ಉಡುಪಿಗೆ ಮತ್ತೊಂದು ಕೊರೊನಾಘಾತ, ಮಹಾರಾಷ್ಟ್ರದಿಂದ ಬಂದಿದ್ದ ವ್ಯಕ್ತಿ ದಿಢೀರ್ ಸಾವು
ಉಡುಪಿ: ಕೇವಲ ಒಂದು ದಿನದ ಹಿಂದಷ್ಟೇ ಮಹಾರಾಷ್ಟ್ರದಿಂದ ಬಂದಿದ್ದ ವ್ಯಕ್ತಿಯೊರ್ವ ಸಾವನ್ನಪ್ಪಿರುವ ಘಟನೆ ಉಡುಪಿ ಜಿಲ್ಲೆಯಲ್ಲಿ ಸಂಭವಿಸಿದೆ. ಗುರುವಾರ ಮಹಾರಾಷ್ಟ್ರದಿಂದ ಕುಂದಾಪುರಕ್ಕೆ ಬಂದಿದ್ದ 54 ವರ್ಷದ ವ್ಯಕ್ತಿ ಮನೆಯಲ್ಲೇ ಕ್ವಾರಂಟೈನ್‌ಗೊಳಗಾಗಿದ್ದರು. ಆದ್ರೆ ಆ ವಕ್ತಿ ಈಗ ದಿಢೀರ್ ಆಗಿ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಮಾತನಾಡಿರುವ ಜಿಲ್ಲಾಧಿಕಾರಿ ಜಿ ಜಗದೀಶ್, ಮೃತ ವ್ಯಕ್ತಿ ಮತ್ತು ಅವರೊಂದಿಗೆ ಬಂದಿದ್ದ ಇತರ ಮೂವರಿಗೆ ಟೆಸ್ಟ್ ಮಾಡಿದಾಗ ಯಾವುದೇ ಕೋವಿಡ್-19 ಲಕ್ಷಣಗಳು ಕಂಡುಬಂದಿರಲಿಲ್ಲ. ಆದ್ರೆ ಈಗ ಗಂಟಲು ದ್ರವ ಪರೀಕ್ಷೆಯಲ್ಲಿ ಸೋಂಕಿರೋದು ಪತ್ತೆಯಾಗಿದೆ. […]
Follow us on
ಉಡುಪಿ: ಕೇವಲ ಒಂದು ದಿನದ ಹಿಂದಷ್ಟೇ ಮಹಾರಾಷ್ಟ್ರದಿಂದ ಬಂದಿದ್ದ ವ್ಯಕ್ತಿಯೊರ್ವ ಸಾವನ್ನಪ್ಪಿರುವ ಘಟನೆ ಉಡುಪಿ ಜಿಲ್ಲೆಯಲ್ಲಿ ಸಂಭವಿಸಿದೆ. ಗುರುವಾರ ಮಹಾರಾಷ್ಟ್ರದಿಂದ ಕುಂದಾಪುರಕ್ಕೆ ಬಂದಿದ್ದ 54 ವರ್ಷದ ವ್ಯಕ್ತಿ ಮನೆಯಲ್ಲೇ ಕ್ವಾರಂಟೈನ್‌ಗೊಳಗಾಗಿದ್ದರು. ಆದ್ರೆ ಆ ವಕ್ತಿ ಈಗ ದಿಢೀರ್ ಆಗಿ ಸಾವನ್ನಪ್ಪಿದ್ದಾರೆ.
ಈ ಬಗ್ಗೆ ಮಾತನಾಡಿರುವ ಜಿಲ್ಲಾಧಿಕಾರಿ ಜಿ ಜಗದೀಶ್, ಮೃತ ವ್ಯಕ್ತಿ ಮತ್ತು ಅವರೊಂದಿಗೆ ಬಂದಿದ್ದ ಇತರ ಮೂವರಿಗೆ ಟೆಸ್ಟ್ ಮಾಡಿದಾಗ ಯಾವುದೇ ಕೋವಿಡ್-19 ಲಕ್ಷಣಗಳು ಕಂಡುಬಂದಿರಲಿಲ್ಲ. ಆದ್ರೆ ಈಗ ಗಂಟಲು ದ್ರವ ಪರೀಕ್ಷೆಯಲ್ಲಿ ಸೋಂಕಿರೋದು ಪತ್ತೆಯಾಗಿದೆ. ಆದ್ರೆ ಅವರ ಸಾವಿನ ಕಾರಣ ಪೋಸ್ಟ್ ಮಾರ್ಟಂ ನಂತರವೇ ತಿಳಿದು ಬರಬೇಕು ಎಂದಿದ್ದಾರೆ.