Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುದ್ದಿ ವಿಶ್ಲೇಷಣೆ: ಮತ್ತೆ ಕಾಂಗ್ರೆಸ್​ನತ್ತ ಮುಖ ಮಾಡಿರುವ ಕೆಲ ಮಂತ್ರಿಗಳಿಗೆ ಬಿಜೆಪಿಯ ಮೊಸರಲ್ಲಿ ಕಲ್ಲು ಕಂಡಿದೆ

ಹೊರಗಿನಿಂದ ಬಿಜೆಪಿಗೆ ಬಂದು ಮಂತ್ರಿಗಳಾದವರು, ಬಿ.ಎಸ್​. ಯಡಿಯೂರಪ್ಪ ಅವರನ್ನು ಇಳಿಸಲು ಪ್ರಯತ್ನ ಮಾಡುತ್ತಿರುವುದು ಹೊಸದಲ್ಲ. ಅದೇ ರೀತಿ, ಮೂಲ ಬಿಜೆಪಿಗರಲ್ಲಿಯೂ ಕೆಲವರು ಈ ಕೆಲಸದಲ್ಲಿ ನಿರತರಾಗಿದ್ದಾರೆ ಎನ್ನುವುದು ಈಗ ಗುಟ್ಟಾಗಿ ಉಳಿದಿಲ್ಲ.

ಸುದ್ದಿ ವಿಶ್ಲೇಷಣೆ: ಮತ್ತೆ ಕಾಂಗ್ರೆಸ್​ನತ್ತ ಮುಖ ಮಾಡಿರುವ ಕೆಲ ಮಂತ್ರಿಗಳಿಗೆ ಬಿಜೆಪಿಯ ಮೊಸರಲ್ಲಿ ಕಲ್ಲು ಕಂಡಿದೆ
ಬಿ.ಎಸ್​.ಯಡಿಯೂರಪ್ಪ
Follow us
ಡಾ. ಭಾಸ್ಕರ ಹೆಗಡೆ
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:May 27, 2021 | 7:31 PM

ಮಾಧ್ಯಮಗೋಷ್ಠಿ ಉದ್ದೇಶಿಸಿ ಇಂದು ಮಾತನಾಡಿದ ಮಾಜಿ ಮುಖ್ಯಮಂತ್ರಿ, ಸಿದ್ದರಾಮಯ್ಯ ಆಡಳಿತ ಪಕ್ಷದ ಒಂದು ಗೌಪ್ಯ ವಿಚಾರವನ್ನು ಹೊರಗೆಡಹಿದ್ದಾರೆ. ಅವರ ಪ್ರಕಾರ, ಮಾಜಿ ಮಂತ್ರಿ ರಮೇಶ್ ಜಾರಕಿಹೊಳಿ ಗೃಹ ಮಂತ್ರಿ ಬಸವರಾಜ್ ಬೊಮ್ಮಾಯಿ ಮತ್ತು ಕೇಂದ್ರ ಸಂಸದೀಯ ಸಚಿವ ಪ್ರಲ್ಹಾದ್ ಜೋಶಿ ಅವರನ್ನು ಭೇಟಿ ಮಾಡಿದ್ದಾರೆ. ಈ ಮಾಹಿತಿ ಸಿದ್ದರಾಮಯ್ಯನವರಿಗೆ ಹೇಗೆ ಸಿಕ್ಕಿತೋ ಗೊತ್ತಿಲ್ಲ? ಆದರೆ, ಭಾರತೀಯ ಜನತಾ ಪಕ್ಷದ ಮೂಲಗಳ ಪ್ರಕಾರ, ರಮೇಶ್ ಜಾರಕಿಹೊಳಿ ಕೇಂದ್ರ ಸಂಸದೀಯ ಸಚಿವ ಪ್ರಲ್ಹಾದ್ ಜೋಶಿ ಅವರನ್ನು ಹುಬ್ಬಳ್ಳಿಯಲ್ಲಿ ಭೇಟಿ ಮಾಡಿದಂತಿದೆ. ಈ ತಿಂಗಳ 11 ಅಥವಾ 12 ರಂದು, ಜಾರಕಿಹೊಳಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಮತ್ತು ನಗರಾಭಿವೃದ್ಧಿ ಸಚಿವ ಬಿ.ಎ. ಬಸವರಾಜ್ ಅವರ ಜೊತೆಗೂಡಿ ಜೋಷಿಯವರನ್ನು ಭೇಟಿ ಮಾಡಿದ್ದಾರೆಂದು ಪಕ್ಷದ ಮೂಲಗಳು ತಿಳಿಸಿವೆ.

ಭೇಟಿಯ ಉದ್ದೇಶ ಏನು? ರಮೇಶ್ ಜಾರಕಿಹೊಳಿ ಭೇಟಿಯ ಬಗ್ಗೆ ಮೂಲಗಳು ಹೀಗೆ ಹೇಳುತ್ತವೆ. ‘ಪ್ರಲ್ಹಾದ ಜೋಷಿ ಅವರನ್ನು ಭೇಟಿಯಾದ ರಮೇಶ್ ಜಾರಕಿಹೊಳಿ ತಮ್ಮ ಕೇಸಿನ ಬಗ್ಗೆ ಎಲ್ಲಾ ಮಾಹಿತಿ ನೀಡಿದರು. ತನ್ನನ್ನು ಈ ಕೇಸಿನಲ್ಲಿ ಫಿಕ್ಸ್ ಮಾಡಲಾಗಿದೆ. ಆದಷ್ಟು ಬೇಗ ತನಗೆ ನ್ಯಾಯ ದೊರಕುವಂತಾಗಬೇಕು. ನನಗೆ ಮಂತ್ರಿಮಂಡಲಕ್ಕೆ ವಾಪಸ್ ಬರಲು ಸಹಾಯ ಮಾಡಬೇಕು ಎಂದು ಕೇಳಿಕೊಂಡಿದ್ದಾರೆ. ಆದರೆ, ಜೋಷಿಯವರು ಈ ವಿಚಾರದಲ್ಲಿ ಯಾವ ಸಹಾಯ ಮಾಡಲು ತನ್ನಿಂದ ಆಗದು. ಯಾಕೆಂದರೆ, ಇದು ಈಗ ಪೊಲೀಸ್ ಮತ್ತು ನ್ಯಾಯಾಲಯದಲ್ಲಿರುವುದರಿಂದ ಸದ್ಯಕ್ಕೆ ತಾನು ಸಹಾಯ ಮಾಡಲಾಗದು ಎಂದು ಹೇಳಿದ್ದಾರೆ’ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಡಾ. ಸುಧಾಕರ್ ಮತ್ತು ಬಸವರಾಜ್ ಅಧಿಕೃತ ಪ್ರವಾಸಕ್ಕಾಗಿ ಧಾರವಾಡ ಮತ್ತು ಗದಗ ಜಿಲ್ಲೆಗೆ ಹೋದವರು. ಜೋಷಿ ಅವರನ್ನು ಭೇಟಿ ಮಾಡಿ ತಮ್ಮ ಗೋಳನ್ನು ತೋಡಿಕೊಂಡಿದ್ದಾರೆ. 17 ಜನ ನಾಯಕರು ಯಾರ್ಯಾರು ಹೊರಗಿನಿಂದ ಬಂದಿದ್ದಾರೋ ಅವರನ್ನು ಪಕ್ಷದ ಮೂಲ ನಿವಾಸಿಗಳು ಮೂಲೆಗುಂಪು ಮಾಡಿದ್ದಾರೆ. ತಮಗೆ ಮೊದಲಿನಂತೆ ಸ್ಥಾನ ಮಾನ ಸಿಕ್ಕುತ್ತಿಲ್ಲ, ಎಂದು ಹೇಳಿದ್ದಾರೆ. ಪ್ರಾಯಶಃ ಡಾ.ಸುಧಾಕರ್ ಅವರನ್ನು ಕೊವಿಡ್ ಕೆಲಸದಿಂದ ಪಕ್ಕಕ್ಕೆ ಸರಿಸಿದ್ದನ್ನು ಅವರಿಗೆ ಜೀರ್ಣೀಸಿಕೊಳ್ಳಲಾಗುತ್ತಿಲ್ಲ. ಈ ವಿಚಾರ ಕೇಂದ್ರದ ನಾಯಕರ ಗಮನಕ್ಕೆ ತನ್ನಿ ಮತ್ತು ತಮಗೆ ಸಹಾಯ ಮಾಡಿ ಎಂದು ಹೇಳಿದ್ದಾರೆ ಎಂದು ತಿಳಿದು ಬಂದಿದೆ. ಜೋಷಿಯವರು ಈ ಕುರಿತು ಪ್ರತಿಕ್ರಿಯಿಸಿ, ಪಕ್ಷದ ಕೇಂದ್ರ ನಾಯಕರ ಗಮನಕ್ಕೆ ತರುತ್ತೀನಿ ಎಂದು ಹೇಳಿದ್ದಾರೆ. ಆದರೆ ಇವರು ನಾಯಕತ್ವ ಬದಲಾವಣೆಗೆ ಹೋರಾಡುತ್ತಿರುವ ಕೆಲ ನಾಯಕರ ಜೊತೆ ಇವರು ಇದ್ದಾರೆ ಎಂದು ಹೇಳಲು ಯಾವ ಸಾಕ್ಷ್ಯ ಸಿಕ್ಕಿಲ್ಲ.

ಇಲ್ಲಿ ಇನ್ನೊಂದು ಅಂಶವನ್ನು ಗಮನಿಸಲೇ ಬೇಕು: ಹೊರಗಿನಿಂದ ಬಂದವರು ಮಾತ್ರ ಖಳನಾಯಕರಾಗಿದ್ದಾರೆ, ನಾಯಕತ್ವ ಬದಲಾವಣೆಗೆ ಹೋರಾಡುತ್ತಿದ್ದಾರೆ ಎಂದರೆ ತಪ್ಪಾಗುತ್ತದೆ. ಏಕೆಂದರೆ, ಬಿಜೆಪಿಯ ಅಂಗನವಾಡಿಯಿಂದ ಬಂದವರಲ್ಲಿ ಕೆಲವರು ಈ ಆಟಕ್ಕೆ ಇಳಿದಿದ್ದು ವಿಶೇಷ. ಬಿಜೆಪಿಯ ನಾಯಕರ ಗುದ್ದಾಟ ಈ 17 ಜನರನ್ನು ಹೊರಗಿಟ್ಟೇ ನಡೆಯುತ್ತಿದೆ ಎಂಬುದು ಗಮನಾರ್ಹ. ಆದ್ದರಿಂದ, ಹೊರಗಿನಿಂದ ಬಂದವರಲ್ಲಿ ಕೆಲವರು ಬಿಜೆಪಿಗೆ ಎಷ್ಟು ಕೆಟ್ಟ ಹೆಸರು ತರಲು ಪ್ರಯತ್ನಿಸುತ್ತಿದ್ದಾರೋ, ಅದೇ ರೀತಿ ಮೂಲ ಬಿಜೆಪಿಯವರು ಈ ಕೆಲಸದಲ್ಲಿ ಹಿಂದೆ ಬಿದ್ದಿಲ್ಲ ಎಂದು ಹೇಳಿದರೆ ತಪ್ಪಾಗಲಾರದು.

17 ಜನ ಒಟ್ಟಾಗಿದ್ದಾರಾ? ಕಾಂಗ್ರೆಸ್ಸಿನಿಂದ ಬಂದ 17 ಜನ ಬಹಳ ಬುದ್ಧಿವಂತಿಕೆಯಿಂದ ಆಟ ಆಡುತ್ತಿದ್ದರೆ ಅದು ಬಿಜೆಪಿಗೆ ಗೊತ್ತಾಗಲ್ಲ ಎಂದು ಅವರು ತಿಳಿದುಕೊಂಡಂತಿದೆ. ಇದು ಅವರು ಮಾಡುತ್ತಿರುವ ಮೊದಲ ತಪ್ಪು. 2010ರಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿ ಬಹಳ ದುರ್ಬಲವಾಗಿತ್ತು. ಈಗ ಹಾಗಿಲ್ಲ. ಬಿಜೆಪಿ ರಾಷ್ಟ್ರಮಟ್ಟದಲ್ಲಿ ಬಹಳ ಗಟ್ಟಿ ಇದೆ ಮತ್ತು ರಾಷ್ಟ್ರ ಮಟ್ಟದಲ್ಲಿ ಅಧಿಕಾರದಲ್ಲಿದೆ. ಇದೇ ಹೊತ್ತಿನಲ್ಲಿ ವಿರೋಧ ಪಕ್ಷ ಕಾಂಗ್ರೆಸ್​ಗೆ ಇನ್ನೂ ಅಡ್ರೆಸ್ ಸಿಕ್ಕಿಲ್ಲ. ಇಂಥ ಸಂದರ್ಭದಲ್ಲಿ, ರಾಜ್ಯ ಬಿಜೆಪಿ ಹೊರಗಿನಿಂದ ಬಂದವರ ಚಲನವಲನವನ್ನೂ ಗಮನಿಸುತ್ತಿದೆ. ಎರಡು ವರ್ಷದ ಹಿಂದೆ ಪಕ್ಷ ಸೇರಿರುವವರಲ್ಲಿ, ಕನಿಷ್ಠ 8-9 ಜನ ವಾಪಸ್ ಹೋಗಲು ತುದಿಗಾಲಲ್ಲಿ ನಿಂತಿದ್ದಾರೆ. ಇದರ ಗೂಡಾರ್ಥವೇನೇಂದರೆ ಉಳಿದ 6-7 ಜನ ಬಿಜೆಪಿಗೆ ಹೊಂದುಕೊಳ್ಳಲು ತಯಾರಾಗಿರಲೂಬಹುದು ಅಥವಾ ಅಧಿಕಾರದ ಅತಿ ಆಸೆ ಬಿಟ್ಟು ಕೊಟ್ಟ ಖಾತೆಯನ್ನು ನಿರ್ವಹಿಸುತ್ತ ಮುಂದೆ ಕಾಲ ಕೂಡಿ ಬಂದಾಗ ನೋಡೋಣ, ಬಿಜೆಪಿಯಲ್ಲಿರಬೇಕೋ ಅಥವಾ ಇಲ್ಲಿಂದ ಕಾಲು ಕೀಳಬೇಕೋ ಎಂಬ ವಿಚಾರ ಮಾಡಿದಬಹುದು. ಇದೇ ಕಾರಣಕ್ಕಾಗಿ ಅವರು ಉಳಿದವರ ಜೊತೆ ಸೇರುತ್ತಿಲ್ಲ ಎಂಬು ಮೇಲ್ನೋಟಕ್ಕೆ ಕಾಣುತ್ತಿದೆ.

ಯೋಗೀಶ್ವರ ಆಟ, ಉಳಿದವರಿಗೆ ಪಾಠ? ಒಂದು ಸಮಯ ಇತ್ತು: ಯೋಗೀಶ್ವರ ಯಾವ ಪಕ್ಷದಿಂದ ನಿಂತರೂ ಚನ್ನಪಟ್ಟಣದಿಂದ ಗೆದ್ದು ಬರುತ್ತಿದ್ದರು. ಕಾಲ ಬದಲಾಗಿದೆ. ಡಿ.ಕೆ. ಶಿವಕುಮಾರ್ ಮತ್ತು ಎಚ್.ಡಿ. ಕುಮಾರಸ್ವಾಮಿ ಕೈ ಜೋಡಿಸಿ ಯೋಗೀಶ್ವರ ಅವರನ್ನು ಯಶಸ್ವಿಯಾಗಿ ಪಕ್ಕಕ್ಕೆ ಸರಿಸಿ ಚನ್ನಪಟ್ಟಣದಿಂದ ಹೊರಗೆ ಕಳಿಸಿ ಬಿಟ್ಟಿದ್ದಾರೆ. 2013ರ ವಿಧಾನಸಭಾ ಚುನಾವಣೆಗೆ ಹೋಗುವ ಸಂದರ್ಭ. ಅದಾಗಲೇ ಪಕ್ಷ ಹೋಳಾಗಿತ್ತು. ಪಕ್ಷ ಸೋಲುವುದು ನಿಶ್ಚಿತವಾಗಿತ್ತು. ಆಗ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಅಂದಿನ ಅರಣ್ಯ ಮಂತ್ರಿ ಯೋಗೀಶ್ವರ್ ಅವರಿಗೆ ಪರಿಪರಿಯಾಗಿ ಹೇಳುತ್ತಾರೆ: ನಿಮಗೆ ಸಂಪುಟ ದರ್ಜೆ ಸಚಿವ ಸ್ಥಾನ ಕೊಟ್ಟಿದೆ ಈ ಪಕ್ಷ, ಇಲ್ಲೇ ಇರಿ. ದಕ್ಷಿಣ ಕರ್ನಾಟಕದಲ್ಲಿ ಒಳ್ಳೆಯ ನಾಯಕರು ಇಲ್ಲ. ನೀವು ಬಹಳ ಪಾಪ್ಯುಲರ್. ಇಲ್ಲಿ ನಿಮಗೆ ಬೆಳೆಯಲು ಅವಕಾಶ ಇದೆ. ಆದರೆ, ಯೋಗಿಶ್ವರ ಆ ಮೊದಲೇ ನಿರ್ಧಾರ ಮಾಡಿದಂತಿತ್ತು. ಯಾರ ಮಾತೂ ಕೇಳದೇ ಹೊರಟೇ ಬಿಟ್ಟರು. ಐದು ವರ್ಷದಲ್ಲಿ ರಾಜಕೀಯ ಎಷ್ಟು ಬದಲಾಯಿತೆಂದರೆ, 2018 ರ ಚುನಾವಣೆ ಹೊತ್ತಿಗೆ, ಸೋಲಿಲ್ಲದ ಸೈನಿಕ ಎಂದು ಎದೆಯುಬ್ಬಿಸಿ ಓಡಾಡುತ್ತಿದ್ದ ಯೋಗೀಶ್ವರ ಅವರ ರಾಜಕೀಯ ಭವಿಷ್ಯಕ್ಕೆ ಪ್ರಶ್ನೆ ಏಳುವಂತಾಯಿತು. ಇದು ಏನನ್ನು ಸೂಚಿಸುತ್ತದೆ? ಕ್ಷೇತ್ರ ಗಟ್ಟಿ ಇದೆ, ಜಾತಿ ಬೆಂಬಲ ಇದೆ, ಹಾಗಾಗಿ ಇಂದು ಕಾಂಗ್ರೆಸ್, ನಾಳೆ ಬಿಜೆಪಿ ಮತ್ತೆ ನಾಡಿದ್ದು ವಾಪಸ್ ಕಾಂಗ್ರೆಸ್ ಎಂಬ ಲೆಕ್ಕಾಚಾರ ಹಾಕುವ ನಾಯಕರಿಗೆ ಒಂದು ಒಳ್ಳೆ ಪಾಠ ಇದೆ.

ಬಿಜೆಪಿ ಮೂಲಗಳ ಪ್ರಕಾರ, ಕಾಂಗ್ರೆಸ್​ಗೆ ವಾಪಸ್ ಹೋಗಲು ತಯಾರಿರುವ ಕೆಲವು ಮಂತ್ರಿಗಳಿಗೆ ಸಿದ್ದರಾಮಯ್ಯ ಅವರ ಅಭಯ ಹಸ್ತ ಇರಬಹುದು. ಆದರೆ ಇವರೆಲ್ಲರಿಗೂ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸುಮ್ಮನೆ ಪಕ್ಷಕ್ಕೆ ಬರಲು ಬಿಡ್ತಾರಾ ಎಂಬುದಕ್ಕೆ ಇನ್ನು ಉತ್ತರ ಸಿಗಬೇಕಿದೆ. ಆದ್ದರಿಂದ ಅತಿ ಆಸೆಯಿಂದ, ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೆ ನನಗೆ ಅಧಿಕಾರ ಕಾದಿದೆ ಎಂದೋ ಅಥವಾ ಜಾತಿ ಬಲ ಇರುವುದರಿಂದ ಕಾಂಗ್ರೆಸ್ ತನಗೆ ಮಣೆ ಹಾಕುತ್ತೆ ಎನ್ನುವ ನಾಯಕರು ಮರೆತಿರುವ ಒಂದಂಶ ಇದೆ: ಜನರು ಈಗ ಸಾವು ಮತ್ತು ಕೊವಿಡ್ ಸೋಂಕಿನ ನೋವಿನಲ್ಲಿ ನರಳುತ್ತಿದ್ದಾರೆ. ಈಗ ಸಹಾಯಕ್ಕೆ ಬರದ ನಾಯಕರಿಗೆ ಜನ ಚುನಾವಣೆಯಲ್ಲಿ ಖಂಡಿತವಾಗಿ ಬರೆ ಎಳೆಯಬಹುದು. ಆಗ ಜಾತಿ ಕೂಡ ಸಹಾಯಕ್ಕೆ ಬರದು ಎಂಬುದನ್ನು ಅವರು ಗಮನಿಸಬೇಕಾಗುತ್ತದೆ.

ಇದನ್ನೂ ಓದಿ: ಎಚ್​.ಡಿ.ಕುಮಾರಸ್ವಾಮಿ ವಾಗ್ದಾಳಿ.. ಯೋಗೀಶ್ವರ್​ ಜೇಬಿಗೆ ಕೈಹಾಕೋಕೆ ಆಗತ್ತಾ ಎಂದು ಕೇಳಿದ್ದೇಕೆ ಮಾಜಿ ಸಿಎಂ

ಇದನ್ನೂ ಓದಿ: BS Yediyurappa: ನಾಯಕತ್ವ ಬದಲಾವಣೆ ಚಟುವಟಿಕೆ ಸಚಿವರಿಂದಲೇ ನಡೆದಿದೆ -ಪರೋಕ್ಷವಾಗಿ ಪುಷ್ಠೀಕರಿಸಿದ ಸಿಎಂ ಯಡಿಯೂರಪ್ಪ

(Few ministers met Union minister Pralhad Joshi and complained against step-motherly treatment meted out to them in state BJP)

Published On - 7:24 pm, Thu, 27 May 21

ಕರ್ನಾಟಕ ಬಂದ್​ಗೆ ಸ್ಟಾರ್ ನಟರ ಬೆಂಬಲ ಉಂಟಾ? ಸಾರಾ ಗೋವಿಂದು ಪ್ರತಿಕ್ರಿಯೆ
ಕರ್ನಾಟಕ ಬಂದ್​ಗೆ ಸ್ಟಾರ್ ನಟರ ಬೆಂಬಲ ಉಂಟಾ? ಸಾರಾ ಗೋವಿಂದು ಪ್ರತಿಕ್ರಿಯೆ
KSRTC ಬಸ್ ಮುಂದೆ ಡೆಲಿವರಿ ಬಾಯ್ ರ್‍ಯಾಷ್ ಡ್ರೈವ್​​: ದಾರಿ ಬಿಡದೆ ಹುಚ್ಚಾಟ
KSRTC ಬಸ್ ಮುಂದೆ ಡೆಲಿವರಿ ಬಾಯ್ ರ್‍ಯಾಷ್ ಡ್ರೈವ್​​: ದಾರಿ ಬಿಡದೆ ಹುಚ್ಚಾಟ
ನಮ್ಮನ್ನು ಕೆಣಕಿದವರ ಇತಿಹಾಸ ತೆರೆದಿಡುತ್ತೇವೆ: ವಾಟಾಳ್ ನಾಗರಾಜ್
ನಮ್ಮನ್ನು ಕೆಣಕಿದವರ ಇತಿಹಾಸ ತೆರೆದಿಡುತ್ತೇವೆ: ವಾಟಾಳ್ ನಾಗರಾಜ್
ಹಕ್ಕಿ ಜ್ವರ: ಕೋಳಿ ಫಾರ್ಮ್​​​ ಸುತ್ತ ಔಷಧಿ ಸಿಂಪಡಣೆ, 10km ಓಡಾಟ ನಿರ್ಬಂಧ
ಹಕ್ಕಿ ಜ್ವರ: ಕೋಳಿ ಫಾರ್ಮ್​​​ ಸುತ್ತ ಔಷಧಿ ಸಿಂಪಡಣೆ, 10km ಓಡಾಟ ನಿರ್ಬಂಧ
ಅಶೋಕ ಮಾತಿಗೆ ತಿರುಗಿ ಬಿದ್ದ ಖರ್ಗೆ, ಸುಮ್ಮನಿರುವಂತೆ ಸೂಚಿಸಿದ ಸಭಾಧ್ಯಕ್ಷ
ಅಶೋಕ ಮಾತಿಗೆ ತಿರುಗಿ ಬಿದ್ದ ಖರ್ಗೆ, ಸುಮ್ಮನಿರುವಂತೆ ಸೂಚಿಸಿದ ಸಭಾಧ್ಯಕ್ಷ
ಸಂಪ್ರದಾಯಿಕ ಬೆಳೆಗೆ ಬೈ, ತೋಟಗಾರಿಕೆ ಮಾಡಿ ಲಕ್ಷಾಂತರ ರೂ. ಲಾಭ ಪಡೆದ ರೈತ
ಸಂಪ್ರದಾಯಿಕ ಬೆಳೆಗೆ ಬೈ, ತೋಟಗಾರಿಕೆ ಮಾಡಿ ಲಕ್ಷಾಂತರ ರೂ. ಲಾಭ ಪಡೆದ ರೈತ
‘ನಟ್ಟು ಬೋಲ್ಟ್ ಟೈಟ್ ಮಾಡ್ತೀನಿ ಎಂಬ ಮಾತು ಸರಿಯಲ್ಲ’; ಸಾರಾ ಗೋವಿಂದು
‘ನಟ್ಟು ಬೋಲ್ಟ್ ಟೈಟ್ ಮಾಡ್ತೀನಿ ಎಂಬ ಮಾತು ಸರಿಯಲ್ಲ’; ಸಾರಾ ಗೋವಿಂದು
ಖರ್ಗೆ ಫರ್ಮಾನು ಎಲ್ಲ ಕಾಂಗ್ರಸ್ಸಿಗರಿಗೆ ಅನ್ವಯಿಸುವುದಿಲ್ಲವೇ?
ಖರ್ಗೆ ಫರ್ಮಾನು ಎಲ್ಲ ಕಾಂಗ್ರಸ್ಸಿಗರಿಗೆ ಅನ್ವಯಿಸುವುದಿಲ್ಲವೇ?
Video: ಎಟಿಎಂನಿಂದ 30 ಲಕ್ಷ ರೂ. ಕದ್ದ ಮುಸುಕುಧಾರಿಗಳು
Video: ಎಟಿಎಂನಿಂದ 30 ಲಕ್ಷ ರೂ. ಕದ್ದ ಮುಸುಕುಧಾರಿಗಳು
ಮೊಯ್ಲಿ ಹೇಳಿಕೆಗೆ ಹೈಕಮಾಂಡ್ ಪ್ರತಿಕ್ರಿಯಿಸುತ್ತದೆ: ಎಂಬಿ ಪಾಟೀಲ್
ಮೊಯ್ಲಿ ಹೇಳಿಕೆಗೆ ಹೈಕಮಾಂಡ್ ಪ್ರತಿಕ್ರಿಯಿಸುತ್ತದೆ: ಎಂಬಿ ಪಾಟೀಲ್