AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬ್ಲ್ಯಾಕ್​ ಫಂಗಸ್​ ಚಿಕಿತ್ಸೆಗೆ ಬಳಸುವ ಎಂಫೊಟೆರಿಸಿನ್-ಬಿ ಇಂಜೆಕ್ಷನ್ ಪೂರೈಕೆ; ಇಂದು ರಾಜ್ಯ ತಲುಪಿದ್ದು 5190 ಚುಚ್ಚುಮದ್ದುಗಳು

ರಾಜ್ಯದಲ್ಲಿ ಕೂಡ ಅಲ್ಲಲ್ಲಿ ಬ್ಲ್ಯಾಕ್​ ಫಂಗಸ್​​ನ ಪ್ರಕರಣಗಳು ಹೆಚ್ಚುತ್ತಿವೆ. ಅದಕ್ಕೆ ಚಿಕಿತ್ಸೆ ನೀಡಲು ಅಗತ್ಯವಿರುವ  ಎಂಫೊಟೆರಿಸಿನ್-ಬಿ ಇಂಜೆಕ್ಷನ್​​ನ್ನು ಕೇಂದ್ರ ಸರ್ಕಾರ ರಾಜ್ಯಕ್ಕೆ ಸರಬರಾಜು ಮಾಡುತ್ತಿದೆ.

ಬ್ಲ್ಯಾಕ್​ ಫಂಗಸ್​ ಚಿಕಿತ್ಸೆಗೆ ಬಳಸುವ ಎಂಫೊಟೆರಿಸಿನ್-ಬಿ ಇಂಜೆಕ್ಷನ್ ಪೂರೈಕೆ; ಇಂದು ರಾಜ್ಯ ತಲುಪಿದ್ದು 5190 ಚುಚ್ಚುಮದ್ದುಗಳು
ಕೇಂದ್ರ ಸಚಿವ ಡಿ ವಿ ಸದಾನಂದಗೌಡ
Lakshmi Hegde
|

Updated on: May 27, 2021 | 8:01 PM

Share

ದೆಹಲಿ: ಕಪ್ಪು ಶಿಲೀಂದ್ರ (ಬ್ಲ್ಯಾಕ್​ ಫಂಗಸ್​)ದ ಚಿಕಿತ್ಸೆಗೆ ಬಳಕೆಯಾಗುವ ಎಂಫೊಟೆರಿಸಿನ್-ಬಿ ಇಂಜೆಕ್ಷನ್​​ನ್ನು ಇಂದು ಮತ್ತೆ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ನೀಡಿದೆ. 5190 ವಯಲ್ಸ್​ಗಳನ್ನು ಹೆಚ್ಚುವರಿಯಾಗಿ ಕೊಟ್ಟಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಎಂಫೊಟೆರಿಸಿನ್-ಬಿ ಇಂಜೆಕ್ಷನ್ಗೊಬ್ಬರ ಸಚಿವ ಡಿ.ವಿ.ಸದಾನಂದ ಗೌಡ ತಿಳಿಸಿದ್ದಾರೆ. ಇಂದು ಸುದ್ದಿಗೋಷ್ಠಿ ನಡೆಸಿದ ಅವರು, ರಾಜ್ಯಕ್ಕೆ ನಿನ್ನೆಯವರೆಗೆ (ಮೇ 26) 5180 ವಯಲ್ಸ್ ಎಂಫೊಟೆರಿಸಿನ್-ಬಿ ಹಂಚಿಕೆ ಮಾಡಲಾಗಿತ್ತು. ರಾಜ್ಯದ ಬೇಡಿಕೆಯನ್ನು ಪರಿಗಣಿಸಿ ಹೆಚ್ಚುವರಿಯಾಗಿ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ರಾಜ್ಯದಲ್ಲಿ ಕೂಡ ಅಲ್ಲಲ್ಲಿ ಬ್ಲ್ಯಾಕ್​ ಫಂಗಸ್​​ನ ಪ್ರಕರಣಗಳು ಹೆಚ್ಚುತ್ತಿವೆ. ಅದಕ್ಕೆ ಚಿಕಿತ್ಸೆ ನೀಡಲು ಅಗತ್ಯವಿರುವ  ಎಂಫೊಟೆರಿಸಿನ್-ಬಿ ಇಂಜೆಕ್ಷನ್​​ನ್ನು ಕೇಂದ್ರ ಸರ್ಕಾರ ರಾಜ್ಯಕ್ಕೆ ಸರಬರಾಜು ಮಾಡುತ್ತಿದೆ. ಇಲ್ಲಿಯವರೆಗೆ ಒಟ್ಟು 10370 ಚುಚ್ಚುಮದ್ದನ್ನು ಪೂರೈಕೆ ಮಾಡಿದೆ. ಎಂದು ಹೇಳಿದರು. ಇನ್ನು ರಾಜ್ಯದಲ್ಲಿ ಕೊರೊನಾ ಚಿಕಿತ್ಸೆಗಾಗಿ ಇದುವರೆಗೆ 14,25,000 ವಯಲ್ಸ್ ಡೆಮ್ಡೆಸಿವಿರ್ ಹಂಚಿಕೆ ಮಾಡಲಾಗಿದೆ. ಹಾಗೆಯೇ ರಾಜ್ಯಕ್ಕೆ 13935 ವಯಲ್ಸ್ ಟೊಸಿಲಿಜುಮಾಬ್ ಚುಚ್ಚುಮದ್ದನ್ನೂ ವಿತರಿಸಲಾಗಿದೆ ಎಂದು ಸದಾನಂದ ಗೌಡ ಮಾಹಿತಿ ನೀಡಿದರು. ಕರ್ನಾಟಕದಿಂದ ಒಟ್ಟಾರೆ 20ಸಾವಿರಕ್ಕೂ ಅಧಿಕ ಮೇ 21ರಂದು ಡಿ.ವಿ.ಸದಾನಂದ ಗೌಡರು ತಿಳಿಸಿದ್ದರು.

ಇದನ್ನೂ ಓದಿ: Covid Warriors: ಕೊವಿಡ್ ಸೇನಾನಿಗಳಿಗೆ ಪ್ರೋತ್ಸಾಹ ಧನ 6 ತಿಂಗಳವರೆಗೂ ವಿಸ್ತರಣೆ ಮಾಡುವಂತೆ ಆದೇಶ