Viral: ನನಸಾಯಿತು ಬಾಲ್ಯದ ಕನಸು; ಪ್ರೀಮಿಯರ್ ಪದ್ಮಿನಿ ಕಾರು ಖರೀದಿಸಿದ ಖುಷಿಯಲ್ಲಿ ಬೆಂಗಳೂರಿನ ಯುವತಿ
ಪ್ರತಿಯೊಬ್ಬರು ಕೂಡಾ ಬಾಲ್ಯದಲ್ಲಿ ಒಂದು ಕನಸನ್ನು ಕಂಡಿರುತ್ತಾರೆ ನಾನು ಆ ದೇಶಕ್ಕೆ ಟ್ರಿಪ್ ಹೋಗ್ಬೇಕು, ನಾನು ಇಂತಹ ವಸ್ತುವನ್ನು ಖರೀದಿಸ್ಬೇಕು ಅಂತೆಲ್ಲಾ. ಆ ಕನಸುಗಳು ನನಸಾದರೆ ಅದರ ಖುಷಿಯೇ ಬೇರೆ. ಅದೇ ರೀತಿ ಇಲ್ಲೊಬ್ಳು ಯುವತಿ ಕೂಡಾ ತನ್ನ ಡ್ರೀಮ್ ಕಾರ್ ಆದಂತಹ ಪ್ರೀಮಿಯರ್ ಪದ್ಮಿನಿ ವಿಂಟೇಜ್ ಕಾರನ್ನು ಖರೀದಿ ಮಾಡಿದ್ದು, ಈ ಕುರಿತ ವಿಡಿಯೋವೊಂದು ಇದೀಗ ಸಖತ್ ವೈರಲ್ ಆಗುತ್ತಿದೆ.
ಹೆಚ್ಚಿನ ಜನರು ಐಷಾರಾಮಿ ಕಾರು, ಬೈಕ್ ಖರೀದಿಸಬೇಕು, ತಮ್ಮಿಷ್ಟದ ಸ್ಪೋರ್ಟ್ಸ್ ಕಾರು ಖರೀದಿಸಬೇಕು ಅಂತೆಲ್ಲಾ ಬಯಸುತ್ತಾರೆ. ಅದರಲ್ಲೂ ಈಗಿನ ಜನರೇಷನ್ ಯುವಕರು ಖರೀದಿ ಮಾಡಿದ್ರೆ ಪೋರ್ಷೆ, ಲಂಬೋರ್ಗಿನಿ ಕಾರುಗಳನ್ನೇ ಖರೀದಿ ಮಾಡ್ಬೇಕು ಎಂದು ಆಸೆ ಪಡ್ತಾರೆ. ಆದ್ರೆ ಇಲ್ಲೊಬ್ಳು ಯುವತಿ 1950 ರಿಂದ 1997 ರವರೆಗೆ ಸಖತ್ ಸದ್ದು ಮಾಡಿದ್ದ ಹಾಗೂ ಇದೀಗ ತನ್ನ ನಿರ್ಮಾಣವನ್ನೇ ನಿಲ್ಲಿಸಿರುವ ಪ್ರೀಮಿಯರ್ ಪದ್ಮಿನಿ ಕಾರನ್ನು ಖರೀದಿ ಮಾಡಿದ್ದಾಳೆ. ಬಣ್ಣ ಮಾಸಿದ, ಗ್ಲಾಸ್‌ಗಳು ಒಡೆದು ಹೋಗಿರುವ ಕಾರನ್ನು ಖರೀದಿ ಮಾಡಿ ಅದಕ್ಕೆ ಹೊಸ ಲುಕ್ ನೀಡಿದ್ದಾಳೆ. ತನ್ನ ಕನಸಿನ ಕಾರನ್ನು ಖರೀಸಿದ ಈ ಖುಷಿಯ ಕಥೆಯನ್ನು ಆಕೆ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಈ ವಿಡಿಯೋ ಇದೀಗ ಫುಲ್ ವೈರಲ್ ಆಗುತ್ತಿದೆ.
ಬೆಂಗಳೂರಿನ ರಚನಾ ಮಹಡಿಮನೆ ಎಂಬ ಯುವತಿ ತನ್ನ ಹುಟ್ಟುಹಬ್ಬಕ್ಕೆ ಪ್ರೀಮಿಯರ್ ಪದ್ಮಿನಿ ಕಾರನ್ನು ಖರೀದಿ ಮಾಡಿದ್ದಾಳೆ. ಕೆಲವು ತಿಂಗಳುಗಳ ಹಿಂದೆ ಬಣ್ಣ ಮಾಸಿದ ಹಾಗೂ ಗಾಜುಗಳು ಒಡೆದು ಹೋಗಿದ್ದಂತಹ ಕಾರನ್ನು ಖರೀದಿಸಿ, ಇದೀಗ ಆಕೆ ಆ ಕಾರಿಗೆ ರಾಯಲ್ ಲುಕ್ ನೀಡಿದ್ದಾಳೆ. “ನನ್ನ ಹುಟ್ಟುಹಬ್ಬಕ್ಕೆ ನಾನು ಕಾರ್ ಖರೀಸಿದೆ. ಅದು ನನ್ನ ಕನಸಿನ ಕಾರು. ಚಿಕ್ಕಂದಿನಿಂದಲೂ ಈ ಕಾರಿನ ಬಗ್ಗೆ ಕನಸು ಕಂಡಿದ್ದೆ. ಅಂತಿಮವಾಗಿ ರಿಪೇರಿ ಕೆಲಸವೆಲ್ಲ ಮುಗಿದ ಬಳಿಕ ಪೌಡರ್ ಬ್ಲೂ ಬಣ್ಣದ ನನ್ನಿಷ್ಟದ ಕಾರು ನನ್ನ ಕೈ ಸೇರಿದೆ ಎಂದು” ಎಂದು ಆಕೆ ಹೇಳಿಕೊಂಡಿದ್ದಾಳೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
View this post on Instagram
rachanamahadimane ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಲಾದ ವಿಡಿಯೋದಲ್ಲಿ ರಚನಾ ತಾನು ಖರೀದಿಸಿದ ಡ್ರೀಮ್ ಕಾರು ಹಾಗೂ ಅದನ್ನು ಖರೀದಿಸಿದ ಕಥೆಯನ್ನು ಹೇಳಿಕೊಳ್ಳುತ್ತಿರುವ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ವಾರಣಾಸಿಯಲ್ಲಿ ಗಾಳಿಪಟ ಹಾರಿಸಿದ ಕಪಿರಾಯ; ವಿಡಿಯೋ ವೈರಲ್
ಡಿಸೆಂಬರ್ 31 ರಂದು ಹಂಚಿಕೊಳ್ಳಲಾದ ಈ ವಿಡಿಯೋ 1.4 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಯುವತಿಯ ಕಾರ್ ಕ್ರೇಜ್‌ಗೆ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ