ಶಿಕ್ಷಕರನ್ನು ಫ್ರಂಟ್ ಲೈನ್ ಕೊರೊನಾ ವಾರಿಯರ್ಸ್ ಆಗಿ ಘೋಷಿಸಿ ವಿಮಾ ಸೌಲಭ್ಯ ಒದಗಿಸಲು ಆಗ್ರಹ
ಕೊವಿಡ್ ಆರ್ಥಿಕ ಸಂಕಷ್ಟ ಹಿನ್ನೆಲೆಯಲ್ಲಿ ಖಾಸಗಿ ಶಾಲಾ ಶಿಕ್ಷಕರು ಕೊವಿಡ್ ನಿಂದ ಆರ್ಥಿಕ ಸಂಕಷ್ಟಕ್ಕೆ ಈಡಾಗಿದ್ದಾರೆ. ಹೀಗಾಗಿ ಖಾಸಗಿ ಶಾಲೆಯ ಶಿಕ್ಷಕರಿಗೆ ಒಂದು ದಿನದ ವೇತನವನ್ನು ಸರ್ಕಾರಿ ಶಾಲಾ ಶಿಕ್ಷಕರು ನೀಡುವಂತೆ ಈ ಮುನ್ನ ಕೇಳಲಾಗಿತ್ತು.
ಬೆಂಗಳೂರು: ಸರ್ಕಾರಿ ಶಿಕ್ಷಕರು ಒಂದು ದಿನದ ವೇತನವನ್ನು ಖಾಸಗಿ ಶಾಲಾ ಶಿಕ್ಷಕರಿಗೆ ನೀಡುವ ಅಗತ್ಯವಿಲ್ಲ. ಸರ್ಕಾರಿ ಶಿಕ್ಷಕರ 1 ದಿನದ ವೇತನವನ್ನು ರಾಜ್ಯದ ಬಡಜನರಿಗೆ, ಕೊವಿಡ್ ನಿಯಂತ್ರಣಕ್ಕೆ, ಮೃತಪಟ್ಟ ಶಿಕ್ಷಕರಿಗೆ ನೀಡುವಂತೆ ರಾಜ್ಯ ಖಾಸಗಿ ಶಾಲೆಗಳ ಒಕ್ಕೂಟದ ಸಭೆಯಲ್ಲಿ ಒತ್ತಾಯಿಸಲಾಯಿತು. ಶಿಕ್ಷಕರನ್ನು ಫ್ರಂಟ್‌ಲೈನ್ ವಾರಿಯರ್ಸ್ ಎಂದು ಪರಿಗಣಿಸಿ ವಿಮಾ ಸೌಲಭ್ಯದೊಂದಿಗೆ ಆದೇಶ ಪ್ರಕಟಿಸಲು ರಾಜ್ಯ ಖಾಸಗಿ ಶಾಲೆಗಳ ಒಕ್ಕೂಟದ ಸಭೆಯಲ್ಲಿ ಶಿಕ್ಷಕರು ಆಗ್ರಹಿಸಿದರು.
ಕೊವಿಡ್ ಆರ್ಥಿಕ ಸಂಕಷ್ಟ ಹಿನ್ನೆಲೆಯಲ್ಲಿ ಖಾಸಗಿ ಶಾಲಾ ಶಿಕ್ಷಕರು ಕೊವಿಡ್ ನಿಂದ ಆರ್ಥಿಕ ಸಂಕಷ್ಟಕ್ಕೆ ಈಡಾಗಿದ್ದಾರೆ. ಹೀಗಾಗಿ ಖಾಸಗಿ ಶಾಲೆಯ ಶಿಕ್ಷಕರಿಗೆ ಒಂದು ದಿನದ ವೇತನವನ್ನು ಸರ್ಕಾರಿ ಶಾಲಾ ಶಿಕ್ಷಕರು ನೀಡುವಂತೆ ಈ ಮುನ್ನ ಕೇಳಲಾಗಿತ್ತು. ಆದರೆ ಖಾಸಗಿ ಶಾಲೆಗಳ ಒಕ್ಕೂಟ ಇಂದು ಆನ್ಲೈನ್ ಸಭೆ ಮಾಡಿ ಈ ಮನವಿಗೆ ವಿರೋಧ ಹೊರಹಾಕಿದೆ. ಎಲ್ಲಾ ಜಿಲ್ಲೆಗಳ ಅಧ್ಯಕ್ಷರು, ಕಾರ್ಯದರ್ಶಿಗಳು, ಮತ್ತು ರಾಜ್ಯದ ಎಲ್ಲಾ ಪದಾಧಿಕಾರಿಗಳು ಸರ್ಕಾರದ ಪ್ರಸ್ತಾವನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ಶಿಕ್ಷಕರನ್ನು ಫ್ರಂಟ್ ಲೈನ್ ಕೊರೊನಾ ವಾರಿಯರ್ಸ್ ಎಂದು ಪರಿಗಣಿಸಿ, ವಿಮಾ ಸೌಲಭ್ಯದೊಂದಿಗೆ ಆದೇಶ ಹೊರಡಿಸಬೇಕು. ಕೊರೊನಾ ವಾರಿಯರ್ಸ್ ಸಹಿತವಾಗಿ ಕೊವಿಡ್ನಿಂದ ಮೃತಪಟ್ಟ ಎಲ್ಲಾ ಶಿಕ್ಷಕರಿಗೂ ಪರಿಹಾರ ಒದಗಿಸಲು ಪ್ರಯತ್ನಿಸಬೇಕು. ಕೊವಿಡ್ ಕರ್ತವ್ಯಕ್ಕೆ ನಿಯೋಜಿಸುವಾಗ 50 ವರ್ಷಕ್ಕಿಂತ ಹೆಚ್ಚು ವಯಸ್ಸಿನ, ಗಂಭೀರ ಖಾಯಿಲೆ ಉಳ್ಳ, ಗರ್ಭಿಣಿ/ ಚಿಕ್ಕ ಮಕ್ಕಳುಳ್ಳ ಶಿಕ್ಷಕಿಯರನ್ನು ಹೊರತುಪಡಿಸಿ ಕರ್ತವ್ಯಕ್ಕೆ ನಿಯೋಜನೆ ಮಾಡಬೇಕು. ಕೊವಿಡ್ ಕರ್ತವ್ಯಕ್ಕೆ ನಿಯೋಜನೆ ಮಾಡಲ್ಪಟ್ಟ ಶಿಕ್ಷಕರಿಗೆ ಅಗತ್ಯ ಸುರಕ್ಷಾ ಪರಿಕರಗಳನ್ನು ಒದಗಿಸಬೇಕು. ಮತ್ತು ವಾಸವಿರುವ ಸ್ಥಳದಲ್ಲಿಯೇ ನಿಯೋಜಿಸಬೇಕು ಎಂದು ಸಭೆಯಲ್ಲಿ ಆಗ್ರಹಿಸಲಾಯಿತು.
ಶಿಕ್ಷಕರಿಗೆ ಸಾರ್ವತ್ರಿಕವಾಗಿ ಲಸಿಕೆ ನೀಡಬೇಕು ಶಿಕ್ಷಕರಿಗೆ ಪ್ರತ್ಯೇಕ ಕೊವಿಡ್ ಕೇರ್ ಕೇಂದ್ರಗಳನ್ನು ಜಿಲ್ಲಾ ಕೇಂದ್ರ/ತಾಲೂಕು ಕೇಂದ್ರ ಸ್ಥಾನಗಳಲ್ಲಿ ತೆರೆಯಬೇಕು. ಕೊವಿಡ್ ಆಸ್ಪತ್ರೆಗಳಲ್ಲಿ ಶಿಕ್ಷಕರಿಗೆ ಕನಿಷ್ಠ ಸಂಖ್ಯೆಯಲ್ಲಾದರೂ ಆಕ್ಸಿಜನ್ ಸಹಿತ ಬೆಡ್ಗಳನ್ನು ಕಾಯ್ದಿರಿಸುವಂತೆ ಆರೋಗ್ಯ ಇಲಾಖೆಗೆ ಸೂಚನೆ ರವಾನಿಸುವುದು ಸೇರಿದಂತೆ ಹಲವು ಮನವಿಗಳನ್ನು ಸಭೆಯಲ್ಲಿ ಮಂಡಿಸಲಾಯಿತು.
ಈ ವರ್ಷ ಶಾಲೆಗಳು ಜೂನ್ 15 ಪುನರಾರಂಭ ಆಗಲಿರುವ ಹಿನ್ನೆಲೆಯಲ್ಲಿ ಎಲ್ಲಾ ಶಿಕ್ಷಕರಿಗೆ ಸಾರ್ವತ್ರಿಕವಾಗಿ ಲಸಿಕೆಯನ್ನು ಕಂದಾಯ, ಆರೋಗ್ಯ ಮತ್ತು ಪಂಚಾಯತ್ ರಾಜ್ ಇಲಾಖೆಗಳ ಮಾದರಿಯಲ್ಲಿ ಕೊಡಿಸಬೇಕು. ರಜಾ ಅವಧಿಯಲ್ಲಿ ಕೋವಿಡ್ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರಿಗೆ ಜೂನ್ ತಿಂಗಳಾಂತ್ಯದೊಳಗೆ ಗಳಿಕೆ ರಜೆಗಳನ್ನು ಸೇವಾ ಪುಸ್ತಕಗಳಿಗೆ ಸೇರಿಸುವಂತೆ ಆದೇಶ ಮಾಡಿಸಬೇಕು ಎಂದು ಸಭೆಯಲ್ಲಿ ಆಗ್ರಹಿಸಲಾಯಿತು.
ಇದನ್ನೂ ಓದಿ: Karnataka Covid Update: ಕರ್ನಾಟಕದಲ್ಲಿ ಒಂದೇ ದಿನ 24,214, ಬೆಂಗಳೂರಿನಲ್ಲಿ 5,949 ಜನರಿಗೆ ಕೊವಿಡ್ ಸೋಂಕು ದೃಢ
ಸೋಮವಾರದೊಳಗೆ ಕಟ್ಟಡ ಕಾರ್ಮಿಕರಿಗೆ ತಲುಪಲಿದೆ ಕೊವಿಡ್ ಪ್ಯಾಕೇಜ್: ಸಚಿವ ಶಿವರಾಮ್ ಹೆಬ್ಬಾರ್
(Private Teachers demand announce them as frontline corona warriors to provide insurance)