ಮಂಡ್ಯ ಬಂದ್: ಮುಚ್ಚಿದ ಅಂಗಡಿಗಳನ್ನು ಓಪನ್ ಮಾಡಿಸಿ ಮಾಲೀಕರಿಗೆ ಹೂನೀಡಿ ಧೈರ್ಯ ಹೇಳಿದ ಬಿಜೆಪಿ ಕಾರ್ಯಕರ್ತರು
ಮಂಡ್ಯ ಬಂದ್: ಮುಚ್ಚಿದ್ದ ಅಂಗಡಿ ಮುಂಗಟ್ಟುಗಳನ್ನು ಓಪನ್ ಮಾಡಿದ ಮಾಲೀಕರು ಬಿಜೆಪಿ ಕಾರ್ಯಕರ್ತರ ಜೊತೆ ಅಂಬೇಡ್ಕರ್ ಗೆ ಜಯವಾಗಲಿ, ಅಮಿತ್ ಶಾಗೆ ಜಯವಾಗಲಿ ಎಂದು ಘೋಷಣೆಗಳನ್ನು ಕೂಗಿದ್ದು ವಿಶೇಷ. ಮಂಡ್ಯದ ಬಿಜೆಪಿ ಕಾರ್ಯಕರ್ತರು ಕೈಯಲ್ಲಿ ಅಂಬೇಡ್ಕರ್ ಫೋಟೋ ಮತ್ತು ಒಂದು ಟ್ರೇನಲ್ಲಿ ಹೂಗಳನ್ನು ಇಟ್ಟುಕೊಂಡು ನಗರದ ಬೀದಿಗಳಲ್ಲಿ ಸುತ್ತುತ್ತ ಅಂಗಡಿಗಳನ್ನು ಓಪನ್ ಮಾಡಿಸಿದರು.
ಮಂಡ್ಯ: ಗೃಹ ಸಚಿವ ಅಮಿತ್ ಶಾ ಅವರು ಡಾ ಬಿಅರ್ ಅಂಬೇಡ್ಕರ್ ಅವರ ವಿರುದ್ಧ ಸಂಸತ್ತಿನಲ್ಲಿ ಅವಹೇಳನಕಾರಿಯಾಗಿ ಮಾತಾಡಿದ್ದಾರೆ ಎಂದು ಆರೋಪಿಸಿ ಮಂಡ್ಯ ಬಂದ್ಗೆ ವಿವಿಧ ಸಂಘಟನೆಗಳು ಕರೆ ನೀಡಿ ಅಂಗಡಿ ಮುಂಗಟ್ಟುಗಳನ್ನು ಬಲವಂತವಾಗಿ ಮುಚ್ಚಿಸುತ್ತಿದ್ದರೆ ನಗರದ ಬಿಜೆಪಿ ಕಾರ್ಯಕರ್ತರು ಮುಚ್ಚಿದ್ದ ಅಂಗಡಿಗಳನ್ನು ತೆರೆಸಿ ಮಾಲೀಕರಿಗೆ ಗುಲಾಬಿ ಹೂವನ್ನು ನೀಡಿ ದೈರ್ಯವಾಗಿ ವ್ಯಾಪಾರ ಮಾಡಿ ನಿಮ್ಮೊಂದಿಗೆ ನಾವಿದ್ದೇವೆ ಎಂದು ಧೈರ್ಯ ಹೇಳಿದರು. ಅಂಬೇಡ್ಕರ್ ಯಾರೊಬ್ಬರ ಆಸ್ತಿ ಅಲ್ಲ, ಅವರು ಇಡೀ ದೇಶದ ಆಸ್ತಿ, ಅವರನ್ನು ಅವಮಾನಿಸುವಂಥ ಕೆಲಸ ಅಮಿತ್ ಶಾ ಯಾವತ್ತೂ ಮಾಡಿಲ್ಲ, ಅಂಬೇಡ್ಕರ್ ಅವರು ನಿಧನ ಹೊಂದಿದಾಗ ಅವರ ಅಂತ್ಯಸಂಸ್ಕಾರಕ್ಕೆ ಜಾಗ ನೀಡದ ಕಾಂಗ್ರೆಸ್ ಈಗ ಗೃಹ ಸಚಿವರ ವಿರುದ್ಧ ಪ್ರತಿಭಟನೆಗಳನ್ನು ಮಾಡಿಸುತ್ತಿದೆ ಎಂದು ಕಾರ್ಯಕರ್ತರು ಅಂಗಡಿ ಮಾಲೀಕರಿಗೆ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಅಮಿತ್ ಶಾ ಹೇಳಿಕೆ ವಿರುದ್ಧ ವಿವಿಧ ಸಂಘಟನೆಗಳಿಂದ ಮಂಡ್ಯ ಬಂದ್ಗೆ ಕರೆಗೆ ಜನರ ನೀರಸ ಪ್ರತಿಕ್ರಿಯೆ