ಬಿಬಿಎಂಪಿ ಮುಖ್ಯ ಕಚೇರಿ ಮೇಲೆ ಇಡಿ ದಾಳಿ, ಪ್ರಮುಖ ಎರಡು ಪ್ರಾಜೆಕ್ಟ್​​ಗಳ ದಾಖಲೆ ಪರಿಶೀಲನೆ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಮುಖ್ಯ ಇಂಜಿನಿಯರ್​ ಕಚೇರಿ ಮೇಲೆ ಇಡಿ ದಾಳಿಯಾಗಿದೆ. ಕೊಳವೆಬಾವಿ ಕೊರೆಸುವ ಸಂಬಂಧ 960 ಕೋಟಿ ರೂಪಾಯಿ ಅಕ್ರಮ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಇಂದು (ಜನವರಿ 07) ಇಡಿ ದಾಳಿ ಮಾಡಿದ್ದು, ಸುಮಾರು 7 ಅಧಿಕಾರಿಗಳ ತಂಡ ಪರಿಶೀಲನೆಯಲ್ಲಿ ತೊಡಗಿದೆ.

ಬಿಬಿಎಂಪಿ ಮುಖ್ಯ ಕಚೇರಿ ಮೇಲೆ ಇಡಿ ದಾಳಿ,  ಪ್ರಮುಖ ಎರಡು ಪ್ರಾಜೆಕ್ಟ್​​ಗಳ ದಾಖಲೆ ಪರಿಶೀಲನೆ
Bbmp
Follow us
Prajwal Kumar NY
| Updated By: ರಮೇಶ್ ಬಿ. ಜವಳಗೇರಾ

Updated on: Jan 07, 2025 | 3:28 PM

ಬೆಂಗಳೂರು, (ಜನವರಿ 07): ಬಿಬಿಎಂಪಿ ಮುಖ್ಯ ಇಂಜಿನಿಯರ್​ ಕಚೇರಿ ಮೇಲೆ ಇಡಿ (ED) ಅಧಿಕಾರಿಗಳು ದಾಳಿ ನಡೆಸಿದ್ದು, ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದೆ. ಕೊಳವೆಬಾವಿ  ಕೊರೆಸುವ ಸಂಬಂಧ 2016ರಿಂದ 2019ರ ಅವಧಿಯಲ್ಲಿ ಸುಮಾರು 960 ಕೋಟಿ ರೂಪಾಯಿ ಅಕ್ರಮವಾಗಿರುವ ಆರೋಪ ಹಾಗೂ ಹಾಗೂ ವೈಟ್ ಟಾಪಿಂಗ್​ನಲ್ಲಿ ಅವ್ಯವಹಾರ ಕೇಳಿಬಂದ ಹಿನ್ನೆಲೆಯಲ್ಲಿ ಇಡಿ ದಾಳಿ ಮಾಡಿದೆ. ಇಂದು (ಜನವರಿ 07) ಬೆಳಗ್ಗೆ 11 ಗಂಟೆಯಿಂದಲೇ ಇಡಿ ಅಧಿಕಾರಿಗಳು ದಾಖಲೆ ಪರಿಶೀಲನೆ ನಡೆಸಿದ್ದಾರೆ.

2016ರಿಂದ 2019ರ ಅವಧಿಯಲ್ಲಿ ನಡೆದಿದ್ದ ಕೊಳವೆಬಾವಿ ಹಗರಣ ಸಂಬಂಧ 2021ರಲ್ಲಿ ಇಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪಕ್ರರಣ ಸಂಬಂಧ 2022ರಲ್ಲಿ ಬಿಬಿಎಂಪಿಗೆ ಇಡಿ ನೋಟಿಸ್​​ ನೀಡಿತ್ತು. ಈಗ ಮುಂದುವರಿದ ಭಾಗವಾಗಿ ಇಡಿ ದಾಳಿ ಮಾಡಿ ಪರಿಶೀಲನೆ ನಡೆಸಿದೆ.

ಬಿಬಿಎಂಪಿ‌ ಚೀಫ್‌ ಇಂಜನೀಯರ್ ಬಿಎಸ್ ಪ್ರಹ್ಲಾದ್ ಅವರನ್ನು ಮುಂದೆ ಕೂಡಿಸಿಕೊಂಡೇ 2016 ರಿಂದ ಬೋರ್ ವೆಲ್. ಆರ್ ಒ ಪ್ಲಾಂಟ್ ಗಳ ಬಗ್ಗೆ ಇಡಿ ಅಧಿಕಾರಿಗಳು ದಾಖಲೆಗಳನ್ನು ಕಲೆಹಾಕುತ್ತಿದ್ದಾರೆ.

ವೈಟ್ ಟಾಪಿಂಗ್ ಬಗ್ಗೆಯೂ ಮಾಹಿತಿ ಕಲೆಹಾಕುತ್ತಿರುವ ಇಡಿ

ಬೋರ್ ವೆಲ್ ಕಾಮಗಾರಿಯಲ್ಲಿ ಅಕ್ರಮ ಹಾಗೂ ವೈಟ್ ಟಾಪಿಂಗ್ ನಲ್ಲಿ ಬಹುಕೋಟಿ ಹಗರಣ. ಈ ಎರಡು ಕಾಮಗಾರಿಗಳ ಬಗ್ಗೆ ಮಾಹಿತಿ ಕೇಳುತ್ತಿದ್ದಾರೆ. 2018-19ರಲ್ಲಿ ಬೆಂಗಳೂರಲ್ಲಿ ನಡೆದ ವೈಟ್ ಟಾಪಿಂಗ್ ನಲ್ಲಿ ಭಾರೀ ಅಕ್ರಮ ಆರೋಪ ಕೇಳಿಬಂದಿತ್ತು. ಈ ಬಗ್ಗೆ ಬೆಂಗಳೂರು ಬಿಜೆಪಿ ಶಾಸಕರ ನಿಯೋಗ 2019ರಲ್ಲಿ ಲೋಕಾಯುಕ್ತಕ್ಕೆ ದೂರು ನೀಡಿತ್ತು.

ಮೊದಲ‌ ಹಂತದಲ್ಲಿ 93.37 kmಗೆ 1147.76 ಕೋಟಿ ರೂ. ವೆಚ್ಚ, ಎರಡನೇ ಹಂತದಲ್ಲಿ 62.80 kmಗೆ 758.56 ಕೋಟಿ‌ ರೂ. ವೆಚ್ಚ, ಮೂರನೇ ಹಂತದಲ್ಲಿ 123 kmಗೆ 1139 ಕೋಟಿ ವೆಚ್ಚ ಮಾಡಲಾಗಿದೆ. 279 km ಉದ್ದದ ರಸ್ತೆಗೆ ವೈಟ್ ಟಾಪಿಂಗ್ ಹಾಗೂ ರಸ್ತೆ ದುರಸ್ಥಿಗೆ ಪಾಲಿಕೆ ವೆಚ್ಚ ಮಾಡಿದ್ದು ಬರೋಬ್ಬರಿ 3046 ಕೋಟಿ ರೂ. ಪ್ರತಿ ಕಿಲೋ ಮೀಟರ್ ಗೆ 12 ರಿಂದ 18 ಕೋಟಿವರೆಗೆ ವೆಚ್ಚ ಮಾಡಿರುವುದಾಗಿ ಪಾಲಿಕೆ ಲೆಕ್ಕ ತೋರಿಸಿದೆ. ಈ ಬಗ್ಗೆ ಬೆಂಗಳೂರು ಬಿಜೆಪಿ ಶಾಸಕರ ನಿಯೋಗ 2019ರಲ್ಲಿ ಲೋಕಾಯುಕ್ತಕ್ಕೆ ದೂರು ನೀಡಿತ್ತು. ಇದೀಗ ಇಡಿ ಅಧಿಕಾರಿಗಳು ಈ ಎರಡು ಪ್ರಮುಖ ಪ್ರಾಜೆಕ್ಟ್​ಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.