AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು, ಮೈಸೂರು ಸೇರಿ ರಾಜ್ಯದ 10 ಕಡೆ ಲೋಕಾಯುಕ್ತ ರೇಡ್​​​: ದಾಳಿ ವೇಳೆ ಸಿಕ್ಕಿದ್ದೇನು?

ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದ 10 ಸ್ಥಳಗಳಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ, ವಿವಿಧ ಇಲಾಖೆಯ ಅಧಿಕಾರಿಗಳ ಮನೆ ಮತ್ತು ಕಚೇರಿಗಳಲ್ಲಿ ಶೋಧ ನಡೆಸಿದ್ದಾರೆ. ಈ ವೇಳೆ ಹಲವರ ಮನೆಯಲ್ಲಿ ಚಿನ್ನಾಭರಣ, ನಗದು, ಆಸ್ತಿ ಪತ್ರಗಳು ಮತ್ತು ಐಷಾರಾಮಿ ವಾಹನಗಳು ಪತ್ತೆಯಾಗಿವೆ. ಭ್ರಷ್ಟಾಚಾರ ನಿಗ್ರಹದ ಈ ಪ್ರಮುಖ ಕಾರ್ಯಾಚರಣೆಯು ರಾಜ್ಯಾದ್ಯಂತ ಭ್ರಷ್ಟ ಅಧಿಕಾರಿಗಳಿಗೆ ತೀವ್ರ ಆಘಾತ ನೀಡಿದೆ.

ಬೆಂಗಳೂರು, ಮೈಸೂರು ಸೇರಿ ರಾಜ್ಯದ 10 ಕಡೆ ಲೋಕಾಯುಕ್ತ ರೇಡ್​​​: ದಾಳಿ ವೇಳೆ ಸಿಕ್ಕಿದ್ದೇನು?
ಲೋಕಾಯುಕ್ತ ದಾಳಿ ವೇಳೆ ಪತ್ತೆಯಾದ ಚಿನ್ನ ಮತ್ತು ಬೆಳ್ಳಿಯ ಆಭರಣ, ವಸ್ತುಗಳು
ಪ್ರಸನ್ನ ಹೆಗಡೆ
|

Updated on:Nov 25, 2025 | 7:26 PM

Share

ಬೆಂಗಳೂರು, ನವೆಂಬರ್​​ 25: ಮೈಸೂರು, ಬೆಂಗಳೂರು ಸೇರಿ ರಾಜ್ಯದ ಹತ್ತು ಸ್ಥಳಗಳಲ್ಲಿ ಲೋಕಾಯುಕ್ತ ಪೊಲೀಸರು ಇಂದು ದಾಳಿ ನಡೆಸಿದ್ದಾರೆ. ವಿವಿಧ ಇಲಾಖೆಯ ಅಧಿಕಾರಿಗಳ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಲಾಗಿದ್ದು, ಆ ಪೈಕಿ ಹಲವರ ಮನೆಯಲ್ಲಿ ರೇಡ್​​ ವೇಳೆ ಅಪಾರ ಪ್ರಮಾಣದ ಚಿನ್ನ-ಬೆಳ್ಳಿ, ನಗದು ಮತ್ತು ದಾಖಲೆ ಪತ್ರಗಳು ಲಭ್ಯವಾಗಿರುವ ಮಾಹಿತಿ ಸಿಕ್ಕಿದೆ.

ಯಾರ್ಯಾರಿಗೆ ಲೋಕಾಯುಕ್ತ ಶಾಕ್​?

  • ಬೆಂಗಳೂರು- ಎಲೆಕ್ಟ್ರಾನಿಕ್ ಸಿಟಿ ಆರ್‌ಟಿಒ ಕಚೇರಿ ಶಾಖಾಧೀಕ್ಷಕ ಕೃಷ್ಣಮೂರ್ತಿ ಪಿ.
  • ಮಂಡ್ಯ- ನಗರ ಪಾಲಿಕೆ CAO ಪುಟ್ಟಸ್ವಾಮಿ
  • ಬೀದರ್- ಕೃಷ್ಣಾ ಮೇಲ್ದಂಡೆ ಯೋಜನೆ ಮುಖ್ಯ ಇಂಜಿನಿಯರ್ ಪ್ರೇಮ್ ಸಿಂಗ್
  • ಮೈಸೂರು- ಹೂಟಗಳ್ಳಿ ನಗರ ಪಾಲಿಕೆ ರೆವಿನ್ಯೂ ಇನ್ಸ್​​ಪೆಕ್ಟರ್​​ ರಾಮಸ್ವಾಮಿ ಸಿ.
  • ಧಾರವಾಡ- ಕರ್ನಾಟಕ ವಿಶ್ವ ವಿದ್ಯಾಲಯದ ಸಹ ಪ್ರಾಧ್ಯಾಪಕ ಸುಭಾಶ್ ಚಂದ್ರ
  • ಧಾರವಾಡ- ಪಶು ಕ್ಲಿನಿಕ್ ಹುಲಿಗೋಲ್ ಹಿರಿಯ ಪರೀಕ್ಷಕ ಸತೀಶ್
  • ಶಿವಮೊಗ್ಗ- SIMS ಮೆಡಿಕಲ್ ಕಾಲೇಜಿನ FDA ಲಕ್ಷ್ಮೀಪತಿ ಸಿ.ಎನ್.
  • ದಾವಣಗೆರೆ- APMC ಸ. ನಿರ್ದೇಶಕ ಪ್ರಭು ಜೆ.
  • ಮೈಸೂರು- ಮಡಿಕೇರಿ PWD, ಸ.ಅ.ಇಂಜಿನಿಯರ್ ಗಿರೀಶ್ ಡಿ.ಎಂ.

ದಾಳಿ ವೇಳೆ ಏನೆಲ್ಲ ಪತ್ತೆ?

ಎಲೆಕ್ಟ್ರಾನಿಕ್ ಸಿಟಿ ಆರ್‌ಟಿಒ ಕಚೇರಿ ಶಾಖಾಧೀಕ್ಷಕ ಕೃಷ್ಣಮೂರ್ತಿ ಪಿ. ಅವರ ಮನೆಯಲ್ಲಿ ದಾಳಿ ವೇಳೆ 4 ಕೋಟಿ 26 ಲಕ್ಷ ಮೌಲ್ಯದ ಆಸ್ತಿಪಾಸ್ತಿ ಪತ್ತೆಯಾಗಿದೆ.3 ಕೋಟಿ 3 ಲಕ್ಷ ಮೌಲ್ಯದ ಸ್ಥಿರಾಸ್ತಿ, 92 ಲಕ್ಷ ಮೌಲ್ಯದ ಚರಾಸ್ತಿ, 7 ನಿವೇಶನ, 4 ವಾಸದ ಮನೆ, 5 ಎಕರೆ 30 ಗುಂಟೆ ಕೃಷಿ ಜಮೀನು ಸೇರಿ ಕೃಷ್ಣಮೂರ್ತಿ ಪಿ. ಬಳಿ 3 ಕೋಟಿ 3 ಲಕ್ಷ ರೂ. ಮೌಲ್ಯದ ಸ್ಥಿರಾಸ್ತಿ ಪತ್ತೆಯಾಗಿದೆ. 22 ಲಕ್ಷ ನಗದು, 32 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ, 16 ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತು, 22 ಲಕ್ಷ ಮೌಲ್ಯದ ವಾಹನಗಳ ಬಗ್ಗೆಯೂ ಮಾಹಿತಿ ಸಿಕ್ಕಿದೆ.

ಇದನ್ನೂ ಓದಿ: ಬೆಂಗಳೂರು, ಮಂಡ್ಯ ಸೇರಿದಂತೆ ಕರ್ನಾಟಕದ 10 ಜಿಲ್ಲೆಗಳಲ್ಲಿ ಲೋಕಾಯುಕ್ತ ದಾಳಿ

ಧಾರವಾಡ ಕರ್ನಾಟಕ ವಿಶ್ವ ವಿದ್ಯಾಲಯದ ಸಹ ಪ್ರಾಧ್ಯಾಪಕ ಸುಭಾಶ್ ಚಂದ್ರ ಮನೆಯಲ್ಲಿ 1 ಲಕ್ಷ ನಗದು, 30 ಗ್ರಾಂ ಚಿನ್ನ ಪತ್ತೆಯಾಗಿದೆ. ಕೊಪ್ಪಳ ಜಿಲ್ಲೆ ಬೆಟಗೇರಿಯಲ್ಲಿ ಇರುವ 18 ಎಕರೆ ಜಮೀನು ದಾಖಲೆ. ಧಾರವಾಡ ಜಿಲ್ಲೆಯಲ್ಲಿ ಒಟ್ಟು 5 ಸೈಟು ಇರುವ ಬಗ್ಗೆ ಮಾಹಿತಿ‌ ದೊರೆತಿದೆ. ಒಂದು ಇನ್ನೋವಾ ಮತ್ತು ಕಾರು ಇರುವ ಬಗ್ಗೆ ಗೊತ್ತಾಗಿದ್ದು, ಬ್ಯಾಂಕ್ ಲಾಕರ್ ತೆರೆಯದ ಹಿನ್ನೆಲೆ ಆ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಮೈಸೂರಿನಲ್ಲಿ ಲೋಕಾಯುಕ್ತ ಪೊಲೀಸರ ದಾಳಿ ವೇಳೆ ರೆವಿನ್ಯೂ ಇನ್ಸ್​​ಪೆಕ್ಟರ್​​ ರಾಮಸ್ವಾಮಿ ಸಿ. ಮನೆಯಲ್ಲಿ 650 ಗ್ರಾಂ ಚಿನ್ನ, 5 ಕೆಜಿ ಬೆಳ್ಳಿ, 2.50 ಲಕ್ಷ ನಗದು ಮತ್ತು ಅಪಾರ ಪ್ರಮಾಣದ ಆಸ್ತಿ ಪತ್ರಗಳು ಪತ್ತೆಯಾಗಿವೆ. ಐಷಾರಾಮಿ ಫಾರ್ಮ್​ಹೌಸ್ ನಿರ್ಮಿಸಿರುವ ಬಗ್ಗೆಯೂ ಮಾಹಿತಿ ಸಿಕ್ಕಿದೆ.

ದಾವಣಗೆರೆ ಎಪಿಎಂಸಿ ಮಾರಾಟ ವಿಭಾಗದ ಸಹಾಯಕ‌ ನಿರ್ದೇಶಕ ಜೆ. ಪ್ರಭು ಮನೆಯಲ್ಲಿ 1 ಕೆಜಿ 700 ಗ್ರಾಂ ಚಿನ್ನಾಭರಣ ಹಾಗೂ 10 ಕೆಜಿ ಬೆಳ್ಳಿ ಪತ್ತೆಯಾಗಿದೆ. ದಾವಣಗೆರೆ ಆಂಜನೇಯ ಬಡಾವಣೆಯಲ್ಲಿನ ಮನೆ‌, ಚನ್ನಗಿರಿ ತಾಲೂಕಿನ ದೊಡ್ಡಘಟ್ಟ ಗ್ರಾಮದಲ್ಲಿನ ತೋಟದ ಮನೆ ಹಾಗೂ ಕಚೇರಿ ಮೇಲೆ ಲೋಕಾಯುಕ್ತ ದಾಳಿ ನಡೆಸಿತ್ತು. ಮನೆಯಲ್ಲಿ 7.5 ಲಕ್ಷ ನಗದು, ಎರಡು ಮನೆ, 6 ನಿವೇಶನಗಳ ದಾಖಲೆಗಳು ಪತ್ತೆಯಾಗಿವೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 6:50 pm, Tue, 25 November 25