ಒಂದೇ ತಿಂಗಳಲ್ಲಿ ಒಂದೇ ಕುಟುಂಬದ ಮೂವರನ್ನು ಬಲಿ ಪಡೆದ ಕೊರೊನಾ

|

Updated on: May 27, 2021 | 4:57 PM

ರಾಜಾಜಿನಗರದಲ್ಲಿ ವಾಸವಿದ್ದ 35 ವರ್ಷದ ಮಂಜು ಕೊರೊನಾ ಸೋಂಕು ತಗುಲಿ ಮೃತಪಟ್ಟಿದ್ದಾರೆ. ಆಸ್ಪತ್ರೆಯಲ್ಲಿ ಬೆಡ್ ಸಿಗದೆ ಆನೆಕಲ್​ನಲ್ಲಿದ್ದ ತಮ್ಮ ಮನೆಯಲ್ಲಿ ಐಸೋಲೇಷನ್ ಆಗಿದ್ದರು. ಉಸಿರಾಟ ಸಮಸ್ಯೆ ಉಲ್ಬಣಗೊಂಡು ನಿನ್ನೆ ಸಂಜೆ 5.30 ಕ್ಕೆ ಸಾವನ್ನಪ್ಪಿದ್ದಾರೆ.

ಒಂದೇ ತಿಂಗಳಲ್ಲಿ ಒಂದೇ ಕುಟುಂಬದ ಮೂವರನ್ನು ಬಲಿ ಪಡೆದ ಕೊರೊನಾ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ಮಹಾಮಾರಿ ಕೊರೊನಾ ಒಂದೇ ತಿಂಗಳಲ್ಲಿ ಒಂದೇ ಕುಟುಂಬದ ಮೂವರನ್ನು ಬಲಿ ಪಡೆದಿದೆ. ಅನಾರೋಗ್ಯದಿಂದ ಬಳಲುತ್ತಿದ್ದ 62 ವರ್ಷದ ವೃದ್ಧ ಮದನ್ ಸಿಂಗ್ ಕೊರೊನಾಗೆ ಬಲಿಯಾಗಿದ್ದಾರೆ. ಕಳೆದ ವಾರ ಸುಲ್ತಾನ್ ಪಾಳ್ಯದ ಮೆಡಾಕ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಮಕ್ಕಳಿಲ್ಲದ ಕಾರಣ ಮದನ್ ಸಿಂಗ್ ಸಹೋದರನ ಮಗನಿಂದ ಅಂತ್ಯಸಂಸ್ಕಾರ ನೆರವೇರಿತು. ಕಳೆದ ಹದಿನೈದು ದಿನಗಳ ಹಿಂದೆ ಮನದ್ ಸಿಂಗ್ ಅವರ ದೊಡ್ಡ ಅಕ್ಕ ಮತ್ತು ಚಿಕ್ಕ ತಮ್ಮ ಕೊರೊನಾಗೆ ತುತ್ತಾಗಿದ್ದರು. ದೊಡ್ಡ ಆಸ್ಪತ್ರೆಗೆ ಸೇರಿಸಿದರೆ ನನ್ನ ಸ್ನೇಹಿತ ಬದುಕುಳಿಯುತ್ತಿದ್ದ ಎಂದು ಸ್ನೇಹಿತ ಕಣ್ಣೀರಾಕಿದ್ದಾರೆ.

ಪ್ರಾಣ ಚೆಲ್ಲಿದ ಯುವಕ
ರಾಜಾಜಿನಗರದಲ್ಲಿ ವಾಸವಿದ್ದ 35 ವರ್ಷದ ಮಂಜು ಕೊರೊನಾ ಸೋಂಕು ತಗುಲಿ ಮೃತಪಟ್ಟಿದ್ದಾರೆ. ಆಸ್ಪತ್ರೆಯಲ್ಲಿ ಬೆಡ್ ಸಿಗದೆ ಆನೆಕಲ್​ನಲ್ಲಿದ್ದ ತಮ್ಮ ಮನೆಯಲ್ಲಿ ಐಸೋಲೇಷನ್ ಆಗಿದ್ದರು. ಉಸಿರಾಟ ಸಮಸ್ಯೆ ಉಲ್ಬಣಗೊಂಡು ನಿನ್ನೆ ಸಂಜೆ 5.30 ಕ್ಕೆ ಸಾವನ್ನಪ್ಪಿದ್ದಾರೆ.

ಎರಡೇ ದಿನಕ್ಕೆ ಸೋಂಕಿತ ಸಾವು
ಆಸ್ಪತ್ರೆಗೆ ದಾಖಲಾಗಿ ಎರಡೇ ದಿನಕ್ಕೆ ಸೋಂಕಿತ ಸಾವನ್ನಪ್ಪಿದ್ದಾರೆ. ಮೂರು ದಿನದ ಹಿಂದೆ 55 ವರ್ಷದ ತಿಮ್ಮೇಗೌಡರಿಗೆ ಕೊರೊನಾ ಪಾಸಿಟಿವ್ ಆಗಿತ್ತು. ತಕ್ಷಣ ಸೆಂಟ್ ಜಾನ್ಸ್ ಆಸ್ಪತ್ರೆಗೆ ದಾಖಲು ಮಾಡಲಾಯ್ತು. ಎಚ್ ಎಸ್ ಆರ್ ಲೇಔಟ್ ನಿವಾಸಿಯಾಗಿದ್ದ ತಿಮ್ಮೇಗೌಡ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

20 ವರ್ಷದ ಯುವತಿ ಬಲಿ
ಹುಟ್ಟಿದಾಗಿನಿಂದ ಮಾತು ಬಾರದ ಯುವತಿಯನ್ನು ಕೊರೊನಾ ಬಲಿ ಪಡೆದಿದೆ. ಮಹೇಶ್ವರಿ ಎಂಬ 20 ವರ್ಷದ ಯುವತಿಗೆ ಹುಟ್ಟಿದಾಗಿನಿಂದ ಮಾತು ಬರುತ್ತಿರಲಿಲ್ಲ. ಜ್ವರ ಬಂದಿದ್ದರಿಂದ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಮನೆಗೆ ವಾಪಸ್ ಕರೆತರಲಾಗಿತ್ತು. ಮರು ದಿನ ಉಸಿರಾಟ ಸಮಸ್ಯೆ ಉಲ್ಬಣಗೊಂಡು ಆಸ್ಪತ್ರೆಗೆ ದಾಖಲಿಸಲಾಗಿತ್ತು. 15 ದಿನದಿಂದ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ನಿನ್ನೆ ರಾತ್ರಿ 10 ಗಂಟೆಗೆ ಸೀರಿಯಸ್ ಇದೆ ಎಂದು ಕುಟುಂಬಸ್ಥರಿಗೆ ಕರೆ ಮಾಡಿದ್ದಾರೆ. ತಕ್ಷಣ ಆಸ್ಪತ್ರೆಗೆ ಯುವತಿಯ ಪೋಷಕರು ಬಂದಿದ್ದರು. ಆದರೆ ಯುವತಿ ಪೋಷಕರ ಕಣ್ಣೆದುರೆ ಕೊನೆಯುಸಿರೆಳೆದಿದ್ದಾಳೆ.

ತಂದೆ ತಾಯಿ ಕಳೆದುಕೊಂಡ ಮಗ
ಒಂದು ವಾರದ ಅಂತರದಲ್ಲೇ ಕೊರೊನಾ ಮಹಾಮಾರಿಗೆ ತಂದೆ-ತಾಯಿ ಕಳೆದುಕೊಂಡ ಮಗ ಕಣ್ಣೀರು ಹಾಕುತ್ತಿದ್ದಾರೆ. ಅಪ್ಪ-ಅಮ್ಮ ಮತ್ತು ಮಗನಿಗೆ ಕೊರೊನಾ ಸೋಂಕಿರುವ ದೃಢಪಟ್ಟಿತ್ತು. ಇದೇ 23 ರಂದು ತಂದೆ ಶಂಕರ ನಾರಾಯಣ ಸಾವನ್ನಪ್ಪಿದ್ದರು. ಈ ವಿಷಯ ತಾಯಿಗೆ ಹೇಳಿರಲಿಲ್ಲ. ತಾಯಿ ಗುಣಮುಖರಾದ ಬಳಿಕ ವಿಷಯ ಹೇಳೋಣ ಅಂತ ಇದ್ದ ಮಗ ಇದೀಗ ತಾಯಿಯನ್ನು ಕಳೆದುಕೊಂಡು ಅನಾಥರಾಗಿದ್ದಾರೆ.

ಇದನ್ನೂ ಓದಿ
ಬ್ಲ್ಯಾಕ್ ಫಂಗಸ್ ನಿರ್ವಹಣೆ: ಕೋವಿಡ್ ಸೋಂಕಿನಿಂದ ಗುಣಮುಖರಾದವರಿಗೆ ಚಿಕಿತ್ಸೆ ನಂತರದ ಆರೈಕೆಯನ್ನು ಬದಲಾಯಿಸಲು ಸರ್ಕಾರ ನಿರ್ಧಾರ

ದಕ್ಷಿಣ ಕನ್ನಡ- ಉಡುಪಿ ಜನರಿಗೆ ಸಿಹಿ ಸುದ್ದಿ: ಇನ್ನು ಮುಂದೆ ರೇಶನ್​ ಮೂಲಕ ಕೆಂಪು ಕುಚ್ಚಲಕ್ಕಿ ಪೂರೈಕೆ – ಉಸ್ತುವಾರಿ ಸಚಿವ ಪೂಜಾರಿ

(Three people died due to coronavirus in bengaluru)

Published On - 4:55 pm, Thu, 27 May 21