AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಚ್​.ಡಿ.ಕುಮಾರಸ್ವಾಮಿ ವಾಗ್ದಾಳಿ.. ಯೋಗೀಶ್ವರ್​ ಜೇಬಿಗೆ ಕೈಹಾಕೋಕೆ ಆಗತ್ತಾ ಎಂದು ಕೇಳಿದ್ದೇಕೆ ಮಾಜಿ ಸಿಎಂ

ರಾಜಕೀಯ ಬಿಟ್ಟು ಗೌರವಯುತವಾಗಿ ಮನೆಯಲ್ಲಿ ಇರುವುದು ಉತ್ತಮ ಎಂದು ಎಚ್​.ಡಿ.ಕುಮಾರಸ್ವಾಮಿ ಪರೋಕ್ಷವಾಗಿ ಸಿ.ಪಿ.ಯೋಗೀಶ್ವರ್ ವಿರುದ್ಧ ವಾಗ್ದಾಳಿ ನಡೆಸಿದರು.

ಎಚ್​.ಡಿ.ಕುಮಾರಸ್ವಾಮಿ ವಾಗ್ದಾಳಿ..  ಯೋಗೀಶ್ವರ್​ ಜೇಬಿಗೆ ಕೈಹಾಕೋಕೆ ಆಗತ್ತಾ ಎಂದು ಕೇಳಿದ್ದೇಕೆ ಮಾಜಿ ಸಿಎಂ
ರಾಮನಗರ ಜಿಲ್ಲಾಧಿಕಾರಿ ಕಚೇರಿ ಬಳಿ ಟೀ ಕುಡಿದ ಎಚ್​. ಡಿ.ಕುಮಾರಸ್ವಾಮಿ
Lakshmi Hegde
| Edited By: |

Updated on: Jan 06, 2021 | 5:58 PM

Share

ರಾಮನಗರ: ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಅವರು, ಸಿ.ಪಿ.ಯೋಗೀಶ್ವರ್​ ವಿರುದ್ಧ, ಅವರ ಹೆಸರನ್ನು ಉಲ್ಲೇಖ ಮಾಡದೆ ವಾಗ್ದಾಳಿ ನಡೆಸಿದ್ದಾರೆ. ಚುನಾವಣೆಯಲ್ಲಿ ಏನೋ ಮಾಡಿಬಿಡುತ್ತೇನೆ, ನಾಳೆ ಮಂತ್ರಿಯಾಗುತ್ತೇನೆ, ನಾಡಿದ್ದು ಮಂತ್ರಿಯಾಗುತ್ತೇನೆ ಎಂದು ಹೇಳಿ ಜನರನ್ನು ಸೆಳೆಯುತ್ತಿದ್ದಾರೆ.. ಇನ್ನೊಂದೆಡೆ ಅಧಿಕಾರಿಗಳನ್ನು ವರ್ಗಾವಣೆ ಮಾಡಲು ಹಣ ಕೇಳುತ್ತಿದ್ದಾರೆ ಎಂದು ಆರೋಪಿಸಿದರು.

ಅದ್ಯಾವುದೋ ಚೆನ್ನಪಟ್ಟಣ ಸಬ್​ಇನ್ಸ್​ಪೆಕ್ಟರ್​ ವರ್ಗಾವಣೆಗೆ 30 ಲಕ್ಷ ರೂ. ಬೇಡಿಕೆ ಇಟ್ಟಿದ್ದಾರೆ. ಇಷ್ಟೆಲ್ಲ ಹಣ ಕೊಟ್ಟು ಬಂದ ಅಧಿಕಾರಿ ಇನ್ನೇನು ಮಾಡುತ್ತಾರೆ? ಅವರು ಯೋಗೀಶ್ವರ್ ಜೇಬಿಗೆ ಕೈಹಾಕಲು ಸಾಧ್ಯವಾಗತ್ತಾ? ಇಲ್ಲ.. ಹಾಗಾಗಿ ಜನರ ಜೇಬಿಗೆ ಕೈಹಾಕುತ್ತಾರೆ.

ಇನ್ನೆಷ್ಟು ದಿನ ಹೀಗೆ ಹಣ ಸಂಪಾದನೆ ಮಾಡಬೇಕು. ಜೀವನದಲ್ಲಿ ಮನುಷ್ಯನಿಗೆ ದುಡ್ಡು ಬೇಕು. ಆದರೆ ಹೀಗೆಲ್ಲ ಹಗಲು ದರೋಡೆ ಮಾಡುವುದು ಸರಿಯಲ್ಲ. ಇಂಥ ರಾಜಕೀಯ ಬಿಟ್ಟು ಗೌರವಯುತವಾಗಿ ಮನೆಯಲ್ಲಿ ಇರುವುದು ಉತ್ತಮ ಎಂದು ಎಚ್​.ಡಿ.ಕುಮಾರಸ್ವಾಮಿ ಹೇಳಿದರು.

ಮಡಿಕೆ ಚಹಾ ಕುಡಿದ ಮಾಜಿ ಸಿಎಂ ಇನ್ನು ಬೆಂಗಳೂರಿನಿಂದ ಚನ್ನಪಟ್ಟಣಕ್ಕೆ ಹೋಗುವ ಮಾರ್ಗ ಮಧ್ಯೆಯಲ್ಲಿ ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ಮಡಿಕೆಯಲ್ಲಿ ಚಹಾ ಕುಡಿದಿದ್ದಾರೆ. ರಾಮನಗರ ಜಿಲ್ಲಾಧಿಕಾರಿ ಕಚೇರಿ ಬಳಿ ಇರುವ, ಜೆಡಿಎಸ್ ಕಾರ್ಯಕರ್ತ ಪ್ರತಾಪ್​ ಅವರ ಅಂಗಡಿಯಲ್ಲಿ ಟೀ ಕುಡಿದ ಕುಮಾರಸ್ವಾಮಿಗೆ ಮಾಗಡಿ ಶಾಸಕ ಎ.ಮಂಜುನಾಥ್​ ಸಾಥ್​ ನೀಡಿದರು.

‘ನಾನು ಹೊನ್ನಾಳಿಯ ಅಂಜದ ಗಂಡು..‘ ಎನ್ನುತ್ತ ಯತ್ನಾಳ್​ಗೆ ತಿರುಗೇಟು ನೀಡಿದ ಎಂ.ಪಿ.ರೇಣುಕಾಚಾರ್ಯ

Follow Us
ರಾಷ್ಟ್ರಪತಿಗಳ ಗಮನಸೆಳೆದ ಕರಗ: ದ್ರೌಪದಿ ಮುರ್ಮು ಹೇಳಿದ್ದೇನು ಗೊತ್ತಾ?
ರಾಷ್ಟ್ರಪತಿಗಳ ಗಮನಸೆಳೆದ ಕರಗ: ದ್ರೌಪದಿ ಮುರ್ಮು ಹೇಳಿದ್ದೇನು ಗೊತ್ತಾ?
ಮೊದಲ ಪಂದ್ಯದಲ್ಲಿ ಗೋಲ್ಡನ್ ಡಕ್​ಗೆ ಬಲಿಯಾದ ಕೆಎಲ್ ರಾಹುಲ್
ಮೊದಲ ಪಂದ್ಯದಲ್ಲಿ ಗೋಲ್ಡನ್ ಡಕ್​ಗೆ ಬಲಿಯಾದ ಕೆಎಲ್ ರಾಹುಲ್
ಚಂಡೀಗಢದ ಬಿಜೆಪಿ ಕಚೇರಿಯ ಹೊರಗೆ ಗ್ರೆನೇಡ್ ಸ್ಫೋಟ; ವಿಡಿಯೋ ಇಲ್ಲಿದೆ
ಚಂಡೀಗಢದ ಬಿಜೆಪಿ ಕಚೇರಿಯ ಹೊರಗೆ ಗ್ರೆನೇಡ್ ಸ್ಫೋಟ; ವಿಡಿಯೋ ಇಲ್ಲಿದೆ
ನೀವು ಯಾಕೆ ಚುನಾವಣೆಯಲ್ಲಿ ಸ್ಪರ್ಧಿಸಲ್ಲ? ನೇರವಾಗಿ ಉತ್ತರಿಸಿದ ಉಪೇಂದ್ರ
ನೀವು ಯಾಕೆ ಚುನಾವಣೆಯಲ್ಲಿ ಸ್ಪರ್ಧಿಸಲ್ಲ? ನೇರವಾಗಿ ಉತ್ತರಿಸಿದ ಉಪೇಂದ್ರ
ಮೊದಲ ಪಂದ್ಯದಲ್ಲೇ ರಿಷಭ್ ಪಂತ್​ಗೆ ಕೈಕೊಟ್ಟ ಅದೃಷ್ಟ
ಮೊದಲ ಪಂದ್ಯದಲ್ಲೇ ರಿಷಭ್ ಪಂತ್​ಗೆ ಕೈಕೊಟ್ಟ ಅದೃಷ್ಟ
ದಾವಣಗೆರೆಗೆ ಬಂದ ಸಿದ್ದರಾಮಯ್ಯಗೆ ಪ್ರೀತಿಯಿಂದ ಕ್ಲಾಸ್ ತೆಗೆದುಕೊಂಡ ಅಭಿಮಾನಿ
ದಾವಣಗೆರೆಗೆ ಬಂದ ಸಿದ್ದರಾಮಯ್ಯಗೆ ಪ್ರೀತಿಯಿಂದ ಕ್ಲಾಸ್ ತೆಗೆದುಕೊಂಡ ಅಭಿಮಾನಿ
ಟೋಲ್‌ನಲ್ಲಿ ಹೊಸ ನಿಯಮ ಪರಿಣಾಮ: ಫಾಸ್ಟ್‌ಟ್ಯಾಗ್​ಗೆ ಹೆಚ್ಚಿದ ಬೇಡಿಕೆ
ಟೋಲ್‌ನಲ್ಲಿ ಹೊಸ ನಿಯಮ ಪರಿಣಾಮ: ಫಾಸ್ಟ್‌ಟ್ಯಾಗ್​ಗೆ ಹೆಚ್ಚಿದ ಬೇಡಿಕೆ
ಯಮರಾಜನನ್ನು ಭೇಟಿಯಾದ ರಾಹುಲ್ ಗಾಂಧಿ
ಯಮರಾಜನನ್ನು ಭೇಟಿಯಾದ ರಾಹುಲ್ ಗಾಂಧಿ
ಮಹಿಳಾ ಉದ್ಯೋಗಿಯ ತುಟಿಗೆ ಚುಂಬಿಸಲು ಹೋದ ಕಾಮುಕ: ವೀಡಿಯೋ ವೈರಲ್
ಮಹಿಳಾ ಉದ್ಯೋಗಿಯ ತುಟಿಗೆ ಚುಂಬಿಸಲು ಹೋದ ಕಾಮುಕ: ವೀಡಿಯೋ ವೈರಲ್
ಜನಗಣತಿ: ಸ್ವಯಂ ಗಣತಿ ಹೇಗೆ ಮಾಡುವುದು? ಸಾರ್ವಜನಿಕರು ಭಾಗಿಯಾಗೋದು ಹೇಗೆ?
ಜನಗಣತಿ: ಸ್ವಯಂ ಗಣತಿ ಹೇಗೆ ಮಾಡುವುದು? ಸಾರ್ವಜನಿಕರು ಭಾಗಿಯಾಗೋದು ಹೇಗೆ?