ತುಮಕೂರು: ಸ್ಮಾರ್ಟ್ ಸಿಟಿ ಅವೈಜ್ಞಾನಿಕ (unscientific) ಕಾಮಗಾರಿಯಿಂದಾಗಿ ಚಲಿಸುತ್ತಿದ್ದ ಆಟೋ (Auto) ಪಲ್ಟಿಯಾಗಿ ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಆಟೋ ಚಾಲಕನಿಗೆ ಗಂಭೀರ ಗಾಯವಾಗಿದ್ದು, ಬೈಕ್ ಸವಾರನಿಗೆ ಸಣ್ಣಪುಟ್ಟ ಗಾಯಗಳಾಗಿರುವಂತಹ ಘಟನೆ ಪಟ್ಟಣದ ಮೇಳಕೋಟೆ ಮುಖ್ಯ ರಸ್ತೆಯಲ್ಲಿ ನಡೆದಿದೆ. ನಗರದ ಹಲವು ಕಡೆ ಸ್ಮಾರ್ಟ್ ಸಿಟಿ ವತಿಯಿಂದ ರಸ್ತೆಯ ಬದಿಯಲ್ಲಿ ಡ್ರೈನೇಜ್ ಛೇಂಬರ್ ಅಳವಡಿಕೆ ಮಾಡಲಾಗಿದೆ. ಸರಿಯಾಗಿ ಡ್ರೈನೇಜ್ ಛೇಂಬರ್ ಅಳವಡಿಸದೇ ಕಳಪೆ ಕಾಮಗಾರಿ ಹಿನ್ನೆಲೆ, ಕಳೆದ ಬುಧವಾರ ತಡರಾತ್ರಿ ಭೀಕರ ಅಪಘಾತ ಸಂಭವಿಸಿದೆ. ನಗರದ ಮೇಳಕೋಟೆ ಮುಖ್ಯರಸ್ತೆಯಲ್ಲಿ ಚಲಿಸುತ್ತಿದ್ದ ಆಟೋಗೆ ಡ್ರೈನೇಜ್ ಛೇಂಬರ್ ತಗುಲಿ ಆಟೋ ಪಲ್ಟಿಯಾಗಿ ಬೈಕ್ಗೆ ಡಿಕ್ಕಿ ಹೊಡೆಯೋ ಭಯಾನಕ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಆಟೋ ಚಾಲಕ ಶಂರೇಜ್ಗೆ ಗಂಭೀರ ಗಾಯವಾಗಿದ್ದು, ಬೈಕ್ ಸವಾರನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನ ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ತುಮಕೂರು ಸ್ಮಾರ್ಟ್ ಸಿಟಿಯ ಅವೈಜ್ಞಾನಿಕ ಕಾಮಗಾರಿಯೇ ಘಟನೆಗೆ ಕಾರಣವೆಂದು ಸಾರ್ವಜನಿಕರು ಆಕ್ರೋಶಿಸುತ್ತಿದ್ದಾರೆ.
ಹಳೆ ದ್ವೇಷದ ಹಿನ್ನೆಲೆ ಎರಡು ಗುಂಪುಗಳ ನಡುವೆ ಮಾರಾಮಾರಿ
ರಾಮನಗರ: ಹಳೆ ದ್ವೇಷದ ಹಿನ್ನೆಲೆ ಹೋಟಲ್ ಒಂದರಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿರುವಂತಹ ಘಟನೆ ಚನ್ನಪಟ್ಟಣದ ಬಸ್ ನಿಲ್ದಾಣದಲ್ಲಿ ಇರೋ ವೆಂಕಟಾದ್ರಿ ಹೋಟೆಲ್ನಲ್ಲಿ ನಡೆದಿದೆ. ಗಲಾಟೆ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಜೂನ್ 14ರ ಸಂಜೆ ಘಟನೆ ನಡೆದಿದೆ. ಅರುಣ್ ಹಾಗೂ ರಂಜೀತ್ ಎಂಬುವವರ ನಡುವೆ ಮಾರಾಮಾರಿ ನಡೆದಿದೆ.
ಚನ್ನಪಟ್ಟಣ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಕೊಲೆಯಾದ ಸ್ಥಿತಿಯಲ್ಲಿ ಮಹಿಳೆ ಮೃತದೇಹ ಪತ್ತೆ
ಬೀದರ್: ಎಸ್.ಎಂ.ಕೃಷ್ಣಾ ನಗರದ ಮನೆಯಲ್ಲಿ ನಿಲ್ಲಮ್ಮ(70) ಎಂಬುವವರ ಮೃತದೇಹ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದೆ. ದೊಣ್ಣೆಯಿಂದ ತಲೆಗೆ ಹೊಡೆದು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಬೀದರ್ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: IND vs SA: ರಾಜ್ಕೋಟ್ನಲ್ಲಿ ಟೀಮ್ ಇಂಡಿಯಾ ಭರ್ಜರಿ ಪ್ರ್ಯಾಕ್ಟೀಸ್: ಫೋಟೋ ನೋಡಿ
ತಲೆ ಮೇಲೆ ಕಲ್ಲು ಎತ್ತಿಹಾಕಿ ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಹತ್ಯೆ
ಕಲಬುರಗಿ: ಗೌರ (ಕೆ) ಗ್ರಾಮದಲ್ಲಿ ತಲೆ ಮೇಲೆ ಕಲ್ಲು ಎತ್ತಿಹಾಕಿ ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಹತ್ಯೆ ಮಾಡಿರುವಂತಹ ಘಟನೆ ಜಿಲ್ಲೆಯ ಅಫಜಲಪುರ ತಾಲೂಕಿನ ಗೌರ (ಕೆ) ಗ್ರಾಮದಲ್ಲಿ ನಡೆದಿದೆ. ಶಿರವಾಳ ಗ್ರಾಮದ ಅಕ್ಷಯಕುಮಾರ್ ಕ್ಷತ್ರಿ (28) ಹತ್ಯೆಯಾದ ವ್ಯಕ್ತಿ. ಜಮೀನಿನಲ್ಲಿ ತಲವಾರ್‌ನಿಂದ ಅಟ್ಟಾಡಿಸಿಕೊಂಡು ಹೊಡೆದು ನಾಲ್ವರು ಕೊಲೆ ಮಾಡಿದ್ದು, ಮಲ್ಲು ಬಂಡೆ, ಹಣಮಂತ ಬಂಡೆ, ನೀಲಪ್ಪ ಬಂಡೆ, ನೇಮಣ್ಣ ಬಂಡೆ ವಿರುದ್ಧ ಕೊಲೆ ಆರೋಪ ಮಾಡಲಾಗಿದೆ. ಜಮೀನು ವಿಚಾರವಾಗಿ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಸಂಜಯ್ ಅನ್ನೋ ವ್ಯಕ್ತಿಯ ಜಮೀನಿಗೆ ಕೆಲಸಕ್ಕೆ ಹೋಗಿದ್ದ ಅಕ್ಷಯ್ ಕುಮಾಕ್, ಜಮೀನು ಮಾಲೀಕ ಸಂಜಯ್ನನ್ನು ಕೊಲೆ ಮಾಡಲು ಆರೋಪಿಗಳು ಬಂದಿದ್ದರು. ಮಾಲೀಕ ಸಂಜಯ್ ಸಿಗದ ಹಿನ್ನೆಲೆಯಲ್ಲಿ ಕಾರ್ಮಿಕ ಅಕ್ಷಯ್ ಕುಮಾಕ್ ಕೊಲೆ ಮಾಡಿದ್ದಾರೆ. ನಾಲ್ವರ ವಿರುದ್ಧ ಅಫಜಲಪುರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಇನ್ನಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:59 am, Fri, 17 June 22