ಸಂಖ್ಯೆ 40ಕ್ಕೆ ಏರಿಕೆ: ಕೇಂದ್ರ ಸರ್ಕಾರ

(Thousands of people went to lake to fish in violation of Corona rule and its video viral in social media)