ತುಮಕೂರು: ಕಾಂಗ್ರೆಸ್​ಗೆ ಮತ ಹಾಕಲ್ಲ ಎಂದಿದ್ದಕ್ಕೆ ಹಲ್ಲೆ ಆರೋಪ, ಕೇಸ್ ಬುಕ್

|

Updated on: Apr 27, 2023 | 11:00 AM

ಕಾಂಗ್ರೆಸ್​ಗೆ ಮತ ಹಾಕಲ್ಲ ಎಂದಿದ್ದಕ್ಕೆ ಜಿಲ್ಲೆಯ ಶಿರಾದ ಜ್ಯೋತಿನಗರದಲ್ಲಿ ಕಾಂಗ್ರೆಸ್​ ಮುಖಂಡ ​ದೇವರಾಜು ಮತ್ತು ಸಹಚರರು ಜಿತೇಂದ್ರ ಎಂಬಾತನಿಗೆ ಹಲ್ಲು ಮುರಿಯುವಂತೆ ಥಳಿಸಿರುವ ಆರೋಪ ಕೇಳಿ ಬಂದಿದೆ.

ತುಮಕೂರು: ಕಾಂಗ್ರೆಸ್​ಗೆ ಮತ ಹಾಕಲ್ಲ ಎಂದಿದ್ದಕ್ಕೆ ಹಲ್ಲೆ ಆರೋಪ, ಕೇಸ್ ಬುಕ್
ಹಲ್ಲೆಗೊಳಗಾದ ಜಿತೇಂದ್ರ
Follow us on

ತುಮಕೂರು: ಜಿಲ್ಲೆಯ ಶಿರಾದ ಜ್ಯೋತಿನಗರದಲ್ಲಿ ಕಾಂಗ್ರೆಸ್​(Congress)ಗೆ ಮತ ಹಾಕಲ್ಲ ಎಂದಿದ್ದಕ್ಕೆ ಕಾಂಗ್ರೆಸ್​ ಮುಖಂಡನಿಂದ ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ಹೌದು ವಿಧಾನಸಭೆ ಚುನಾವಣೆ (Karnataka Assembly Election)ಗೆ ಇನ್ನು ಕೆಲವೇ ದಿನಗಳು ಬಾಕಿಯಿರುವ ಬೆನ್ನಲ್ಲೆ ಉಭಯ ಪಕ್ಷಗಳು ಅಬ್ಬರದ ಪ್ರಚಾರ ಕೈಗೊಂಡಿದೆ. ಅದರಂತೆ ಪಕ್ಷದ ಕಾರ್ಯಕರ್ತರು ಕ್ಷೇತ್ರಗಳಲ್ಲಿನ ಮನೆ ಮನೆಗೆ ತೆರಳಿ ಪ್ರಚಾರ ನಡೆಸಿದ್ದಾರೆ. ಇದೇ ವೇಳೆ ಕಾಂಗ್ರೆಸ್ ಮುಖಂಡ, ನಗರಸಭೆ ಸದಸ್ಯ ಗೋಣಿಹಳ್ಳಿ ದೇವರಾಜು ಹಾಗೂ ಆತನ ಮೂರು ಮಂದಿ ಸಹಚರರಿಂದ ಜಿತೇಂದ್ರ ಎಂಬುವವರು ಮೇಲೆ ಹಲ್ಲೆ ಮಾಡಿದ ಆರೋಪ ಕೇಳಿಬಂದಿದೆ.

ನಿನ್ನೆ(ಏ.26) ರಾತ್ರಿ 8.30ಸುಮಾರಿಗೆ ಕಾಂಗ್ರೆಸ್​ಗೆ ಮತ ನೀಡುವಂತೆ ಪ್ರಚಾರದಲ್ಲಿ ತೊಡಗಿದ್ದ ದೇವರಾಜು. ಈ ವೇಳೆ ತಾನು ಕಾಂಗ್ರೆಸ್​ಗೆ ಮತ ಹಾಕಲ್ಲವೆಂದು ಜಿತೇಂದ್ರ ಎಂಬಾತ ಹೇಳಿದ್ದಾನೆ. ಇದರಿಂದ ಸಿಟ್ಟಿಗೆದ್ದ ಕಾಂಗ್ರೆಸ್ ಮುಖಂಡ ದೇವರಾಜು ‘ನೀನು ಕಾಂಗ್ರೆಸ್​ಗೆ ಮತ ಹಾಕದೇ ಇದ್ದರೆ ಬದುಕಿ ಉಳಿಯಲ್ಲ. ನಿನ್ನನ್ನ ಸಾಯಿಸಿಬಿಡ್ತೀವಿ ಎಂದು ಗೋಣಿಹಳ್ಳಿ ದೇವರಾಜು ಮತ್ತು ಸಹಚರರು, ಹಲ್ಲು ಮುರಿಯುವಂತೆ ಜಿತೇಂದ್ರನಿಗೆ ಥಳಿಸಿದ್ದಾರೆ. ಈ ಕುರಿತು ಶಿರಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:Karnataka Elections: ವಿಧಾನಸಭೆ ಚುನಾವಣೆ; ಜಿದ್ದಾಜಿದ್ದಿನ ಪೈಪೋಟಿಗೆ ಸಾಕ್ಷಿಯಾಗಲಿವೆ ಈ ಐದು ಕ್ಷೇತ್ರಗಳು

ಕ್ರಷರ್ ತೆರೆಯಲು ಗ್ರಾಮಸ್ಥರ ಹೋರಾಟ: ಪರಮೇಶ್ವರ್ ಸ್ವಕ್ಷೇತ್ರದಲ್ಲಿ 13 ಗ್ರಾಮಗಳಿಂದ ಮತದಾನ ಬಹಿಷ್ಕಾರ

ತುಮಕೂರು: ಮಾಜಿ ಡಿಸಿಎಂ ಡಾ.ಜಿ ಪರಮೇಶ್ವರ್ ಅವರ ಜಿಲ್ಲೆಯ ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ 13 ಗ್ರಾಮಗಳಿಂದ ಮತದಾನ ಬಹಿಷ್ಕಾರ ಮಾಡಲಾಗಿತ್ತು. ಕ್ರಷರ್ ತೆರೆಯಲು 13 ಗ್ರಾಮಗಳ ನಿವಾಸಿಗಳಿಂದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು ಪ್ರಯೋಜನವಾಗಿಲ್ಲವಾಗಿತ್ತು. ಹಾಗಾಗಿ ಅಧಿಕಾರಿಗಳ ನಡೆಗೆ ಬೇಸತ್ತು ಗ್ರಾಮಸ್ಥರು ಮತದಾನ ಬಹಿಷ್ಕರಿಸಿದ್ದರು. ತುಮಕೂರು ತಾಲೂಕಿನ ವ್ಯಾಪ್ತಿಯ ಬೆಳಧರ ಗ್ರಾಮ ಪಂಚಾಯಿತಿ ಚಿನಿವಾರನಹಳ್ಳಿ, ಜಕ್ಕೆನಹಳ್ಳಿ, ಅನ್ನದಾನಿಪಾಳ್ಯ, ಸೀಗೇಹಳ್ಳ, ಗೌಡನಕಟ್ಟೆ, ಮಲ್ಲಯ್ಯನಪಾಳ್ಯ, ಚನ್ನಮುದ್ದನಹಳ್ಳಿ, ಮಸಣಿಪಾಳ್ಯ, ಹಿರೇಕೊಡತಕಲ್ಲು, ಅಹೋಬಲ ಅಗ್ರಹಾರ, ಮುದ್ದರಾಮಯ್ಯನಪಾಳ್ಯ ಸೇರಿ 13 ಹಳ್ಳಿಗಳ 5,000ಕ್ಕೂ ಹೆಚ್ಚು ನಿವಾಸಿಗಳಿಂದ ಮತದಾನ ಬಹಿಷ್ಕಾರ ಬಗ್ಗೆ ಬ್ಯಾನರ್‌ ಅಳವಡಿಕೆ ಮಾಡಲಾಗಿತ್ತು.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 10:59 am, Thu, 27 April 23