Uttar Pradesh: ಸರ್ಕಾರಿ ಹಿರಿಯ ಅಧಿಕಾರಿಯ ಶವ ಪತ್ತೆ, ಆತ್ಮಹತ್ಯೆ ಶಂಕೆ: ಪೊಲೀಸರು
ದಾದ್ರಿಯಲ್ಲಿರುವ ಎನ್‌ಟಿಪಿಸಿ ಲಿಮಿಟೆಡ್‌ನ ಡೆಪ್ಯುಟಿ ಜನರಲ್ ಮ್ಯಾನೇಜರ್ (ಡಿಜಿಎಂ) ತಮ್ಮ ಕಚೇರಿ ಆವರಣದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ಇಂದು ತಿಳಿಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ಡಿಜಿಎಂ ಸತೀಶ್ ಕುಮಾರ್ ಸಿಂಗ್ ಅವರು ಎನ್‌ಟಿಪಿಸಿ ಆವರಣದಲ್ಲಿರುವ ಕೂಲಿಂಗ್ ಪ್ಲಾಂಟ್‌ಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ದಾದ್ರಿ: ಉತ್ತರ ಪ್ರದೇಶದ ದಾದ್ರಿಯಲ್ಲಿರುವ ಎನ್‌ಟಿಪಿಸಿ ಲಿಮಿಟೆಡ್‌ನ ಡೆಪ್ಯುಟಿ ಜನರಲ್ ಮ್ಯಾನೇಜರ್ (ಡಿಜಿಎಂ) ತಮ್ಮ ಕಚೇರಿ ಆವರಣದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ಇಂದು ತಿಳಿಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ಡಿಜಿಎಂ ಸತೀಶ್ ಕುಮಾರ್ ಸಿಂಗ್ ಅವರು ಎನ್‌ಟಿಪಿಸಿ ಆವರಣದಲ್ಲಿರುವ ಕೂಲಿಂಗ್ ಪ್ಲಾಂಟ್‌ಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ನಿನ್ನೆ ರಾತ್ರಿ ಅವರ ದೇಹವನ್ನು ಕೂಲಿಂಗ್ ಪ್ಲಾಂಟ್‌ನಿಂದ ಹೊರತೆಗೆಯಲಾಗಿದೆ.
ಸತೀಶ್ ಕುಮಾರ್ ಸಿಂಗ್ ಅವರು ಖಿನ್ನತೆಯಿಂದ ಬಳಲುತ್ತಿದ್ದರು ಮತ್ತು ನನಗೆ ಕೆಲಸ ಮಾಡಲು ಆಗುತ್ತಿಲ್ಲ ತುಂಬಾ ಒತ್ತಡ ಇದೆ ಎಂದು ಅವರ ಪತ್ನಿ ಪೊಲೀಸರಿಗೆ ತಿಳಿಸಿದ್ದಾರೆ. ಡಿಜಿಎಂ ಸತೀಶ್ ಕುಮಾರ್ ಸಿಂಗ್ ವಾರಣಾಸಿಗೆ ಸೇರಿದವರಾಗಿದ್ದು, ಇವರಿಗೆ ಇಬ್ಬರು ಪುತ್ರಿಯರಿದ್ದಾರೆ.
ಸತೀಶ್ ಕುಮಾರ್ ಸಿಂಗ್ ಶುಕ್ರವಾರ ಬೆಳಗ್ಗೆ ಕೆಲಸ ನಿಮಿತ್ತ ಮನೆಯಿಂದ ತೆರಳಿದ್ದರು, ಆದರೆ ಕಚೇರಿಗೆ ಬಂದಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ನಂತರ ಅವರ ಪತ್ತೆಗೆ ಶೋಧ ಕಾರ್ಯ ಆರಂಭಿಸಲಾಗಿತ್ತು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Published On - 1:18 pm, Sat, 16 July 22