ತುಮಕೂರು: ಚಿಕ್ಕಸಾರಂಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯರ (Teachers) ನಡುವೆ ಮನಸ್ತಾಪದಿಂದ ಬೇಸತ್ತು ಗ್ರಾಮಸ್ಥರು (Villagers) ಶಾಲೆಗೆ ಬೀಗ ಜಡಿದಿರುವ ಘಟನೆ ನಡೆದಿದೆ. ಶಿಕ್ಷಕಿಯರಾದ ಗಂಗಲಕ್ಷ್ಮಮ್ಮ ಹಾಗೂ ಭಾಗ್ಯಮ್ಮ ಪ್ರತಿದಿನವೂ ಶಾಲೆಗೆ ತಡವಾಗಿ ಬರುತ್ತಾರೆ. ಒಬ್ಬರನ್ನ ಕಂಡರೇ ಮತ್ತೊಬ್ಬರಿಗೆ ಆಗುವುದಿಲ್ಲ. ಇಬ್ಬರೂ ಮಕ್ಕಳಿಗೆ ಪಾಠ ಮಾಡದೇ ಸದಾ ಪರಸ್ಪರ ಜಗಳವಾಡುತ್ತಿರುತ್ತಾರೆ. ಶಿಕ್ಷಕರಿಯರ ಜಗಳ ನೋಡಿ ರೋಸಿ ಹೋಗಿದ್ದ ಗ್ರಾಮಸ್ಥರು ಕೊನೆಗೆ ಶಾಲೆಗೆ ಬೀಗ ಹಾಕಿದ್ದು, ತುಮಕೂರು ಬಿಇಒ ಹನುಮನಾಯಕ್ ಶಾಲೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಬೀಗ ಹಾಕಿದ್ದಕ್ಕೆ ಮಕ್ಕಳು ಹೊರಗೆ ಕೂತಿದ್ದಾರೆ.
ಬಸ್ ತಡೆದು ವಿದ್ಯಾರ್ಥಿಗಳಿಂದ ಪ್ರತಿಭಟನೆ:
ಬಾಗಲಕೋಟೆ: ಕೆಎಸ್ಆರ್ಟಿಸಿ ಬಸ್ ನಿಲುಗಡೆಯಾಗದ ಹಿನ್ನೆಲೆ ವಿದ್ಯಾರ್ಥಿಗಳು ಬಸ್ ತಡೆದು ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೆ ಬಸ್ ಮೇಲೆ ಕಲ್ಲೆಸೆದು ಆಕ್ರೋಶ ಹೊರಹಾಕಿದ್ದಾರೆ. ಈ ಘಟನೆ ಬಾಗಲಕೋಟೆ ಶಿಗಿಕೇರಿ ಕ್ರಾಸ್ ಬಳಿಯ ಮೇಲ್ಸೆತುವೆ ಬಳಿ ನಡೆದಿದೆ. ಪ್ರತಿಭಟನೆಯಿಂದ ಟ್ರಾಫಿಕ್ ಜಾಮ್ ಉಂಟಾಗಿತ್ತು. ಫ್ಲೈ ಓವರ್ ಮೇಲೆ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಸ್ಥಳಕ್ಕೆ ಕೆಎಸ್ಆರ್ಟಿಸಿ ಅಧಿಕಾರಿಗಳು, ಪೊಲೀಸರು ಭೇಟಿ ನೀಡಿ ಪ್ರತಿಭಟನಾನಿರತ ವಿದ್ಯಾರ್ಥಿಗಳ ಜೊತೆ ಸಂಧಾನ ಮಾಡಿದರು. ಸಂಧಾನ ಬಳಿಕ ವಿದ್ಯಾರ್ಥಿಗಳು ಪ್ರತಿಭಟನೆ ಕೈಬಿಟ್ಟರು.
ಇದನ್ನೂ ಓದಿ: ಉಕ್ಕಿ ಹರಿಯುತ್ತಿರುವ ತುಂಗಭದ್ರಾ, ಉಕ್ಕಡಗಾತ್ರಿ ಪುಣ್ಯಕ್ಷೇತ್ರ ಜಲಾವೃತ
ಕಾಮುಕ ಶಿಕ್ಷಕನ ವಿರುದ್ಧ ಕೊನೆಗೂ ದಾಖಲಾಯ್ತು ಪೋಕ್ಸೋ ಕೇಸ್:
ಕೊಪ್ಪಳ: ಕಾಮುಕ ಶಿಕ್ಷಕನ ವಿರುದ್ಧ ಜಿಲ್ಲೆ ಕಾರಟಗಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕೇಸ್ ದಾಖಲಾಗಿದೆ. ಕಾಮುಕ ಶಿಕ್ಷಕ ಅಜರುದ್ದೀನ್ ಮಕ್ಕಳೊಂದಿಗೆ ವಿಕೃತಿ ಮೆರೆದ ವಿಡಿಯೋ ವೈರಲ್ ಆಗಿತ್ತು. ಪಾಠ ಹೇಳುವ ನೆಪದಲ್ಲಿ ಮಕ್ಕಳ ಗುಪ್ತಾಂಗ ಅಳತೆ ಮಾಡಿ ವಿಕೃತಿ ಮೆರದಿದ್ದ. ಶಿಕ್ಷಕನ ವಿರುದ್ಧ ಗಂಗಾವತಿ ಶಿಕ್ಷಣಾಧಿಕಾರಿ ಸುರೇಶ ಗೌಡ ದೂರು ನೀಡಿದ್ದರು. ಸುರೇಶ್ ಗೌಡ ದೂರಿನ ಆಧಾರದ ಮೇಲೆ ಪೋಕ್ಸೋ ಕೇಸ್ ದಾಖಲಾಗಿದೆ.
ಶಿಕ್ಷಣ ಇಲಾಖೆ ಮಕ್ಕಳ ಪತ್ತೆಗೆ ತಂಡ ರಚನೆ ಮಾಡಿತ್ತು. ಇದೀಗ ಅಧಿಕಾರಿಗಳು ವಿಡಿಯೋದಲ್ಲಿದ್ದ ಮಕ್ಕಳನ್ನ ಪತ್ತೆ ಹಚ್ಚಿದ್ದಾರೆ. ಮಕ್ಕಳ ಗುರುತು ಪತ್ತೆಯಾದ ಬಳಿಕ ಅವರ ಹೇಳಿಕೆ ಪಡೆದು ಪೋಕ್ಸೋ ಕೇಸ್ ದಾಖಲಿಸಿದ್ದಾರೆ.
ಇದನ್ನೂ ಓದಿ: ಮಹಿಳೆ ಹಣ ಎಸೆದ ಮಾತ್ರಕ್ಕೆ ಸಿದ್ದರಾಮಯ್ಯನವರ ವ್ಯಕ್ತಿತ್ವಕ್ಕೆ ಕುಂದುಂಟಾಗುವುದಿಲ್ಲ: ಶಾಸಕ ಯು.ಟಿ ಖಾದರ್
Published On - 1:15 pm, Sat, 16 July 22