Covid Warriors: ಕೊವಿಡ್ ಸೇನಾನಿಗಳಿಗೆ ಪ್ರೋತ್ಸಾಹ ಧನ 6 ತಿಂಗಳವರೆಗೂ ವಿಸ್ತರಣೆ ಮಾಡುವಂತೆ ಆದೇಶ
Covid Warriors Karnataka: ಆರೋಗ್ಯ ಇಲಾಖೆ ಹಾಗೂ ಎನ್‌ಹೆಚ್‌ಎಂ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರು, ತಜ್ಞರು, ಶುಶ್ರೂಷಕರು, ಪ್ರಯೋಗ ಶಾಲಾ ತಂತ್ರಜ್ಞರು, ಫಾರ್ಮಾಸಿಸ್ಟ್‌ಗಳು, ಡಿ-ಗ್ರೂಪ್ ನೌಕರರಿಗೆ ನೀಡಲ್ಪಡುವ ವಿಶೇಷ ಭತ್ಯೆ ಮುಂದುವರೆಸಲಾಗಿದೆ.
ಬೆಂಗಳೂರು: ಕೊರೊನಾ ಸೇನಾನಿಗಳಿಗೆ ನೀಡುತ್ತಿರುವ ಪ್ರೋತ್ಸಾಹ ಧನವನ್ನು ಏಪ್ರಿಲ್ 1ರಿಂದ ಅನ್ವಯವಾಗುವಂತೆ 6 ತಿಂಗಳವರೆಗೆ ವಿಸ್ತರಿಸಿ ಕರ್ನಾಟಕ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಆರೋಗ್ಯ ಇಲಾಖೆ ಹಾಗೂ ಎನ್‌ಹೆಚ್‌ಎಂ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರು, ತಜ್ಞರು, ಶುಶ್ರೂಷಕರು, ಪ್ರಯೋಗ ಶಾಲಾ ತಂತ್ರಜ್ಞರು, ಫಾರ್ಮಾಸಿಸ್ಟ್‌ಗಳು, ಡಿ-ಗ್ರೂಪ್ ನೌಕರರಿಗೆ ನೀಡಲ್ಪಡುವ ವಿಶೇಷ ಭತ್ಯೆಯನ್ನು ಇನ್ನೂ 6 ತಿಂಗಳ ಕಾಲ ಮುಂದುವರೆಸಲು ಆದೇಶ ನೀಡಲಾಗಿದೆ.
ಈ ಕುರಿತು ರಾಜ್ಯ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ. ಕೊವಿಡ್ ವಾರಿಯರ್ ಅಥವಾ ಸೇನಾನಿಗಳಿಗೆ ನೀಡುತ್ತಿರುವ ವಿಶೇಷ ಭತ್ಯೆಯನ್ನು ಇನ್ನೂ 6 ತಿಂಗಳ ಕಾಲ ಮುಂದುವರೆಸುವುದಾಗಿ ಅವರು ಟ್ವೀಟ್ನಲ್ಲಿ ತಿಳಿಸಿದ್ದಾರೆ.
ಜತೆಗೆ, ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಘೋಷಿತ ಲಾಕ್ ಡೌನ್ ಆರ್ಥಿಕ ಪ್ಯಾಕೇಜ್ನಲ್ಲಿಸಹಾಯ ಧನ ನೀಡಲು ಕಾರ್ಮಿಕ ಇಲಾಖೆಯಿಂದ ಕಟ್ಟಡ ಮತ್ತು ಇತರೇ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಗೆ ಹಣ ಬಿಡುಗಡೆ ಮಾಡುವಂತೆ ಆದೇಶಿಸಲಾಗಿದೆ. ತಲಾ 3000 ರೂ. ಬಿಡುಗಡೆಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಲಾಗಿದೆ.
ಕೊರೊನಾ ಯೋಧರಿಗೆ ನೀಡುತ್ತಿರುವ ಪ್ರೋತ್ಸಾಹ ಧನವನ್ನು 01.04.2021ರಿಂದ ಅನ್ವಯವಾಗಿವಂತೆ 6 ತಿಂಗಳವರೆಗೆ ವಿಸ್ತರಿಸಲಾಗಿದ್ದು, ಆರೋಗ್ಯ ಇಲಾಖೆ ಹಾಗೂ ಎನ್ಎಚ್ಎಂ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರು, ತಜ್ಞರು, ಶುಶ್ರೂಷಕರು, ಪ್ರಯೋಗಶಾಲಾ ತಂತ್ರಜ್ಞರು, ಫಾರ್ಮಾಸಿಸ್ಟ್ ಗಳು ಹಾಗೂ ಡಿ-ಗ್ರೂಪ್ ನೌಕರರಿಗೆ ವಿಶೇಷ ಭತ್ಯೆ ನೀಡಲಾಗುವುದು. pic.twitter.com/MGrtYYEclN
— Dr Sudhakar K (@mla_sudhakar) May 27, 2021
ಇದನ್ನೂ ಓದಿ: ಸೋಮವಾರದೊಳಗೆ ಕಟ್ಟಡ ಕಾರ್ಮಿಕರಿಗೆ ತಲುಪಲಿದೆ ಕೊವಿಡ್ ಪ್ಯಾಕೇಜ್: ಸಚಿವ ಶಿವರಾಮ್ ಹೆಬ್ಬಾರ್
ಕೊವಿಡ್ನಿಂದ ಮೃತಪಟ್ಟ ಶಿಕ್ಷಕರ ಕುಟುಂಬಸ್ಥರಿಗೆ ಸರ್ಕಾರಿ ನೌಕರಿ; ನೇಮಕಾತಿ ಪತ್ರ ನೀಡಿದ ಸಚಿವ ಸುರೇಶ್ ಕುಮಾರ್
(Karnataka Govt Orders to extend the incentives for Covid Warriors to 6 months)
Published On - 7:56 pm, Thu, 27 May 21