Viral: ಮೊಟ್ಟ ಮೊದಲ ಬಾರಿಗೆ ಹಂಗೇರಿ-ರೊಮೇನಿಯಾ ಗಡಿಯನ್ನು ದಾಟಿದ ಬೀದಿ ನಾಯಿ; ಹೃದಯಸ್ಪರ್ಶಿ ವಿಡಿಯೋ ವೈರಲ್
ಯುರೋಪಿಯನ್ ಏಕೀಕರಣದ ಭಾಗವಾಗಿ, ಬಲ್ಗೇರಿಯಾ ಮತ್ತು ರೊಮೇನಿಯಾ ಅಧಿಕೃತವಾಗಿ ಷೆಂಗೆನ್ ವಲಯಕ್ಕೆ ಸೇರಿದೆ. ಇನ್ನೂ ರೊಮೇನಿಯಾ-ಹಂಗೇರಿ ಗಡಿ ಭಾಗದಲ್ಲಿ ಹೊಸದಾಗ ಚೆಕ್‌ಪಾಯಿಂಟ್ ಅನ್ನು ತೆರೆಯಲಾಗಿದೆ. ಇಲ್ಲಿನ ಅಧಿಕಾರಿಗಳು ಮೊದಲ ಬಾರಿಗೆ ಚೆಕ್‌ಪಾಯಿಂಟ್‌ನ ತಡೆಬೇಲಿಯನ್ನು ತೆರೆಯುತ್ತಿದ್ದಂತೆ ಬೀದಿ ನಾಯಿಯೊಂದು ಹಂಗೇರಿಯಿಂದ ರೊಮೇನಿಯಾ ಕಡೆಗೆ ಹೋಗಿದ್ದು, ಇದೀಗ ಈ ಶ್ವಾನ ಹಂಗೇರಿ-ರೊಮೇನಿಯಾ ಗಡಿ ದಾಟಿದ ಮೊದಲ ಸದಸ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಯುರೋಪಿಯನ್ ಏಕೀಕರಣದ ಭಾಗವಾಗಿ ಬಲ್ಗೇರಿಯಾ ಮತ್ತು ರೊಮೇನಿಯಾ ಅಂತಿಮವಾಗಿ ತಮ್ಮ ಗಡಿ ಪರಿಶೀಲನೆಗಳನ್ನು ತ್ಯಜಿಸಿ ಅಧೀಕೃತವಾಗಿ ಷೆಂಗೆನ್ ವಲಯಕ್ಕೆ ಸೇರಿದೆ. ಇದಾದ ಬಳಿಕ ರೊಮೇನಿಯಾ-ಹಂಗೇರಿ ಗಡಿ ಭಾಗದಲ್ಲಿ ಹೊಸದಾಗ ಚೆಕ್‌ಪಾಯಿಂಟ್ ಅನ್ನು ತೆರೆಯಲಾಗಿದ್ದು, ಈ ಎರಡು ದೇಶಗಳ ನಡುವಿನ ಕ್ರಾಸಿಂಗ್‌ಗಳನ್ನು ತೆರೆವು ಐತಿಹಾಸಿಕ ಕ್ಷಣವನ್ನು ಆಚರಿಸಲು ಅಧಿಕಾರಿಗಳು ಒಟ್ಟುಗೂಡಿದ್ದ ಸಂದರ್ಭದಲ್ಲಿ ಹೃದಯಸ್ಪರ್ಶಿ ಘಟನೆಯೊಂದು ನಡೆದಿದೆ. ಹೌದು ಎರಡೂ ದೇಶದ ಅಧಿಕಾರಿಗಳು ಅಧೀಕೃತವಾಗಿ ಹೊಸದಾಗಿ ನಿರ್ಮಿಸಿದ ತಡೆ ಬೇಲಿಯನ್ನು ತೆರೆದಾಗ ಬೀದಿನಾಯಿಯೊಂದು ಹಂಗೇರಿ-ರೊಮೇನಿಯಾ ಗಡಿಯನ್ನು ದಾಟಿದ್ದು, ಇದೀಗ ಈ ಶ್ವಾನ ಗಡಿ ದಾಟಿದ ಮೊದಲ ಸದಸ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಹೃದಯಸ್ಪರ್ಶಿ ವಿಡಿಯೋ ಸಖತ್ ವೈರಲ್ ಆಗುತ್ತಿದೆ.
ಜನವರಿ 1, 2024 ರಂದು ರೊಮೇನಿಯಾ ಯುರೋಪಿಯನ್ ಒಕ್ಕೂಟದ ಷೆಂಗೆನ್ ಪ್ರದೇಶವನ್ನು ಸೇರಿದ್ದು, ಬಲ್ಗೇರಿಯಾ ಮತ್ತು ರೊಮೇನಿಯಾದ ನಾಗರಿಕರು ಇನ್ನು ಮುಂದೆ ಗಡಿ ತಪಾಸಣೆಯಿಲ್ಲದೆ ಷೆಂಗೆನ್‌ಗೆ ಪ್ರಯಾಣಿಸಬಹುದು ಎಂದು ಹೇಳಿದೆ. ಇದರ ನಂತರ ಗಡಿಭಾಗದ ಚೆಕ್ ಪೋಸ್ಟ್‌ಗಳಲ್ಲಿ ಎಲ್ಲಾ ತಪಾಸಣೆಗಳನ್ನು ನಿಲ್ಲಿಸಲಾಗಿದ್ದು, ಹೊಸದಾಗಿ ರೊಮೇನಿಯಾ-ಹಂಗೇರಿ ಗಡಿ ಭಾಗದಲ್ಲಿ ಚೆಕ್ ಪಾಯಿಂಟ್ ಅನ್ನು ಸ್ಥಾಪಿಸಲಾಗಿದೆ. ಈ ಗಡಿ ತೆರೆಯುವ ಖುಷಿಯ ಕ್ಷಣವನ್ನು ಆಚರಿಸಲು ರೊಮೇನಿಯಾ ಮತ್ತು ಹಂಗೇರಿಯ ಅಧಿಕಾರಿಗಳು ತಮ್ಮ ತಮ್ಮ ದೇಶದ ಧ್ವಜ ಹಿಡಿದು ನಿಂತಿದ್ದ ಸಂದರ್ಭದಲ್ಲಿ ಬೀದಿ ನಾಯಿಯೊಂದು ರೊಮೇನಿಯಾ-ಹಂಗೇರಿ ಗಡಿ ದಾಟಿದೆ. ಈ ಕ್ಷಣವನ್ನು ಅಲ್ಲಿ ನೆರೆದಿದ್ದವರು ಚಪ್ಪಾಳೆ ತಟ್ಟುವ ಮೂಲಕ ಸಂಭ್ರಮಿಸಿದ್ದಾರೆ.
Collin Rugg ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಬೀದಿ ನಾಯಿಯೊಂದು ಮೊಟ್ಟ ಮೊದಲ ಬಾರಿಗೆ ಹಂಗೇರಿ-ರೊಮೇನಿಯಾ ಗಟಿ ದಾಟುತ್ತಿರುವ ಸುಂದರ ದೃಶ್ಯವನ್ನು ಕಾಣಬಹುದು. ಚೆಕ್ ಪಾಯಿಂಟ್ ಬಳಿ ತಡೆ ಬೇಲಿಯನ್ನು ತೆರೆಯುತ್ತಿದ್ದಂತೆ ಬೀದಿನಾಯಿಯೊಂದು ಹಂಗೇರಿಯಿಂದ ರೊಮೇನಿಯಾಗೆ ಕಾಲಿಟ್ಟಿದೆ. ಈ ವಿಶೇಷ ಅತಿಥಿ ಮೊದಲ ಬಾರಿಗೆ ಗಡಿ ದಾಟಿದ ಕ್ಷಣವನ್ನು ಅಧಿಕಾರಿಗಳು ಚಪ್ಪಾಳೆ ತಟ್ಟುವ ಮೂಲಕ ಸಂಭ್ರಮಿಸಿದ್ದಾರೆ.
ಇದನ್ನೂ ಓದಿ: ಮೃಗಾಲಯದೊಳಕ್ಕೆ ಬಿದ್ದ ಮಗುವಿನ ಪಾದರಕ್ಷೆಯನ್ನು ವಾಪಸ್ ಕೊಟ್ಟ ಆನೆ; ಮುದ್ದಾದ ವಿಡಿಯೋ ವೈರಲ್
ಜನವರಿ 05 ರಂದು ಹಂಚಿಕೊಳ್ಳಲಾದ ಈ ವಿಡಿಯೋ 3.9 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಈ ದೃಶ್ಯ ತುಂಬಾನೇ ಮುದ್ದಾಗಿದೆʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಆ ನಾಯಿಯನ್ನು ಯಾರಾದರೂ ದತ್ತು ತೆಗೆದುಕೊಳ್ಳಬಹುದಿತ್ತುʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ