ಶೇ 50ಕ್ಕಿಂತ ಹೆಚ್ಚು ಮೀಸಲಾತಿ ನೀಡಲು ಅವಕಾಶ ಕೊಡಿ.. ಯಡಿಯೂರಪ್ಪ ಸರ್ಕಾರ ಸಲ್ಲಿಸಿತು ಸುಪ್ರೀಂಗೆ ಮನವಿ

Reservation| ಪಂಚಮಸಾಲಿ, ಕುರುಬ ಮತ್ತು ಕೋಲಿ ಸಮುದಾಯಗಳ ಮೀಸಲಾತಿ ಬೇಡಿಕೆಯನ್ನು ಈಡೇರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್​ಗೆ ಈ ಮನವಿ ಮಾಡಿದೆ ಎಂಬ ವಿಶ್ಲೇಷಣೆ ಕೇಳಿಬಂದಿದೆ.

ಶೇ 50ಕ್ಕಿಂತ ಹೆಚ್ಚು ಮೀಸಲಾತಿ ನೀಡಲು ಅವಕಾಶ ಕೊಡಿ.. ಯಡಿಯೂರಪ್ಪ ಸರ್ಕಾರ ಸಲ್ಲಿಸಿತು ಸುಪ್ರೀಂಗೆ ಮನವಿ
ಪಂಚಮಸಾಲಿ ಮೀಸಲಾತಿ ಹೋರಾಟ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ

ಬೆಂಗಳೂರು: ಮೀಸಲಾತಿಯ ಪ್ರಮಾಣವನ್ನು ಶೇ 50ಕ್ಕಿಂತ ಹೆಚ್ಚು ಮಾಡಲು ಸಮ್ಮತವಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರವು ನಿನ್ನೆ (ಮಾರ್ಚ್ 23) ಸುಪ್ರೀಂಕೋರ್ಟ್​ಗೆ ತಿಳಿಸಿದೆ. ಈ ಮೂಲಕ 1992ರ ಇಂದಿರಾ ಸಹಾನಿ ಪ್ರಕರಣದಲ್ಲಿ ನೀಡಿದ್ದ ಶೇ 50 ಮೀಸಲಾತಿಯನ್ನು ಮೀರಬಾರದು ಎಂಬ ತೀರ್ಪಿನ ಮರು ಪರಿಶೀಲನೆ ಮಾಡುವ ನಿಲುವನ್ನು ರಾಜ್ಯ ಸರ್ಕಾರ ತಳೆದಂತಾಗಿದೆ.  ಪಂಚಮಸಾಲಿ, ಕುರುಬ ಮತ್ತು ಕೋಲಿ ಸಮುದಾಯಗಳ ಮೀಸಲಾತಿ ಬೇಡಿಕೆಯನ್ನು ಈಡೇರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್​ಗೆ ಈ ಮನವಿ ಮಾಡಿದೆ ಎಂಬ ವಿಶ್ಲೇಷಣೆ ಕೇಳಿಬಂದಿದೆ.

ನಿನ್ನೆ ನಡೆದ ರಾಜ್ಯ ಸಚಿವ ಸಂಪುಟದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದ್ದು, 1992ರಲ್ಲಿ ಇದ್ದ ಸಾಮಾಜಿಕ ಮೀಸಲಾತಿ ನಿಯಮಗಳನ್ನೇ ಈ ಸಂದರ್ಭದಲ್ಲಿ ಮುಂದುವರೆಸುವುದು ಸರಿಯಾದ ಕ್ರಮವಲ್ಲ. ಪ್ರತಿ ರಾಜ್ಯಗಳಲ್ಲೂ ಆಯಾ ರಾಜ್ಯ ಸರ್ಕಾರಗಳಿಗೆ ಮೀಸಲಾತಿ ನೀಡುವ ಅಧಿಕಾರವನ್ನು ವಹಿಸಬೇಕು ಎಂದು ರಾಜ್ಯ ಸರ್ಕಾರ ಮನವಿ ಮಾಡಿದೆ.

ಈಗಾಗಲೇ ರಾಜ್ಯದಲ್ಲಿ ಪಂಚಮಸಾಲಿ ಸಮುದಾಯಕ್ಕೆ 2A ಮೀಸಲಾತಿಗೆ ಆಗ್ರಹಿಸಿ ಭಾರಿ ಪ್ರಮಾಣದ ಹೋರಾಟ ನಡೆದಿದೆ.  ಪಂಚಮಸಾಲಿ ಸಮುದಾಯಕ್ಕೆ 2A ಮೀಸಲಾತಿ ಒದಗಿಸುವ ಕುರಿತು ಸಮುದಾಯದ ಸಮಗ್ರ ಅಧ್ಯಯನ ಮಾಡಿ ವರದಿ ಸಲ್ಲಿಸುವಂತೆ  ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಸಿಎಂ ಯಡಿಯೂರಪ್ಪ ಸೂಚನೆ ನೀಡಿದ್ದಾರೆ.  ಕುರುಬ ಸಮುದಾಯಕ್ಕೆ ಎಸ್​ಟಿ ಮಿಸಲಾತಿಗೆ ಒದಗಿಸುವಂತೆ ಆಗ್ರಹಿಸಿಯೂ ಬೃಹತ್ ಸಮಾವೇಶಗಳು ಜರುಗಿವೆ. ಪಂಚಮಸಾಲಿ ಮತ್ತು ಕುರುಬ ಸಮುದಾಯದ ಮೀಸಲಾತಿಗಾಗಿ ಮಠಾಧೀಶರು, ರಾಜಕೀಯ ನಾಯಕರು ಸರ್ಕಾರದ ವಿರುದ್ಧ ನಿನ್ನೆ ಮೊನ್ನೆಯಷ್ಟೇ  ಹೋರಾಟ ನಡೆಸಿದ್ದು ಜನರ ಮನಸ್ಸಲ್ಲಿ ಹಸಿರಾಗಿದೆ.ಇದೀಗ ರಾಜ್ಯ ಸರ್ಕಾರ ಶೇ 50 ಮೀಸಲಾತಿ ಮಿತಿ ಸಡಿಲಿಸುವಂತೆ ಮನವಿ ಮಾಡಿರುವುದು ರಾಜ್ಯದ ವಿವಿಧ ಸಮುದಾಯಗಳ ಮೀಸಲಾತಿ ಕೂಗಿಗೆ ಸರ್ಕಾರ ಓಗುಡುವ ಸೂಚನೆ ನೀಡಿದೆ.  ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಸಿಎಂ ಬಿ.ಎಸ್.ಯಡಿಯೂರಪ್ಪ ಸೂಚನೆ ನೀಡಿದ್ದಾರೆ. ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಸಿಎಂ ಸೂಚನೆ ಕೊಟ್ಟಿದ್ದಾರೆ.

1992ರ ಸಾಮಾಜಿಕ ಸ್ಥಿತಿಗತಿಗಳು ಈಗಿಲ್ಲ. ಸದ್ಯದ ಸಾಮಾಜಿಕ ಪರಿಸ್ಥಿತಿಯಲ್ಲಿನ ಬದಲಾವಣೆಗಳನ್ನು ಆಧರಿಸಿ ಮೀಸಲಾತಿ ನಿಯಮವನ್ನು ಜಾರಿಗೊಳಿಸಬೇಕು. 1931ರಲ್ಲಿ ಜಾರಿಯಾದ ಮಂಡಲ್ ಆಯೋಗದ ವರದಿಯು ಸಹ ಅಂದಿನ ಜನಗಣತಿಯನ್ನು ಆಧರಿಸಿತ್ತು. ಅಂತೆಯೇ ಇಂದಿನ ಜನಸಂಖ್ಯೆ ಮತ್ತು ಸಾಮಾಜಿಕ ಸ್ಥಿತಿಗತಿ, ಅಗತ್ಯತೆ ಮತ್ತು ಪ್ರಮಾಣಿಕೃತ ಅಂಕಿಅಂಶಗಳನ್ನು ಆಧರಿಸಿ ರಾಜ್ಯಗಳಿಗೆ ಮೀಸಲಾತಿ ಒದಗಿಸುವ ಅಧಿಕಾರ ನಿಡಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟ ಸಭೆ ಸರ್ವೋಚ್ಛ ನ್ಯಾಯಾಲಯಕ್ಕೆ ಸಲ್ಲಿಸಿದ ಮನವಿಯಲ್ಲಿ ತಿಳಿಸಿದೆ.

ಇದನ್ನೂ ಓದಿ:  ವಿಶ್ಲೇಷಣೆ | ಪಂಚಮಸಾಲಿ ಮೀಸಲಾತಿ ಮೂಸೆಯಲ್ಲಿ ಬೇಯುವುದು ಯಾರ ಬೇಳೆ?

ಶೇ.50ರಷ್ಟು ಮೀಸಲಾತಿಯನ್ನು ಲಕ್ಷ್ಮಣರೇಖೆಯಂತೆ ಪಾಲಿಸಬೇಕು; ಮರಾಠಾ ಮಿಸಲಾತಿ ಕುರಿತು ಹಿರಿಯ ವಕೀಲ ಅರವಿಂದ ದಾತಾರ್ ವಾದ

‘ಎಷ್ಟು ತಲೆಮಾರುಗಳವರೆಗೆ ಮೀಸಲಾತಿ ಮುಂದುವರೆಸುತ್ತೀರಿ?‘: ಸುಪ್ರೀಂಕೋರ್ಟ್

Read Full Article

Click on your DTH Provider to Add TV9 Kannada