ತುಮಕೂರು ಅ.31: ಗೃಹ ಸಚಿವ ಡಾ.ಜಿ ಪರಮೇಶ್ವರ್ (G Parmeshwara) ಅವರ ತವರು ಜಿಲ್ಲೆ ತುಮಕೂರಿನಲ್ಲಿ (Tumakuru) ಪುಡಿರೌಡಿಗಳ (Rowdy) ಅಟ್ಟಹಾಸ ಮಿತಿ ಮೀರಿದೆ ಎಂಬ ಅನುಮಾನ ವ್ಯಕ್ತವಾಗಿದೆ. ಹೌದು ಓರ್ವ ಪುಡಿರೌಡಿ ಕೈಯಲ್ಲಿ ಡ್ಯ್ರಾಗರ್ ಹಿಡಿದು ಮಹಿಳಾ ಪೊಲೀಸ್ (Police) ಸಿಬ್ಬಂದಿ ಮುಂದೆಯೇ ಹುಚ್ಚಾಟವಾಡಿದ್ದಾನೆ.
ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಮೋಜಾ ಅಲಿಯಾಸ್ ಮಧು ಇತ್ತೀಚೆಗಷ್ಟೇ ಜೈಲಿನಿಂದ ಜಾಮೀನು ಮೇಲೆ ಹೊರಬಂದಿದ್ದನು. ನಿನ್ನೆ (ಅ.30) ರಂದು ತುಮಕೂರಿನ ಅಶೋಕ ರಸ್ತೆಯಲ್ಲಿನ ಖಾಸಗಿ ಬಸ್ ನಿಲ್ದಾಣದ ಬಳಿ ಕೈಯಲ್ಲಿ ಡ್ರ್ಯಾಗರ್ ಹಿಡಿದು, ಸಾರ್ವಜನಿಕರಿಗೆ ಬೆದರಿಸಿ ಮೊಬೈಲ್ ದೋಚುತ್ತಿದ್ದನು. ಈ ಬಗ್ಗೆ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದರು. ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದರು.
ಇದನ್ನೂ ಓದಿ: ಬೆಂಗಳೂರಿನಲ್ಲಿ ಪುಡಿರೌಡಿಗಳ ಅಟ್ಟಹಾಸ: ಯುವಕನ ಮೇಲೆ ಮಾರಣಾಂತಿಕ ಹಲ್ಲೆ
ಆರೋಪಿ ಮೋಜಾ ಅಲಿಯಾಸ್ ಮಧುವನ್ನು ಸೆರೆ ಹಿಡಿಯಲು ಹೋದ ವೇಳೆ, ಎನ್ಇಪಿಎಸ್ ಠಾಣೆಯ ಮಹಿಳಾ ಪೊಲೀಸ್ ಮಂಗಳಮ್ಮ ಮುಂದೆ ಡ್ರ್ಯಾಗರ್ ಹಿಡಿದು ಪುಂಡಾಟವಾಡಿದ್ದಾನೆ. ಸುಮಾರು ಅರ್ಧ ಗಂಟೆಗಳ ಕಾಲ ಮಹಿಳಾ ಪೊಲೀಸ್ ಮುಂದೆ ಹುಚ್ಚಾಟವಾಡಿದ್ದಾನೆ. ಕೊನೆಗೆ ಪೊಲೀಸರು ಹರಸಾಹಸಪಟ್ಟು ಆರೋಪಿಯನ್ನು ಹಿಡಿಯಲು ಯಶಸ್ವಿಯಾದರು. ಆರೋಪಿ ಮೋಜಾ ಅಲಿಯಾಸ್ ಮಧು ಹಾಗೂ ಆತನ ಜೊತೆಯಿದ್ದ ಮನೋಜ್ ಎಂಬಾತನನ್ನೂ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ ಹೊಸ ಬಡಾವಣೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:47 am, Tue, 31 October 23