ತೃತೀಯ ಲಿಂಗಿಗಳ ಅಂತ್ಯಕ್ರಿಯೆ ರಾತ್ರಿಯೇ ನಡೆಯುವುದೇಕೆ? ಸಾವಿನ ಬಳಿಕ ಅವರಿಗೇಕೆ ಶೂಗಳಿಂದ ಹೊಡೆಯುತ್ತಾರೆ?

ಹಿಜ್ರಾಗಳ ಪ್ರಪಂಚವು ಎಲ್ಲ ರೀತಿಯಲ್ಲೂ ಸಾಮಾನ್ಯ ಜನರಿಗಿಂತ ಬಹಳ ಭಿನ್ನವಾಗಿದೆ. ತೃತೀಯ ಲಿಂಗಿಗಳನ್ನು ಹಿಜ್ರಾಗಳೆಂದು ಕರೆಯಲಾಗುತ್ತದೆ. ಹಿಂದೂ ಧರ್ಮದಲ್ಲಿ ತೃತೀಯ ಲಿಂಗಿ ಎಂದು ಕರೆಯಲ್ಪಡುವ ಹಿಜ್ರಾ ಸಮುದಾಯವು ಭಾರತೀಯ ಸಮಾಜದಲ್ಲಿ ಒಂದು ವಿಶಿಷ್ಟ ಸ್ಥಾನವನ್ನು ಪಡೆದಿರುವ ಒಂದು ಗುಂಪು. ಅವರು ಸಂಪೂರ್ಣವಾಗಿ ಪುರುಷನೂ ಅಲ್ಲ, ಸ್ತೀಯೂ ಅಲ್ಲ. ಹಿಜ್ರಾಗಳು ತಮ್ಮ ಆಧ್ಯಾತ್ಮಿಕ ಶಕ್ತಿಗಳಿಗಾಗಿ ದೀರ್ಘಕಾಲದಿಂದ ಗೌರವಿಸಲ್ಪಟ್ಟಿದ್ದಾರೆ. ಅವರು ಭಾರತದ ಸಾಂಸ್ಕೃತಿಕ ಮತ್ತು ಧಾರ್ಮಿಕ ಆಚರಣೆಗಳಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಾರೆ. ಆದರೆ, ಅವರ ಜೀವನದ ಬಗ್ಗೆ ನಿಮಗೆ ತಿಳಿದಿರದ ಕೆಲವು ನಿಗೂಢ ಸಂಗತಿಗಳು ಇಲ್ಲಿವೆ.

ತೃತೀಯ ಲಿಂಗಿಗಳ ಅಂತ್ಯಕ್ರಿಯೆ ರಾತ್ರಿಯೇ ನಡೆಯುವುದೇಕೆ? ಸಾವಿನ ಬಳಿಕ ಅವರಿಗೇಕೆ ಶೂಗಳಿಂದ ಹೊಡೆಯುತ್ತಾರೆ?
Hijra Image
Follow us
ಸುಷ್ಮಾ ಚಕ್ರೆ
|

Updated on: Jan 07, 2025 | 5:45 PM

ನವದೆಹಲಿ: ಭಾರತದಲ್ಲಿ ಹಿಜ್ರಾಗಳೆಂದು ಕರೆಯಲ್ಪಡುವ ತೃತೀಯ ಲಿಂಗಿಗಳ ಆಚರಣೆಗಳು ಬಹಳ ವಿಶಿಷ್ಟವಾಗಿರುತ್ತದೆ. ಅವರ ಕೆಲವು ನಿಗೂಢ ಆಚರಣೆಗಳ ಬಗ್ಗೆ ಮಾಹಿತಿ ಇಲ್ಲಿದೆ. ಹಿಜ್ರಾಗಳು ನಮಗಾಗಿ ಪ್ರಾರ್ಥಿಸುತ್ತಾರೆ. ಹಿಂದೂ ಧರ್ಮದಲ್ಲಿ ಹಿಜ್ರಾಗಳು ವಿಶೇಷ ಶಕ್ತಿಯನ್ನು ಹೊಂದಿದ್ದಾರೆಂದು ನಂಬಲಾಗಿದೆ. ಆದರೆ, ಜನರಿಗೆ ಅವರ ಜೀವನದ ಬಗ್ಗೆ ಬಹಳ ಕಡಿಮೆ ತಿಳಿದಿದೆ. ಅವರ ಅಂತ್ಯಕ್ರಿಯೆಗಳಿಗೆ ಸಂಬಂಧಿಸಿದ ಕೆಲವು ಆಘಾತಕಾರಿ ಸಂಪ್ರದಾಯಗಳ ಬಗ್ಗೆ ಮಾಹಿತಿ ಇಲ್ಲಿದೆ.

ಸಾವಿನ ನಂತರ ಹಿಜ್ರಾಗಳನ್ನು ಹೇಗೆ ದಹನ ಮಾಡುತ್ತಾರೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಅವರ ಅಂತ್ಯಕ್ರಿಯೆಯನ್ನು ರಾತ್ರಿಯಲ್ಲಿ ಏಕೆ ನಡೆಸಲಾಗುತ್ತದೆ? ಎಂಬ ವಿವರ ಇಲ್ಲಿದೆ. ಹಿಜ್ರಾಗಳ ಅಂತ್ಯಕ್ರಿಯೆಯನ್ನು ಅತ್ಯಂತ ಗೌಪ್ಯವಾಗಿ ನಡೆಸಲಾಗುತ್ತದೆ. ದೊಡ್ಡ ಗುಂಪುಗಳು ಸೇರುವ ಸಾಮಾನ್ಯ ಜನರ ಅಂತ್ಯಕ್ರಿಯೆಗಿಂತ ಭಿನ್ನವಾಗಿ, ಈ ಹಿಜ್ರಾಗಳ ಅಂತ್ಯಕ್ರಿಯೆಗಳನ್ನು ರಾತ್ರಿಯಲ್ಲಿಯೇ ಮಾಡಲಾಗುತ್ತದೆ. ಹಾಗೂ ಈ ಅಂತ್ಯಕ್ರಿಯೆಗೆ ಹಿಜ್ರಾಗಳನ್ನು ಹೊರತುಪಡಿಸಿ ಬೇರೆಯವರು ಪಾಲ್ಗೊಳ್ಳುವುದಿಲ್ಲ. ಏಕೆಂದರೆ ಯಾರಾದರೂ ಹಿಜ್ರಾಗಳ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡರೆ ಅವರು ತಮ್ಮ ಮುಂದಿನ ಜೀವನದಲ್ಲಿ ಹಿಜ್ರಾ ಆಗಿ ಮರುಜನ್ಮ ಪಡೆಯುತ್ತಾರೆ ಎಂದು ನಂಬಲಾಗಿದೆ.

ಇದನ್ನೂ ಓದಿ: ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು?

ಹಿಜ್ರಾಗಳ ಸಂಪ್ರದಾಯದಲ್ಲಿ ದೇಹವನ್ನು ನಾಲ್ಕು ಭುಜಗಳ ಮೇಲೆ ಹೊತ್ತು ಸಾಗಿಸುವ ರೀತಿಯಲ್ಲಿಯೇ ಅಂತ್ಯಕ್ರಿಯೆ ನಡೆಸಲಾಗುತ್ತದೆ. ಆದರೆ, ಹಿಜ್ರಾಗಳ ದೇಹವನ್ನು ಹೆಚ್ಚು ಖಾಸಗಿ ರೀತಿಯಲ್ಲಿ ಸ್ಮಶಾನಕ್ಕೆ ಕೊಂಡೊಯ್ಯಲಾಗುತ್ತದೆ. ಸತ್ತವರನ್ನು ಬಿಳಿ ಬಟ್ಟೆಯಲ್ಲಿ ಸುತ್ತಿಡಲಾಗುತ್ತದೆ. ಶವಸಂಸ್ಕಾರದ ಮೊದಲು ಪವಿತ್ರ ನದಿ ನೀರನ್ನು ಅವರ ಬಾಯಿಗೆ ಸುರಿಯಲಾಗುತ್ತದೆ.

ಈ ಸಮಯದಲ್ಲಿ ಹಿಜ್ರಾಗಳು ತಿನ್ನುವುದು, ಕುಡಿಯುವುದು ಅಥವಾ ಹೊರಗೆ ಹೋಗುವುದನ್ನು ನಿಲ್ಲಿಸುತ್ತಾರೆ. ಮುಂದಿನ ಜನ್ಮದಲ್ಲಿ ತಮ್ಮನ್ನು ಹಿಜ್ರಾಗಳನ್ನಾಗಿ ಮಾಡಬೇಡಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತಾ ಪ್ರಾರ್ಥನೆಯಲ್ಲಿ ಮಗ್ನರಾಗುತ್ತಾರೆ. ಅವರ ಅಂತಿಮ ಪ್ರಯಾಣದ ಮೊದಲು, ಅವರ ದೇಹಗಳನ್ನು ಶೂಗಳಿಂದ ಹೊಡೆಯಲಾಗುತ್ತದೆ. ಈ ಕ್ರಿಯೆಯು ಅವರು ಜೀವನದಲ್ಲಿ ಮಾಡಿದ ಯಾವುದೇ ಪಾಪಗಳಿಗೆ ಪ್ರಾಯಶ್ಚಿತ್ತವನ್ನು ನೀಡುತ್ತದೆ ಎಂದು ನಂಬಲಾಗಿದೆ. ಇದು ಅವರ ಮುಂದಿನ ಜೀವನದಲ್ಲಿ ಗಂಡು ಅಥವಾ ಹೆಣ್ಣಾಗಿ ಮರುಜನ್ಮವನ್ನು ನೀಡುತ್ತದೆ ಎಂಬ ನಂಬಿಕೆಯಿದೆ.

ಇದನ್ನೂ ಓದಿ: ಸತ್ತ ವ್ಯಕ್ತಿಯ ಜೀವ ಉಳಿಸಿದ ರಸ್ತೆ ಗುಂಡಿ; ಹೊಸ ವರ್ಷದಂದೇ ನಡೆಯಿತು ಪವಾಡ!

ಮುಸ್ಲಿಂ ಹಿಜ್ರಾಗಳು ಸತ್ತಾಗ, ಅವರ ದೇಹವನ್ನು ಇಸ್ಲಾಮಿಕ್ ಸಂಪ್ರದಾಯಗಳ ಪ್ರಕಾರ ಶುದ್ಧೀಕರಿಸಲಾಗುತ್ತದೆ. ಅವುಗಳನ್ನು ಸಾಮಾನ್ಯವಾಗಿ ಬಿಳಿ ಬಟ್ಟೆಯಲ್ಲಿ ಸುತ್ತಿ ಪ್ರಾರ್ಥನೆಗಾಗಿ ಮಸೀದಿಗೆ ಕರೆದೊಯ್ಯಲಾಗುತ್ತದೆ. ನಂತರ ಅವುಗಳನ್ನು ಸಮಾಧಿ ಮಾಡಲಾಗುತ್ತದೆ, ಆದರೆ ಸುಡುವುದಿಲ್ಲ. ಇದು ಅವರ ಧಾರ್ಮಿಕ ನಂಬಿಕೆಗಳಿಗೆ ಅನುಗುಣವಾಗಿ ನಡೆಯುವ ಕ್ರಿಯೆಯಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು