ನಾಳೆ ಕಂಕಣ ಸೂರ್ಯಗ್ರಹಣ ಸಂಭವಿಸಲಿದೆ. ಸೂರ್ಯಗ್ರಹಣ ಎಲ್ಲೆಲ್ಲಿ ಗೋಚರವಾಗುತ್ತೆ. ಯಾವ ಸಮಯದಲ್ಲಿ ಗೋಚರವಾಗುತ್ತೆ. ಇದೀಗ ಇಡೀ ಜಗತ್ತಿನ ಕುತೂಹಲ ಕೆರಳಿಸಿರೋ ಕಂಕಣ ಸೂರ್ಯಗ್ರಹಣವನ್ನ ನೋಡಬಹುದಾ. ಅದ್ರ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.
ಈ ವರ್ಷದ ಮೊದಲ ಮತ್ತು ದೊಡ್ಡ ಸೂರ್ಯಗ್ರಹಣವು ಪ್ರಪಂಚದಾದ್ಯಂತ ಕುತೂಹಲವನ್ನ ಮೂಡಿಸಿದೆ. ಜ್ಯೋತಿಷ್ಯದ ಪ್ರಕಾರ ಕೊರೊನಾ ಸಾಂಕ್ರಾಮಿಕ ರೋಗವು, 2019ರ ಕೊನೆಯ ಸೂರ್ಯಗ್ರಹಣದ ದಿನದಿಂದ ಆರಂಭವಾಯಿತು. ಮತ್ತು ಈ ವರ್ಷದ ಕೊನೆಯ ಸೂರ್ಯಗ್ರಹಣದಲ್ಲಿ ಕೊನೆಗೊಳ್ಳಲಿದೆ ಅಂತ ಹೇಳಲಾಗ್ತಿದೆ. ಈ ವರ್ಷದ ಮೊದಲ ಸೂರ್ಯಗ್ರಹಣ ಜೂನ್ 21ರ ಭಾನುವಾರ ಅಂದ್ರೆ ನಾಳೆ ಸಂಭವಿಸಲಿದೆ. ಅಷ್ಟಕ್ಕೂ ನಾಳೆ ಸಂಭವಿಸಲಿರುವ ಸೂರ್ಯಗ್ರಹಣವನ್ನ ಕಂಕಣ ಸೂರ್ಯಗ್ರಹಣ. ರಾಹುಗ್ರಸ್ತ ಸೂರ್ಯಗ್ರಹಣ. ಚೂಡಾಮಣಿ ಕಂಕಣ ಸೂರ್ಯಗ್ರಹಣವೆಂಬ ಹೆಸರುಗಳಿಂದ ಕರೆಯಲ್ಪಡಲಾಗುತ್ತಿದೆ.
ಏನಿದು ಕಂಕಣ ಸೂರ್ಯಗ್ರಹಣ?
ಸೂರ್ಯನ ಪರಿಪೂರ್ಣ ಬಿಂಬ ಮುಚ್ಚಲಾಗದೇ ಕೇವಲ ಚಂದ್ರ ಮುಂದೆ ಇದ್ದು ಸುತ್ತಲೂ ಉಂಗುರದಂತೆ ಕಾಣಿಸಿಕೊಳ್ಳೋದನ್ನು ಕಂಕಣ ಸೂರ್ಯಗ್ರಹಣ ಎನ್ನಲಾಗುತ್ತೆ. ಈ ಗ್ರಹಣದ ವೇಳೆ ರಾಹುವಿನ ಪ್ರಭಾವ ಸೂರ್ಯನ ಮೇಲೆ ಹೆಚ್ಚಾಗಿ ಬೀಳೋದ್ರಿಂದ ಇದನ್ನು ರಾಹುಗ್ರಸ್ಥ ಸೂರ್ಯಗ್ರಹಣ ಅಂತಾ ಹೇಳಲಾಗುತ್ತೆ.
ಗ್ರಹಣ ಗೋಚರ ಸಮಯ
ಬೆಳಗ್ಗೆ 10.12ಕ್ಕೆ ಗ್ರಹಣ ಆರಂಭ
ಬೆಳಗ್ಗೆ 11.47ಕ್ಕೆ ಗ್ರಹಣದ ಸಂಪೂರ್ಣತೆ
ಮಧ್ಯಾಹ್ನ 1.31ಕ್ಕೆ ಗ್ರಹಣದ ಮೋಕ್ಷ ಕಾಲ
ಕಂಕಣ ಸೂರ್ಯಗ್ರಹಣವು ಭಾರತದ 23 ರಾಜ್ಯಗಳಲ್ಲಿ ಗೋಚರಿಸಲಿದೆ. ಇನ್ನು ಜಗತ್ತಿನಾದ್ಯಂತ ಪ್ರಮುಖವಾಗಿ ಕಂಕಣ ಸೂರ್ಯಗ್ರಹಣ ಎಲ್ಲೆಲ್ಲಿ ಗೋಚರವಾಗುತ್ತೆ ಅಂತಾ ನೋಡೋದಾದ್ರೆ, ಆಫ್ರಿಕಾದ ಕೆಲ ಭಾಗಗಳಲ್ಲಿ, ಕಾಂಗೋ, ಇಥಿಯೋಪಿಯಾ, ದಕ್ಷಿಣ ಪಾಕಿಸ್ತಾನ, ಚೀನಾದ ಶೆನ್ಜೆನ್, ಪಾಕಿಸ್ತಾನದ ಸುಕ್ಕೂರ್, ಉತ್ತರ ಭಾರತ ಹಾಗೂ ದಕ್ಷಿಣ ಭಾರತದ ಕೆಲವು ಕಡೆಗಳಲ್ಲಿ ಗ್ರಹಣ ಗೋಚರವಾಗಲಿದೆ.
ದೆಹಲಿಯಲ್ಲಿ ಈ ಕಂಕಣ ಸೂರ್ಯಗ್ರಹಣ ಉಂಗುರದಂತೆ ಕಾಣಿಸಿದ್ರೆ, ಉತ್ತರಾಖಂಡದ ಟೆಹರಿಯಲ್ಲಿ ಕಪ್ಪಾಗಿ ಕಾಣುತ್ತೆ. ಇನ್ನು ಬೆಂಗಳೂರಿನಲ್ಲಿ ಶೇ 36.17ರಷ್ಟು ಕಾಣಿಸುತ್ತೆ. ಕೆಲ ನಿಮಿಷಗಳ ಅಂತರದಲ್ಲಿ ದೇಶದ ನಾನಾ ಭಾಗಗಳಲ್ಲಿ ಈ ಕಂಕಣ ಸೂರ್ಯಗ್ರಹಣ ಗೋಚರವಾಗಲಿದೆ.
ಗ್ರಹಣ ಗೋಚರ ಸಮಯ
ಬೆಂಗಳೂರು
ಬೆಳಗ್ಗೆ 10.12 ನಿಮಿಷಕ್ಕೆ ಸೂರ್ಯಗ್ರಹಣ ಆರಂಭ
ಬೆಳಗ್ಗೆ 11.45 ಕ್ಕೆ ಗ್ರಹಣದ ಸಂಪೂರ್ಣತೆ
ಮಧ್ಯಾಹ್ನ 1.13 ಕ್ಕೆ ಗ್ರಹಣದ ಮೋಕ್ಷಕಾಲ
ಮೈಸೂರು
ಮೈಸೂರಿನಲ್ಲಿ ಬೆಳಗ್ಗೆ 10.10ಕ್ಕೆ ಗ್ರಹಣ ಆರಂಭ
ಬೆಳಗ್ಗೆ 11.42ಕ್ಕೆ ಗ್ರಹಣದ ಸಂಪೂರ್ಣತೆ
ಮಧ್ಯಾಹ್ನ 1.26ಕ್ಕೆ ಗ್ರಹಣದ ಮೋಕ್ಷಕಾಲ
ಮಂಗಳೂರು
ಬೆಳಗ್ಗೆ 10.04ಕ್ಕೆ ಗ್ರಹಣ ಆರಂಭಕ್ಕೆ
11.36ಕ್ಕೆ ಗ್ರಹಣದ ಸಂಪೂರ್ಣತೆ
ಮಧ್ಯಾಹ್ನ 1.21ಕ್ಕೆ ಗ್ರಹಣದ ಮೋಕ್ಷಕಾಲ
ಸೂರ್ಯಗ್ರಹಣವನ್ನು ಯಾವುದೇ ಕಾರಣಕ್ಕೂ ನೇರವಾಗಿ ವೀಕ್ಷಿಸೋದು ಅಷ್ಟು ಒಳ್ಳೇದಲ್ಲ. ಹಾಗಂತಾ ಗ್ರಹಣ ವೀಕ್ಷಣೆಯಿಂದ ಕೆಡುಕಾಗುತ್ತೆ ಎಂಬ ಮೌಢ್ಯ ತಪ್ಪು. ಈ ತಪ್ಪು ಕಲ್ಪನೆಯಿಂದ ಹೊರಬಂದು ಸುರಕ್ಷಿತ ಕನ್ನಡಕಗಳ ಮೂಲಕ ಬಾಲ್ ಮಿರರ್, ಪಿನ್ ಹೋಲ್ ಕ್ಯಾಮೆರಾ ಮೂಲಕ ಸೂರ್ಯನ ಬೆಳಕನ್ನು ಪರದೆ ಅಥವಾ ಗೋಡೆಯ ಮೇಲೆ ಮೂಡಿಸಿ ಗ್ರಹಣವನ್ನ ವೀಕ್ಷಿಸಬಹುದಾಗಿದೆ ಅಂತ ಖಗೋಳ ಶಾಸ್ತ್ರಜ್ಞರು ಹೇಳುತ್ತಿದ್ದಾರೆ.