AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕನ್ನಡಕದಲ್ಲಿ ಹಿಡನ್ ಕ್ಯಾಮೆರಾ ಬಳಸಿ ಅಯೋಧ್ಯೆಯ ರಾಮಮಂದಿರದ ಒಳಗಿನ ದೃಶ್ಯ ಸೆರೆಹಿಡಿದ ಯುವಕ ಅರೆಸ್ಟ್

ವಡೋದರಾದ ಜಯಕುಮಾರ್ ಎಂಬ ಯುವಕ ತನ್ನ ಕನ್ನಡಕದಲ್ಲಿದ್ದ ಕ್ಯಾಮೆರಾದ ಮೂಲಕ ಅಯೋಧ್ಯೆಯ ರಾಮಮಂದಿರದ ಫೋಟೋಗಳನ್ನು ತೆಗೆಯಲು ಪ್ರಯತ್ನಿಸಿದ್ದಕ್ಕಾಗಿ ಬಂಧಿಸಲಾಯಿತು. ಇದರಿಂದ ರಾಮ ಮಂದಿರದ ಸುತ್ತಲೂ ಭದ್ರತೆ ಹೆಚ್ಚಿಸಲಾಯಿತು. ಅಯೋಧ್ಯೆಯ ರಾಮಮಂದಿರದೊಳಗೆ ಕನ್ನಡಕದಲ್ಲಿ ಕ್ಯಾಮರಾ ಅಡಗಿಸಿ ಫೋಟೋ ತೆಗೆಯಲು ಪ್ರಯತ್ನಿಸುತ್ತಿದ್ದ ಆ ಯುವಕನನ್ನು ಬಂಧಿಸಲಾಗಿದೆ. ಗುಜರಾತಿನ ವಡೋದರಾದ ಜಯಕುಮಾರ್ ಎಂಬ ವ್ಯಕ್ತಿಯನ್ನು ದೇವಾಲಯದ ಆವರಣದಲ್ಲಿ ಭದ್ರತಾ ಕ್ರಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಅಧಿಕಾರಿಗಳು ಬಂಧಿಸಿದ್ದಾರೆ.

ಕನ್ನಡಕದಲ್ಲಿ ಹಿಡನ್ ಕ್ಯಾಮೆರಾ ಬಳಸಿ ಅಯೋಧ್ಯೆಯ ರಾಮಮಂದಿರದ ಒಳಗಿನ ದೃಶ್ಯ ಸೆರೆಹಿಡಿದ ಯುವಕ ಅರೆಸ್ಟ್
Young Man Captures Footage Inside Ram Mandir
ಸುಷ್ಮಾ ಚಕ್ರೆ
|

Updated on: Jan 07, 2025 | 4:44 PM

Share

ಅಯೋಧ್ಯೆ: ಅಯೋಧ್ಯೆಯ ರಾಮಮಂದಿರದಲ್ಲಿ ಖಾಸಗಿತನ ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮೊಬೈಲ್ ಫೋನ್‌ಗಳು ಮತ್ತು ಕ್ಯಾಮೆರಾಗಳ ಮೇಲೆ ಕಟ್ಟುನಿಟ್ಟಾದ ನಿಷೇಧವನ್ನು ಜಾರಿಗೊಳಿಸಲಾಗಿದೆ. ಆದರೂ ವಡೋದರಾದ ಯುವಕನೊಬ್ಬ ತನ್ನ ಕನ್ನಡದಲ್ಲಿ ಹಿಡನ್ ಕ್ಯಾಮೆರಾ ಇರಿಸಿಕೊಂಡು ರಾಮಮಂದಿರದ ಒಳಗಿನ ದೃಶ್ಯಗಳನ್ನು ಚಿತ್ರೀಕರಿಸುತ್ತಿದ್ದ. ಈ ವಿಷಯ ಗೊತ್ತಾಗುತ್ತಿದ್ದಂತೆ ಆತನನ್ನು ಬಂಧಿಸಲಾಗಿದೆ.

ಯುವಕನೊಬ್ಬ ತನ್ನ ಕನ್ನಡಕದೊಳಗೆ ಅಳವಡಿಸಲಾದ ಕ್ಯಾಮರಾವನ್ನು ಬಳಸಿಕೊಂಡು ಅಯೋಧ್ಯೆಯ ರಾಮಮಂದಿರದ ಚಿತ್ರಗಳನ್ನು ತೆಗೆಯುತ್ತಿದ್ದನು. ಈ ಯುವಕ ಗುಜರಾತ್​ನ ವಡೋದರ ಮೂಲದ ಜೈಕುಮಾರ್ ಎಂದು ಪತ್ತೆಹಚ್ಚಲಾಗಿದೆ. ಪೊಲೀಸರು ಮತ್ತು ಗುಪ್ತಚರ ಸಂಸ್ಥೆಗಳು ಆತನನ್ನು ವಿಚಾರಣೆ ನಡೆಸುತ್ತಿವೆ. ರಾಮ ಮಂದಿರದ ಆವರಣದೊಳಗೆ ಮೊಬೈಲ್ ಕೊಂಡೊಯ್ಯುವುದು ಮತ್ತು ಛಾಯಾಚಿತ್ರ ತೆಗೆಯುವುದನ್ನು ನಿಷೇಧಿಸಲಾಗಿದೆ ಎಂದು ತಿಳಿದಿದ್ದರೂ ಆತ ಈ ರೀತಿ ಮಾಡಿರುವುದಕ್ಕೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ಇದನ್ನೂ ಓದಿ: ಎಲ್ಲೆಂದರಲ್ಲಿ ರಾಮಮಂದಿರದಂತಹ ವಿವಾದಗಳನ್ನು ಹುಟ್ಟುಹಾಕಬೇಡಿ : ಮೋಹನ್ ಭಾಗವತ್

ಕಾನೂನು ಜಾರಿ ಮತ್ತು ಗುಪ್ತಚರ ಅಧಿಕಾರಿಗಳು ಪರಿಸ್ಥಿತಿಯ ಬಗ್ಗೆ ವಿಚಾರಣೆಯನ್ನು ಪ್ರಾರಂಭಿಸಿದ್ದಾರೆ, ಜಯಕುಮಾರ್ ಅವರ ಉದ್ದೇಶಗಳು ಮತ್ತು ಕ್ಯಾಮೆರಾ ತಂದ ಹಿಂದಿನ ಕಾರಣ ತಿಳಿಯಲು ವಿಚಾರಣೆ ನಡೆಸಿದ್ದಾರೆ. ಈ ಘಟನೆಯು ಧಾರ್ಮಿಕ ಸ್ಥಳಗಳಲ್ಲಿ, ವಿಶೇಷವಾಗಿ ಅಯೋಧ್ಯೆಯ ರಾಮ ಮಂದಿರದಂತಹ ಮಹತ್ತರವಾದ ರಾಷ್ಟ್ರೀಯ ಪ್ರಾಮುಖ್ಯತೆಯ ಸ್ಥಳಗಳ ಭದ್ರತಾ ಕ್ರಮಗಳ ಬೇಡಿಕೆಗೆ ಕಾರಣವಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ