ಮಹಿಳೆ ಹಣ ಎಸೆದ ಮಾತ್ರಕ್ಕೆ ಸಿದ್ದರಾಮಯ್ಯನವರ ವ್ಯಕ್ತಿತ್ವಕ್ಕೆ ಕುಂದುಂಟಾಗುವುದಿಲ್ಲ: ಶಾಸಕ ಯು.ಟಿ ಖಾದರ್
ಸಿದ್ದರಾಮಯ್ಯನವರ ವ್ಯಕ್ತಿತ್ವಕ್ಕೆ ಗೌರವ ಕುಂದು ಉಂಟಾಗುವುದಿಲ್ಲ. ಸದನದ ಒಳಗಡೆ ಮತ್ತು ಹೊರಗಡೆ ರಾಜ್ಯದ ಜನರಿಗೆ ಅನ್ಯಾಯವಾದಾಗ ಎಲ್ಲ ವರ್ಗದ ಜನರಿಗಾಗಿ ಧ್ವನಿ ಎತ್ತುವ ವ್ಯಕ್ತಿ ಸಿದ್ದರಾಮಯ್ಯ.
ಬಾಗಲಕೋಟೆ: ಸಿದ್ದರಾಮಯ್ಯ ಕೊಟ್ಟ ದುಡ್ಡನ್ನು (Money) ಮಹಿಳೆ ವಾಪಸ್ ಎಸೆದ ಪ್ರಕರಣ ಕುರಿತಾಗಿ ಜಿಲ್ಲೆಯಲ್ಲಿ ಶಾಸಕ ಯು ಟಿ ಖಾದರ್ ಹೇಳಿಕೆ ನೀಡಿದ್ದು, ಆ ಮಹಿಳೆ ಮಾಡಿದ ಘಟನೆಯಿಂದ ಸಿದ್ದರಾಮಯ್ಯನವರ ವ್ಯಕ್ತಿತ್ವಕ್ಕೆ ಗೌರವ ಕುಂದು ಉಂಟಾಗುವುದಿಲ್ಲ. ಸದನದ ಒಳಗಡೆ ಮತ್ತು ಹೊರಗಡೆ ರಾಜ್ಯದ ಜನರಿಗೆ ಅನ್ಯಾಯವಾದಾಗ ಎಲ್ಲ ವರ್ಗದ ಜನರಿಗಾಗಿ ಧ್ವನಿ ಎತ್ತುವ ವ್ಯಕ್ತಿತ್ವ ಸಿದ್ದರಾಮಯ್ಯನವರದ್ದು. ನ್ಯಾಯ ನಮಗೆ ಕೊಡಲಿ ಅಂತ ಕೇಳೋಕೆ, ನ್ಯಾಯ ಕೊಡಲಿಕ್ಕೆ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸಿದ್ದರಾಮಯ್ಯ ಮುಖ್ಯಮಂತ್ರಿಗಳಲ್ಲ, ಗೃಹ ಸಚಿವರು ಅಲ್ಲ. ಮಾನವೀಯತೆ ದೃಷ್ಟಿಯಿಂದ ವ್ಯಯಕ್ತಿಕವಾಗಿ ಸಹಾಯ ಮಾಡೋಕೆ ಹೋದವರು. ಕೆಲವರ ಕುಮ್ಮಕ್ಕಿನಿಂದ ಹಣ ತಿರಸ್ಕರಿಸಿದ್ದಾರೆ. ನಂತರ ಮನ ಬದಲಾಯಿಸಿ ಸ್ವೀಕರಿಸಿದರು. ಈ ರೀತಿ ಮಾಡೋದು ಮತೀಯವಾದಿಗಳಿಗೆ ಪ್ರೇರಣೆ ನೀಡಿದಂತಾಗುತ್ತದೆ ಎಂದು ಹೇಳಿದರು.
ಇದನ್ನೂ ಓದಿ: Reliance Jio: 100GB ಫ್ರೀ ಡೇಟಾ: ರಿಲಯನ್ಸ್ ಜಿಯೋದಿಂದ ಹಿಂದೆಂದೂ ನೀಡಿರದ ಬಂಪರ್ ಆಫರ್
ಈ ರೀತಿ ಮಾಡೋದು ಬೇಡ, ಮಾಡುವವರಿಗೆ ಇದು ಪ್ರಚೋದನೆಯಾಗುತ್ತದೆ. ಅವರಿಗೆ ಸಂತೋಷವಾಗುತ್ತದೆ. ಎರಡು ವರ್ಗದ ಗಾಯಾಳುಗಳಾಗಲಿ, ಕುಟುಂಗಳಾಗಲಿ ಸಿದ್ದರಾಮಯ್ಯ ಬರೋದು ಬೇಡ ಎನ್ನುವುದು ಪ್ರಶ್ನೆಯಲ್ಲ. ಕೆಲವೊಂದು ಕಾಣದ ಕೈಗಳು ಈ ಸಂದರ್ಭದ ಲಾಭವನ್ನು ಪಡೆದುಕೊಂಡು ಮುಗ್ದ ಮಹಿಳೆಯರಿಗೆ ತಮ್ಮ ಕುಮ್ಮಕ್ಕು ಕೊಟ್ಟು, ಈ ರೀತಿ ಬಿಂಬಿಸುವ ಪ್ರಯತ್ನ ಮಾಡಿದ್ದಾರೆ. ನಿಜವಾಗಿ ನೊಂದವರಿಗೆ ಯಾವುದು ಬೇಕಾಗಿಲ್ಲ. ಅವರಿಗೆ ನ್ಯಾಯ ಬೇಕು. ಈಗ ಬಿಜೆಪಿ ಸರಕಾರ ಇರೋದು. ಬಿಜೆಪಿ ಸರ್ಕಾರದಲ್ಲಿ ಆಗುವಂತಹ ಸಮಸ್ಯೆಗಳು ಏನು ಎಲ್ಲರಿಗೂ ಗೊತ್ತು. ಕೆಲವೊಂದು ಶಕ್ತಿಗಳು ತಮ್ಮ ಹಿಡನ್ ಅಜೆಂಡಾ ಅನುಷ್ಠಾನಗೊಳಿಸುವ ಪ್ರಯತ್ನ ಮಾಡುತ್ತಿವೆ ಎಂದು ಹೇಳಿದರು.
ನ್ಯಾಯಾಂಗ ತನಿಖೆ ಬೇಡಿಕೆಗೆ ಕಾಂಗ್ರೆಸ್ ಬೆಂಬಲ ಕೊಡುತ್ತದೆ
ಗುತ್ತಿಗೆದಾರ ಸಂತೋಷ ಪತ್ನಿ ರಾಜ್ಯಪಾಲರಿಗೆ ಪತ್ರ ಬರೆದ ವಿಚಾರವಾಗಿ ಮಾತನಾಡಿದ್ದು, ನಾವು ಸಂತೋಷ ಆತ್ಮಹತ್ಯೆ ಆದಾಗಲೇ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಕೊಡಿ ಅಂತ ಕೇಳಿದ್ದೆವು. ಅವರ ಪತ್ನಿ ನ್ಯಾಯಾಂಗ ತನಿಖೆ ಬೇಡಿಕೆಗೆ ಕಾಂಗ್ರೆಸ್ ಬೆಂಬಲ ಕೊಡುತ್ತದೆ. ಸಂತೋಷ ಮನೆಯವರಿಗೆ ನ್ಯಾಯ ಸಿಗಬೇಕು. ನ್ಯಾಯ ಕೊಡಿಸೋದು ಸರಕಾರದ ಕೆಲಸ. ಮೇಲಾಗಿ ಅವನು ಬಿಜೆಪಿ ಕಾರ್ಯಕರ್ತ. ಬಿಜೆಪಿ ಮೇಲೆ ಡಬಲ್ ಜವಾಬ್ದಾರಿ ಇದೆ. ಮನೆಯವರ ಬೇಡಿಕೆ ಏನಿದೆ ಅದನ್ನು ಈಡೇರಿಸಬೇಕು. ಕನಿಷ್ಟ ಅಷ್ಟೊಂದು ಸಾಂತ್ವನ ಕೊಡುವ ಕೆಲಸ ಸರಕಾರ ಮಾಡಬೇಕು ಎಂದು ಹೇಳಿದರು.
ಪ್ರವಾಹ ನಿರ್ವಹಣೆಯಲ್ಲಿ ಬಿಜೆಪಿ ಸರಕಾರ ಸಂಪೂರ್ಣ ವಿಫಲ
ಪ್ರವಾಹ ನಿರ್ವಹಣೆಯಲ್ಲಿ ಬಿಜೆಪಿ ಸರಕಾರ ಸಂಪೂರ್ಣ ವಿಫಲವಾಗಿದೆ. ಹವಾಮಾನ ವರದಿ ಮೊದಲೇ ಗೊತ್ತಾಗುತ್ತದೆ. ಅದನ್ನು ಅರ್ಥ ಮಾಡಿಕೊಂಡು ಮುಂಜಾಗ್ರತಾ ಕ್ರಮ ಕೈಗೊಂಡಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಗೆ ಭೇಟಿ ಕೊಟ್ಟು ಚರ್ಚೆ ಮಾಡಿ ಮುಂಜಾಗ್ರತಾ ಕ್ರಮ ಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆ. ಹದಿನೈದು ದಿನಗಳಿಂದ ಮಳೆ ಬರುತ್ತಿದ್ದರೂ ಸಂತ್ರಸ್ತರಿಗೆ ಪರಿಹಾರ ಕೊಡುವ ಕೆಲಸ ಆಗಲಿಲ್ಲ. ಮಾತನಾಡುವಾಗ ಒಂದು ವಾರದಲ್ಲಿ ಮನೆ ಬಿದ್ದವರಿಗೆ ಪರಿಹಾರ ಕೊಡುತ್ತೇವೆ ಅಂತ ಹೇಳುತ್ತಾರೆ. ಅದು ಹೇಳಿಕೆಯಾಗಿದೆ ಹೊರತು ಸಮರ್ಪಕ ಕೆಲಸ ಆಗುತ್ತಿಲ್ಲ. ಸರಕಾರ ಈ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ನಾವು ಕಾಳಜಿ ಕೇಂದ್ರ ಪ್ರಾರಂಭ ಮಾಡುತ್ತೇವೆ ಅಂತಾರೆ. ಕಾಳಜಿ ಕೇಂದ್ರ ಬೇಕಾಗಿಲ್ಲ ಕಾಳಜಿ ಮುಖ್ಯ. ಸರಕಾರ ತಮ್ಮ ಬದ್ದತೆ ತೋರಿಸಬೇಕು ಎಂದು ಹೇಳಿದರು.