AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಮೃಗಾಲಯದೊಳಕ್ಕೆ ಬಿದ್ದ ಮಗುವಿನ ಪಾದರಕ್ಷೆಯನ್ನು ವಾಪಸ್‌ ಕೊಟ್ಟ ಆನೆ; ಮುದ್ದಾದ ವಿಡಿಯೋ ವೈರಲ್‌

ಗುಣದಲಿ ಮನುಷ್ಯರಿಗಿಂತ ಪ್ರಾಣಿ ಪಕ್ಷಿಗಳೇ ಮೇಲು ಅಂತ ಹೇಳ್ತಾರೆ. ಈ ಭೂಮಿ ಮೇಲೆ ನಡೆಯುವ ಕೆಲವೊಂದು ಸನ್ನಿವೇಶಗಳನ್ನು ನೋಡಿದಾಗ ಅಕ್ಷರಶಃ ಈ ಮಾತು ನಿಜವೆಂದು ಭಾಸವಾಗುತ್ತದೆ. ಇದೀಗ ಇದಕ್ಕೆ ಉದಾಹರಣೆಯಂತಿರುವ ವಿಡಿಯೋ ವೈರಲ್‌ ಆಗಿದ್ದು, ಮೃಗಾಲಯದೊಳಕ್ಕೆ ಬಿದ್ದ ಮಗುವಿನ ಪಾದರಕ್ಷೆಯನ್ನು ಅಲ್ಲಿದ್ದ ಆನೆ ಜೋಪಾನವಾಗಿ ವಾಪಸ್‌ ಕೊಟ್ಟಿದೆ. ಆನೆಯ ಈ ಸಭ್ಯತೆ, ನಿಶ್ಕಲ್ಮಶ ಮನಸ್ಸನ್ನು ಕಂಡು ನೆಟ್ಟಿಗರು ಫುಲ್‌ ಫಿದಾ ಆಗಿದ್ದಾರೆ.

ಮಾಲಾಶ್ರೀ ಅಂಚನ್​
| Edited By: |

Updated on: Jan 07, 2025 | 2:16 PM

Share

ಮನುಷ್ಯರಿಗಿಂತ ಪ್ರಾಣಿಗಳೇ ಗುಣದಲಿ ಮೇಲು ಎಂಬ ಮಾತೊಂದಿದೆ. ಈ ಭೂಮಿ ಮೇಲೆ ನಡೆಯುವ ಕೆಲವೊಂದು ಸನ್ನಿವೇಶಗಳನ್ನು ನೋಡಿದಾಗ ಅಕ್ಷರಶಃ ಈ ಮಾತು ನಿಜವೆಂದು ಭಾಸವಾಗುತ್ತದೆ. ಹೌದು ಮನುಷ್ಯನಿಗೆ ಹೋಲಿಸಿದರೆ ಮಾನವೀಯ ಗುಣ, ಸಹಾಯ ಮನೋಭಾವ, ಒಳ್ಳೆಯತನ ಮೂಕ ಜೀವಿಗಳಿಗೆಯೇ ತುಸು ಹೆಚ್ಚಿದೆ. ಇದಕ್ಕೆ ಉದಾಹರಣೆಯಂತಿರುವ ಮತ್ತೊಂದು ಘಟನೆ ನಡೆದಿದ್ದು, ಮೃಗಾಲಯದೊಳಕ್ಕೆ ಬಿದ್ದ ಮಗುವಿನ ಪಾದರಕ್ಷೆಯನ್ನು ಅಲ್ಲಿದ್ದ ಆನೆ ಜೋಪಾನವಾಗಿ ವಾಪಸ್‌ ಕೊಟ್ಟಿದೆ. ಈ ಹೃದಯಸ್ಪರ್ಶಿ ದೃಶ್ಯ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿದ್ದು, ಆನೆಯ ಈ ಸಭ್ಯತೆ, ನಿಶ್ಕಲ್ಮಶ ಮನಸ್ಸನ್ನು ಕಂಡು ನೆಟ್ಟಿಗರು ಫುಲ್‌ ಫಿದಾ ಆಗಿದ್ದಾರೆ.

ವರ್ಷಗಳ ಹಿಂದೆ ಚೀನಾದ ಶಾನ್‌ಡಾಂಗ್‌ನ ವೈಹೈ ನಗರದಲ್ಲಿನ ಮೃಗಾಲಯದಲ್ಲಿ ನಡೆದ ಘಟನೆ ಇದಾಗಿದ್ದು, ಇಲ್ಲಿನ ಶಾನ್‌ ಮೈ ಏಂಬ 25 ವರ್ಷದ ಗಂಡಾನೆಯು ತನ್ನ ಆವರಣದೊಳಕ್ಕೆ ಬಿದ್ದ ಮಗುವಿನ ಪಾದರಕ್ಷೆಯನ್ನು ವಾಪಸ್‌ ನೀಡಿತ್ತು. ಇದೀಗ ಈ ಕುರಿತ ವಿಡಿಯೋವನ್ನು ಭಾರತೀಯ ಅರಣ್ಯಾಧಿಕಾರಿ ಸುಸಂತ ನಂದಾ (susantananda3) ಅವರು ತಮ್ಮ ಎಕ್ಸ್‌ ಖಾತೆಯಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ವೈರಲ್‌ ಆಗುತ್ತಿರುವ ಈ ವಿಡಿಯೋದಲ್ಲಿ ಆನೆ ಮಗುವಿನ ಶೂ ಹಿಂದಿರುಗಿಸುತ್ತಿರುವ ದೃಶ್ಯವನ್ನು ಕಾಣಬಹುದು. ಆನೆಯ ಆವರಣದೊಳಗೆ ಮಗುವಿನ ಪಾದರಕ್ಷೆ ಬಿದ್ದಿದ್ದು, ಇದನ್ನು ನೋಡಿದ ಆನೆ ತನ್ನ ಸೊಂಡಿನಿಂದ ಪಾದರಕ್ಷೆಯನ್ನು ಎತ್ತಿ ಮಗುವಿಗೆ ವಾಪಸ್‌ ನೀಡಿದೆ.

ಇದನ್ನೂ ಓದಿ: ನನಸಾಯಿತು ಬಾಲ್ಯದ ಕನಸು; ಪ್ರೀಮಿಯರ್‌ ಪದ್ಮಿನಿ ಕಾರು ಖರೀದಿಸಿದ ಖುಷಿಯಲ್ಲಿ ಬೆಂಗಳೂರಿನ ಯುವತಿ

ಜನವರಿ 6 ರಂದು ಹಂಚಿಕೊಳ್ಳಲಾದ ಈ ವಿಡಿಯೋ 13 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಈ ಮುಗ್ಧ ಪ್ರಾಣಿಯಿಂದ ಮನುಷ್ಯ ಕಲಿಯಬೇಕಾದದ್ದು ಬಹಳಷ್ಟಿದೆʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಆಹಾ… ಈ ದೃಶ್ಯ ಮನಸ್ಸಿಗೆ ತುಂಬಾನೇ ಹತ್ತಿರವಾಯಿತುʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ.

ವೈರಲ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ