ಕರ್ನಾಟಕದಲ್ಲಿ ಇಂದು 1,179 ಕೊರೊನಾ ಕೇಸ್ ಪತ್ತೆ
ದಿನ ಸಾಗುತ್ತಿದ್ದಂತೆ ಕೊರೊನಾ ಪಾಸಿಟಿವ್ ಕೇಸ್ಗಳು ಹೆಚ್ಚು ಪತ್ತೆಯಾಗುತ್ತಿವೆ. ಕರ್ನಾಟಕದಲ್ಲಿ ಇಂದು ಮಂಗಳವಾರ 1,179 ಕೊರೊನಾ ಕೇಸ್ ಪತ್ತೆಯಾಗಿವೆ.
ಬೆಂಗಳೂರು: ರಾಜ್ಯದಲ್ಲಿ ದಿನ ಸಾಗುತ್ತಿದ್ದಂತೆಯೇ ಹೆಚ್ಚು ಹೆಚ್ಚು ಕೊರೊನಾ ವರದಿ ಕೂಡಾ ದಾಖಲಾಗುತ್ತಿದೆ. ಮತ್ತೆ ಕೊರೊನಾ ಕೇಸ್ಗಳ ಸಂಖ್ಯೆ ಸಾವಿರದ ಗಡಿ ದಾಟಿದೆ. ಕರ್ನಾಟಕದಲ್ಲಿ ಇಂದು ಮಂಗಳವಾರ 1,179 ಕೊರೊನಾ ಕೇಸ್ ಪತ್ತೆಯಾಗಿವೆ.
ಮಾರ್ಚ್ ತಿಂಗಳ 19ನೇ ತಾರೀಕಿನಂದು 1,037 ಕೇಸ್ಗಳು ಪತ್ತೆಯಾಗಿವೆ. 20 ನೇ ತಾರೀಕು 1,186ಕೇಸ್ಗಳು ಪತ್ತೆಯಾಗಿವೆ. 21ನೇ ತಾರೀಕು 1,039 ಕೇಸ್ ಪತ್ತೆಯಾಗಿವೆ. 22 ನೇ ತಾರೀಕಿನಂದು 886 ಕೇಸ್ಗಳು ಪತ್ತೆಯಾಗಿವೆ. ಇಂದು ಮಂಗಳವಾರ 1,179 ಸೋಂಕಿತರು ಪತ್ತೆಯಾಗಿವೆ. ಜಿಲ್ಲೆಗಳಿಗೆ ಕೊರೊನಾ ಎರಡನೇ ಅಲೆ ಹರಡುತ್ತಿರುವ ಕಾರಣದಿಮದಾಗಿ ಜಿಲ್ಲಾಡಳಿತ ಎಚ್ಚರವಹಿಸಿ ಆಯಾ ಜಿಲ್ಲೆಯ ಜನರಿಗೆ ಕಡ್ಡಾಯವಾಗಿ ಕೊರೊನಾ ನಿಯಂತ್ರಣ ಕ್ರಮ ಪಾಲಿಸಲು ಎಚ್ಚರ ಮೂಡಿಸಲು ಆದೇಶ ಈಗಾಗಲೇ ನಿಡಿದೆ. ಆದರೂ ಕೆಲ ಜಿಲ್ಲೆಗಳಲ್ಲಿ ಕೊವಿಡ್ ನಿಯಮ ಉಲ್ಲಂಘನೆ ಆಗುತ್ತಿದ್ದು, ಈ ಕುರಿತಂತೆ ಜಿಲ್ಲಾಡಳಿತ ಜೊತೆ ಜನರು ಎಚ್ಚರವಹಿಸುವ ಅವಶ್ಯಕತೆ ಇದೆ.
ಕಲಬುರಗಿ ಜಿಲ್ಲೆಯಲ್ಲಿ ಕೊರೊನಾ ಪ್ರಕರಣ ಹೆಚ್ಚಳ ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ್ಚಳ ಹಿನ್ನೆಲೆಯಲ್ಲಿ ಕೊರೊನಾ ಸೋಂಕು ಹೇಗೆ ಹಬ್ಬುತ್ತಿದೆ ಅನ್ನುವುದರ ಬಗ್ಗೆ ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ. ಜಿಲ್ಲೆಯ ಎಲ್ಲಾ ಶಾಲಾ ಮಕ್ಕಳಿಗೆ ಕೊರೊನಾ ಟೆಸ್ಟ್ ಮಾಡಲು ಆರೋಗ್ಯ ಇಲಾಖೆ ಮುಂದಾಗಿದೆ. ಸರ್ಕಾರದ ಸೂಚನೆಯ ಮೇರೆಗೆ ಮಕ್ಕಳಿಗೆ ಕೊರೊನಾ ಟೆಸ್ಟ್ ಮಾಡಿಸಲಾಗುತ್ತಿದೆ. ಶಾಲಾ ಕಾಲೇಜು ಸೇರಿದಂತೆ ಹಾಸ್ಟೆಲ್ನ ಮಕ್ಕಳಿಗೆ ಕೊರೊನಾ ಟೆಸ್ಟ್ ಮಾಡಿಸಲಾಗುತ್ತಿದೆ. ಮಾರ್ಕೆಟ್ ಸೇರಿದಂತೆ ಹೆಚ್ಚಿನ ಜನಜಂಗುಳಿ ಪ್ರದೇಶದಲ್ಲಿ ಕೊರೊನಾ ಟೆಸ್ಟ್ ಮಾಡಿಸಲು ಆರೋಗ್ಯ ಇಲಾಖೆ ಮುಂದಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚಿನ ಜನರಿಗೆ ಕೊರೊನಾ ಟೆಸ್ಟ್ ಪ್ರಾರಂಭಿಸಿದ ಜಿಲ್ಲಾಡಳಿತ ಸೂಚನೆ ನೀಡಿದೆ.
ಬೆಳಗಾವಿಯಲ್ಲಿ ಕೆರೂರಿನಲ್ಲಿ ಕೊವಿಡ್ ನಿಯಮ ಉಲ್ಲಂಘಿಸಿ ಅದ್ಧೂರಿ ಜಾತ್ರೆ
ಮಹಾರಾಷ್ಟ್ರದಲ್ಲಿ ಕೊರೊನಾ ಆರ್ಭಟದ ನಡುವೆಯೂ ಬೆಳಗಾವಿಯಲ್ಲಿ ಅದ್ದೂರಿ ಜಾತ್ರೆ ಹಮ್ಮಿಕೊಳ್ಳಲಾಗಿದೆ. ಕೆರೂರು ಗ್ರಾಮದಲ್ಲಿ ಕೊರೊನಾ ನಿಯಮಗಳನ್ನು ಗಾಳಿಗೆ ತೂರಿ ಜಾತ್ರೆ ಆಚರಣೆ ಮಾಡಲಾಗಿದೆ. ಅರಣ್ಯಸಿದ್ದೇಶ್ವರ (ಮಲಕಾರಿಸಿದ್ದೇಶ್ವರ) ಜಾತ್ರೆ ನಡೆಸಲಾಗಿದೆ. ದೇವರ ಪಲ್ಲಕ್ಕಿ ವೇಳೆ ಒಂದೂವರೆ ಟನ್ ಭಂಡಾರ ಎರಚಿ ಸಾವಿರಾರು ಭಕ್ತರು ಅದ್ದೂರಿ ಜಾತ್ರೆ ಆಚರಿಸಿದ್ದಾರೆ. ಅದ್ದೂರಿ ಜಾತ್ರೆಗೆ ಸರ್ಕಾರ ಬ್ರೇಕ್ ಹಾಕಿದ್ದರೂ ಸಾವಿರಾರು ಭಕ್ತರನ್ನ ಸೇರಿಸಿ ನಿನ್ನೆ ಸೋಮವಾರ ಜಾತ್ರೆ ಆಚರಿಸಲಾಗಿದೆ. ನೆರೆಯ ಮಹಾರಾಷ್ಟ್ರ ಸೇರಿದಂತೆ ಬೆಳಗಾವಿ ಜಿಲ್ಲೆಯ ಬಹುತೇಕ ಕಡೆಗಳಿಂದ ಭಕ್ತರು ಆಗಮಿಸಿದ್ದರು.
ಇದನ್ನೂ ಓದಿ: ದೇಶದ ವಿವಿಧೆಡೆ ಕೊರೊನಾ ಆತಂಕ: ಮಣಿಪಾಲದಲ್ಲಿ 72 ಮಂದಿಗೆ ಸೋಂಕು ದೃಢ, ತಮಿಳುನಾಡಿನಲ್ಲಿ ಶಾಲೆಗಳಿಗೆ ರಜೆ ಘೋಷಣೆ
ಮಹಾರಾಷ್ಟ್ರದಲ್ಲಿ ಒಂದೇ ದಿನ 25 ಸಾವಿರ ಕೊರೊನಾ ಕೇಸ್ ಪತ್ತೆ; ಮತ್ತೆ ಕಾಡಿದ ಲಾಕ್ಡೌನ್ ಭಯ