ಕೊಡಗು: ಕೊರೊನಾ ಮಹಾಮಾರಿ ತನ್ನ ಆರ್ಭಟವನ್ನು ಮತ್ತೆ ಹೆಚ್ಚಿಸುತ್ತಿದೆ. ಕೇರಳದಿಂದ ಬರುತ್ತಿರುವವರಿಗೆ ಕೊವಿಡ್ ನೆಗೆಟಿವ್ ವರದಿ ಕಡ್ಡಾಯವಾಗಿದೆ. ಕೇರಳದಿಂದ ಕೊಡಗು ಪ್ರವೇಶಿಸುವವರು ನಕಲಿ ವರದಿ ಸಲ್ಲಿಸಿ ಕೊಡಗು ಪ್ರವೇಶಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕೊರೊನಾ ಆತಂಕ ಜಿಲ್ಲೆಯಲ್ಲಿ ಹೆಚ್ಚಾಗಿದೆ.
ಜನರು ಕುಟ್ಟ ಚೆಕ್ ಪೋಸ್ಟ್ ಬಳಿ ನಕಲಿ ವರದಿ ಸಲ್ಲಿಸಿ ಕೊಡಗು ಪ್ರವೇಶಿಸಿದ್ದಾರೆ. ಹೀಗಾಗಿ ಎಲ್ಲರಿಗೂ ಕೊರೊನಾ ಹರಡುವ ಆತಂಕ ಏರ್ಪಟ್ಟಿದೆ. ಕಳೆದ 24 ಗಂಟೆಗಳಲ್ಲಿ 38 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಹಿಂದೆ ದಿನಕ್ಕೆ ಒಂದೆರೆಡು ಪ್ರಕರಣ ವರದಿಯಾಗುತ್ತಿತ್ತು. ಇಂದು ಒಂದೇ ದಿನ 22 ಮಂದಿಗೆ ಸೋಂಕು ತಗುಲಿದೆ. ನಿನ್ನೆ ಸೋಮವಾರ ಒಂದೇ ದಿನ 16 ಮಂದಿಗೆ ಸೋಂಕು ತಗುಲಿದೆ. ನಕಲಿ ಕೋವಿಡ್ ಟೆಸ್ಟ್ ರಿಪೋರ್ಟ್ ತೋರಿಸಿ ನೂರಾರು ಮಂದಿ ಒಳ ನುಸುಳಿದ್ದಾರೆ. ಹೀಗಾಗಿ ವರದಿ ಅಸಲಿಯೋ ನಕಲಿಯೋ ಎಂದು ಚೆಕ್ಪೋಸ್ಟ್ ಬಳಿ ಸಿಬ್ಬಂದಿ ಪರದಾಟುವಂತಹ ಪರಿಸ್ಥಿತಿ ಎದುರಾಗಿದೆ.
ಇದನ್ನೂ ಓದಿ: ದೇಶದಲ್ಲಿ ಕೊರೊನಾ 2ನೇ ಅಲೆಯ ಆತಂಕ.. ಮತ್ತೊಮ್ಮೆ ತತ್ತರಿಸಿದ ಮಹಾರಾಷ್ಟ್ರ, ಕೇರಳ
Published On - 1:36 pm, Tue, 23 March 21