AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಎಂ ಕುರ್ಚಿ ಕದನ: ದೆಹಲಿಯಿಂದ ಬಂದಿಳಿಯುತ್ತಿದ್ದಂತೆಯೇ ಹೊಸ ಬಾಂಬ್ ಸಿಡಿಸಿದ ಡಿಕೆಶಿ ಬಣದ ಶಾಸಕ

ಸಿಎಂ ಕುರ್ಚಿ ಕದನ: ದೆಹಲಿಯಿಂದ ಬಂದಿಳಿಯುತ್ತಿದ್ದಂತೆಯೇ ಹೊಸ ಬಾಂಬ್ ಸಿಡಿಸಿದ ಡಿಕೆಶಿ ಬಣದ ಶಾಸಕ

ರಮೇಶ್ ಬಿ. ಜವಳಗೇರಾ
|

Updated on: Nov 25, 2025 | 9:27 PM

Share

ತಮ್ಮ ನಾಯಕನನ್ನು ಸಿಎಂ ಮಾಡಬೇಕೆಂದು ಡಿಕೆ ಶಿವಕುಕುಮಾರ್ ಬಣದ ಶಾಸಕರು ದೆಹಲಿ ಪರೇಡ್ ನಡೆಸಿ ಇದೀಗ ವಾಪಸ್ ಬೆಂಗಳೂರಿಗೆ ಆಗಮಿಸಿದ್ದಾರೆ. ಶಾಸಕ ಇಕ್ಬಾಲ್ ಹುಸೇನ್ ಕೆಂಪೇಗೌಡ ಏರ್​ಪೋರ್ಟ್​ನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ನಾಲ್ಕೈದು ಜನರ ಮಧ್ಯೆ ಅಧಿಕಾರ ಹಂಚಿಕೆ ಬಗ್ಗೆ ಚರ್ಚೆ ಆಗಿದೆ. ಈಗಲೂ ಅವರೆ ಕುಳಿತು ಈ ಬಗ್ಗೆ ನಿರ್ಧಾರ ತೆಗೆದುಕೊಳ್ತಾರೆ ಹೊಸ ಬಾಂಬ್ ಸಿಡಿಸಿದ್ದಾರೆ.

ಬೆಂಗಳೂರು, (ನವೆಂಬರ್ 25): ಸಿಎಂ ಕುರ್ಚಿ ಕದನ ಕ್ಲ್ಯಮ್ಯಾಕ್ಸ್ ಹಂತಕ್ಕೆ ಬಂದಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಬಣ ಉಲ್ಬಣ ತೀವ್ರಗೊಳ್ಳುತ್ತಿದ್ದಂತೆಯೇ ಬಿಕೆ ಹರಿಪ್ರಸಾದ್ ಹಾಗೂ ಪ್ರಿಯಾಂಕ್ ಖರ್ಗೆ ಅವರು ರಾಹುಲ್ ಗಾಂಧಿಯನ್ನು ಭೇಟಿ ಮಾಡಿ ಕರ್ನಾಟಕ ಕಾಂಗ್ರೆಸ್​​ನಲ್ಲಿ ನಡೆಯತ್ತಿರುವ ರಾಜಕೀಯ ವಿದ್ಯಮಾನಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಇನ್ನು ತಮ್ಮ ನಾಯಕನನ್ನು ಸಿಎಂ ಮಾಡಬೇಕೆಂದು ಡಿಕೆ ಶಿವಕುಕುಮಾರ್ ಬಣದ ಶಾಸಕರು ದೆಹಲಿ ಪರೇಡ್ ನಡೆಸಿ ಇದೀಗ ವಾಪಸ್ ಬೆಂಗಳೂರಿಗೆ ಆಗಮಿಸಿದ್ದಾರೆ. ಶಾಸಕ ಇಕ್ಬಾಲ್ ಹುಸೇನ್ ಕೆಂಪೇಗೌಡ ಏರ್​ಪೋರ್ಟ್​ನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ನಾಲ್ಕೈದು ಜನರ ಮಧ್ಯೆ ಅಧಿಕಾರ ಹಂಚಿಕೆ ಬಗ್ಗೆ ಚರ್ಚೆ ಆಗಿದೆ. ಈಗಲೂ ಅವರೆ ಕುಳಿತು ಈ ಬಗ್ಗೆ ನಿರ್ಧಾರ ತೆಗೆದುಕೊಳ್ತಾರೆ ಹೊಸ ಬಾಂಬ್ ಸಿಡಿಸಿದ್ದಾರೆ.